Latest Updates
-
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ?
ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುವುದು ಹೇಗೆ?

ನಿಧಾನವಾಗಿ ತಿನ್ನುವ ಅಭ್ಯಾಸವು ನಿಮ್ಮ ಹಸಿವಿನ ನೈಜವಾದ ಪ್ರಮಾಣವನ್ನು ನೀವು ಖುದ್ದು ಅರ್ಥಮಾಡಿಕೊಳ್ಳಲು ಸಹಕರಿಸುತ್ತದೆ. ಆಗ ನೀವು ವೇಗವಾಗಿ ತಿನ್ನಲು ಕಾರಣವನ್ನು, ಊಟದ ಕುರಿತು ಭಾವಾವೇಶಕ್ಕೆ ಒಳಗಾಗುವುದು ಅಥವಾ ಕೇವಲ ಊಟದ ರುಚಿಯನ್ನು ನೋಡುವ ಸಲುವಾಗಿ ಸುಖಾಸುಮ್ಮನೆ ತಿನ್ನುವುದು ಏಕೆ ಎಂಬ ಬಗ್ಗೆ ಕಾರಣವನ್ನು ಗುರುತಿಸುತ್ತೀರಿ. ಏನೇ ಆದರೂ ನಿಧಾನವಾಗಿ ತಿನ್ನುವ ಅಭ್ಯಾಸವು ಇದ್ದಕ್ಕಿದ್ದಂತೆ ಬರುವ ಅಭ್ಯಾಸವಲ್ಲ. ಬದಲಿಗೆ ಇದನ್ನು ಆಚರಣೆಗೆ ತರಲು ನಿರಂತರ ಅಭ್ಯಾಸ ಮತ್ತು ಧೃಡ ನಿರ್ಧಾರದ ಅವಶ್ಯಕತೆ ಇದೆ.
ಹಂತಗಳು
1. ನಿಮ್ಮ ಮೆದುಳನ್ನು ಪುನರ್ ಹೊಂದಾಣಿಕೆ ಮಾಡಿ: ನೀವು ನಿಧಾನವಾಗಿ ತಿನ್ನಬೇಕೆಂದು ಬಯಸಿದಾಗ, ಇದ್ದಕಿದ್ದಂತೆ ನಿಧಾನವಾಗಿ ಶುರುಮಾಡಬೇಡಿ. ಬದಲಿಗೆ 21 ದಿನಗಳವರೆಗೆ ನಿಮ್ಮ ಮೆದುಳನ್ನು ಆ ಪ್ರಕ್ರಿಯೆಗಾಗಿ ಸಜ್ಜುಗೊಳಿಸಿ. ನಿಮ್ಮ ಮೆದುಳಿಗೆ ವಿಶ್ರಾಂತಿ ಮತ್ತು ಕಾಲ್ಪನಿಕವಾದ ಚಿತ್ರಣಗಳನ್ನು ಒದಗಿಸಿ. ಕಾಲ್ಪನಿಕವಾದ ಚಿತ್ರಣಗಳು ಮೆದುಳಿಗೆ ನೈಜ ಅನುಭವವನ್ನು ಒದಗಿಸಿ ಅದು ಅರ್ಥಮಾಡಿಕೊಳ್ಳುವಂತೆ ಹಾಗು ನೆನಪಿಸಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ ಊಹಿಸಿಕೊಳ್ಳುವಾಗ ನಿಮ್ಮನ್ನು ನೀವು ತೆಳ್ಳಗೆ ಮತ್ತು ಆರೋಗ್ಯವಾಗಿರುವ ಹಾಗೆ ಊಹಿಸಿಕೊಳ್ಳಿ.
ನಿಧಾನವಾಗಿ ತಿನ್ನುವುದು-ತಿನ್ನುವಾಗ ಊಟದ ಸ್ವಾದದ ಜೊತೆಗೆ ಅದರ ಗರಿಗರಿ, ಒಗರು ಮತ್ತು ತೊಗರುಗಳ ರುಚಿಯನ್ನು ಸಹ ನೋಡಲು ಪ್ರಯತ್ನಿಸಿ.ಊಟ ಮಾಡುವ ಮೊದಲು ಮತ್ತು ನಂತರ ಹೊಟ್ಟೆ ತುಂಬಿರುವುದನ್ನು ಖಾತ್ರಿಮಾಡಿಕೊಳ್ಳಲು ಒಂದು ಲೋಟ ನೀರನ್ನು ಕುಡಿಯಿರಿ. ಊಟದ ನಂತರ ನೀವು ತೆಳ್ಳಗೆ ಮತ್ತು ಆರೋಗ್ಯವಾಗಿರುವ ಹಾಗೆ ಊಹಿಸಿಕೊಳ್ಳುವುದನ್ನು ಮರೆಯಬೇಡಿ.
2. ಸಮಾರಂಭಗಳಲ್ಲಿ ಸಂಸ್ಕರಿಸಿದ ತಿಂಡಿಗಳನ್ನು ತಿನ್ನುವುದನ್ನು ನಿಲ್ಲಿಸಿ: ನಿಧಾನವಾಗಿ ತಿನ್ನುವುದು ಎಂದರೆ ಊಟ ಜಗಿಯುವುದನ್ನು ನಿಧಾನಗೊಳಿಸುವುದು ಎಂದರ್ಥವಲ್ಲ. ಬದಲಿಗೆ ನಿಮ್ಮ ಆಹಾರ ಪರಿಕ್ರಮವನ್ನು ಮತ್ತು ಆಯ್ಕೆಗಳನ್ನು ಮಿತಗೊಳಿಸುವುದು ಎಂದರ್ಥ. ಸಂಸ್ಕರಿಸಿದ ಆಹಾರವನ್ನು ನೀವು ತ್ಯಜಿಸಿದ ನಂತರ ಅದರ ಸ್ಥಳದಲ್ಲಿ ಆರೋಗ್ಯಕರವಾದ ಆಹಾರವನ್ನು ತೆಗೆದುಕೊಳ್ಳಿ. ಇಲ್ಲವಾದರೆ ಲಘುವಾಗಿ ಸಂಸ್ಕರಿಸಿದ ಆಹಾರವನ್ನು ತೆಗೆದುಕೊಳ್ಳಿ.
ಉಧಾಹರಣೆಗೆ; ಬಿಳಿ ಪಾಸ್ತ ಮತ್ತು ಬಿಳಿ ಅನ್ನವನ್ನು ನಿಮ್ಮ ಊಟದ ಪಟ್ಟಿಯಿಂದ ತೆಗೆದು ಅದರ ಸ್ಥಳದಲ್ಲಿ ಹೋಲ್ ಮೀಲ್ ಪಾಸ್ತ ಮತ್ತು ಕಂದು ಅನ್ನವನ್ನು ತಿನ್ನಬಹುದು.
3. ನಿಮಗೆ ಹಸಿವಾದಾಗ ಮಾತ್ರ ತಿನ್ನಲು ಆರಂಭಿಸಿ: ಅತಿ ಹಸಿವು ನಿಮಗೆ ತಲೆಸುತ್ತು, ನಿಶ್ಶಕ್ತಿ ಮತ್ತು ಕಸಿವಿಸಿಯನ್ನು ಉಂಟು ಮಾಡಿ ನಿಮ್ಮ ಊಟ ತಿನ್ನುವ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತದೆ. ಅಲ್ಲದೆ ಅತಿ ಹಸಿವು ನಿಮ್ಮನ್ನು ನಿರಾಳವಾಗಿ ಮತ್ತು ಸಂತೋಷದಿಂದ ಊಟ ಮಾಡಲು ಬಿಡುವುದಿಲ್ಲ.
4.ಪ್ರತಿಸಲ ಊಟ ಮಾಡುವ ಮೊದಲು ವಿಶ್ರಾಂತಿ ಪಡೆಯಿರಿ: ಕೆಲಹೊತ್ತು ಮೂಗಿನಿಂದ ಉಸಿರನ್ನು ತೆಗೆದುಕೊಂಡು ಅದನ್ನು ಬಾಯಿಯಿಂದ ಹೊರಗೆ ಬಿಡಿ. ಹಾಗೆ ಮಾಡುವಾಗ ಉಸಿರನ್ನು ಸ್ವಲ್ಪ ಸಮಯ ಹಿಡಿದಿಡಲು ಪ್ರಯತ್ನಿಸಿ ಹಾಗು ನಿಧಾನವಾಗಿ ಬಾಯಿಯಿಂದ ಹೊರಗೆ ಬಿಡಿ. ಊಟಕ್ಕೆ ಕೂರುವ ಮೊದಲು ನಿಮ್ಮ ಒತ್ತಡಗಳನ್ನು ದೂರಗೊಳಿಸಿ. ಆಗ ನೀವು ನಿಶ್ಚಿಂತೆಯಿಂದ ಊಟ ಮಾಡಬಹುದು. ಊಟ ಮಾಡುವಾಗ ನಿಮ್ಮ ಗಮನ ಊಟದ ಮೇಲೆಯೆ ಇರಲಿ. ಈ ರೀತಿ ಊಟ ಮಾಡುವಾಗ ಅದರಿಂದ ದೊರೆಯುವ ಪ್ರಯೋಜನಗಳನ್ನು ನೆನಪಿಸಿಕೊಳ್ಳಿ. ( ಒಳ್ಳೆಯ ಆರೋಗ್ಯ, ಒಳ್ಳೆಯ ನಿಲುವು, ಇತ್ಯಾದಿ)
5. ಊಟಕ್ಕೆ ಒಂದು ಲೋಟ ನೀರು ಅಥವಾ ನಷ್ಟು ಸೂಪ್ ಕುಡಿಯಿರಿ: ನಿಮ್ಮ ಆಹಾರದ ಜೊತೆಗೆ ನೀರನ್ನು ಕುಡಿಯಿರಿ. ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆ ತುಂಬಿದ ಅನುಭವವಾಗುತ್ತದೆ.
6. ಪ್ರತಿ ತುತ್ತನ್ನು ನಿಮ್ಮ ಬಾಯಿಗಿಡುವ ಮೊದಲು ನಿಮ್ಮ ಪೋರ್ಕನ್ನು ಕೆಳಗೆ ಇಡಿ: ಒಂದು ಗುಟುಕು ನೀರು ಕುಡಿಯಿರಿ, ಅಕ್ಕಪಕ್ಕದವರೊಂದಿಗೆ ಮಾತನಾಡಿ. ಪ್ರತಿ ತುತ್ತನ್ನು ಆಸ್ವಾದಿಸಿ. ಇದನ್ನು ಪುನರಾವರ್ತಿಸಲು ಬಯಸುವಂತೆ ತಲ್ಲೀನತೆಯಿಂದ ಮತ್ತು ಮುದದಿಂದ ಊಟಮಾಡಿ. ಇದು ನಿಧಾನವಾಗಿ ತಿನ್ನುವುದರಿಂದ ದೊರೆಯುವ ಅನುಭೂತಿ. ಇದು ನಿಮ್ಮ ಊಟದ ಸಮಯವನ್ನು ಒಂದು ವಿರಾಮಕಾಲವನ್ನಾಗಿ ಮಾಡಿ ಅದಕ್ಕೆ ಒಂದು ಮಹತ್ವಪೂರ್ಣತೆಯನ್ನು ತಂದು ಕೊಡುತ್ತದೆ.
7. ಏಕಾಗ್ರಚಿತ್ತದಿಂದ ಊಟ ಮಾಡಿ ಮತ್ತು ಊಟವನ್ನು ಆನಂದಿಸಿ: ಇದನ್ನು ನಿಮ್ಮ ಮೆದುಳು ದಾಖಲಿಸಿಕೊಳ್ಳುತ್ತದೆ. ಅನಂತರ ಹೀಗೆ ಊಟ ಮಾಡುವುದು ಅಭ್ಯಾಸವಾಗಿ, ನಿಮಗೆ ಹಿತವಾದ ಅನುಭವವನ್ನೊದಗಿಸುತ್ತದೆ. ಊಟದ ಸಮಯದಲ್ಲಿ ಟಿ.ವಿ ನೋಡುವುದು, ಓದುವುದು ಮತ್ತು ಅಂತರ್ ಜಾಲದಲ್ಲಿ ಹುಡುಕಾಟ ಮಾಡುವುದನ್ನು ನಿಲ್ಲಿಸಿ ಅಥವಾ ಮಾಡಲೇಬೇಡಿ. ಊಟ ಮಾಡುವಾಗ ಉಂಟಾಗುವ ಅಡಚಣೆಗಳು ನಿಮ್ಮ ಏಕಾಗ್ರತೆಯನ್ನು ಭಂಗಗೊಳಿಸಿ, ನಿಮಗೆ ಹೊಟ್ಟೆ ತುಂಬಿರುವ ಅನುಭವವನ್ನು ತಡೆ ಹಿಡಿದು ಹೆಚ್ಚು ತಿನ್ನುವಂತೆ ಪ್ರೊತ್ಸಾಹಿಸುತ್ತದೆ.
8. ಊಟ ಮಾಡಲು 20 ನಿಮಿಷಗಳಷ್ಟು ಸಮಯವನ್ನು ಮೀಸಲಿಡಿ: ನಿಮ್ಮ ಊಟದ ಮೇಜಿಗೆ ಕಾಣುವಂತೆ ಒಂದು ಗೋಡೆ ಗಡಿಯಾರವನ್ನು ನೇತು ಹಾಕಿ. ಇದರಿಂದ ನಿಮ್ಮ ಊಟದ ಸಮಯವನ್ನು ಸರಿಹೊಂದಿಸಲು ನೆರವಾಗುತ್ತದೆ. ನಿಮ್ಮ ಊಟದ ಕಡೆಯ ಭಾಗವನ್ನು ತುಂಬಾ ನಿಧಾನವಾಗಿ ತಿನ್ನಿ. 20 ನಿಮಿಷದ ನಂತರವು ನಿಮಗೆ ಹಸಿವಾಗುತ್ತಿದ್ದರೆ, ನೀವು ತುಂಬಾ ವೇಗವಾಗಿ ಊಟ ಮಾಡುತಿದ್ದೀರಿ ಎಂದರ್ಥ.
9. ಊಟದ ನಂತರ ಕೂಡ ಹಸಿವಿನ ಅನುಭವಾಗುತ್ತಿದ್ದರು ಸಹ ಊಟಮಾಡುವುದನ್ನು ನಿಲ್ಲಿಸಿ: ಸ್ಪಲ್ಪ ಹೆಚ್ಚಿಗೆ ನೀರು ಕುಡಿಯಿರಿ. ಇದಕ್ಕಾಗಿ ನಿಮಗೆ ಸ್ವಲ್ಪ ದೃಢನಿರ್ಧಾರ ಮತ್ತು ನಿಮ್ಮ ಕಲ್ಪನೆಯನ್ನು ಸ್ಮರಿಸಿಕೊಳ್ಳುವಷ್ಟು ವ್ಯವಧಾನ ಬೇಕಾಗುತ್ತದೆ ಅಷ್ಟೆ. ಅಷ್ಟಿದ್ದರೆ ಅವೇ ನಿಮ್ಮನ್ನು ಪ್ರೋತ್ಸಾಹಿಸುತ್ತವೆ. ಹೀಗೆ ಮಾಡಿದರೆ ಐದು ನಿಮಿಷದ ನಂತರ ನೀವು ಊಟ ರುಚಿಯಾಗಿದ್ದರು ಸಹ ಅದನ್ನು ತಿನ್ನುವುದಿಲ್ಲ. ಏಕೆಂದರೆ ನಿಮ್ಮ ದೃಢ ನಿರ್ಧಾರವು ನಿಮಗೆ ನಿಮ್ಮ ಕುರಿತಾದ ಅಭಿಮಾನವನ್ನು ಹೆಚ್ಚಿಸಿ, ಊಟವನ್ನು ಕಡಿಮೆ ತೆಗೆದುಕೊಳ್ಳುವಂತೆ ಮಾಡಿರುತ್ತದೆ.



Click it and Unblock the Notifications











