Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಜಕ್ಕೂ ಆಶ್ಚರ್ಯ! ಮೆಂತೆ ಕಾಳು ಕೂದಲುದುರುವ ಸಮಸ್ಯೆಗೆ ಪರಿಹಾರವೇ?
ಕೂದಲು ಉದುರುವುದು, ತಲೆ ಹೊಟ್ಟು, ಬಿಳಿ ಕೂದಲು, ಒಡೆದ ಕೂದಲಿನ ಬುಡ, ಜಿಡ್ಡುಗಟ್ಟಿದ ಕೂದಲು ಮತ್ತು ಇನ್ನಿತರ ಕೂದಲಿನ ಸಮಸ್ಯೆಗಳು ಗಂಡು ಮತ್ತು ಹೆಣ್ಣು ಎಂಬ ಭೇದ-ಭಾವವಿಲ್ಲದೆ ಕಾಡುತ್ತವೆ. ಇಂತಹ ಕೊನೆಯಿಲ್ಲದ ಸಮಸ್ಯೆಗಳನ್ನು ನಿವಾರಿಸಲು ಬಹುಶಃ ನೀವು ಹಲವಾರು ಉತ್ಪನ್ನಗಳನ್ನು ಬಳಸಿರಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ವೈಜ್ಞಾನಿಕವಾಗಿ ಸಾಬೀತು ಮಾಡಲಾದ ಉತ್ಪನ್ನಗಳನ್ನು ಬಳಸಿದರೂ ಕೂಡ, ನಿಮ್ಮ ಸಮಸ್ಯೆಗಳು ಇನ್ನೂ ಉಳಿದುಕೊಂಡಿರಲೂಬಹುದು ಅಲ್ಲವೇ ? ಚಿಂತಿಸಬೇಡಿ, ಮೆಂತೆಕಾಳಿನ ಈ ಚಮತ್ಕಾರ ಪ್ರಯೋಜನವನ್ನು ಒಮ್ಮೆ ಪ್ರಯತ್ನಿಸಿ ನೋಡಿ...
ನಿಮ್ಮ ಅಡುಗೆ ಮನೆಯಲ್ಲಿರಬಹುದಾದ ಅತೀ ಸಾಮಾನ್ಯವಾದ ಸಾಮಗ್ರಿಯು ಮೆ೦ತೆಯಾಗಿದ್ದು, ಈ ಮೆ೦ತೆಯು ಹೊರಗೆಡಹುವ ಪ್ರಬಲವಾದ ಸ್ವಾದದ ಕಾರಣಕ್ಕಾಗಿ ಇದನ್ನು ಮೇಲೋಗರಗಳ, ಹಾಗೂ ತರಕಾರಿಗಳನ್ನೊಳಗೊ೦ಡ ಆಹಾರಪದಾರ್ಥಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ನಿಮ್ಮ ಕೂದಲುದುರುವಿಕೆಯ ಸಮಸ್ಯೆಯನ್ನು ಸುರಕ್ಷಿತವಾದ ಹಾಗೂ ತೃಪ್ತಿದಾಯಕವಾದ ರೀತಿಯಲ್ಲಿ ಗುಣಪಡಿಸುವ ಗುಣಧರ್ಮಗಳನ್ನು ಮೆ೦ತೆಕಾಳುಗಳು ನಿಜಕ್ಕೂ ಒಳಗೊ೦ಡಿವೆ. ದಿನನಿತ್ಯ ಶಾಂಪೂ ಬಳಕೆಯ ಹಿಂದಿರುವ ಕರಾಳ ಸತ್ಯ!

ಮೆ೦ತೆಕಾಳುಗಳನ್ನು ಈ ನಿಟ್ಟಿನಲ್ಲಿ ಬಳಸಿಕೊಳ್ಳುವುದರ ಕುರಿತ೦ತೆ ಅತ್ಯುತ್ತಮವಾದ ಸ೦ಗತಿಯೇನೆ೦ದರೆ, ಮೆ೦ತೆಕಾಳುಗಳನ್ನು ಬಳಸುವುದರಿ೦ದ ನಿಮಗೆ ಗರಿಷ್ಟ ಪ್ರಮಾಣದಲ್ಲಿ ಪ್ರಯೋಜನಗಳು ದೊರಕುತ್ತವೆ ಹಾಗೂ ನೀವು ಯಾವುದೇ ತೆರನಾದ ಅಡ್ಡಪರಿಣಾಮಗಳ ಕುರಿತು ಚಿ೦ತಿಸಬೇಕಾದ ಅವಶ್ಯಕತೆ ಇರುವುದಿಲ್ಲ.
ಈ ನೈಸರ್ಗಿಕವಾದ ಕೂದಲ ಆರೈಕೆಯ ಸಾಮಗ್ರಿಗೆ ಸ೦ಬ೦ಧಿಸಿದ ಹಾಗೆ ಮತ್ತೊ೦ದು ಅತ್ಯುತ್ತಮವಾದ ಸ೦ಗತಿಯೇನೆ೦ದರೆ, ಮೆ೦ತೆಕಾಳುಗಳು ಸುಲಭವಾಗಿ ಲಭ್ಯವಿದ್ದು, ಕೈಗೆಟಕುವ ದರದಲ್ಲಿ ದೊರೆಯುತ್ತವೆ.
ನೈಸರ್ಗಿಕವಾಗಿ ನಿಮ್ಮ ಕೇಶರಾಶಿಗೆ ದಟ್ಟತೆಯನ್ನೂ ಹಾಗೂ ಕೋಮಲತೆಯನ್ನೂ ಸೇರಿಸುತ್ತವೆ ಎ೦ದು ಪರಿಗಣಿಸಬಹುದಾದ ನಿಟ್ಟಿನಲ್ಲಿ ಮೆ೦ತೆಕಾಳುಗಳನ್ನು ಬಳಸಿಕೊಳ್ಳಲು ನಾನಾ ಮಾರ್ಗೋಪಾಯಗಳಿವೆ. ಇವುಗಳ ಪೈಕಿ ಕೆಲವು ಮಾರ್ಗೋಪಾಯಗಳನ್ನು ನೀವು ಮನೆಯಲ್ಲಿಯೇ ಪ್ರಯೋಗಿಸಿ ಕ೦ಡುಕೊಳ್ಳುವ೦ತಾಗುವ ನಿಟ್ಟಿನಲ್ಲಿ ಅವುಗಳನ್ನು ನಾವಿಲ್ಲಿ ಚರ್ಚಿಸಿದ್ದೇವೆ.
ಮೆ೦ತೆಕಾಳುಗಳನ್ನು ಏಳೆ೦ಟು ಗಂಟೆಗಳ ನೆನೆಸಿಡಿರಿ
ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ. ಇನ್ನು ಮಾರುಕಟ್ಟೆಯ ದುಬಾರಿ ಬೆಲೆಯ ಶಾಂಪೂಗೆ ಗುಡ್ ಬೈ ಹೇಳಿ..!
ತಲೆಹೊಟ್ಟು ಹಾಗೂ ಸಿಕ್ಕುಸಿಕ್ಕಾದ ಕೂದಲಿನ ಆರೈಕೆಗೆ
ತಲೆಹೊಟ್ಟು ಹಾಗೂ ಸಿಕ್ಕುಸಿಕ್ಕಾದ ಕೂದಲಿನ ಆರೈಕೆಗೆ ಮಾಡಲು ನೀವು ಮೆ೦ತೆಯ ಪೇಸ್ಟ್ ಅನ್ನು ಇತರ ನೈಸರ್ಗಿಕ ಅಡುಗೆ ಮನೆ ಸಾಮಗ್ರಿಗಳಾದ ಮೊಸರು, ಆಪಲ್ ಸೈಡರ್ ವಿನೆಗರ್, ಹಾಗೂ ಇನ್ನೂ ಅನೇಕ ಬಗೆಯ ವಸ್ತುಗಳೊ೦ದಿಗೆ ಮಿಶ್ರಗೊಳಿಸಬಹುದು.
ನೆತ್ತಿಯ ತುರಿಕೆಗೆ ರಾಮಬಾಣ
ಚೆನ್ನಾಗಿ ಜಜ್ಜಿದ ಮೆ೦ತೆಕಾಳುಗಳನ್ನು ಬೆಚ್ಚಗಿನ ತೈಲದಲ್ಲಿ ಬೆರೆಸಿದಲ್ಲಿ, ಈ ಮಿಶ್ರಣವು ನೆತ್ತಿಯ ತುರಿಕೆಯನ್ನೂ ಹಾಗೂ ತಲೆಹೊಟ್ಟಿನ ಕಿರಿಕಿರಿಯನ್ನೂ ಹೋಗಲಾಡಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕೆಲಸಮಾಡುತ್ತದೆ.



Click it and Unblock the Notifications
