Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಲಗೋ ಮುನ್ನ ಮೇಕಪ್ ತೆಗೆದುಬಿಡು ಚಿನ್ನ

ಅದೇ ಮೇಕಪ್ ಮಾಡುವಾಗಿನ ಆಸ್ಥೆ ಮೇಕಪ್ ತೆಗೆಯುವಾಗ ನಿಮಗಿದೆಯೆ? ಮೇಕಪ್ ತೆಗೆದು ಹಾಕದೇ ನಿದ್ದೆ ಮಾಡುವುದು ಅಪಾಯಕಾರಿ ಅಂದರೂ ಹಗುರವಾಗಿ ತೆಗೆದುಕೊಳ್ಳುವರೇ ಹೆಚ್ಚು. ರಾತ್ರಿ ಕ್ಲಬ್ ಗೆ ಹೋಗಿ, ಶಾಪಿಂಗ್ ಹೋಗಿ ಅಥವಾ ಡ್ಯೂಟಿ ಮುಗಿಸಿ ಹಾಗೇ ಹಾಸಿಗೆಗೆ ಬೀಳೋ ಜಾಯಮಾನ ಒಳ್ಳೆಯದಲ್ಲ. ಯಾಕೆಂದರೆ ಸೌಂದರ್ಯ ಹೆಚ್ಚಿಸುವ ಇಂತಹ ಪ್ರಸಾಧನ ಸಾಧನಗಳು ನಿಮ್ಮ ಅಂದಗೆಡಿಸಬಹುದು. ರಾತ್ರಿ ಮಲಗೋ ಮುನ್ನ ಮೇಕಪ್ ತೆಗೆಯಬೇಕು. ಯಾಕೆಂದರೆ...
* ಮೊಡವೆ ಮತ್ತು ಮೊಡವೆ ಕಲೆ : ರಾತ್ರಿ ಮಲಗುವಾಗ ಮೇಕಪ್ ಅಳಿಸಿ ಅನ್ನೋದಕ್ಕೆ ಮೊದಲ ಕಾರಣವೇ ಮೊಡವೆ. ಮೇಕಪ್ ನಿಂದ ನಮ್ಮ ಮುಖದ ಚರ್ಮದ ರಂದ್ರಗಳು ಬ್ಲಾಕ್ ಆಗುತ್ತವೆ. ಯಾವಾಗ ಚರ್ಮದ ರಂದ್ರಗಳು ಬ್ಲಾಕ್ ಆಗುತ್ತೋ ಆಗ ಮೊಡವೆ, ಮೊಡವೆ ಗುಳ್ಳೆ, ಶಾಶ್ವತ ಕಲೆ, ಕಪ್ಪುಗುರುತು ಇತ್ಯಾದಿ ಪರಿಣಾಮಗಳು ಉಂಟಾಗುತ್ತವೆ. ಮೊಡವೆಯ ಗೊಡವೆ ಬೇಡವೆಂದರೆ ನಿದ್ದೆ ಮಾಡೋ ಮುನ್ನ ಮೇಕಪ್ ಅಳಿಸಿರಿ.
* ಮುಖದ ಸುಕ್ಕು : ರಾತ್ರಿಯ ಸಮಯದಲ್ಲಿ ದೇಹ ಚೇತೋಹಾರಿಯಾಗುತ್ತದೆ ಮತ್ತು ಈ ಸಮಯದಲ್ಲಿ ದೇಹದ ಪ್ರತಿ ಕೋಶಗಳು ಹೆಚ್ಚು ಆಕ್ಟಿವ್ ಆಗುತ್ತವೆ. ದಿನಪೂರ್ತಿ ದಣಿದ ದೇಹ ರಾತ್ರಿಯ ಹೊತ್ತು ಚೈತನ್ಯದತ್ತ ಮರಳಿ ಮರುದಿನಕ್ಕೆ ದೇಹ ಸಿದ್ಧವಾಗುವ ಪ್ರಕ್ರಿಯೆ ನಡೆಯುತ್ತದೆ. ಇದೆಲ್ಲ ವೈಜ್ಞಾನಿಕವಾಗಿ ಸಾಬೀತಾದ ಸಂಗತಿಗಳು. ಆದರೆ ರಾತ್ರಿ ಮೇಕಪ್ ತೆಗೆಯದೇ ಮಲಗಿದರೆ ಚರ್ಮದ ಸೆಲ್ ಅಥವಾ ಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಚರ್ಮಗಳ ಕೋಶಗಳಲ್ಲಿ ವಿಪರೀತ ಒತ್ತಡವುಂಟಾಗಿ ಮುಖ ಸುಕ್ಕುಗಟ್ಟುತ್ತದೆ. ಸೌಂದರ್ಯ ಹೆಚ್ಚಿಸಲು ಬಳಸಿದ ಮೇಕಪ್ ಮುಖವನ್ನು ಸುಕ್ಕುಗಟ್ಟಿಸಬಾರದಲ್ವೆ?
* ದೃಷ್ಟಿ ಮಂದವಾಗಬಹುದು : ರಾತ್ರಿ ಮೇಕಪ್ ತೆಗೆಯದೇ ಮಲಗಿದರೆ ನಿಮ್ಮ ಕಣ್ಣಿಗೆ ಅಪಾಯ. ಇದರಿಂದ ಕಣ್ಣು ಮಂದವಾಗುತ್ತದೆ. ಕಣ್ಣಿಗೆ ಬಳಸುವ ಹೆಚ್ಚಿನ ಮೇಕಪ್ ಗಳು, ಹೈಲೈನರ್ ಗಳು ಮೇಣದ ಪದಾರ್ಥಗಳನ್ನು ಹೊಂದಿರುತ್ತವೆ. ಇದು ದಿನಪೂರ್ತಿ ಕರಗಿ ಕಣ್ಣಿನೊಳಗೆ ಆವರಿಸಿರುತ್ತದೆ. ರಾತ್ರಿ ಅಳಿಸದೆ ಇದ್ದರೆ ಇನ್ನಷ್ಟು ಅಪಾಯ. ಇದು ಕಣ್ಣಿನ ಪೊರೆಯನ್ನು ಬ್ಲಾಕ್ ಮಾಡುತ್ತದೆ ಪರಿಣಾಮವಾಗಿ ದೃಷ್ಟಿ ಮಂದವಾಗುತ್ತ ಸಾಗುತ್ತದೆ. ಸೌಂದರ್ಯ ಸಾಧನ ರಾತ್ರಿ ಅಳಿಸದೇ ಸೌಂದರ್ಯ ನೋಡುವ ಕಣ್ಣನ್ನೇ ಕಳೆದುಕೊಳ್ಳಬಾರದು.
* ಕಣ್ಣಿಗೆ ಇನ್ಫೆಕ್ಷನ್ : ಮೇಕಪ್ ನಲ್ಲಿರುವ ರಾಸಾಯನಿಕ ಅಂಶಗಳು ಕಣ್ಣಿಗೆ ಹಾನಿಯುಂಟು ಮಾಡುತ್ತವೆ. ಇಂತಹ ರಾಸಾಯನಿಕಗಳಿಂದ ಕಣ್ಣಿಗೆ ಸೋಂಕುಂಟಾಗಬಹುದು. ಇದರಿಂದ ದೃಷ್ಟಿ ಮಂದವಾಗಬಹುದು, ಅಥವಾ ದೃಷ್ಟಿ ಸಂಬಂಧಿ ಸಮಸ್ಯೆಗಳು ಉಂಟಾಗಬಲ್ಲದು.
* ತುಟಿಯ ಬಣ್ಣಗೆಡಬಹುದು : ಪ್ರಸಾಧನಗಳಲ್ಲಿ ಲಿಪ್ ಸ್ಟಿಕ್ ಗೆ ಹೆಚ್ಚು ಭಯಪಡಲೇಬೇಕು. ತುಟಿಯ ರಂಗು ಹೆಚ್ಚಿಸಲು ಬಳಸಿದ ಲಿಪ್ ಸ್ಟಿಪ್ ನಿಂದ ತುಟಿ ಬಣ್ಣ ಬದಲಾಯಿಸಬಹುದು. ಅದರಲ್ಲಿ ವಿಟಮಿನ್-ಇ ಇತ್ಯಾದಿ ನೈಸರ್ಗಿಕ ಅಂಶಗಳಿವೆ ಅಂತ ಹೆಮ್ಮೆಪಟ್ಟುಕೊಳ್ಳಬೇಡಿ. ಅದರಲ್ಲಿರುವ ರಾಸಾಯನಿಕಗಳು ತುಟಿಗೆ ಕೊಂಚವಾದರೂ ಹಾನಿ ಮಾಡಿಯೇ ಮಾಡುತ್ತವೆ. ಹಳೆಯ ಲಿಪ್ ಸ್ಟಿಕ್ ಕ್ಲೀನ್ ಮಾಡದೆ ಅಥವಾ ಲಿಪ್ ಸ್ಟಿಕ್ ದಪ್ಪಗೆ ಹಚ್ಚಿಕೊಂಡು ರಾತ್ರಿ ಮಲಗಿದರೆ ತುಟಿ ಅಲರ್ಜಿಗಳು ಮತ್ತು ತುಟಿಯ ಬಣ್ಣ ಬದಲಾಗುವುದು ಇತ್ಯಾದಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ನಿಮ್ಮ ಚರ್ಮ ಇಂತಹ ಸಮಸ್ಯೆಗೆ ಈಡಾಗದಂತೆ ನೋಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಮೇಕಪ್ ತೆಗೆದು ಮಲಗಿರಿ. ಮುಖ ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ, ನಿದ್ದೆ ಚೆನ್ನಾಗಿ ಬರುತ್ತದೆ. ಗುಡ್ ನೈಟ್ ಸ್ವೀಟ್ ಡ್ರಿಮ್ಸ್.... ಒಂದ್ನಿಮಿಷ, ಈ ಸಲಹೆಗಳು ನಿರಾಭರಣ ಮತ್ತು ನಿರಾಲಂಕಾರ ಸುಂದರಿಯರಿಗೆ ಅಲ್ಲ..



Click it and Unblock the Notifications
