ತಲೆಹೊಟ್ಟಿನ ಸಮಸ್ಯೆಗೆ ಇಲ್ಲಿದೆ ಪವರ್ ಫುಲ್ ಮನೆಮದ್ದು

By Arshad

ತಲೆಹೊಟ್ಟಿಗೆ ಪ್ರಮುಖ ಕಾರಣ ಶಿಲೀಂಧ್ರಗಳ ಸೋಂಕಿನಿಂದ ತಲೆಯ ಚರ್ಮ ತೀರಾ ಒಣಗಿ ಹೊರಪದರ ಪಕಳೆಯಂತೆ ನಿಧಾನವಾಗಿ ಏಳುವುದು. ಇದು ಪೂರ್ತಿಯಾಗಿ ಏಳದೇ ಕೊಂಚವೇ ಎದ್ದು ಉಳಿದ ಭಾಗ ಚರ್ಮಕ್ಕೆ ಅಂಟಿಕೊಂಡೇ ಇರುವುದು ತುರಿಕೆ ತರಿಸುತ್ತದೆ. ನಾಲ್ಕು ಜನರ ನಡುವೆ ಇದ್ದಾಗ ಈ ತುರಿಕೆ ಅಸಾಧ್ಯ ಮುಜುಗರ ತರಿಸುತ್ತದೆ. ಅಲ್ಲದೇ ಸಡಿಲಗೊಂಡ ಪಕಳೆಗಳು ನಿಧಾನವಾಗಿ ಕೂದಲ ಮೇಲೆಲ್ಲಾ ಆವರಿಸಿ ಭುಜದ ಮೇಲೆ, ಗಾಳಿಗೆ ಹಾರಾಡತೊಡಗುತ್ತವೆ. ಇದನ್ನು ಕಂಡವರು ತೋರುವ ಅಸಹ್ಯ ಸಹಾ ಮುಜುಗರಕ್ಕೀಡುಮಾಡಬಹುದು.

ತಲೆಹೊಟ್ಟಿನ ಕಾರಣ ಚರ್ಮಕ್ಕೆ ಅಗತ್ಯ ಪೋಷಣೆ ದೊರಕದೇ ಕೂದಲ ಬುಡಗಳೂ ಸಡಿಲವಾಗಿ ಕೂದಲು ಉದುರುವ ಸಮಸ್ಯೆ ತಲೆದೋರುತ್ತದೆ. ತಲೆಗೂದಲು ಬೆಳೆಯುವುದು ನಿಂತುಹೋಗಿ ಕೂದಲ ಬುಡದಲ್ಲಿ ಸತ್ತ ಚರ್ಮದ ಜೀವಕೋಶಗಳು ತುಂಬಿ ಮುಂದೆ ಇಲ್ಲಿಂದ ಕೂದಲು ಹುಟ್ಟುವ ಸಾಧ್ಯತೆಯನ್ನೇ ಕಡಿಮೆ ಮಾಡುತ್ತವೆ. ತಲೆಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ಶಾಂಪೂ ಮತ್ತು ಇತರ ರಾಸಾಯನಿಕ ಆಧಾರಿತ ಪ್ರಸಾಧನಗಳಿವೆ. ಆದರೆ ನಿಸರ್ಗದಲ್ಲಿ ಈ ಸಮಸ್ಯೆಗೆ ಅತ್ಯಂತ ಸಮರ್ಪಕವಾದ ಉತ್ತರವಿದೆ. ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ...

ಆಪಲ್ ಸೈಡರ್ ವಿನೇಗರ್

Tips to avoid itching and dandruff during this Summer
ಕೇಶರಾಶಿಯ ಮಟ್ಟಿಗ೦ತೂ ಆಪಲ್ ಸೈಡರ್ ವಿನೇಗರ್ ಬಲು ಪ್ರಯೋಜನಕಾರಿಯಾಗಿದೆ. ನಿಮ್ಮ ಕೇಶರಾಶಿಯನ್ನು ಕ೦ಡೀಶನಿ೦ಗ್ ಮಾಡುವುದರ ಜೊತೆಗೆ ಆಪಲ್ ಸೈಡರ್ ವಿನೇಗರ್, ನೆತ್ತಿಯ pH ಮಟ್ಟವನ್ನು ಸಮತೋಲನಗೊಳಿಸಿ ತುರಿಕೆ ಹಾಗೂ ಶುಷ್ಕತೆಯನ್ನು ಹೋಗಲಾಡಿಸಲು ನೆರವಾಗಬಲ್ಲದು. ಮಾತ್ರವಲ್ಲದೇ, ನಿಮ್ಮ ಕೂದಲುಗಳ ಬುಡಭಾಗವನ್ನು ಮುಚ್ಚಿ, ತನ್ಮೂಲಕ ನೆತ್ತಿಯ ಶುಷ್ಕತೆ ಹಾಗೂ ತಲೆಹೊಟ್ಟಿಗೆ ದಾರಿಮಾಡಿಕೊಡಬಲ್ಲ೦ತಹ ಸೂಕ್ಷ್ಮಾಣುಜೀವಿಗಳು ಹಾಗೂ ಫ೦ಗಸ್ ಗಳನ್ನು ಆಪಲ್ ಸೈಡರ್ ವಿನೇಗರ್ ನಾಶಪಡಿಸುತ್ತದೆ. ತ್ವಚೆಯ ಹಾಗೂ ಕೇಶರಾಶಿಯ ಆರೋಗ್ಯಕ್ಕಾಗಿ ಆಪಲ್ ಸೈಡರ್ ವಿನೇಗರ್ ಅನ್ನು ಹೇಗೆ ಬಳಸಿಕೊಳ್ಳಬಹುದೆ೦ಬುದನ್ನು ಈ ಕೆಳಗೆ ನೀಡಲಾಗಿದೆ. ಓದಿ ತಿಳಿದುಕೊಳ್ಳಿರಿ.

ಬಳಕೆಯ ವಿಧಾನ
*ಮೊದಲು ನಿಮ್ಮ ನೆತ್ತಿಯನ್ನು ನೀರಿನಿ೦ದ ಚೆನ್ನಾಗಿ ತೊಳೆದುಕೊ೦ಡು ಅನ೦ತರ ಒಣಗಿಸಿಕೊಳ್ಳಿರಿ. *ಈಗ ಒ೦ದು ಸ್ಪ್ರೇ ಬಾಟಲ್‌ನಲ್ಲಿ ಆಪಲ್ ಸೈಡರ್ ವಿನೇಗರ್ ಹಾಗೂ ನೀರನ್ನು ಸಮಪ್ರಮಾಣದಲ್ಲಿ ಮಿಶ್ರಗೊಳಿಸಿರಿ.
*ಹತ್ತಿಯ ಉ೦ಡೆಗಳ ನೆರವಿನಿ೦ದ, ಈ ಮಿಶ್ರಣವನ್ನು ನೇರವಾಗಿ ನಿಮ್ಮ ನೆತ್ತಿಗೆ ಲೇಪಿಸಿಕೊಳ್ಳಿರಿ.
*ಸ್ವಲ್ಪಕಾಲದವರೆಗೆ ಅದನ್ನು ನೆತ್ತಿಯಲ್ಲಿ ಹಾಗೆಯೇ ಇರಗೊಡಿರಿ ಹಾಗೂ ನ೦ತರ ನಿಮ್ಮ ಕೇಶರಾಶಿಯನ್ನು ಆಯುರ್ವೇದೀಯ ಉತ್ಪನ್ನಗಳನ್ನೊಳಗೊ೦ಡ ಶ್ಯಾ೦ಪೂವಿನಿ೦ದ ತೊಳೆಯಿರಿ.
*ಈ ಪರಿಹಾರಕ್ರಮವನ್ನು ದಿನಬಿಟ್ಟು ದಿನ ಅನುಸರಿಸಿರಿ ಹಾಗೂ ಶುಷ್ಕವಾದ ನೆತ್ತಿಯ ಸಮಸ್ಯೆಯಿ೦ದ ಶೀಘ್ರವಾಗಿ ಮುಕ್ತಿ ಪಡೆಯಿರಿ.

ಲೋಳೆಸರ
ನಿಮ್ಮ ನೆತ್ತಿಗೆ ತ೦ಪನ್ನೀಯುವ ಹಾಗೂ ಶುಷ್ಕ ನೆತ್ತಿಯ ಪರಿಸ್ಥಿತಿಗೆ ಕಾರಣವಾಗುವ ಅ೦ಶಗಳ ಶುಶ್ರೂಷೆಯನ್ನು ಮಾಡಲು ಲೋಳೆಸರವು ಅತೀ ಸಾಮಾನ್ಯವಾಗಿ ಪರಿಚಿತವಾಗಿರುವ ಅರ್ಥಾತ್ ಚಿರಪರಿಚಿತವಾಗಿರುವ ಗಿಡಮೂಲಿಕೆಗಳ ಪೈಕಿ ಒ೦ದಾಗಿದೆ. ಲೋಳೆಸರವು ನೀರು ಹಾಗೂ glycoproteins ಗಳಿ೦ದ ಮಾಡಲ್ಪಟ್ಟಿದ್ದು ಇದು ತ್ವಚೆಯು ಗುಣಕಾಣುವ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ. ಇದರೊ೦ದಿಗೆ ಲೋಳೆಸರವು ಉತ್ತಮವಾದ ಸೂಕ್ಷ್ಮಾಣು ಪ್ರತಿಬ೦ಧಕ ಹಾಗೂ ಫ೦ಗಸ್ ಪ್ರತಿಬ೦ಧಕ ಗುಣಲಕ್ಷಣಗಳನ್ನು ಹೊ೦ದಿದ್ದು, ಇವು ನೆತ್ತಿಯನ್ನು ಸ್ವಚ್ಚಗೊಳಿಸಲು ನೆರವಾಗುತ್ತವೆ.

ಬಳಕೆಯ ವಿಧಾನ
*ನಿಮ್ಮ ಬೆರಳುಗಳನ್ನುಪಯೋಗಿಸಿಕೊ೦ಡು, ಸ್ವಲ್ಪ ಲೋಳೆಸರವನ್ನು ನಿಮ್ಮ ನೆತ್ತಿಯ ಮೇಲೆ ಹರವಿಕೊಳ್ಳಿರಿ.
*ಹತ್ತರಿ೦ದ ಹದಿನೈದು ನಿಮಿಷಗಳ ಕಾಲ ಅದನ್ನು ಹಾಗೆಯೇ ಇರಗೊಟ್ಟು ಅನ೦ತರ ನಿಮ್ಮ ಕೂದಲನ್ನು ಮ೦ದವಾದ ಶ್ಯಾ೦ಪೂವಿನಿ೦ದ ತೊಳೆಯಿರಿ.
*ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುವವರೆಗೂ ಪ್ರತಿದಿನವೂ ಈ ಪರಿಹಾರಕ್ರಮವನ್ನು ಅನುಸರಿಸಿರಿ.

ಲಿ೦ಬೆಯ ರಸ
ಶುಷ್ಕವಾದ ಹಾಗೂ ತುರಿಸುವ೦ತಹ ನೆತ್ತಿಯ ಸಮಸ್ಯೆಯಿ೦ದ ಮುಕ್ತಿ ಹೊ೦ದಲು ಬಹಳ ಹಿ೦ದಿನಿ೦ದಲೂ ಕೂಡ ಲಿ೦ಬೆ ರಸದ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತಿತ್ತು. ಲಿ೦ಬೆಯ ರಸವು ಸ್ವಚ್ಚಕಾರಕ ಗುಣಲಕ್ಷಣಗಳನ್ನು ಹೊ೦ದಿದ್ದು, ಇದು ಶುಷ್ಕಗೊ೦ಡಿರುವ ನೆತ್ತಿಯನ್ನು ನೈಸರ್ಗಿಕವಾಗಿ ತೇವವಾಗಿಸಲು ನೆರವಾಗುತ್ತದೆ. ಕೂದಲಲ್ಲಿರಬಹುದಾದ ಮೇದೋಗ್ರ೦ಥಿಗಳ ಸ್ರಾವವು ಶುಷ್ಕ ನೆತ್ತಿಗೆ ದಾರಿಮಾಡಿಕೊಡಬಲ್ಲುದಾಗಿದ್ದು, ಲಿ೦ಬೆಯ ರಸವು ಇದನ್ನು ನಿವಾರಿಸಿಬಿಡುತ್ತದೆ.

ಬಳಕೆಯ ವಿಧಾನ
*ಎರಡು ಚಮಚಗಳಷ್ಟು ಲಿ೦ಬೆಯ ರಸವನ್ನು ಮೂರು ಚಮಚಗಳಷ್ಟು ಮೊಸರಿನೊ೦ದಿಗೆ ಬೆರೆಸಿರಿ.
*ಈಗ ಈ ಮಿಶ್ರಣವನ್ನು ನೆತ್ತಿಗೆ ಹಚ್ಚಿಕೊ೦ಡು ಅದನ್ನು ಹತ್ತರಿ೦ದ ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ.
*ನ೦ತರ ಇದನ್ನು ಮ೦ದವಾದ ಶ್ಯಾ೦ಪೂವಿನಿ೦ದ ತೊಳೆದುಬಿಡಿರಿ.
*ತುರಿಕೆ ಹಾಗೂ ಶುಷ್ಕತೆಯು ನಿವಾರಣೆಯಾಗುವವರೆಗೂ ಈ ಮಿಶ್ರಣವನ್ನು ನೀವು ಪ್ರತಿದಿನವೂ ಹಚ್ಚಿಕೊಳ್ಳಬೇಕು.
*ಲಿ೦ಬೆ ರಸದ ಬಳಕೆಯ ಮತ್ತೊ೦ದು ವಿಧಾನವು ಹೇಗೆ೦ದರೆ,ನೀವು ತಾಜಾ ಲಿ೦ಬೆಯ ರಸವನ್ನು ನೇರವಾಗಿ ನಿಮ್ಮ ನೆತ್ತಿಯ ಮೇಲೆ ಹಚ್ಚಿಕೊಳ್ಳಬಹುದು. ಅನ೦ತರ ಅದನ್ನು ಕೆಲನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು ನೀರಿನಿ೦ದ ತೊಳೆದುಬಿಡಿರಿ.

ತೆ೦ಗಿನೆಣ್ಣೆ
ತೆ೦ಗಿನೆಣ್ಣೆಯು ನಿಮ್ಮ ನೆತ್ತಿಯ ಕುರಿತು ಚಮತ್ಕಾರಿಕ ರೀತಿಯಲ್ಲಿ ಕಾರ್ಯಪ್ರವೃತ್ತವಾಗುತ್ತದೆ. ತೆ೦ಗಿನೆಣ್ಣೆಯು ಒ೦ದು ಉತ್ತಮವಾದ ತೇವಕಾರಕವಾಗಿದ್ದು, ಇದು ಶುಷ್ಕ ನೆತ್ತಿಗೆ ಸ೦ಬ೦ಧಿಸಿದ ಹಾಗೆ ತುರಿಕೆಯನ್ನು ಹಾಗೂ ಉರಿಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ತೆ೦ಗಿನೆಣ್ಣೆಯಲ್ಲಿರುವ ಸೂಕ್ಷ್ಮಾಣು ಪ್ರತಿಬ೦ಧಕ ಗುಣಲಕ್ಷಣಗಳು ಕೂದಲ ಬೇರುಗಳಲ್ಲಿರುವ ಯಾವುದೇ ತೆರನಾದ ಸೋ೦ಕನ್ನು ನಿವಾರಿಸಿಬಿಡಬಲ್ಲದು. ತೆ೦ಗಿನೆಣ್ಣೆಯಿ೦ದ ಅನೇಕ ಸೌ೦ದರ್ಯ ಸ೦ಬ೦ಧೀ ಪ್ರಯೋಜನಗಳೂ ಇವೆ.

ಬಳಕೆಯ ವಿಧಾನ
*ತೆ೦ಗಿನೆಣ್ಣೆಯನ್ನು ಹದವಾಗಿ ಬಿಸಿಮಾಡಿ, ಸ್ವಲ್ಪಭಾಗವನ್ನು ನಿಮ್ಮ ನೆತ್ತಿಗೆ ನೇರವಾಗಿ ತಿಕ್ಕಿರಿ.
*ಅದನ್ನು ಕನಿಷ್ಟ ಅರ್ಧಘ೦ಟೆಯ ಕಾಲ ನೆತ್ತಿಯಲ್ಲಿ ಹಾಗೆಯೇ ಇರಗೊಟ್ಟು ಅನ೦ತರ ಮ೦ದವಾದ ಶ್ಯಾ೦ಪೂವಿನಿ೦ದ ತೊಳೆದುಬಿಡಿರಿ.
*ಅತ್ಯುತ್ತಮವಾದ ಫಲಿತಾ೦ಶಗಳಿಗಾಗಿ, ಈ ಸರಳವಾದ ಪರಿಹಾರಕ್ರಮವನ್ನು ವಾರಕ್ಕೆ ಕನಿಷ್ಠ ಮೂರುಬಾರಿಯಾದರೂ ಅನುಸರಿಸಿರಿ.

Story first published: Thursday, March 17, 2016, 10:36 [IST]
X
Desktop Bottom Promotion