Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
ತಲೆಹೊಟ್ಟನ್ನು ಬೇರು ಸಮೇತ ಕಿತ್ತು ಹಾಕುವ ಮನೆಮದ್ದು
ತಲೆಹೊಟ್ಟು ಎನ್ನುವುದು ಈಗೀಗ ಪ್ರತಿಯೊಬ್ಬರನ್ನು ಕಾಡುತ್ತಿರುವ ಸಮಸ್ಯೆಯಾಗಿ ಬಿಟ್ಟಿದೆ. ಆಧುನಿಕ ಜೀವನ ಶೈಲಿ ಮತ್ತು ಕಲುಷಿತ ವಾತಾವರಣವೇ ಇದಕ್ಕೆ ಮೂಲ ಕಾರಣವೆನ್ನಬಹುದು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ತಲೆಹೊಟ್ಟು ಸಮಸ್ಯೆ ಇದೆ. ಇದರಿಂದ ಪಾರಾಗಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಶಾಂಪೂಗಳು ಲಭ್ಯವಿದೆ. ಥತ್ ! ತಲೆ ತುರಿಕೆಯಿಂದ ತಪ್ಪಿಸಿಕೊಳ್ಳೋದು ಹೇಗೆ?
ಇದನ್ನು ಬಳಸಿಯೂ ತಲೆಹೊಟ್ಟು ನಿವಾರಣೆ ಸಾಧ್ಯವಿಲ್ಲದಾಗ ಕೆಲವರು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ. ಅದರಲ್ಲೂ ಮಕ್ಕಳಲ್ಲಿ ತಲೆಹೊಟ್ಟು ಕಾಣಿಸಿಕೊಂಡರೆ ಅವರ ಭುಜದ ಮೇಲೆ ತಲೆಹೊಟ್ಟು ಬಿದ್ದು ಹೇಸಿಗೆ ಮೂಡಿಸುತ್ತದೆ. ಸಿಂಪಲ್ ಟಿಪ್ಸ್: ತಲೆಹೊಟ್ಟು ಸಮಸ್ಯೆಗೆ ಪವರ್ಫುಲ್ ಮನೆಮದ್ದು
ಇದಕ್ಕೆ ಪರಿಹಾರ ಇದೆ. ಈ ಲೇಖನದಲ್ಲಿ ಕೆಲವು ತಜ್ಞರು ಹೇಳಿರುವಂತಹ ಪರಿಹಾರಗಳನ್ನು ಇಲ್ಲಿ ಸೂಚಿಸಲಾಗಿದೆ. ಇದನ್ನು ಬಳಸಿ ನೋಡಿ.

ಟೀ ಟ್ರೀ ಎಣ್ಣೆ
ತಲೆಹೊಟ್ಟುವಿಗೆ ಅತ್ಯಂತ ಪರಿಣಾಮಕಾರಿಯಾಗಿರುವಂತಹ ಮನೆಮದ್ದು. ಇದು ತಲೆಬುರುಡೆಗೆ ತೇವಾಂಶವನ್ನು ನೀಡಿ ಕಿರಿಕಿರಿ ಉಂಟುಮಾಡುವ ಚರ್ಮವನ್ನು ಸುಧಾರಿಸುವುದು. ಸುಮಾರು 12 ಹನಿಯಷ್ಟು ಟೀ ಟ್ರೀ ಎಣ್ಣೆಯನ್ನು ಬಾದಾಮಿ ಎಣ್ಣೆ, ಜೊಜೊಬಾ ಎಣ್ಣೆ, ಅಥವಾ ಆಲಿವ್ ತೈಲದೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಒಂದು ಹತ್ತಿ ಉಂಡೆಯನ್ನು ಇದರಲ್ಲಿ ಮುಳುಗಿಸಿ ತಲೆಬುರುಡೆಗೆ ಹಚ್ಚಿ. 30 ನಿಮಿಷ ಕಾಲ ಹಾಗೆ ಬಿಟ್ಟುಬಿಟ್ಟು ತಂಪಾದ ನೀರಿನಿಂದ ತೊಳೆಯಿರಿ.

ಲಿಂಬೆ
ಲಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಆಮ್ಲೀಯ ಗುಣವು ತಲೆಹೊಟ್ಟನ್ನು ದೂರವಿಡುತ್ತದೆ. ಲಿಂಬೆಯ ರಸವನ್ನು ತೆಗೆದು ತಲೆಗೆ ಹಚ್ಚಬಹುದು ಅಥವಾ ನೇರವಾಗಿ ನಿಂಬೆಯನ್ನು ತಲೆಗೆ ಉಜ್ಜಬಹುದು.

ಅಡುಗೆ ಸೋಡಾ
ಕೂದಲನ್ನು ಸರಿಯಾಗಿ ಒಣಗಿಸಿ ಮತ್ತು ಸ್ವಲ್ಪ ಅಡುಗೆ ಸೋಡಾವನ್ನು ಕೂದಲಿಗೆ ಸಿಂಪಡಿಸಿಕೊಂಡು ಮಸಾಜ್ ಮಾಡಿಕೊಳ್ಳಿ. ಶಾಂಪೂವಿನಿಂದ ತೊಳೆಯಿರಿ. ಅಡುಗೆ ಸೋಡಾವು ಫಂಗಿಗಳು ಅತಿಯಾಗಿ ಪ್ರತಿಕ್ರಿಯಿಸುವುದನ್ನು ತಡೆಯುತ್ತದೆ. ಇದರಿಂದ ತಲೆಬುರುಡೆಯು ಸ್ವಚ್ಛವಾಗಿರುತ್ತದೆ.

ಬಾಳೆಹಣ್ಣಿನ ಹೇರ್ ಮಾಸ್ಕ್
ಮಾಗಿದ ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಸರಿಯಾಗಿ ಹಿಚುಕಿಕೊಂಡು ಅದಕ್ಕೆ ಒಂದು ಚಮಚ ಮೊಸರು ಮತ್ತು ನಾಲ್ಕು ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. 20 ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಿರಿ.

ಶಾಂಪೂ
ಸಾಲಿಸ್ಯಲಿಕ್ ಆಮ್ಲವು ಹೊಂದಿರುವಂತಹ ಶಾಂಪೂವನ್ನು ಮಕ್ಕಳ ಕೂದಲಿಗೆ ವಾರದಲ್ಲಿ ಎರಡು ಸಲ ಬಳಸಿ. ಇದು ತಲೆಹೊಟ್ಟನ್ನು ನಿವಾರಿಸುತ್ತದೆ. ಆದರೆ ವೈದ್ಯರನ್ನು ಭೇಟಿಯಾಗಿ ಮಗುವಿಗೆ ಯಾವ ರೀತಿಯ ಶಾಂಪೂ ಬಳಕೆ ಮಾಡಬಹುದು ಎಂದು ತಿಳಿದುಕೊಂಡರೆ ಒಳ್ಳೆಯದು.

ತಲೆ ಬಾಚಿಕೊಳ್ಳಿ
ಶಾಂಪೂ ಹಾಕಿಕೊಳ್ಳುವ ಮೊದಲು ತಲೆಗೆ ಬಾಚಣಿಗೆ ಹಾಕಿದರೆ ತಲೆಹೊಟ್ಟುಯನ್ನು ತೆಗೆಯಬಹುದು. ವೈದ್ಯರು ಸೂಚಿಸಿದಂತಹ ಶಾಂಪೂ ಬಳಸದೆ ಇದ್ದರೆ ಮಕ್ಕಳ ಶಾಂಪೂ ಬಳಸಿರಿ.



Click it and Unblock the Notifications
