Latest Updates
-
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ! -
ನಾಗರ ಪಂಚಮಿ: ದೇವಸ್ಥಾನದ ಕ್ಯೂನಲ್ಲಿ ನಿಲ್ಲುವಾಗ ಬೆನ್ನು, ಕಾಲು ನೋವು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ವ್ಯಕ್ತಪಡಿಸುವ ಮುನ್ನ ಎಚ್ಚರ: ದಂಪತಿಗಳಿಗೆ ಇಲ್ಲಿದೆ ಡಿಜಿಟಲ್ ಶಿಷ್ಟಾಚಾರದ ಟಿಪ್ಸ್ -
ಮಳೆಗಾಲದ ಸಂಜೆ: ನಿಮ್ಮ ಅಪಾರ್ಟ್ಮೆಂಟ್ ಸೋರಿಕೆಯಾಗದಂತೆ ತಡೆಯಲು ಈ ತ್ವರಿತ ಟಿಪ್ಸ್ ಫಾಲೋ ಮಾಡಿ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: 30 ನಿಮಿಷದಲ್ಲಿ ಸುಂದರ ಪೂಕಳಂ ಬಿಡಿಸುವುದು ಹೇಗೆ? -
ಶ್ರಾವಣ ಸೋಮವಾರದ ವ್ರತ: ಆಫೀಸ್ ಕೆಲಸದ ನಡುವೆ ಮಧುಮೇಹಿಗಳು ಆರೋಗ್ಯವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್ -
ಮಳೆಗಾಲದ ಫೋಟೋಗಳು ವೈರಲ್ ಆಗಬೇಕಾ? ಈ ಸಿಂಪಲ್ ಮೊಬೈಲ್ ಟ್ರಿಕ್ಸ್ ಟ್ರೈ ಮಾಡಿ! -
ಆಗಸ್ಟ್ 17 ರಂದು ರಜೆ ಇದೆಯಾ? ಕೃಷ್ಣ ಜನ್ಮಾಷ್ಟಮಿ ಗೊಂದಲಕ್ಕೆ ಇಲ್ಲಿದೆ ಸ್ಪಷ್ಟ ಮಾಹಿತಿ -
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ
ಖಾಲಿ ಹೊಟ್ಟೆಗೆ ಈ 5 ಆಹಾರ ಸೇವಿಸಿದರೆ ಕೂದಲು ಉದುರುವುದು ಕಡಿಮೆಯಾಗುತ್ತೆ:ನ್ಯೂಟ್ರಿಷಿಯನಿಸ್ಟ್ ನೇಹಾ ರಂಗಾಲನಿ ಟಿಪ್ಸ್
ಕೂದಲು ಉದುರುತ್ತಿದೆ ಎಂಬುವುದು ಬಹುತೇಕರ ಸಮಸ್ಯೆಯಾಗಿದೆ. ಹಲವಾರು ಕಾರಣಗಳಿಂದ ಕೂದಲು ಉದುರುವುದು, ಕೂದಲಿಗೆ ಬಾಹ್ಯ ಆರೈಕೆ ಅಂದರೆ ಮಸಾಜ್, ದೂಳಿನಿಂದ ಕೂದಲಿನ ರಕ್ಷಣೆ, ಹೇರ್ ಮಾಸ್ಕ್ ಇವೆಲ್ಲಾ ಎಷ್ಟು ಮುಖ್ಯವೋ ಅದಕ್ಕಿಂತ ಆಂತರಿಕವಾಗಿ ಕೂದಲಿನ ಆರೈಕೆ ಮಾಡುವುದಾಗಿದೆ.
ಕೂದಲು ತುಂಬಾ ಉದುರುತ್ತಿದ್ದು ಹೇಗಪ್ಪಾ ತಡೆಗಟ್ಟುವುದು ಎಂದು ನೀವು ತಲೆಕೆಡಿಸಿಕೊಂಡಿದ್ದರೆ ಸೆಲೆಬ್ರಿಟಿಗಳ ನ್ಯೂಟ್ರಿಷಿಯನಿಸ್ಟ್ ಆಗಿರುವ ನೇಹಾ ರಂಗಾಲನಿ ಕೂದಲಿನ ಆರೋಗ್ಯಕ್ಕೆ ಕರಿಬೇವು, ನೆಲ್ಲಿಕಾಯಿ, ಸಿಹಿ ಗೆಣಸು, ಎಳ್ಳು, ಬೆಣ್ಣೆಹಣ್ಣು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಒಳ್ಳೆಯದು ಎಂಬುವುದಾಗಿ ಹೇಳಿದ್ದಾರೆ.

ಕೂದಲು ತುಂಬಾ ತೆಳುವಾಗಿದ್ದರೆ ಈ 5 ಆಹಾರಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಲಾರಂಭಿಸಿ,ಕೆಲವು ವಾರಗಳಲ್ಲಿ ಕೂದಲು ಉದುರುವುದು ಕಡಿಮೆಯಾಗುವುದು, ಕೂದಲಿನ ದಟ್ಟತೆ, ಆರೋಗ್ಯ ಹೆಚ್ಚುವುದು.
ಈ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೂದಲಿನ ಆರೋಗ್ಯಕ್ಕೆ ಮಾತ್ರವಲ್ಲ, ಒಟ್ಟು ಮೊತ್ತ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಿದೆ, ಬನ್ನಿ ಆ ಆಹಾರಗಳಾವುವು ಎಂದು ನೋಡೋಣ:

1. ಕರಿಬೇವು
ಕರಿಬೇವನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ದಿನಾ 3-4 ಎಸಳು ಕರಿಬೇವು ಬಾಯಿಗೆ ಹಾಕಿ ಜಗಿಯಿರಿ.
ಕರಿಬೇವು ಬಳಸಿ ಕೂದಲಿನ ಬಾಹ್ಯ ಆರೈಕೆ ಹೀಗೆ ಮಾಡಿ:
ಅರ್ಧ ಲೀಟರ್ ತೆಂಗಿನೆಣ್ಣೆಗೆ ಒಂದು ಹಿಡಿ ಕರಿಬೇವಿನ ಎಲೆಗಳನ್ನು ಸೇರಿಸಿ ಕಾಯಿಸಿ. ಎಣ್ಣೆ ಕುದಿಸಬೇಡಿ, ಸಿಮ್‌ನಲ್ಲಿಟ್ಟು ಕಾಯಿಸಿ. ಇದಕ್ಕೆ ನೆಲ್ಲಿಕಾಯಿ, ದಾಸವಾಳದ ಹೂ ಕೂಡ ಸೇರಿಸಬಹುದು. ನಂತರ ಆ ಎಣ್ಣೆಯನ್ನು ಸೋಸಿ ಡಬ್ಬದಲ್ಲಿ ಹಾಕಿಟ್ಟು ವಾರದಲ್ಲಿ 3 ಬಾರಿ ಈ ಎಣ್ಣೆಯಿಂದ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುವುದು. ತಲೆ ತೊಳೆಯಲು ಮೈಲ್ಡ್ ಶ್ಯಾಂಪೂ ಅಥವಾ ಸೀಗೆಕಾಯಿ ಪುಡಿ ಬಳಸಿದರೆ ಒಳ್ಳೆಯದು.

2. ನೆಲ್ಲಿಕಾಯಿ
ನೆಲ್ಲಿಕಾಯಿಯನ್ನು ಕೂಡ ಖಾಲಿ ಹೊಟ್ಟೆಯಲ್ಲಿ ಸೇವಿಸಿ, ಇದರಿಂದ ಕೂದಲಿಗೆ ಅವಶ್ಯಕವಾದ ಪೋಷಕಾಂಶಗಳು ದೊರೆಯುತ್ತದೆ. ನೆಲ್ಲಿಕಾಯಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುವುದು, ದಿನಾ ಒಂದು ನೆಲ್ಲಿಕಾಯಿ ಸೇವಿಸಿ.
ನೆಲ್ಲಿಕಾಯಿ ಎಣ್ಣೆ
ನೀವು ತಲೆಗೆ ಹಚ್ಚಲು ಬಳಸುವ ಎಣ್ಣೆಗೆ ನೆಲ್ಲಿಕಾಯಿಯನ್ನು ಜಜ್ಜಿ ಹಾಕಿ ಕಾಯಿಸಿ ಅಥವಾ ನೆಲ್ಲಿಕಾಯಿ ಪುಡಿ ಸೇರಿಸಿ. ನಂತರ ಈ ಎಣ್ಣೆಯನ್ನು ತಲೆಗೆ ಹಚ್ಚಿ, ಇದರಿಂದ ಕೂದಲಿನ ಬುಡ ಬಲವಾಗುವುದು. ಹೀಗೆ ನೆಲ್ಲಿಕಾಯಿ ಒಳಗಿನಿಂದ -ಹೊರಗಿನಿಂದ ನಿಮ್ಮ ಕೂದಲಿನ ರಕ್ಷಣೆ ಮಾಡುತ್ತದೆ.

3.ಸಿಹಿ ಗೆಣಸು
ಪ್ರತಿದಿನ ಒಂದು ತುಂಡು ಸಿಹಿ ಗೆಣಸು ತಿನ್ನಿ. ಇದನ್ನು ಹಸಿಯಾಗಿ ತಿನ್ನಬಹುದು, ಇಲ್ಲದಿದ್ದರೆ ಹಬೆಯಲ್ಲಿ ಬೇಯಿಸಿ ತಿನ್ನಬಹುದು. ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಗಳಂತಹ ಟಾನಿಕ್ ಗುಣವಿದೆ. ಇದನ್ನು ದಿನಾ ತಿನ್ನಿ ಕೂದಲು ಸೊಂಪಾಗಿ ಬೆಳೆಯುವುದು.

4. ಎಳ್ಳು
ಎಳ್ಳು ಕೂದಲಿನ ಕೂದಲು ಉದುರುವುದನ್ನು ತಡೆಟಗಟ್ಟಲು ತುಂಬಾ ಸಹಕಾರಿ. ದಿನಾ ಒಂದು ಚಮಚ ಎಳ್ಳು ತಿನ್ನಿ.
ಇಲ್ಲದಿದ್ದರೆ 1 ಚಮಚ ಎಳ್ಳನ್ನು ಊಟದ ನಂತರ ಅಥವಾ ರಾತ್ರಿಯ ಊಟದ ನಂತರ ಅರ್ಧ ಘಂಟೆಯ ಬಳಿಕ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ಕೂದಲಿಗೆ ಅವಶ್ಯಕವಾದ ಪೋಷಕಾಂಶಗಳು ಸಿಗುವುದು.
ಎಳ್ಳೆಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿದರು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

5. ಬೆಣ್ಣೆ ಹಣ್ಣು
ಬೆಣ್ಣೆಹಣ್ಣಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲ, ವಿಟಮಿನ್ ಬಿ ,ವಿಟಮಿನ್ ಸಿ, ಕಬ್ಬಿಣಾಂಶ ಗಳಿದ್ದು ತುಂಬಾನೇ ಒಳ್ಳೆಯದು. ಇದನ್ನು ಕೂಡ ಬೆಳಗ್ಗೆ ಸವಿಯಿರಿ.
ಬೆಣ್ಣೆಹಣ್ಣಿನ ಈ ಹೇರ್ ಮಾಸ್ಕ್ ಕೂಡ ಪರಿಣಾಮಕಾರಿ:
ಕೂದಲುದುರುವ ಮತ್ತು ಕೂದಲು ತೆಳುವಾಗುವಿಕೆಯ ಸಮಸ್ಯೆಯಿದ್ದರೆ ನುಗ್ಗೆಸೊಪ್ಪಿನ ಪುಡಿ 1 ಚಮಚ, ಸ್ವಲ್ಪ ಬೆಣ್ಣೆ ಹಣ್ಣು, 1 ಚಮಚ ತೆಂಗಿನೆಣ್ಣೆ ಅಥವಾ ನೀವು ತಲೆಗೆ ಬಳಸುವ ಎಣ್ಣೆ ಹಾಕಿ ಮಿಶ್ರ ಮಾಡಿ ತಲೆಗೆ ಹಚ್ಚಿ, 30 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುವುದು ಮಾತ್ರವಲ್ಲ, ಹೊಳಪಿನಿಂದ ಕೂಡಿರುತ್ತದೆ.
ಇವುಗಳ ಜೊತೆಗೆ ಅಗಸೆ ಬೀಜ ಕೂಡ ತೆಗೆದುಕೊಳ್ಳಬಹುದು. ದಿನದಲ್ಲಿ 1 ಚಮಚ ಅಗಸೆ ಬೀಜ ತಿನ್ನು, ಇದು ಕೂಡ ಕೂದಲಿನ ಪೋಷಣೆ ಮಾಡುತ್ತದೆ. ಈ ಎಲ್ಲಾ ಆಹಾರಗಳು ಕೂದಲಿನ ಹಾಗೂ ದೇಹದ ಒಟ್ಟು ಮೊತ್ತದ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications