Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೂದಲು ಉದುರುವುದು ತಡೆಗಟ್ಟಲು ಈ ಪುರಾತನ ಮದ್ದೇ ಬೆಸ್ಟ್ ಎಂದ ರವೀನಾ ಟಂಡನ್
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಬಹುತೇಕ ಜನರ ಸಮಸ್ಯೆಯಾಗಿದೆ. ಕೆಲವರಂತೂ ಈ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ ಎಂದು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರುತ್ತಾರೆ. ಕೆಲವರು ದುಬಾರಿ ಶ್ಯಾಂಪೂ, ಹೇರ್ ಕಂಡೀಷನರ್ ಟ್ರೈ ಮಾಡುತ್ತಾರೆ, ಇನ್ನು ಕೆಲವರು ಚಿಕಿತ್ಸೆ ಪಡೆದುಕೊಳ್ಳುತ್ತಾರೆ.
ಕೂದಲಿನ ಚಿಕಿತ್ಸೆ ತುಂಬಾ ದುಬಾರಿಯೇ ಆಗಿರುತ್ತದೆ. ಆದರೆ ಕೂದಲು ಉದುರುವುದನ್ನು ತಗಡೆಗಟ್ಟಲು ಇದ್ಯಾವುದಕ್ಕಿಂತಲೂ ಸರಳವಾದ ಹಾಗೂ ಪುರಾತನವಾದ ವಿಧಾನ ಅನುಸರಿದರೆ ಸಾಕು, ಕೂದಲು ಉದುರುವುದು ಕಡಿಮೆಯಾಗುವುದು ಹಾಗೂ ಸೊಂಪಾಗಿ ಬೆಳೆಯುವುದು ಎನ್ನುತ್ತಾರೆ ರವೀನಾ ಟಂಡನ್.
ತಮ್ಮಇನ್‌ಸ್ಟಾಗ್ರಾಮ್‌ನಲ್ಲಿ ಕೂದಲು ಉದುರುವುದನ್ನು ತಡೆಗಟ್ಟಿ, ಕೂದಲು ದಪ್ಪವಾಗಿ ಬೆಳೆಯಲು ಕೆಲವೊಂದು ಸಲಹೆ ನೀಡಿದ್ದಾರೆ. ಇವರು ನೀಡಿರುವ ಸಲಹೆ ಪ್ರತಿಯೊಬ್ಬರು ಪಾಲಿಸಬಹುದಾಗಿದ್ದು ಅಲ್ಲದೆ ದುಬಾರಿಯೂ ಅಲ್ಲ. ಬನ್ನಿ ಆ ಅದ್ಭುತ ಸಲಹೆ ಏನು ಎಂದು ನೋಡೋಣ:

ದಿನಾ ಆಮ್ಲ/ನೆಲ್ಲಿಕಾಯಿ ತಿನ್ನಿ
ಕೂದಲಿನ ಪೋಷಣೆಗೆ ನೆಲ್ಲಿಕಾಯಿ ತುಂಬಾನೇ ಸಹಾಯ ಮಾಡುತ್ತದೆ. ಕೂದಲು ಚೆನ್ನಾಗಿರಲು ದಿನಾ ನೆಲ್ಲಿಕಾಯಿ ತಿನ್ನುವಂತೆ ಸಲಹೆ ನೀಡಿದ್ದಾರೆ. ಪ್ರತಿದಿನ ನೆಲ್ಲಿಕಾಯಿ ತಿನ್ನುವುದು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ದೇಹಕ್ಕೆ ಅಗ್ಯತವಿರುವ ವಿಟಮಿನ್ ಸಿ ಸಿಗುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಕೂದಲನ್ನು ಬುಡದಿಂದಲೇ ಪೋಷಣೆ ಮಾಡುತ್ತದೆ. ಆದ್ದರಿಂದ ದಿನದಲ್ಲಿ ಒಂದರಿಂದ ಎರಡು ನೆಲ್ಲಿಕಾಯಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ.

ನೆಲ್ಲಿಕಾಯಿಯನ್ನು ತಲೆಗೆ ಹೇಗೆ ಬಳಸಬೇಕು?
ಒಂದು ಕಪ್ ಹಾಲಿಗೆ ನಾಲ್ಕರಿಂದ ಐದು ನೆಲ್ಲಿಕಾಯಿ ಹಾಕಿ ಕುದಿಸಬೇಕು. ನೆಲ್ಲಿಕಾಯಿ ಚೆನ್ನಾಗಿ ಬೆಂದು ಮೆತ್ತಗಾಗಬೇಕು. ನಂತರ ಅದನ್ನು ಉರಿಯಿಂದ ಇಳಿಸಿ, ತಣ್ಣಗಾದ ಮೇಲೆ ಹಾಲಿನಲ್ಲಿಯೇ ಮ್ಯಾಶ್ ಮಾಡಿ. ಈಗ ಈ ಹಾಲಿನ ಮಿಶ್ರಣವನ್ನು ತಲೆಗೆ ಹಚ್ಚಿ 30 ನಿಮಿಷ ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ತೊಳೆಯಬೇಕು.

ತಲೆ ತೊಳೆಯುವ ಶ್ಯಾಂಪೂ ಹಚ್ಚುವ ಅಗ್ಯತವಿಲ್ಲ
ನೆಲ್ಲಿಕಾಯಿ ಮತ್ತು ಹಾಲಿನ ಹೇರ್ ಮಾಸ್ಕ್ ಮಾಡಿದರೆ ಕೂದಲಿಗೆ ಶ್ಯಾಂಪೂ ಹಚ್ಚುವ ಅಗ್ಯತವಿಲ್ಲ. ಏಕೆಂದರೆ ಹಾಗೇ ತಿಕ್ಕಿ ತೊಳೆದರೂ ಕೂದಲಿನ ಬುಡದಲ್ಲಿರುವ ಕೊಳೆ ಸಂಪೂರ್ಣವಾಗಿ ಹೋಗುವುದು, ಕೂದಲಿನಲ್ಲಿ ಯಾವುದೇ ಜಿಡ್ಡಿನಂಶ ಉಳಿಯುವುದಿಲ್ಲ ಆದ್ದರಿಂದ ಯಾವುದೇ ಶ್ಯಾಂಪೂ ಹಚ್ಚದೆ ಕೂದಲಿನ ಆರೈಕೆ ಮಾಡಬಹುದು. ಕೂದಲು ತುಂಬಾ ಹೊಳಪಿನಿಂದಲೂ ಕೂಡಿರುತ್ತದೆ.

ಆಮ್ಲ ಏಕೆ ಕೂದಲಿಗೆ ಒಳ್ಳೆಯದು?
ಆಮ್ಲದಲ್ಲಿ ವಿಟಮಿನ್ ಸಿ, ಇ, ರಂಜಕ ಟಾನ್ನಿಸ್, ಕಬ್ಬಿಣದಂಶ ಮತ್ತು ಕ್ಯಾಲ್ಸಿಯಂ ಇರುತ್ತದೆ. ಇದರಲ್ಲಿ ವಿಟಮಿನ್ ಇ ಅಧಿಕವಿರುವುದರಿಂದ ಕೂದಲಿನ ಬೆಳವಣಿಗೆಗೆ ಸಹಕಾರಿ. ಇನ್ನು ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್ ಕೂದಲಿನ ಬುಡವನ್ನು ಸ್ವಚ್ಛವಾಗಿ ಇಡುವುದರ ಜೊತೆಗೆ ಯಾವುದೇ ತಲೆಹೊಟ್ಟಿನ ಸಮಸ್ಯೆ ಕೂಡ ಕಾಡುವುದಿಲ್ಲ.
View this post on InstagramA post shared by Raveena Tandon (@officialraveenatandon) on



Click it and Unblock the Notifications
