Latest Updates
-
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು
ಊಹೆಗೂ ನಿಲುಕದ, ಮೆಹೆಂದಿಯ ಅದ್ಭುತ ಪ್ರಯೋಜನಗಳು...
ಮೆಹೆಂದಿ ಎಂದಾಕ್ಷಣ ಕೈಗಳಿಗೆ ಹಚ್ಚುವ ಒಂದು ಅಲಂಕಾರ, ಮದುಮಗಳ ಸಿಂಗಾರಕ್ಕೆ ಉಪಯೋಗಿಸುವ ಪ್ರಸಾದನ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಇದರ ಬಗ್ಗೆ ಕೊಂಚ ಹೆಚ್ಚು ಅರಿತವರು ನೆರೆತ ಕೂದಲಿಗೆ ನೈಸರ್ಗಿಕ ಬಣ್ಣ ನೀಡಲು ಬಳಸಲ್ಪಡುವ ಪುಡಿ ಎಂದೂ ತಿಳಿದುಕೊಂಡಿದ್ದಾರೆ. ಆದರೆ ವಾಸ್ತವವಾಗಿ ಈ ಪುಡಿಯ ಮಹತ್ವ ಮತ್ತು ಪ್ರಯೋಜನಗಳು ಇನ್ನೂ ಹಲವಾರಿದ್ದು ಇವುಗಳ ಬಗ್ಗೆ ಅರಿವು ಮೂಡಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗುತ್ತದೆ. ತಕ್ಷಣವೇ ಮನೆಯಲ್ಲಿ ಮೆಹೆಂದಿ ಪುಡಿ ಇಲ್ಲದಿದ್ದರೆ ಮಾರುಕಟ್ಟೆಯಿಂದ ಖರೀದಿಸಲು ಪಟ್ಟಿಯಲ್ಲಿ ತಕ್ಷಣ ಬರೆದಿಡುವುದು ಉತ್ತಮ.
ಪ್ರಮುಖವಾಗಿ ಮೆಹೆಂದಿಯ ಪರಿಣಾಮ ಚರ್ಮ, ಕೂದಲು ಮತ್ತು ಉಗುರುಗಳ ಬಣ್ಣವನ್ನು ಬದಲಿಸುವುದು ಮಾತ್ರವಲ್ಲ, ದೇಹಕ್ಕೆ ತಂಪು ನೀಡುವುದಾಗಿದೆ. ನೆರೆತ ಕೂದಲಿಗೆ ಗಾಢ ಕಿತ್ತಳೆ ಅಥವಾ ಕಂದು ಬಣ್ಣ ನೀಡುವುದರ ಜೊತೆಗೇ ಕೂದಲು ದೃಢಗೊಳ್ಳಲು ಹೆಚ್ಚಿನ ಪೋಷಣೆಯನ್ನೂ ನೀಡುತ್ತದೆ. ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಇತ್ತ ಗಮನಿಸಿ
ಅಷ್ಟೇ ಅಲ್ಲ, ಇದು ಯಾವುದೇ ವಯಸ್ಸಿನವರಿಗೆ ಸುರಕ್ಷಿತವಾಗಿದ್ದು ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಅಷ್ಟೇ ಏಕೆ, ಗರ್ಭಿಣಿಯರೂ ಸುರಕ್ಷಿತವಾಗಿ ಬಳಸಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಗರ್ಭಿಣಿಯರಿಗೆ ಮೆಹೆಂದಿಯನ್ನು ಕೈಕಾಲುಗಳಿಗೆ ಹಚ್ಚುವುದು ಒಂದು ಹಳೆಯ ವಿಧಾನವೇ ಆಗಿದೆ. ಚರ್ಮ, ಕೂದಲು ಮತ್ತು ದೇಹದ ಇತರ ಅಂಗಗಳಿಗೆ ಮೆಹೆಂದಿ ನೀಡುವ ಪೋಷಣೆಯ ಬಗ್ಗೆ ಇದುವರೆಗೆ ನಮಗೆ ತಿಳಿದಿರದೇ ಇದ್ದ ಅಮೂಲ್ಯ ಮಾಹಿತಿಯನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಹಂಚಿಕೊಳ್ಳಲು ಹರ್ಷಿಸುತ್ತದೆ....

ಬಕ್ಕತಲೆಯಾಗದಂತೆ ತಡೆಯುತ್ತದೆ
ಸ್ವಲ್ಪ ಸಾಸಿವೆ ಎಣ್ಣೆಯನ್ನು ಒಂದು ಬಾಣಲೆ ಅಥವಾ ಕಾವಲಿಯಲ್ಲಿ ಬಿಸಿಮಾಡಿ ಇದಕ್ಕೆ ಕೊಂಚ ಹಸಿ ಮೆಹೆಂದಿ ಎಲೆಗಳನ್ನು ಸೇರಿಸಿ. ಎಲೆಗಳು ಬಿಸಿಎಣ್ಣೆಯಲ್ಲಿ ಸೋಕಿದರೆ ಮಾತ್ರ ಸಾಕು, ಕುದಿಸುವ ಅಗತ್ಯವಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಕ್ಕತಲೆಯಾಗದಂತೆ ತಡೆಯುತ್ತದೆ
ಎಲೆಗಳು ಕೊಂಚವೇ ಮುದುಡಿದ ಬಳಿಕ ಎಲೆಗಳಿಂದ ಹೆಚ್ಚುವರಿ ಎಣ್ಣೆಯನ್ನು ಹಿಂಡಿ ನಿವಾರಿಸಿ ತಣಿಯಲು ಬಿಡಿ. ತಣಿದ ಬಳಿಕ ನುಣ್ಣನೆ ಅರೆದು ತಲೆಗೂದಲಿಗೆ ನಿಯಮಿತವಾಗಿ ಹಚ್ಚಿಕೊಳ್ಳುತ್ತಾ ಬಂದರೆ ಕೂದಲು ಉದುರುವುದು ನಿಂತು ಬಕ್ಕತನ ಆವರಿಸುವುದರಿಂದ ರಕ್ಷಣೆ ಪಡೆಯಬಹುದು.

ಪಾದಗಳಲ್ಲಿ ಉರಿಯಾಗುವುದನ್ನು ತಡೆಯುತ್ತದೆ
ಕೆಲವರಿಗೆ ಪಾದಗಳಲ್ಲಿ ಒಳಗೆ ಸೂಜಿ ಚುಚ್ಚಿದಂತೆ ನೋವಾಗುತ್ತಿರುತ್ತದೆ. ಈ ತೊಂದರೆಗಾಗಿ ಒಂದು ಮುಷ್ಟಿಯಷ್ಟು ಹಸಿ ಮೆಹೆಂದಿ ಎಲೆಗಳನ್ನು ಶಿರ್ಕಾದಲ್ಲಿ ಸುಮಾರು ಮೂರರಿಂದ ಆರು ಘಂಟೆ ಮುಳುಗಿಸಿಡಿ. ರಾತ್ರಿ ಮಲಗುವ ಮುನ್ನ ಈ ಎಲೆಗಳನ್ನು ಹೊರತೆಗೆದು ಹಿಂಡಿ ಕಾಲುಚೀಲಗಳ ಒಳಗೆ ತಳಭಾಗದಲ್ಲಿ ಸಮನಾಗಿ ಹರಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪಾದಗಳಲ್ಲಿ ಉರಿಯಾಗುವುದನ್ನು ತಡೆಯುತ್ತದೆ
ಈ ಸಾಕ್ಸಿ ಧರಿಸಿ ಎಲ್ಲಾ ಎಲೆಗಳು ಪಾದಗಳ ಕೆಳಭಾಗವನ್ನು ತಗಲುತ್ತಿವೆ ಎಂದು ಖಚಿತಪಡಿಸಿಕೊಂಡು ಮಲಗಿ. ಬೆಳಿಗ್ಗೆ ಎದ್ದು ತಣ್ಣೀರಿನಿಂದ ತೊಳೆದುಕೊಳ್ಳಿ. ತಕ್ಷಣ ನಡೆಯಲು ಹೋಗಬೇಡಿ, ಸುಮಾರು ಹತ್ತು ಹದಿನೈದು ನಿಮಿಷದ ಬಳಿಕ ಅಡ್ಡಾಡಿದರೆ ಸೂಜಿ ಚುಚ್ಚುವುದು ನಿಂತಿರುವುದನ್ನು ಗಮನಿಸಬಹುದು.

ಸುಟ್ಟ ಗಾಯದ ಉರಿ ಶಮನವಾಗಿಸಲು
ಒಂದು ವೇಳೆ ಬಿಸಿನೀರು ಅಥವಾ ಇನ್ನಾವುದೋ ಬಿಸಿ ಪದಾರ್ಥ ತಗುಲಿದರೆ ಕೊಂಚ ಮೆಹೆಂದಿ ಎಲೆಗಳನ್ನು ನೀರಿನಲ್ಲಿ ಕುದಿಸಿ. ಒಂದು ನಿಮಿಷ ಕುದಿಸಿದ ಬಳಿಕ ತಕ್ಷಣ ತಣಿಸಿ. ಸುಮಾರು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರಿನಿಂದ ಬಿಸಿ ತಗುಲಿದ್ದ ಭಾಗವನ್ನು ತೊಳೆಯಿರಿ. ಇದರಿಂದ ಉರಿ ತಕ್ಷಣವೇ ಕಡಿಮೆಯಾಗುತ್ತದೆ ಹಾಗೂ ಬೊಬ್ಬೆ ಏಳದಂತೆ ನೋಡಿಕೊಳ್ಳಬಹುದು. ಅಡುಗೆ ಮನೆಯಲ್ಲಿ ಈ ನೀರನ್ನು ಒಂದು ಬಾಟಲಿಯಲ್ಲಿ ಸಂಗ್ರಹಿ ಫ್ರಿಜ್ಜಿನಲ್ಲಿಟ್ಟರೆ ಸುಟ್ಟಗಾಯವಾದ ತಕ್ಷಣ ಹಚ್ಚಿಕೊಳ್ಳಲು ಅತ್ಯುತ್ತಮವಾಗಿದೆ.

ಬಾಯಿಹುಣ್ಣಿನ ತೊಂದರೆ ನಿವಾರಿಸಲು
ಬಾಯಿಹುಣ್ಣಿನಲ್ಲಿ ಕೆನ್ನೆಯ ಒಳಭಾಗ, ಒಸಡು, ನಾಲಿಗೆ ಮೊದಲಾದ ಕಡೆಗಳಲ್ಲಿ ವ್ರಣಗಳಾಗಿ ಭಾರೀ ಉರಿ ಇರುತ್ತದೆ. ಇದಕ್ಕಾಗಿ ಉತ್ತಮ ಗುಣಮಟ್ಟದ ಐವತ್ತು ಗ್ರಾಂ ಮೆಹೆಂದಿ ಪುಡಿಯನ್ನು ತಣ್ಣೀರಿನಲ್ಲಿ ಬೆರೆಸಿ ಕೊಂಚ ಕಾಲ ಹಾಗೇ ಬಿಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಾಯಿಹುಣ್ಣಿನ ತೊಂದರೆ ನಿವಾರಿಸಲು
ಮೆಹೆಂದಿ ಪುಡಿ ತಳಕ್ಕೆ ಇಳಿದ ಬಳಿಕ ಮೇಲಿನ ತಿಳಿನೀರನ್ನು ಸಂಗ್ರಹಿಸಿ ಈ ನೀರಿನಿಂದ ಸತತವಾಗಿ ಮುಕ್ಕಳಿಸುತ್ತಾ ಇರಿ. ಅಂದರೆ ಪ್ರತಿ ಅರ್ಧಘಂಟೆಗೊಂದು ಬಾರಿ ಮುಕ್ಕಳಿಸುತ್ತಾ,ಗಂಟಲಿಗೂ ಗಳಗಳ ಮಾಡುತ್ತಿರಿ. ಒಂದೇ ದಿನದಲ್ಲಿ ಯಾವುದೇ ಪ್ರಬಲ ಔಷಧಿಯೂ ನೀಡದ ಶಮನವನ್ನು ಈ ನೀರು ನೀಡುತ್ತದೆ.

ತಲೆನೋವಿನ ಶಮನಕ್ಕೆ
ಕೆಲವರಿಗೆ ಸೂರ್ಯನ ಬೆಳಕಿಗೆ ಅನುಸಾರವಾಗಿ ತಲೆನೋವಿರುತ್ತದೆ. ಅಂದರೆ ಹಗಲಿನಲ್ಲಿ ಬೆಳಿಗ್ಗೆ ಕಡಿಮೆ ಇದ್ದು ಮದ್ಯಾಹ್ನ ಹೆಚ್ಚಿರುತ್ತದೆ. ನೆರಳಿನಲ್ಲಿ ಕಡಿಮೆ ಇದ್ದು ಬಿಸಿಲಿಗೆ ಬಂದಾಕ್ಷಣ ಹೆಚ್ಚುತ್ತದೆ. ಇಂತಹ ತಲೆನೋವು ಇದ್ದವರಿಗೆ ಮೆಹೆಂದಿ ಪುಡಿ ಅತ್ಯುತ್ತಮ ಔಷಧಿಯಾಗಿದೆ. ಇದಕ್ಕಾಗಿ ಕೊಂಚ ಮೆಹೆಂದಿಯ ಎಲೆಗಳನ್ನು ಮತ್ತು ಹೂವುಗಳನ್ನು (ಎರಡು - ಒಂದರ ಅನುಪಾತದಲ್ಲಿ) ಚೆನ್ನಾಗಿ ತೊಳೆದು ಶಿರ್ಕಾದಲ್ಲಿ ಒಂದು ಗಂಟೆ ಮುಳುಗಿಸಿಡಿ. ಬಳಿಕ ಈ ಎಲೆ-ಹೂವುಗಳನ್ನು ದಪ್ಪನಾಗಿ ಅರೆದು ಹಣೆಯಲ್ಲೆ ತೆಳ್ಳಗೆ ಮತ್ತು ಹಣೆಯ ಪಕ್ಕದ ಭಾಗದಲ್ಲಿ (ಕನ್ನಡಕದ ಕಡ್ಡಿಗಳು ತಾಕುವ ಕಿವಿಗಳ ಮುಂಭಾಗ -temple) ದಪ್ಪನಾಗಿ ಹಚ್ಚಿ.

ತಲೆನೋವಿನ ಶಮನಕ್ಕೆ
ಒಂದು ವೇಳೆ ಅರೆ ತಲೆಶೂಲೆ ಇದ್ದರೆ, ಅಂದರೆ ತಲೆಯ ಒಂದು ಭಾಗದಲ್ಲಿ ಹೆಚ್ಚು ಇನ್ನೊಂದು ಭಾಗದಲ್ಲಿ ಕಡಿಮೆ ಅನ್ನಿಸಿದರೆ ಆ ಭಾಗದ ವಿರುದ್ದ ಭಾಗದ ಕಿವಿಯ ಹಿಂಭಾಗದಲ್ಲಿ (ಅಂದರೆ ಬಲ ಭಾಗದಲ್ಲಿ ನೋವಿದ್ದರೆ ಎಡಗಿವಿಯ ಹಿಂಭಾಗ, ಎಡತಲೆಯಲ್ಲಿ ನೋವಿದ್ದರೆ ಬಲಗಿವಿಯ ಹಿಂಭಾಗ) ದಲ್ಲಿಯೂ ದಪ್ಪನಾಗಿ ಈ ಲೇಪನವನ್ನು ಹಚ್ಚಿ ಕೊಂಚಕಾಲ ಮಲಗಿ. ಇದರಿಂದ ತಲೆನೋವು ತಕ್ಷಣವೇ ಕಡಿಮೆಯಾಗುತ್ತದೆ.

ವಿಶೇಷ ಸೂಚನೆ
* ಯಾವುದೇ ತಲೆನೋವು ಪ್ರಾರಂಭದಲ್ಲಿ ಮಾಡುವ ಆರೈಕೆಯಿಂದಲೇ ತಕ್ಷಣ ಕಡಿಮೆಯಾಗುತ್ತದೆ. ಒಮ್ಮೆ ಗಂಭೀರ ರೂಪ ಪಡೆಯಿತೋ, ಆಗ ಇದನ್ನು ಕಡಿಮೆ ಮಾಡಲು ಯಾವುದೇ ಔಷಧಿಗೆ ಕಷ್ಟ. ಅಂತೆಯೇ ಮೆಹೆಂದಿಯ ಚಿಕಿತ್ಸೆಯನ್ನೂ ತಲೆನೋವು ಪ್ರಾರಂಭವಾದ ಕೂಡಲೇ ಪ್ರಾರಂಭಿಸಿಬಿಡಬೇಕು.
* ಈ ತರಹದ ತಲೆನೋವಿದ್ದವರಿಗೆ ಶಬ್ದ ತಲೆನೋವು ಹೆಚ್ಚಿಸುತ್ತದೆ. ಇವರು ಶಬ್ದದಿಂದ ಆದಷ್ಟೂ ದೂರವಿದ್ದು ಅಡ್ಡ ಮಲಗಿ ಚಿಕಿತ್ಸೆ ಪಡೆದಷ್ಟೂ ಉತ್ತಮ.



Click it and Unblock the Notifications











