Latest Updates
-
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು?
ಸೊಂಪಾದ ಕೂದಲಿಗಾಗಿ ಈ ರೀತಿ ಮಾಡಿ
ನೀವು ಕಾಣಿಸಿಕೊಳ್ಳುವ ರೀತಿ ಅಥವಾ ನೋಟ ನಿಮ್ಮ ಆರೋಗ್ಯಪೂರ್ಣ ಅಲಂಕೃತ ಕೂದಲಿನ ಮೇಲೆ ಅವಲಂಬಿಸಿದೆ. ಹಾಗೇನಾದರೂ ಇಲ್ಲದಿದ್ದಲ್ಲಿ ದಿನವೆಲ್ಲಾ ಅದರ ಚಿಂತೆಯಲ್ಲೇ ಇರುತ್ತೀರಾ? ಚಿಂತಿಸಬೇಡಿ. ಚಿಂತೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಇದಕ್ಕೆ ಇಲ್ಲಿದೆ ನೋಡಿ ಪರಿಹಾರ. ಇಲ್ಲಿ ಕೊಟ್ಟಿರುವ ಕೆಲವೇ ಸರಳ ಮಾರ್ಗಗಳನ್ನು ನೀವು ಪಾಲಿಸಿದರೆ, ನಿಮ್ಮ ಕೂದಲನ್ನು ಆರೋಗ್ಯಕರ ಕೂದಲು ನಿಮ್ಮದಾಗಿಸಬಹುದು.
ನಿಮ್ಮ ಕೂದಲು ಶುಷ್ಕ(ಡ್ರೈ) ಅಥವ ಗಂಟುಗಳಿಂದ ಸುರುಳಿ ಸುರುಳಿಯಾಗಿದ್ದರೆ ವಾರಕ್ಕೊಮ್ಮೆ ಬಿಸಿ ಎಣ್ಣೆ ಹಚ್ಚಿ ಮಸಾಜ್ ಮಾಡಿದ ನಂತರ ಒಂದು ಸಾಮಾನ್ಯ ಶ್ಯಾಂಪೂ ಮತ್ತು ಕಂಡೀಷನರ್ ಉಪಯೋಗಿಸಿ ತೊಳೆದುಕೊಂಡರೆ ಪರಿಹಾರ ಸಿಗುವುದು. ಮುಂದೆ ಕೆಲವು ವಾರಗಳು ಬಣ್ಣ ಹಚ್ಚುವುದು, ಗುಂಗುರು ಮಾಡಿಕೊಳ್ಳುವುದು ಮತ್ತು ಇತರ ರಾಸಾಯನಗಳನ್ನು ಹಚ್ಚುವುದು ತಪ್ಪಿಸಬೇಕು.
ಕೂದಲು ಮುಚ್ಚುವಂತೆ ಮಾಡುವ ಮನೆಯಲ್ಲಿ ಮಾಡಿದ ರಕ್ಷಣೆಗಳು ಬಳಸಿ ಮತ್ತು ಹೇರ್ ಡ್ರೈಯರ್ ಉಪಯೋಗಿಸಿ ಬಿಸಿಗಾಳಿಯಿಂದ ಒಣಗಿಸಿಕೊಳ್ಳುವುದನ್ನು ತಪ್ಪಿಸಿದರೆ ಹಾಗೂ ಇಂತಹ ಸರಳ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ನಿಮ್ಮ ಮನೆಯಲ್ಲಿಯೇ ಕೂದಲು ಮುಚ್ಚುವ ಈ ಸರಳ ಟೋಪಿ(ಕವರ್) ಮಾಡಿ....
• ಅರ್ಧ ಕಪ್ ಮೆಂತೆಬೀಜಗಳನ್ನು ತೆಗೆದುಕೊಳ್ಳಿ.
• ಎರಡೂವರೆ ಕಪ್ ನೀರಿನಲ್ಲಿ ಒಂದು ರಾತ್ರಿ ಪೂರ್ತಿ ನೆನೆಸಿಡಿ
• ಈಗ ನೆನೆಸಿದ ಬೀಜಗಳನ್ನು ತೆಗೆದುಕೊಂಡು ಮಿಕ್ಸರ್-ಗ್ರೈಂಡರ್ ಜಾರಿನಲ್ಲಿ ಹಾಕಿ ಸ್ವಲ್ಪ ನೀರು ಬೆರಸಿ ಮೃದುವಾಗುವತನಕ ಗ್ರೈಂಡ್ ಮಾಡಿ.
• ಈ ಪೇಸ್ಟನ್ನು ನಿಮ್ಮ ನೆತ್ತಿಯಮೇಲೆ ಲೇಪಿಸಿ.
• ಸ್ವಲ್ಪ ಸಮಯದ ನಂತರ ತಲೆಯನ್ನು ಚೆನ್ನಾಗಿ ತೊಳೆದುಕೊಳ್ಳಿ.

ನೀವು ಶ್ಯಾಂಪೂ ಉಪಯೋಗಿಸುವ ಸಮಯದಲ್ಲಿ....
ನೀವು ನೆತ್ತಿಯನ್ನು ಚೊಕ್ಕಟಗೊಳಿಸುವ ಕಾರ್ಯದಲ್ಲಿ ಗಮನವಿಡಿ. ಹಾಗೆ ಮಾಡುವಾಗ ನಿಮ್ಮ ಕೈಬೆರಳುಗಳಿಂದ ಸೌಮ್ಯವಾಗಿಯೂ ಹಾಗೂ ದೃಢವಾಗಿ ಶ್ಯಾಂಪೂ ನೊರೆಯಿಂದ ನೆತ್ತಿಯನ್ನು ಮಸಾಜ್ ಮಾಡಿ. ಚೆನ್ನಾಗಿ ತೊಳೆದನಂತರ ಕೆನೆಯಂತಿರುವ ಕಂಡೀಶನರನ್ನು ನಿಮ್ಮ ಕೂದಲಿನ ಪ್ರತಿಯೊಂದು ಭಾಗಕ್ಕೆ ಹಾಕಿ ಸರಿಯಾಗಿ ತೊಳೆದುಕೊಳ್ಳಿ.

ಈ ಕೆಳಗಿರುವುದರ ಬಗ್ಗೆ ಜಾಗರೂಕರಾಗಿರಿ....
• ನಿಮ್ಮ ಕೂದಲಿಗೆ ಹೀಟ್-ಸ್ಟೈಲಿಂಗ್ ಮಾಡಲು ಬಿಸಿ ಉಪಕರಣಗಳು ಮತ್ತು ಹಾಟ್ ಕರ್ಲರ್ಸ್‍ಗಳನ್ನು ಉಪಯೋಗಿಸಬೇಡಿ. ನಿಮ್ಮ ಕೂದಲು ಸ್ವಾಭಾವಿಕವಾಗಿಯೇ ಒಣಗಲು ಬಿಟ್ಟುಬಿಡಿ.
• ಆಲ್ಕೋಹಾಲ್ ಹೊಂದಿರುವ ಕೇಶವಿನ್ಯಾಸದ ಜೆಲ್‍ಗಳನ್ನು ಉಪಯೋಗಿಸಬೇಡಿ.
• ಶುಚಿಯಾಗಿರದ ವಸ್ತುಗಳನ್ನು ಉಪಯೋಗಿಸಬೇಡಿ. ಯಾವಾಗಲೂ ನಿಮ್ಮ ಬಾಚಣಿಗೆ ಮತ್ತು ಬ್ರಶ್‍ಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ.
• ತುಂಬಾ ಸಾಮಾನ್ಯವಾಗಿರುವ ಗಡುಸಾದ ಅಗ್ಗದ ಶಾಂಪೂಗಳನ್ನು ಉಪಯೋಗಿಸಬೇಡಿ.
ಸಲಹೆ:
ಸಾಮಾನ್ಯವಾಗಿ ನಾವು ದಿನದ ಕೊನೆಯ ಹೊತ್ತಿಗೆ ಆಯಾಸದಿಂದ ಹಿಂತಿರುವಾಗ ತಕ್ಷಣವೇ ಮಲಗಲು ಹೋಗುತ್ತೇವೆ. ಪರಿಣಿತರ ಅಭಿಪ್ರಾಯದಂತೆ ನೀವು ಮಲಗುವ ಮುನ್ನ ನಿಮ್ಮ ತಲೆಯ ಕೂದಲನ್ನು, ವಿಶೇಷವಾಗಿ ಬಹಳ ಉದ್ದಕ್ಕಿದ್ದರಂತೂ, ಗಂಟು ಕಟ್ಟಿಕೊಂಡು ಮಲಗಬೇಕು. ಸಡಿಲವಾದ ಜಡೆ ಅಥವಾ ಎರಡು ಮಡಿಕೆಗಳನ್ನಾಗಿ ಮಾಡಿ ಕಟ್ಟಿಕೊಂಡು ಮಲಗಬೇಕು. ಹೆಣೆದಿರುವ ಜಡೆಗಳು ಮಲಗಿರುವಾಗ ಸುರಕ್ಷಿತವಾಗಿರುತ್ತದೆ.

ನಿಮ್ಮ ನೆತ್ತಿಗೆ ಎಣ್ಣೆಹಚ್ಚಿ ಮಸಾಜ್ ಮಾಡುವುದು....
• ಪರಿಣಿತರ ಅಭಿಪ್ರಾಯದಂತೆ ನೀವು ನಿಯಮಿತವಾಗಿ ತಲೆಗೆ ಎಣ್ಣೆ ಹಚ್ಚುವುದರಿಂದ ನಿಮ್ಮ ಕೂದಲಿನ ಗುಣಮಟ್ಟವನ್ನು ಕಾಪಾಡಿಕೊಂಡಿರಲು ಸಾಧ್ಯವಾಗುತ್ತದೆ. ಮೆಲ್ಲಗೆ ಮತ್ತು ನಿಧಾನವಾಗಿ ನಿಮ್ಮ ಬೆರಳುಗಳಿಂದ ಮಸಾಜ್ ಮಾಡಿರಿ.
• ಆಲಿವ್, ಜೊಜೊಬಾ, ಬಾದಾಮಿ ಅಥವಾ ಕೊಬ್ಬರಿ ಇವುಗಳ ಮೂಲದ ಎಣ್ಣೆಗಳ ಜೊತೆ ಗಿಡಮೂಲಿಕೆಗಳು ಸೇರಿದಾಗ ಅದರ ಗುಣಲಕ್ಷಣಗಳು ವರ್ಧಿಸಿ ನಿಮ್ಮ ನೆತ್ತಿಗೆ ಬೇಕಾಗಿರುವ ಕೆಲವು ಪೌಷ್ಟಿಕಾಂಶ ಒದಗಿಸಬಹುದು.
• ಒಂದು ಉತ್ತಮವಾದ ಮಸಾಜ್ ಮಾಡಿತನಂತರ ಚೆನ್ನಾಗಿ ನಿದ್ರೆಯು ಬರುವುದಲ್ಲದೆ ಮರುದಿನ ಉಲ್ಲಾಸದಿಂದ ಏಳಲೂ ಕೂಡ ಸಹಾಯಮಾಡಿ ನಿಮ್ಮ ದೈನಂದಿನ ಕಾರ್ಯಗಳನ್ನು ಆರಂಭಿಸಲು ಉತ್ತೇಜನಕೊಡುತ್ತದೆ.
• ನಿಮ್ಮ ಕೂದಲಿಗೆ ಎಣ್ಣೆ ಹಚ್ಚುವಾಗ ಕೂದಲಿನ ತುದಿಗಳಿಗೂ ಸಹ ಸ್ವಲ್ಪ ಎಣ್ಣೆ ಹಚ್ಚಿರಿ.

ನಿಮ್ಮ ಕೂದಲು ಉದುರುತ್ತಿದೆಯೇ?
ಇದನ್ನು ತಡೆಯಲು ನಿಮಗೆ ಬೇಕಾಗಿರುವುದು:
• ಅರ್ಧ ಕಪ್ ಮೇತಿ ಬೀಜ
• ಅರ್ಧ ಲೀಟರ್ ಶುದ್ಧ ಕೊಬ್ಬರಿ ಎಣ್ಣೆ
• ಮತ್ತು ಸಾಕಷ್ಟು ಸೂರ್ಯನ ಬಿಸಿಲು.

ಇವುಗಳನ್ನು ಉಪಯೋಗಿಸುವ ವಿಧಾನ:
• ಮೇತಿ ಬೀಜವನ್ನು ಕೊಬ್ಬರಿ ಎಣ್ಣೆಯ ಜೊತೆ ಒಂದು ಗಾಜಿನ ಬಾಟಲ್‍ನಲ್ಲಿ ಹಾಕಿ ಸೂರ್ಯನ ಕಿರಣಗಳು ನೇರವಾಗಿ ಬೀಳುವಹಾಗೆ ಒಂದು ವಾರದ ಕಾಲ ಇಡಿ.
• ಈ ಎಣ್ಣೆಯಿಂದ ನಿಮ್ಮ ನೆತ್ತಿಗೆ ವಾರಕ್ಕೆ ಮೂರುಬಾರಿ ಮಸಾಜ್ ಮಾಡಿದರೆ ನಿಮ್ಮ ಕೂದಲು ಉದುರುವುದನ್ನು ತಡೆಯಲು ಸಾಧ್ಯ.

ಕೊಬ್ಬರಿ ಎಣ್ಣೆ
ನಿಮ್ಮಲ್ಲಿರುವ ಸಾಧಾರಣ ಕೊಬ್ಬರಿ ಎಣ್ಣೆಯನ್ನು ಮತ್ತಷ್ಟು ಉತ್ತಮಗೊಳಿಸುವುದು ಹೇಗೆ?
ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಇಡಿ. ಇನ್ನೊಂದು ಸಣ್ಣ ಶಾಖ ತಡೆಯುವ ಪಾತ್ರೆಯನ್ನು ಕುದಿಯುವ ನೀರಿನಲ್ಲಿಡಿ. ಆ ಸಣ್ಣ ಪಾತ್ರೆಯೊಳಗೆ500 ಎಂ.ಎಲ್. ಕೊಬ್ಬರಿ ಎಣ್ಣೆ ಹಾಕಿರಿ. ಈ ಎಣ್ಣೆಗೆ ಸ್ವಲ್ಪ ಒಣಗಿದ ದಾಸವಾಳದ ಎಲೆ ಮತ್ತು ಹೂ, ಒಣಗಿದ ಆಮ್ಲದ ತುಣುಕುಗಳು(ನೆಲ್ಲಿಕಾಯಿ), ಮಹಾ ಭೃಂಗರಾಜ್ ಎಲೆಗಳು (ಆಯುರ್ವೇದ ಔಷಧಿಯ ಅಂಗಡಿಯಲ್ಲಿ ದೊರೆಯುತ್ತದೆ) ಎಲ್ಲವನ್ನು ಹಾಕಿ ಎಣ್ಣೆ ಕರಗಲು ಬಿಡಿ. ನಿಮಗೆ ಬೇಕಾಗಿದ್ದಲ್ಲಿ ಗುಲಾಬಿ ಅಥವ ಲ್ಯಾವೆಂಡರ್ ಅಥವಾ ಕ್ಯಾಮೋಮೈಲ್ (ಔಷಧವಾಗಿ ಬಳಸುವ ಯೂರೋಪಿನ ಒಂದು ಗಿಡದ ತೈಲ - ಬಾಡಿಶಾಪಿನಲ್ಲಿ ದೊರೆಯುತ್ತದೆ) ಇವುಗಳ ಸುವಾಸನೆ ಅಂಶವನ್ನು ಹಾಕಬಹುದು. ಬಹಳ ಕಾಲ ಕುದಿಯಲಿ ಬಿಡಬೇಡಿ. ಒಂದು ಬಾರಿ ಚೆನ್ನಾಗಿ ಬಿಸಿಯಾದಮೇಲೆ ಸಣ್ಣ ಪಾತ್ರೆಯಲ್ಲಿರುವ ಎಣ್ಣೆಯನ್ನು ಪೂರ್ತಿ ಒಂದು ದಿವಸ ನೆನೆಯಲು ಬಿಡಿ. ಮಾರನೇ ದಿವಸದಿಂದ ಈ ಎಣ್ಣೆ ಬಳಸಲು ಸಿದ್ದವಾಗಿರುತ್ತದೆ.



Click it and Unblock the Notifications