Latest Updates
-
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ
ನಿಮ್ಮ ಚರ್ಮದ ಪ್ರಕಾರಕ್ಕೆ ತಕ್ಕಂತೆ ಆಹಾರ ಪದ್ಧತಿ ಹೇಗಿರಬೇಕು?
ಯಾರಿಗೆ ತಾನೇ ಅಂದವಾಗಿ ಕಾಣಬೇಕು ಎಂದು ಅನಿಸೋದಿಲ್ಲ ಹೇಳಿ..? ಎಲ್ಲರೂ ನಾವು ಅಂದವಾಗಿ ಕಾಣಬೇಕು. ಉತ್ತಮ ಚರ್ಮವನ್ನು ಹೊಂದಬೇಕು ಎಂದು ಅಂದುಕೊಂಡಿರುತ್ತಾರೆ. ಅದಕ್ಕಾಗಿ ಹರಸಾಹಸ ಪಡುತ್ತಾರೆ. ಅಂದವಾಗಿ ಕಾಣಲು ಚರ್ಮವನ್ನು ಚಂದವಾಗಿ ಅಥವಾ ಉತ್ತಮವಾಗಿ ಇಡಲು ಹಲವು ಕಾರ್ಯಗಳನ್ನು ಮಾಡುತ್ತಾರೆ. ಮುಖ ಅಥವಾ ಚರ್ಮಕ್ಕೆ ಹಲವು ಮೂಲಮು ಹಚ್ಚುತ್ತಾರೆ.

ಇನ್ನಿತರ ವಸ್ತುಗಳನ್ನು ಚರ್ಮದ ಮೇಲೆ ಪ್ರಯೋಗ ಕೂಡ ಮಾಡುತ್ತಾರೆ. ಆದರೆ ನಿಮಗೊಂದು ನೆನಪಿರಲಿ ನಾವು ಈ ರೀತಿ ಮಾಡಿದರೆ ಅದು ಸದ್ಯಕ್ಕೆ ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ದೀರ್ಘಕಾಲಕ್ಕೆ ಒಳ್ಳೆಯದಲ್ಲ. ಹೌದು, ಉತ್ತಮ ಚರ್ಮ ಹಾಗೂ ಉತ್ತಮ ಆಹಾರಕ್ಕೆ ನೇರ ಸಂಬಂಧವಿದೆ. ನೀವು ಉತ್ತಮ ಆಹಾರ ಸೇವಿಸಿದರೆ ನಿಮ್ಮ ಚರ್ಮವು ಉತ್ತಮವಾಗಿರುತ್ತದೆ. ಅಲ್ಲದೇ ದೀರ್ಘಕಾಲದ ವರೆಗೆ ಚರ್ಮವೂ ಅತ್ಯುತ್ತಮವಾಗಿರುತ್ತದೆ. ಹಾಗಾದರೆ ಉತ್ತಮ ಚರ್ಮಕ್ಕಾಗಿ ಯಾವ ರೀತಿಯ್ ಆಹಾರ ಪದ್ದತಿಯನ್ನು ಪಾಲಿಸಬೇಕು ಯಾವ ರೀತಿಯ ಆಹಾರ ಸೇವಿಸಿದರೆ ಚರ್ಮ ಉತ್ತಮವಾಗಿರುತ್ತದೆ ಇಲ್ಲಿದೆ ಮಾಹಿತಿ.

00. ಆಹಾರ ಮತ್ತು ಹಾರ್ಮೋನುಗಳ ಸಂಬಂಧ
ಆಹಾರವು ಪ್ರಾಥಮಿಕವಾಗಿ ದೇಹದಲ್ಲಿನ ವಿವಿಧ ಹಾರ್ಮೋನುಗಳ ಮಟ್ಟಗಳ ಪರಿಣಾಮ ಬೀರುತ್ತದಮತ್ತು ಹಾರ್ಮೋನುಗಳು ದೇಹದಲ್ಲಿ ಸಂಭವಿಸುವ ಅನೇಕ ನೈಸರ್ಗಿಕ ಪ್ರಕ್ರಿಯೆಗಳನ್ನು ಆಹಾರ ನಿಯಂತ್ರಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ. ಇದರರ್ಥ ಚರ್ಮದ ಒಟ್ಟಾರೆ ಆರೋಗ್ಯ ಮತ್ತು ನೋಟವು ಅನಿವಾರ್ಯವಾಗಿ, ಆಹಾರದಿಂದ ಪ್ರಭಾವಿತವಾಗಿರುವ ಹಾರ್ಮೋನ್ ಏರಿಳಿತಗಳಿಗೆ ನಿಕಟ ಸಂಬಂಧ ಹೊಂದಿದೆ ಎಂಬುವುದಾಗಿದೆ. ಕೆಲವು ಆಹಾರಗಳನ್ನು ಸೇವಿಸುವುದರಿಂದ ಮತ್ತು ಕೆಲ ಕೆಟ್ಟ ಆಹಾರಗಳನ್ನು ಬಿಡುವುದರಿಂದ ನಿಮ್ಮ ಚರ್ಮವನ್ನು ನೀವು ಸುಧಾರಿಸಿಕೊಳ್ಳಬಹುದು. ಇನ್ನು ಉತ್ತಮ ಚಮಕ್ಕಾಗಿ ಏನೇನೋ ತಿನ್ನುವುದಲ್ಲ. ಯಾವ ಚರ್ಮಕ್ಕೆ ಯಾವ ಪ್ರಕಾರದ ಆಹಾರ ಸೇವಿಸಿದರೆ ಒಳ್ಳೆಯದು ಎಂದು ಮೊದಲು ನೋಡಬೇಕು. ಈ ಮೂಲಕ ನಿಮ್ಮ ಆಹಾರವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.

1. ನಿಮ್ಮ ಚರ್ಮದ ಪ್ರಕಾರವನ್ನು ನಿರ್ಣಯಿಸುವುದು ಹೇಗೆ..?
ನೀವು ಯಾವುದೇ ಡಯಟ್ ಪ್ರಾರಂಭಿಸುವ ಮೊದಲು ನಿಮ್ಮ ಸ್ಕಿನ್ ಯಾವ ಪ್ರಕಾರದ್ದು ಎಂಬುವುದನ್ನು ನೀವು ಮೊದೌ ತಿಳಿದುಕೊಳ್ಳಬೇಕು. ಬಳಿಕ ಅದಕ್ಕೆ ಸೂಟ್ ಆಗುವ ಆಹಾರ ಯಾವುದು ಎನ್ನುವುದನ್ನು ನೋಡಬೇಕು. ವೈದ್ಯರ ಪ್ರಕಾರ, ಮೊದಲು ನೀವು ನಿಮ್ಮ ಚರ್ಮ ಯಾವ ಪ್ರಕಾರ ಎಂದು ತಿಳಿದುಕೊಳ್ಳಲು. ಚರ್ಮವನ್ನು ಸ್ವಚ್ಛಗೊಳಿಸಬೇಕು. ಬಳಿಕ ಹಲವಾರು ಗಂಟೆಗಳ ನಂತರ ಅದು ಹೇಗೆ ಕಾಣುತ್ತದೆ ಎಂಬುದನ್ನು ಗಮನಿಸಿಸಬೇಕು. ಈ ಮೂಲಕ ನಿಮ್ಮ ಚರ್ಮ ಯಾವ ಪ್ರಕಾರವಿದೆ ಎಂಬುದನ್ನು ನಿರ್ಧರಿಸಲು ಅದು ನಿಮಗೆ ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ಚರ್ಮದ ಪ್ರಕಾರಗಳು ಇಲ್ಲಿವೆ
ಒಣ ಅಥವಾ ಶುಷ್ಕ
ಸಾಮಾನ್ಯ
ಎಣ್ಣೆಯುಕ್ತ
ಸಂಯೋಜನೆ
ಈ ಚರ್ಮದ ಪ್ರಕಾರಗಳಲ್ಲಿ ಮೊಡವೆ, ಫ್ಲೇಕಿಂಗ್ ಅಥವಾ ಡಲ್ ನೆಸ್ ನಂತಹ ಸಮಸ್ಯೆಗಳು ಕಾಡಬಹುದು. ನಿಮ್ಮ ಚರ್ಮ ಅತ್ಯಂತ ಹೊಳೆಯುತ್ತಿದ್ದರೆ ಅದು ಆಯಿಲ್ಲಿ ಅಥವಾ ಎಣ್ಣೆಯುಕ್ತ ಚರ್ಮ ಎಂದು ಕರೆಯುತ್ತಾರೆ. ಇನ್ನು ನಿಮಗೆ ಫ್ಲಾಕಿ, ಕೆಂಪು, ಅಥವಾ ಕಿರಿಕಿರಿ ಉಂಟಾದರೆ ನೀವು ಒಣ ಚರ್ಮವನ್ನು ಹೊಂದಿದ್ದೀರಿ ಎಂದು ಅರ್ಥ.

2. ಒಣ ಅಥವಾ ಶುಷ್ಕ ಚರ್ಮಕ್ಕಾಗಿ ಉತ್ತಮ ಮತ್ತು ಕೆಟ್ಟ ಆಹಾರಗಳು
ನೀವು ಒಣ ಚಮವನ್ನು ಹೊಂದಿದ್ದರೆ ನೀವು ಹೆಚ್ಚು ಹೆಚ್ಚು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಬೇಕು. ಹೇಗೆ ನಮ್ಮ ಗಂಟಲು ಒಣಗಿದಾಗ ನೀರು ಕೇಳುತ್ತದೋ ಅಥವಾ ಬಾಯಾರಿಕೆಯಾಗುತ್ತದೋ ಅದೇ ರೀತಿ ನಾವು ಒಣಗಿದ ಚಮವನ್ನು ಹೊಂದಿದರೆ ನಮ್ಮ ಚರ್ಮವು ಹೆಚ್ಚೆಚ್ಚು ನೀರನ್ನು ಕೇಳುತ್ತದೆ. ಹೀಗಾಗಿ ನಾವು ನೀರು ಜಾಸ್ತಿ ಕುಡಿಯಬೇಕು. ಪ್ರತಿದಿನ 2 ಲೀಟರ್ ನೀರನ್ನು ಕುಡಿಯಬೇಕು. ಅಲ್ಲದೇ ಕಲ್ಲಂಗಡಿ ಸೇರಿ ನೀರು ಜಾಸ್ತಿ ಇರುವ ಹಣ್ಣುಗಳ ಸೇವನೆ ಮೂಲಕ ಹೈಡ್ರೇಟ್ ಪಡೆಯಬಹುದು. ಜೊತೆಗೆ ಕೊಬ್ಬಿನಾಮ್ಲಗಳ ಮೂಲಕ ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಬಹುದು. ಉದಾಹರಣೆಗೆ ಆವಕಾಡೊ, ಆಲಿವ್ ಎಣ್ಣೆ, ಸಾಲ್ಮನ್ಮತ್ತು ಹೈಡ್ರೇಶನ್ ಗೆ ಉತ್ತಮ ಆಹಾರ. ನಿರ್ಜಲೀಕರಣಗೊಳಿಸುವ ಆಹಾರಗಳು ಮತ್ತು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಬೇಕು. ಹೆಚ್ಚುವರಿ ಕೆಫೀನ್ ಮತ್ತು ಆಲ್ಕೋಹಾಲ್ ನಿಮ್ಮ ದೇಹವನ್ನು ಮತ್ತು ಚಮವನ್ನು ಒಣಗಿಸುತ್ತದೆ. ಇನ್ನು ವಿಟಮಿನ್ ಎ ಮತ್ತು ಸಿಯ ಕೊರತೆಯು ಒಣ ಚರ್ಮಕ್ಕೆ ಕಾರಣವಾಗಬಹುದು ಎಂದು. ಇನ್ನು ಸೊಪ್ಪು,ಕೋಸುಗಡ್ಡೆ,ಸಿಹಿ ಆಲೂಗಡ್ಡೆ ಸೇವಿಸಿದರೆ ಉತ್ತಮ ವಿಟಮಿನ್ ಸಿ ಮತ್ತು ಎ ದೊರಕುತ್ತದೆ.

3. ಎಣ್ಣೆಯುಕ್ತ ಚರ್ಮಕ್ಕಾಗಿ ಉತ್ತಮ ಮತ್ತು ಕೆಟ್ಟ ಆಹಾರಗಳು
ಕೆಲವರಿಗೆ ಮುಖದಲ್ಲಿ ಅಥವಾ ದೇಹದಲಿ ಎಣ್ಣೆ ರೀತಿಯ ಅನುಭವ ಆದರೆ ಅವರ ಚಮ ಎಣ್ಣೆಯುಕ್ತ ಚರ್ಮವಾಗಿದೆ ಎಂದು ಹೇಳಬಹುದು. ಇನ್ನು ಎಣ್ಣೆಯುಕ್ತ ಚರ್ಮವನ್ನು ಹೊಂದಿದವರು ತಾವು ಎಣ್ಣೆಯುಕ್ತ ಆಹಾರವನ್ನು ಸೇವಿಸಿದರೆ ಚಮದಲಿ ಇನ್ನಷ್ಟು ಎಣ್ಣೆಯಾಗಲಿದೆ ಎಂದು ಭಾವಿಸುತ್ತಾರೆ. ಆದರೆ ಇದು ತಪ್ಪು. ಆ ರೀತಿ ಎಲ್ಲಿಯೂ ಇಲ್ಲ. ಆಂಟಿ ಇನ್ಫ್ಲಾಮೇಶನ್ ಎಣ್ಣೆ ಸೇವನೆಯಿಂದ ವಾಸ್ತವವಾಗಿ ಎಣ್ಣೆಯುಕ್ತ ಚರ್ಮದ ಸಮಸ್ಯೆ ದೂರ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಆಂಟಿ ಇನ್ಫ್ಲಾಮೇಶನ್ ಆಯಿಲ್ ಇರುವ ಆಹಾರಗಳು
ಆವಕಾಡೊ
ಆಲಿವ್ ಆಯಿಲ್
ಮೀನು
ಅಗಸೆಬೀಜ
ಇನ್ನು ಆಯಿಲ್ಲಿ ಸ್ಕಿನ್ ಇರುವವರು ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು, ಕರಿದ ಆಹಾರಗಳನ್ನು ಮಿತಿಯಲ್ಲಿ ಸೇವಿಸಬೇಕು ಎಂದು ವೈದ್ಯರುಗಳೆ ಹೇಳುತ್ತಾರೆ. ಅಲ್ಲದೇ ಸಕ್ಕರೆಯ ಸೇವನೆಯನ್ನು ಕನಿಷ್ಠವಾಗಿ ಇರಿಸಿಕೊಂಡರೆ ಉತ್ತಮ ಎನ್ನುತ್ತಾರೆ. ಇನ್ನು ಮೇದೋಗ್ರಂಥಿಗಳ ಅತಿಯಾದ ಉತ್ಪಾದನೆಯನ್ನು ತಡೆಗಟ್ಟುವುದು ಮತ್ತು ಮುಚ್ಚಿಹೋಗಿರುವ ರಂಧ್ರಗಳ ವಿರುದ್ಧ ಹೋರಾಡಲು ಗೋಧಿ ಧಾನ್ಯಗಳನ್ನು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಸೇವನೆಯಿಂದ ಸುಲಭ ಎನ್ನುತ್ತಾರೆ. ಮತ್ತು ಕೆಂಪು ಮಾಂಸದ ಬದಲಿಗೆ ಕೋಳಿ ಅಥವಾ ಮೀನುಗಳನ್ನು ಆರಿಸಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು.

4. ಸಂಯೋಜನೆಯ ಚರ್ಮಕ್ಕಾಗಿ ಉತ್ತಮ ಮತ್ತು ಕೆಟ್ಟ ಆಹಾರಗಳು
ಸಂಯೋಜನೆಯ ಚರ್ಮ ಅಂದರೆ ಶುಷ್ಕ ಅಥವಾ ಒಣ ಮತ್ತು ಎಣ್ಣೆಯುಕ್ತ ಮಿಶ್ರಣದಿಂದ ಇರುವ ಚರ್ಮವಾಗಿದೆ. ಈ ವೇಳೆ ನೀವು ಎಣ್ಣೆಯುಕ್ತ ಹಾಗೂ ಒಣ ಚರ್ಮಕ್ಕೆ ಹೊಂದಿಕೊಳ್ಳುವ ಆಹಾರವನ್ನು ಸೇವಿಸಿವುದು ಒಳ್ಳೆಯದು. ಹೌದು, .ಸಂಯೋಜಿತ ಚರ್ಮ ಹೊಂದಿರುವ ಜನರು ಕಾರ್ಬೋಹೈಡ್ರೇಟ್‌ಗಳನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಆದರೆ ನೀವು ಯಾವ ರೀತಿಯ ಧಾನ್ಯಗಳು ಮತ್ತು ಗೋಧಿಯನ್ನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯ. ಕಾರ್ಬ್ಸ್ ಇನ್ಫ್ಲಾಮೇಶನ್ ಉಂಟುಮಾಡಬಹುದು ಮತ್ತು ಸಂಯೋಜನೆಯ ಚರ್ಮವನ್ನು ಹೊಂದಿರುವ ಯಾರೊಬ್ಬರ ಸೂಕ್ಷ್ಮ ಸಮತೋಲನವನ್ನು ಉಂಟು ಮಾಡಬಹುದು. ಕಾರ್ಬ್ಸ್ ಅನ್ನು ಆಯ್ಕೆಮಾಡುವಾಗ, ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ-ಗ್ಲೈಸೆಮಿಕ್, ಉದಾಹರಣೆಗೆ ಬ್ರೌನ್ ರೈಸ್ ಅಥವಾ ಕ್ವಿನೋವಾವನ್ನು ಆರಿಸಿಕೊಂಡಎ ಉತ್ತಮ.

5. ಮೊಡವೆ ಪೀಡಿತ ಚರ್ಮಕ್ಕಾಗಿ ಅತ್ಯುತ್ತಮ ಮತ್ತು ಕೆಟ್ಟ ಆಹಾರಗಳು
ಮೊಡವೆಗಳು ಸಾಮಾನ್ಯವಾಗಿ ಹದಿಹರೆಯದ ಸಮಸ್ಯೆ ಎಂದು ಭಾವಿಸಲಾಗುತ್ತದೆ. ಆದರೆ ಅದು ಹದಿಯರೆಯದ ಸಮಸ್ಯೆ ಅಲ್ಲ. ಅದು ಆಹಾರದಿಂದ ಬರುವ ಸಮಸ್ಯೆಯಾಗಿದೆ. ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಅಸೋಸಿಯೇಷನ್ ಪ್ರಕಾರ, ವಯಸ್ಕ-ಆರಂಭಿಕ ಮೊಡವೆ ಯನ್ನು ಮೊಡವೆ ಎಂದು ಕರೆಯಲಾಗುತ್ತದೆ. ಅದು ವಯಸ್ಕರಾದಾಗ ವ್ಯಕ್ತಿಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತದೆ. ಋತುಬಂಧದಿಂದ ಕೂಡ ಇದು ಉಂಟಾಗುತ್ತದೆ. ಇದು ಎಣ್ಣೆಯುಕ್ತತೆ, ಇನ್ಫ್ಲಾಮೇಶನ್ ಮತ್ತು ಬ್ಯಾಕ್ಟೀರಿಯಾದ ಸಂಯೋಜನೆಯಾಗಿದೆ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮೊಡವೆ ಹೊಂದಿರುವ ಜನರು ಕೇವಲ ಎಣ್ಣೆಯುಕ್ತ ಚರ್ಮಕ್ಕಾಗಿ ಆಹಾರ ಯೋಜನೆಯನ್ನು ಅನುಸರಿಸುವ ಬದಲು ಸೂಕ್ಷ್ಮ ಪೋಷಕಾಂಶಗಳ ಸೇವನೆ ಮಾಡುವುದು ಒಳ್ಳೆಯದು. ಇನ್ನು ಡೈರಿ, ಹಾಗೆಯೇ ಸಕ್ಕರೆ ಅಥವಾ ಕೊಬ್ಬಿನ ಆಹಾರಗಳನ್ನು ಕಡಿಮೆ ಮಾಡಿದರೆ ಒಳ್ಳೆಯೌದ್. ಯಾಕೆಂದರೆ ಈ ಆಹಾರಗಳು ಚರ್ಮದಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ ಮತ್ತು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ನಿಯಂತ್ರಿಸುವ ಹಾರ್ಮೋನ್‌ಗಳಲ್ಲಿ ಸ್ಪೈಕ್ ಗಳನ್ನು ಉಂಟುಮಾಡುತ್ತವೆ ಎಂದು ಹೇಳುತ್ತಾರೆ. ಉತ್ಪಾದಿತ ಮೇದೋಗ್ರಂಥಿಗಳ ಪ್ರಮಾಣದ ಹೆಚ್ಚಳವು ಸೆಬಾಸಿಯಸ್ ಗ್ರಂಥಿಗಳ ತಡೆಗಟ್ಟುವಿಕೆ ಮತ್ತು ಮೊಡವೆಗಳ ಬೆಳವಣಿಗೆಗೆ ಸಂಬಂಧಿಸಿರುತ್ತದೆ.

5. ಡಲ್ ಚರ್ಮಕ್ಕಾಗಿ ಉತ್ತಮ ಮತ್ತು ಕೆಟ್ಟ ಆಹಾರಗಳು
ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಪಡೆಯಲು ಟ್ಯಾನಿಂಗ್ ಉತ್ತಮ ಮಾರ್ಗವಲ್ಲ ಎಂದು ಚರ್ಮಶಾಸ್ತ್ರಜ್ಞರು ಹೇಳುತ್ತಾರೆ. ಏಕೆಂದರೆ ಇದು ಸನ್ ಡ್ಯಾಮೇಜ್ ನ ಒಂದು ರೂಪವಾಗಿದೆ. ಹೀಗಾಗಿ ನೀವು ಕೆಲವು ಆಹಾರಗಳ ಸೇವನೆ ಮೂಲಕ ಡಲ್ ಸ್ಕಿನ್ ದೂರ ಮಾಡಿ ನೈಸರ್ಗಿಕ ಹೊಳೆಯುವ ಚರ್ಮವನ್ನು ಪಡೆಯಬಹುದು. ಇನ್ನು ಡಲ್ ಚರ್ಮವು ಸಾಮಾನ್ಯವಾಗಿ ಮಾಲಿನ್ಯಕಾರಕಗಳು ಮತ್ತು ಕೀಟನಾಶಕಗಳಿಗೆ ಒಡ್ಡಿಕೊಳ್ಳುವುದರಿಂದ ನಮ್ಮ ಪರಿಸರದ ಆಕ್ಸಿಡೇಟಿವ್ ಒತ್ತಡದಿಂದ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ನಾವು ಆಕ್ಸಿಡೇಟಿವ್ ಒತ್ತಡದಿಂದ ನಮ್ಮ ಚಮವನ್ನು ರಕ್ಷಿಸಿಕೊಳ್ಳಬೇಕು. ಉತ್ಕರ್ಷಣ ನಿರೋಧಕಗಳ ಮೂಲಕ ನಾವು ಚರ್ಮವನ್ನು ರಕ್ಷಿಸಿಕೊಳ್ಳಬಹುದು.
ಲೈಕೋಪೀನ್ ಹೊಂದಿರುವ ಆಹಾರಗಳನ್ನು ಸೇವಿಸಿ
ಟೊಮೆಟೊ
ಸೀಬೆಹಣ್ಣು
ಪಪ್ಪಾಯಿ
ಕೆಂಪು ಮೆಣಸು
ನೆನಪಿಡಿ:
ಉತ್ತಮ ಆಹಾರ ಪದ್ದತಿ ನಿಮ್ಮ ಎಲ್ಲ ಚರ್ಮದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಆದರೆ ನೀವು ಯಾವ ಸ್ಕಿನ್ ನಿಮ್ಮದು ಎಂದು ನೀವು ಮೊದಲು ತಿಳಿದುಕೊಳ್ಳಬೇಕು. ಅಲ್ಲದೇ ಯಾವ ಆಹಾರ ಸೇವಿಸಬೇಕು ಎನ್ನುವುದನ್ನು ತಿಳಿಯಬೇಕು. ನಿಮ್ಮ ಸ್ಕಿನ್ ಪ್ರಕಾರವನ್ನು ಗಮನಿಸಿಕೊಂಡು ಆಹಾರವನ್ನು ಸೇವಿಸಿದರೆ ಮಾತ್ರ ನಿಮ್ಮ ಚರ್ಮಕ್ಕೆ ಬೇಕಾದ ಪೌಷ್ಟಿಕತೆ ಸಿಗುತ್ತದೆ. ಉತ್ತಮ ಚರ್ಮವಾಗುತ್ತದೆ.



Click it and Unblock the Notifications










