Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಕೂದಲಿಗೆ ಬೇಕಾದ ಐದು ಆಯುರ್ವೇದ ಔಷಧಿ ಯಾವುದು?

ಸುಲಭವಾಗಿ ಲಭ್ಯವಿರುವ, ಕೂದಲಿನ ಆರೋಗ್ಯವನ್ನು ದುಪ್ಪಟ್ಟುಗೊಳಿಸುವ ಐದು ಗಿಡಮೂಲಿಕೆಗಳಾವುವೆಂದು ತಿಳಿಯೋಣ.
* ರೀತಾ ಅಥವಾ ಅಂಟವಾಳದ ಕಾಯಿ: ಪುರಾತನ ಕಾಲದಲ್ಲಿ ಹಿಮಾಲಯದಲ್ಲಿ ಬೆಳೆಯುತ್ತಿತ್ತು ಎನ್ನಲಾದ ಈ ಗಿಡಮೂಲಿಕೆಯಿಂದ ಕೂದಲಿಗೆ ಅನೇಕ ಉಪಯೋಗಕರ ಅಂಶವಿದೆ. ಅಂಟವಾಳದಲ್ಲಿ ಕೂದಲನ್ನು ಶುದ್ಧಗೊಳಿಸಿ ರೇಷ್ಮೆಯಂತೆ ಹೊಳಪು ನೀಡುವ ಶಕ್ತಿಯಿದೆ. ಹೆಚ್ಚು ಮಾಲಿನ್ಯ ತುಂಬಿರುವ ಈ ಕಾಲದಲ್ಲಿ ಅಂಟವಾಳದ ಕಾಯಿಯನ್ನು ಉಪಯೋಗಿಸುವುದರಿಂದ ನಿಮ್ಮ ಕೂದಲು ಶುದ್ಧವಾಗಿರುತ್ತೆ.
* ಭೃಂಗರಾಜ: ಪ್ರಾಚೀನ ಭಾರತದಲ್ಲಿ ಹೆಚ್ಚು ಉಪಯೋಗಿಸಲಾಗುತ್ತಿದ್ದ ಭೃಂಗರಾಜ ಈ ಕಾಲಕ್ಕೂ ಪ್ರಸ್ತುತ. ಕೂದಲ ಪೋಷಣೆಗೆ ಆಯುರ್ವೇದ ಪದ್ಧತಿಯಲ್ಲಿ ಹೆಚ್ಚು ಬಳಕೆಯಲ್ಲಿದ್ದ ಈ ಗಿಡಮೂಲಿಕೆಯನ್ನು ಕಪ್ಪು ಕೂದಲು ಪಡೆಯಲು, ಕೂದಲುದುರುವಿಕೆ ಮತ್ತು ಬಾಲನೆರೆ ತಡೆಯಲು ಉಪಯೋಗಿಸಲಾಗುತ್ತದೆ. ಕೊಬ್ಬರಿ ಅಥವಾ ಬಾದಾಮಿ ಎಣ್ಣೆಯೊಂದಿಗೆ ಇದನ್ನು ಬಿಸಿ ಮಾಡಿ ತಲೆಗೆ ಮಸಾಜ್ ಮಾಡಿಕೊಳ್ಳುವುದರಿಂದ ಹೆಚ್ಚು ಲಾಭವನ್ನು ಹೊಂದಬಹುದು.
* ಮೆಂತ್ಯೆ: ಎರಡು ರೀತಿಯಲ್ಲಿ ಮೆಂತ್ಯೆ ನಿಮ್ಮ ಕೂದಲಿನ ಸಮಸ್ಯೆ ತಡೆಯಬಲ್ಲದು. ಇದನ್ನು ಹಚ್ಚಿಕೊಳ್ಳುವುದರಿಂದ ಮತ್ತು ತಿನ್ನುವುದರಿಂದ, ಎರಡರಿಂದಲೂ ಇದರ ಉಪಯೋಗ ಹೊಂದಬಹುದು. ಮೆಂತ್ಯೆ ಕಾಳನ್ನು ಪೇಸ್ಟ್ ಮಾಡಿ ತಲೆಗೆ ಪ್ಯಾಕ್ ಹಾಕಿಕೊಳ್ಳಬಹುದು ಅಥವಾ ಮೆಂತ್ಯೆ ಸೊಪ್ಪನ್ನು ತಿಂದರೂ ಕೂದಲಿನ ಬುಡದಲ್ಲಿ ರಕ್ತಸಂಚಲ ಹೆಚ್ಚಾಗಿ ಕೂದಲು ಬೆಳವಣಿಗೆ ಹೊಂದುತ್ತದೆ.
* ಮೆಹಂದಿ: ಕೂದಲಿಗೆ ನೈಸರ್ಗಿಕ ಬಣ್ಣ ನೀಡುವ ಮೆಹಂದಿ ಕೂದಲುದುರುವಿಕೆ ವಿರುದ್ಧ ಹೋರಾಡುವಲ್ಲಿ ಹೆಚ್ಚು ಸಹಕಾರಿ. ಇದನ್ನು ಮೊಸರು ಮತ್ತು ನಿಂಬೆರಸದೊಂದಿಗೆ ಬೆರೆಸಿ ಹಚ್ಚಿಕೊಂಡರೆ ತಲೆಹೊಟ್ಟಿನ ಸಮಸ್ಯೆಯೂ ದೂರವಾಗುತ್ತದೆ. ಮೆಹಂದಿ ಕೂದಲಿನ ಬುಡವನ್ನೂ ಗಟ್ಟಿಗೊಳಿಸುತ್ತದೆ.
* ಲೋಳೆಸರ: ಕೇವಲ ಕೂದಲಿಗಷ್ಟೇ ಅಲ್ಲ, ಲೋಳೆಸರ ಒಟ್ಟಾರೆ ಸೌಂದರ್ಯಕ್ಕೂ ಉಪಯೋಗ. ಚರ್ಮಕ್ಕಾಗಿರಲಿ, ಕೂದಲಿಗಾಗಿರಲಿ, ಲೋಳೆಸರ ಆರೋಗ್ಯಕರ. ಕೂದಲು ತುಂಬಾ ತೆಳ್ಳಗಾಗುತ್ತಿದ್ದರೆ ಲೋಳೆಸರ ಉತ್ತಮ ಪರಿಹಾರ ನೀಡಬಲ್ಲದು.



Click it and Unblock the Notifications
