Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಜ್ಯೇಷ್ಠಮಧುವಿನ ಈ ಫೇಸ್ ಪ್ಯಾಕ್ ಹಚ್ಚಿದರೆ ಕಲೆ ಮಾಯು, ತ್ವಚೆ ಬೆಳ್ಳಗಾಗುವುದು
ಜ್ಯೇಷ್ಠಮಧು ಅತ್ಯುತ್ತಮವಾದ ಸೌಂದರ್ಯವರ್ಧಕ ಎಂದರೆ ತಪ್ಪಾಗಲ್ಲ. ತ್ವಚೆಯಲ್ಲಿರುವ ಕಲೆಯನ್ನು ಹೋಗಲಾಡಿಸಿ ತ್ವಚೆಯನ್ನು ಫಳ ಫಳ ಹೊಳೆಯುವಂತೆ ಮಾಡುವ ಗುಣ ಈ ಜ್ಯೇಷ್ಠ ಮಧುವಿನಲ್ಲಿದೆ. ನಿಮ್ಮದು ಡ್ರೈ ತ್ವಚೆಯಾಗಿರಲಿ ಅಥವಾ ಆಯಿಲಿ ತ್ವಚೆಯಾಗಿರಲಿ ಇದನ್ನು ಬಳಸಬಹುದು, ತುಂಬಾ ಸೆನ್ಸಿಟಿವ್ ಸ್ಕಿನ್ ಇರುವವರು ಕೂಡ ಇದನ್ನು ಬಳಸಬಹುದು.
ಜ್ಯೇಷ್ಠಮಧು ಬಳಸಿದರೆ ಮುಖದಲ್ಲಿರುವ ಕಪ್ಪು ಕಲೆಗಳು ದೂರಾಗುವುದು, ಕಣ್ಣಿನ ಸುತ್ತ ಇರುವ ಕಪ್ಪು ಕಲೆ ದೂರಾಗುವುದು. ತ್ವಚೆ ಆರೈಕೆಯಲ್ಲಿ ಇದನ್ನು ಹೇಗೆ ಬಳಸಬೇಕು ಎಂದು ನೋಡೋಣ ಬನ್ನಿ:

ಸೆನ್ಸಟಿವ್ ತ್ವಚೆ ಆಗಿದ್ದರೆ
ಸೆನ್ಸಿಟಿವ್ ತ್ವಚೆ ಇರುವವರು ತಮ್ಮ ತ್ವಚೆ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಬೇಕು, ಸ್ವಲ್ಪ ಹೆಚ್ಚು ಕಡಿಮೆಯಾದರೆ ತ್ವಚೆಯಲ್ಲಿ ಸಮಸ್ಯೆ ಉಂಟಾಗುವುದು. ನೀವು ಜ್ಯೇಷ್ಠಮಧು ಈ ರೀತಿ ಬಳಸಿದರೆ ಒಳ್ಳೆಯದು:
ಬೇಕಾಗುವ ಸಾಮಗ್ರಿ
* ಒಂದು ಚಮಚ ಜ್ಯೇಷ್ಠಮಧುವಿನ ಪುಡಿ
* 1/2 ಚಮಚ ಶ್ರೀಗಂಧದ ಪುಡಿ
* 2 ಚಮಚ ಹಸಿ ಹಾಲು
ಈ ಮೂರು ಸಾಮಗ್ರಿ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ಹಚ್ಚಿ, ಮುಖಕ್ಕೆ ಮಾತ್ರವಲ್ಲ ಕುತ್ತಿಗೆ ಭಾಗಕ್ಕೂ ಹಚ್ಚಿ 15-20 ನಿಮಿಷ ಬಿಟ್ಟು ಮುಖ ತೊಳೆಯಿರಿ, ಈ ರೀತಿ ಮಾಡುತ್ತಿದ್ದರೆ ಮುಖದಲ್ಲಿರುವ ಕಪ್ಪು ಕಲೆ ದೂರಾಗುವುದು. ವಾರದಲ್ಲಿ 2-3 ಬಾರಿ ಬಳಸಿದರೂ ಉತ್ತಮ ಫಲಿತಾಂಶ ಸಿಗುವುದು.
ಎಣ್ಣೆ ತ್ವಚೆಯೇ?
ಎಣ್ಣೆ ತ್ವಚೆಯಾಗಿದ್ದರೆ ಮೊಡವೆ ಸಮಸ್ಯೆ ಉಂಟಾಗುವುದು. ನೀವು ಎಣ್ಣೆ ಜಿಡ್ಡು ಕಡಿಮೆ ಮುಖ ತಾಜಾದಿಂದ ಕಾಣಲು ಈ ರೀತಿ ಫೇಸ್‌ಪ್ಯಾಕ್ ಮಾಡಿ ಬಳಸಬಹುದು.
ಬೇಕಾಗುವ ಸಾಮಗ್ರಿ
1 ಚಮಚ ಜ್ಯೇಷ್ಠ ಮಧುವಿನ ಪುಡಿ
* 1 ಕಿತ್ತಳೆ ಸಿಪ್ಪೆ
* 1 ಚಮಚ ನಿಂಬೆರಸ
ಕಿತ್ತಳೆ ಸಿಪ್ಪೆ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ.
ಈ ಮೂರನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮಸಾಜ್ ಮಾಡಿ, ನಂತರ 10 ನಿಮಿಷ ಬಿಟ್ಟು ಮುಖ ತೊಳೆಯಿರಿ, ಹೀಗೆ ಮಾಡುವುದರಿಂದ ಜಿಡ್ಡಿನಂಶ ಕಡಿಮೆಯಾಗುವುದು, ತ್ವಚೆಯಲ್ಲಿ ಕಲೆಗಳು ಇರುವುದಿಲ್ಲ.
ಮುಖದ ಕಾಂತಿ ಹೆಚ್ಚಲು ಈ ಕಾಂಬಿನೇಷನ್ ಟ್ರೈ ಮಾಡಬಹುದು:
ಜ್ಯೇಷ್ಠ ಮಧು ಮತ್ತು ಲೋಳೆಸರ
ಮೂಗಿನ ಮೇಲೆ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್
ಬೇಕಾಗುವ ಸಾಮಗ್ರಿ
1 ಚಮಚ ಜ್ಯೇಷ್ಠ ಮಧುವಿನ ಪುಡಿ
1 ಚಮಚ ಲೋಳೆಸರ
1 ಚಮಚ ಆಪಲ್ ಸಿಡರ್ ವಿನೆಗರ್
ಲೋಳೆಸರ ಗಿಡದಿಂದ ಆಗಷ್ಟೆ ತೆಗೆದಿರುವುದನ್ನು ಬಳಸಿದರೆ ಇನ್ನೂ ಉತ್ತಮ, ಅದಕ್ಕೆ ಜ್ಯೇಷ್ಠಮಧುವಿನ ಪುಡಿ ಸೇರಿ ಮಿಕ್ಸ್ ಮಾಡಿ, ಆಪಲ್ ಸಿಡರ್ ವಿನಗೆರ್ ಸೇರಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಕಡ್ಲೆಹಿಟ್ಟಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚಾಗುವುದು.
ನಾರ್ಮಲ್ ಸ್ಕಿನ್‌ಗೆ ಜ್ಯೇಷ್ಠಮಧು ಹಾಗೂ ಜೇನಿನ ಕಾಂಬಿನೇಷನ್
ನಿಮ್ಮದು ನಾರ್ಮಲ್ ಸ್ಕಿನ್ ಆಗಿದ್ದರೆ ನೀವು ಈ ಫೇಸ್‌ಪ್ಯಾಕ್ ಟ್ರೈ ಮಾಡಿ ಒಳ್ಳೆಯ ರಿಸಲ್ಟ್ ಸಿಗಲಿದೆ.
2 ಚಮಚ ಜ್ಯೇಷ್ಠ ಮಧುವಿನ ಪುಡಿ
ಒಂದೂವರೆ ಚಮಚ ಜೇನು
1 ಚಮಚ ನಿಂಬೆರಸ
* ಈ ಮೂರನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ.



Click it and Unblock the Notifications
