Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಲಿಂಬೆ ಹಣ್ಣಿನ ಫೇಸ್‌ಪ್ಯಾಕ್- ಇದು ಪುರುಷರಿಗೆ ಮಾತ್ರ!
ಪುರುಷರಿಗೂ ಮಹಿಳೆಯರಂತೆ ಅಂದವಾಗಿ ಕಾಣಬೇಕೆಂಬ ಹಂಬಲ ಇರುವುದು ಸಹಜವೇ ಆಗಿದೆ. ಹಾಗಿದ್ದರೆ ಈ ಸೌಂದರ್ಯವನ್ನು ಪಡೆದುಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಲಿಂಬೆ ಹಣ್ಣಿನ ಫೇಸ್‌ಪ್ಯಾಕ್
ಸೌಂದರ್ಯವೆಂಬುದು ಹೆಣ್ಣೆಗೆ ಎಷ್ಟು ಪ್ರಧಾನವೋ ಗಂಡಿಗೂ ಅಷ್ಟೇ ಪ್ರಧಾನವಾದುದಾಗಿದೆ. ಸುತ್ತಲಿನ ವಾತಾವರಣದಿಂದ ಪುರುಷರ ತ್ವಚೆಯೂ ಕಳೆಗುಂದುತ್ತದೆ. ಮಹಿಳೆಯರು ತಮ್ಮ ತ್ವಚೆಯ ಕಾಳಜಿಗಾಗಿ ಎಷ್ಟು ಮಹತ್ವವವನ್ನು ನೀಡುತ್ತಾರೋ ಹಾಗೆಯೇ ಪುರುಷರೂ ತಮ್ಮ ಸೌಂದರ್ಯದ ಆರೈಕೆಯನ್ನು ಮಾಡಬೇಕಾಗುತ್ತದೆ. ಪುರುಷರ ಉದ್ದ ಕೂದಲಿನ ಆರೈಕೆ- ಇಲ್ಲಿದೆ ಸರಳ ಟಿಪ್ಸ್
ಪುರುಷರ ತ್ವಚೆಯು ಮಹಿಳೆಯರ ತ್ವಚೆಗಿಂತ ದೊರಗಾಗಿದ್ದರೂ ಕೊಳೆ ಮತ್ತು ಧೂಳಿಗೆ ಈ ತ್ವಚೆಯು ಬೇಗನೇ ಹಾನಿಗೊಳಗಾಗುತ್ತದೆ. ನಿತ್ಯವೂ ಮುಖವನ್ನು ತೊಳೆದು ಸ್ವಚ್ಛವಾಗಿರಿಸುವುದರ ಜೊತೆಗೆ ಕೆಲವೊಂದು ಫೇಸ್‌ಪ್ಯಾಕ್‌ಗಳನ್ನು ಪುರುಷರು ಅನುಸರಿಬೇಕಾಗುತ್ತದೆ. ಇಂದಿನ ಲೇಖನದಲ್ಲಿ ನಾವು ವಿಶೇಷವಾಗಿ ಪುರುಷರ ಸೌಂದರ್ಯಕ್ಕಾಗಿ ಲಿಂಬೆಯ ಫೇಸ್ ಪ್ಯಾಕ್ ಅನ್ನು ಪರಿಚಯಿಸಿದ್ದೇವೆ.... ಶ್...! ಈ ಬ್ಯೂಟಿ ಸೀಕ್ರೆಟ್ ಪುರುಷರಿಗೆ ಮಾತ್ರ..!
ಇದರಲ್ಲಿರುವ ವಿಟಮಿನ್ ಸಿ ಅಂಶವು ಕೊಲೆಗಾನ್ ಅನ್ನು ವೃದ್ಧಿಸಲಿದ್ದು, ಸಿಟ್ರಿಕ್ ಆಸಿಡ್, ಪೊಟಾಶಿಯಂ ಅಂಶವು ತ್ವಚೆಯನ್ನು ಹೈಡ್ರೇಟ್ ಮಾಡಲಿದ್ದು ತ್ವಚೆಗೆ ಹಾನಿಕಾರಕವಾಗಿರುವ ಮುಕ್ತ ರಾಡಿಕಲ್‌ಗಳೊಂದಿಗೆ ಹೋರಾಡಲಿದೆ. ಬನ್ನಿ ಹಾಗಿದ್ದರೆ ಈ ಫೇಸ್‌ಪ್ಯಾಕ್ ಅನ್ನು ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ....

ಹಂತ 1
ಒಂದು ಕಪ್‌ನಷ್ಟು ನೀರನ್ನು ಕುದಿಸಿಕೊಳ್ಳಿ, ಇದಕ್ಕೆ ಗ್ರೀನ್ ಟಿ ಎಲೆಗಳನ್ನು ಸೇರಿಸಿ. ಇದು 5 ನಿಮಿಷಗಳ ಕಾಲ ಕುದಿಯಲಿ. ಬಿಸಿಯನ್ನು ಆರಿಸಿಕೊಂಡು 5 ನಿಮಿಷಗಳ ಕಾಲ ತಣಿಯಲು ಬಿಡಿ. ಗ್ರೀನ್ ಟೀ ಹೆಚ್ಚು ಪ್ರಮಾಣದ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ಮೊಡವೆಯನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ತಡೆಗಟ್ಟಿ ನೆರಿಗೆಗಳನ್ನು ಹೋಗಲಾಡಿಸಲಿದೆ.

ಹಂತ 2
ಅರ್ಧ ಟೊಮೇಟೊವನ್ನು ಕತ್ತರಿಸಿಕೊಂಡು ರಸವನ್ನು ಹಿಂಡಿಕೊಳ್ಳಿ. ಪೇಸ್ಟ್‌ನಲ್ಲಿ ಯಾವುದೇ ಗಂಟುಗಳಿಲ್ಲ ಎಂಬುದನ್ನು ಖಾತ್ರಿಪಡಿಸಿ. ಟೊಮೇಟೊದಲ್ಲಿ ಬೀಟಾ ಕ್ಯಾರೊಟಿನ್ ಇದ್ದು ಇದು ತ್ವಚೆಯ ಟ್ಯಾನ್ ಅನ್ನು ಹೋಗಲಾಡಿಸಿ ಕಲೆಗಳನ್ನು ತಿಳಿಯಾಗಿಸಲಿದೆ.

ಹಂತ 3
ಈ ಮಾಸ್ಕ್‌ಗೆ ಅಕ್ಕಿ ಹುಡಿಯನ್ನು ಸೇರಿಸಿ. ಇದರಲ್ಲಿರುವ ಗಡುಸಾದ ಅಕ್ಕಿಯ ಕಣಗಳು ಸ್ಕಿನ್ ಅನ್ನು ಎಕ್ಸ್‌ಫೋಲಿಯೇಟ್ ಮಾಡಲಿದೆ, ಮತ್ತು ಮೃತ ಕೋಶಗಳ ಪದರಗಳನ್ನು ಹೋಗಲಾಡಿಸಲಿದೆ.

ಹಂತ 4
ಮಾಸ್ಕ್‌ಗೆ ಅರ್ಧ ಚಮಚದಷ್ಟು ಲಿಂಬೆ ರಸವನ್ನು ಸೇರಿಸಿ. ಫೋರ್ಕ್ ಬಳಸಿಕೊಂಡು ಎಲ್ಲವನ್ನೂ ಮಿಶ್ರ ಮಾಡಿ, ನಿಮಗೆ ನುಣ್ಣನೆಯ ಪೇಸ್ಟ್ ದೊರೆಯುವಂತೆ ಕಲಸಿಕೊಳ್ಳಿ.

ಹಂತ 5
ಇನ್ನು ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವ ಮುನ್ನ ಸ್ಟೀಮ್ ತೆಗೆದುಕೊಳ್ಳಿ. ಇದು ರಂಧ್ರಗಳನ್ನು ತೆರೆಯಲಿದೆ, ತದನಂತರವೇ ಮಾಸ್ಕ್‌ನಲ್ಲಿರುವ ಅಂಶಗಳು ಮುಖದಲ್ಲಿರುವ ಪದರಗಳ ಆಳಕ್ಕೆ ಇಳಿಯಲಿವೆ.

ಹಂತ 6
ಸ್ವಚ್ಛವಾದ ಬೆರಳುಗಳಿಂದ ಮಾಸ್ಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಮಾಸ್ಕ್ ಮುಖದಲ್ಲಿ 15 ರಿಂದ 30 ನಿಮಿಷಗಳ ಕಾಲ ಇರುವಂತೆ ನೋಡಿಕೊಳ್ಳಿ.

ಹಂತ 7
ನಿಮ್ಮ ಮುಖದಲ್ಲಿರುವ ಮಾಸ್ಕ್ ಎಳೆಯಲು ಆರಂಭಗೊಳ್ಳುತ್ತಿದ್ದಂತೆ, ಮುಖಕ್ಕೆ ಸ್ವಲ್ಪ ನೀರನ್ನು ಚಿಮುಕಿಸಿಕೊಳ್ಳಿ ಮತ್ತು ವೃತ್ತಾಕಾರವಾಗಿ ಮುಖದಲ್ಲಿರುವ ಮಾಸ್ಕ್‌ನ ಸಹಾಯದಿಂದ ಮಸಾಜ್ ಮಾಡಿಕೊಳ್ಳಿ. ಇದನ್ನು 2 ನಿಮಿಷಗಳ ಕಾಲ ಮಾಡಿ. ಉಗುರು ಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆದುಕೊಂಡು ನಂತರ ತಣ್ಣೀರನ್ನು ಬಳಸಿ.

ಹಂತ 8
ತ್ವಚೆಯನ್ನು ಒಣಗಲು ಬಿಡಿ. ಎಣ್ಣೆ ಮುಕ್ತವಾಗಿರುವ ಮಾಯಿಶ್ವರೈಸ್‌ನಿಂದ ತ್ವಚೆಯನ್ನು ಮಸಾಜ್ ಮಾಡಿ ಇದು ನಿಮ್ಮ ತ್ವಚೆಗೆ ಉತ್ತಮಾಗಿರುತ್ತದೆ.

ಕೆಲವೊಂದು ಸಲಹೆಗಳು
ಮಾಸ್ಕ್ ಮುಖದಲ್ಲಿ ಚೆನ್ನಾಗಿ ಹೊಂದಿಕೆಯಾಗುವಂತೆ ಮಾಡಲು ಶೇವ್ ಮಾಡಿಕೊಳ್ಳಿ
ಮುಖದಲ್ಲಿ ಮೊಡವೆ ಪೀಡಿತ ತ್ವಚೆ ನಿಮ್ಮದಾಗಿದೆ ಎಂದಾದಲ್ಲಿ, ಲಿಂಬೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ ಇಲ್ಲದಿದ್ದರೆ ಇದು ತ್ವಚೆಗೆ ಕಿರಿಕಿರಿಯನ್ನುಂಟು ಮಾಡುತ್ತದೆ.
ಮಹಿಳೆಯರಿಗಿಂತ ಪುರುಷರ ತ್ವಚೆಯು ಎಣ್ಣೆಯುಕ್ತವಾಗಿರುವುದರಿಂದ ಸೋಪು ಬಳಸುವುದೇ ಸಾಲುತ್ತದೆ, ಆದರೆ ನೀವು ಬಳಸುತ್ತಿರುವುದು ಮಾಯಿಶ್ಚರೈಸಿಂಗ್ ಸೋಪು ಎಂಬುದನ್ನು ಖಾತ್ರಿಪಡಿಸಿ, ನಿಮ್ಮದು ಡ್ರೈ ಸ್ಕಿನ್ ಆಗಿದ್ದರೆ ಇಂತಹ ಸೋಪು ಉತ್ತಮವಾಗಿದೆ.

ಪ್ರಯೋಜನವೇನು?
ಈ ಕ್ಲೆನ್ಸಿಂಗ್ ಮಾಸ್ಕ್‌ನಲ್ಲಿರುವ ನೈಸರ್ಗಿಕ ಉತ್ಪನ್ನಗಳು ತ್ವಚೆಯನ್ನು ನಿರಾಳಗೊಳಿಸಲಿದೆ, ಮತ್ತು ಆಳಕ್ಕೆ ಹುದುಗಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಿ, ಟ್ಯಾನ್ ಅನ್ನು ದೂರವಾಗಿಸಲಿದೆ.



Click it and Unblock the Notifications
