Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕೂದಲಿಗೂ ಆಲೂಗಡ್ಡೆಗೆ ಏನಯ್ಯಾ ಸಂಬಂಧ?
ರೇಷ್ಮೆಯಂತಹ ಉದ್ದಗಿನ ಕೂದಲು ನೋಡುವವರನ್ನು ನೋಡುತ್ತಾ ಇರುವಂತೆ ಮಾಡುತ್ತದೆ. ರೇಷ್ಮೆಯಂತಹ ಉದ್ದಗಿನ ಕೂದಲು ಸೌಂದರ್ಯದ ಪ್ರತೀಕ. ಆರೋಗ್ಯಕರ ಕೂದಲಿಗೆ ದೇಹದ ಆರೋಗ್ಯ ಮತ್ತು ಕೂದಲಿನ ಆರೈಕೆ ತುಂಬಾ ಮುಖ್ಯವಾಗಿರುತ್ತದೆ. ಕೂದಲಿನ ಆರೈಕೆ ಮಾಡುವಂತಹ ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದನ್ನು ಬಳಸಿದರೆ ಅದರಿಂದ ಆಗುವಂತಹ ಲಾಭಗಿಂತಹ ನಷ್ಟವೇ ಹೆಚ್ಚು ಎನ್ನಬಹುದು.
ಕೂದಲಿನ ಆರೈಕೆಯಲ್ಲಿ ಆಧುನಿಕ ವಿಧಾನಗಳನ್ನು ಬಳಸದೆ ಮನೆಯಲ್ಲೇ ಲಭ್ಯವಿರುವಂತಹ ಸಾಮಗ್ರಿಗಳನ್ನು ಬಳಸಬಹುದು. ರೇಷ್ಮೆಯಂತಹ ನುಣುಪಾದ, ದಪ್ಪಗಿನ, ಉದ್ದ ಕೂದಲಿಗೆ ಆಲೂಗಡ್ಡೆಯನ್ನು ಬಳಸಬಹುದು. ಆಲೂಗಡ್ಡೆಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ ಎಂದು ನಾವು ತಿಳಿದುಕೊಂಡಿದ್ದೇವೆ. ಬ್ಯೂಟಿ ಟಿಪ್ಸ್: ಕೂದಲಿನ ಸೌಂದರ್ಯಕ್ಕೆ ಆಲೂಗಡ್ಡೆ ಜ್ಯೂಸ್!
ಆದರೆ ಅದೇ ಆಲೂಗಡ್ಡೆಯಿಂದ ಕೂದಲಿನ ಆರೈಕೆ ಮಾಡಿಕೊಳ್ಳುವುದು ಹೇಗೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಮನೆಯಲ್ಲೇ ತಯಾರಿಸುವ ಈ ಅದ್ಭುತ ಹೇರ್ ಪ್ಯಾಕ್ ಕೂದಲಿನ ಬೆಳವಣಿಗೆಗೆ ನೆರವಾಗುವುದಲ್ಲದೆ ರೇಷ್ಮೆಯಂತೆ ಹೊಳೆಯುವ ಕಾಂತಿಯುತ ಕೂದಲನ್ನು ನೀಡುವುದು. ಈ ಹೇರ್ ಪ್ಯಾಕ್ ಅನ್ನು ಯಾವ ರೀತಿ ತಯಾರಿಸಿ ಬಳಸಬಹುದು ಎಂದು ನೀವು ತಿಳಿದುಕೊಳ್ಳಿ.
ರೇಷ್ಮೆಯಂತಹ ಕಾಂತಿಗೆ

ಬೇಕಾಗುವ ಸಾಮಗ್ರಿಗಳು
*3-4 ಮಧ್ಯಮ ಗಾತ್ರದ ಆಲೂಗಡ್ಡೆಗಳು
*ತೆಳ್ಳಗಿನ ಬಟ್ಟೆ
*ಒಂದು ಮೊಟ್ಟೆಯ ಲೋಳೆ
*ಒಂದು ಚಮಚ ಜೇನುತುಪ್ಪ
ಮಾಡುವ ವಿಧಾನ
* ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ರುಬ್ಬಿಕೊಳ್ಳಿ
* ಇನ್ನು ರುಬ್ಬಿದ ಆಲೂಗಡ್ಡೆ ತೆಗೆದು ತೆಳುವಾದ ಬಟ್ಟೆಗೆ ಹಾಕಿಕೊಂಡು ಸರಿಯಾಗಿ ಹಿಂಡಿಕೊಂಡು ಅದರ ಜ್ಯೂಸ್ ತೆಗೆಯಿರಿ.
* ಈಗ ಈ ಜ್ಯೂಸ್‌ಗೆ ಹೇಳಿದಷ್ಟು ಪ್ರಮಾಣದ ಮೊಟ್ಟೆ ಲೋಳೆ ಮತ್ತು ಜೇನುತುಪ್ಪ ಬೆರೆಸಿ
* ಈ ಪೇಸ್ಟ್ ಅನ್ನು ತಲೆಬುರುಡೆಗೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ
* 30 ನಿಮಿಷ ಕಾಲ ಇದನ್ನು ಹಾಗೆ ಬಿಡಿ ಬಳಿಕ ನಿಯಮಿತವಾಗಿ ಬಳಸುವ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
ಸೂಚನೆ: ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ. ಆಲೂಗಡ್ಡೆ ಜ್ಯೂಸ್ ಬಳಸಿ ಮುಖದ ಸುಕ್ಕು ನಿವಾರಿಸಿ...
ತಲೆಹೊಟ್ಟು ನಿವಾರಣೆಗೆ
*ಬೇಕಾಗುವ ಸಾಮಗ್ರಿಗಳು
*2 ಸಣ್ಣ ಬಟಾಟೆಗಳು
*ಒಂದು ಚಮಚ ಮೊಸರು
*ಅರ್ಧ ಚಮಚ ಲಿಂಬೆರಸ
ಪೇಸ್ಟ್ ಮಾಡುವ ವಿಧಾನ
* ಮೊದಲು ಆಲೂಗಡ್ಡೆ ಜ್ಯೂಸ್ ತೆಗೆದುಕೊಂಡು ಅದಕ್ಕೆ ಮೊಸರು ಮತ್ತು ಲಿಂಬೆರಸ ಮಿಶ್ರಣ ಮಾಡಿ.
* ಈ ಪೇಸ್ಟ್ ಸ್ವಲ್ಪ ದಪ್ಪಗಿರಲಿ. ಇದನ್ನು ಕೂದಲಿನ ಬುಡಕ್ಕೆ ಹೇರ್ ಮಾಸ್ಕ್ ನಂತೆ ಹಚ್ಚಿಕೊಳ್ಳಿ.
* ಅರ್ಧ ಗಂಟೆ ಕಾಲ ಹಾಗೆ ಒಣಗಲು ಬಿಡಿ
* ನಿಯಮಿತವಾಗಿ ಬಳಸುವ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
ವಿಶೇಷ ಮಾಹಿತಿ: ಮೊಸರು ತಲೆಬುರುಡೆಯನ್ನು ಎಣ್ಣೆಯಿಂದ ಮುಕ್ತಗೊಳಿಸುವುದು. ಲಿಂಬೆರಸವು ತಲೆಹೊಟ್ಟು ನಿವಾರಣೆಗೆ ತುಂಬಾ ಸಹಕಾರಿ. ಆಲೂಗಡ್ಡೆಯು ಕೂದಲಿನ ಬೆಳವಣಿಗೆಗೆ ನೆರವಾಗುವುದು.



Click it and Unblock the Notifications

