Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕೆಮಿಕಲ್ ಶಾಂಪುಗಳಿಗೆ ವಿದಾಯ ಹೇಳಿ

ಕೂದಲ ಪೋಷಣೆಗೆ ಮನೆಯಲ್ಲೇ ತಯಾರಿಸಬಹುದಾದಂತ ಕೆಲವು ಶಾಂಪುಗಳು:
1. ಒಂದು ಚಮಚ ಅಡುಗೆ ಸೋಡಾಗೆ ಬಿಸಿ ನೀರು ಬೆರೆಸಿ ಹಚ್ಚಿಕೊಂಡರೆ ಕೂದಲು ಉದುರುವುದನ್ನು ಕಡಿಮೆಗೊಳಿಸಿ ಹೊಳಪು ತಂದುಕೊಡುತ್ತದೆ.
2. ಬಿಸಿ ನೀರಿನಲ್ಲಿ ಮೊಟ್ಟೆಯನ್ನು ಚೆನ್ನಾಗಿ ಕಲೆಸಿ ಕೂದಲಿನ ಬುಡಕ್ಕೆ ಮತ್ತು ಕೂದಲಿಗೆ ಹಚ್ಚಿ ಒಂದು ಗಂಟೆ ನಂತರ ತೊಳೆದುಕೊಂಡರೆ ಕಂಡೀಶನರ್ ನಂತೆ ಹೊಳಪು ನೀಡುತ್ತದೆ.
3. ಅಂಟವಾಳದ ಕಾಯಿಯನ್ನು ನೀರಿನಲ್ಲಿ ಒಂದು ರಾತ್ರಿಯಿಡೀ ನೆನೆಯಿಟ್ಟು, ಬೆಳಗ್ಗೆ ಚೆನ್ನಾಗಿ ಹಿಂಡಿ ರಸ ಮತ್ತು ಅದರ ನೀರನ್ನು ಸೀಗೆಕಾಯಿಯೊಂದಿಗೆ ಬೆರೆಸಿ ಹಚ್ಚಿಕೊಳ್ಳಬೇಕು.
4. ಒಂದು ಲೀಟರ್ ನೀರಿನಲ್ಲಿ, ಸೀಗೆಕಾಯಿ, ಅಂಟವಾಳ ಮತ್ತು ಬೆಟ್ಟದ ನೆಲ್ಲಿಕಾಯಿಯನ್ನು 24 ಗಂಟೆ ನೆನೆಯಿಸಿ ನಂತರ ಬಿಸಿ ಮಾಡಿ ಸೋಸಿಕೊಂಡು ಅದು ತಣ್ಣಗಾದ ನಂತರ ಕೆಲವು ಹನಿ ವೆನಿಗರ್ ಹಾಕಿ ಕೂದಲನ್ನು ತೊಳೆದುಕೊಂಡರೆ ಕೂದಲು ತುಂಬಾ ಮೃದುವಾಗಿ ಸುಪೋಷಿತಗೊಳ್ಳುತ್ತದೆ.
5. ಸೀಗೆಕಾಯಿ, ಭೃಂಗರಾಜ ಮತ್ತು ನೆಲ್ಲಿಕಾಯಿ ಪುಡಿಯನ್ನು ಬಿಸಿನೀರಿನಲ್ಲಿ ಹಾಕಿ ಕೆಲವು ಹನಿ ನಿಂಬೆರಸ ಮತ್ತು ವೆನಿಗರ್ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು 30 ನಿಮಿಷ ಇಟ್ಟು ನಂತರ ತಲೆಗೆ ಹಚ್ಚಿಕೊಂಡು ತೊಳೆಯಬೇಕು. ಇದು ಕೂದಲುದುರುವುದನ್ನು ಕಡಿಮೆಗೊಳಿಸಿ ತಲೆಹೊಟ್ಟನ್ನೂ ನಿವಾರಿಸುತ್ತದೆ. ಇದನ್ನು ಹೆಚ್ಚು ಕಾಲ ಇಡಬೇಕೆಂದರೆ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಬಹುದು.
ಕೃತಕ ಮತ್ತು ಕೆಮಿಕಲ್ ಮಿಶ್ರಿತ ಶಾಂಪುಗಳು ಕೆಲಕಾಲ ಕೂದಲನ್ನು ಚೆನ್ನಾಗಿ ಕಾಣುವಂತೆ ಮಾಡಬಹುದು. ಆದರೆ ಅವು ಕೂದಲಿನ ಮೇಲೆ ದೀರ್ಘಕಾಲದ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಮನೆಯಲ್ಲೇ ಈ ನೈಸರ್ಗಿಕ ಶಾಂಪೂಗಳನ್ನು ತಯಾರಿಸಿಕೊಂಡು ಕೂದಲನ್ನು ಸಮಸ್ಯೆಗಳಿಂದ ಮುಕ್ತವಾಗಿಟ್ಟುಕೊಳ್ಳಬಹುದು.



Click it and Unblock the Notifications
