Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮನೆಮದ್ದು: 'ಪಾದಗಳ ದುರ್ವಾಸನೆ' ನಿವಾರಣೆಗೆ ಹಸಿ ಶುಂಠಿ!
ಶುಂಠಿಯ ಸೇವನೆಯಿಂದ ಚರ್ಮದಲ್ಲಿ ಡರ್ಮಿಸೈಡಿನ್ ಎಂಬ ಪ್ರೋಟೀನು ಉತ್ಪತ್ತಿಯಾಗುತ್ತದೆ. ಈ ಪ್ರೋಟೀನು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಪ್ರಮುಖವಾಗಿ ದುರ್ವಾಸನೆಯನ್ನು ನಿವಾರಿಸುತ್ತದೆ.
ಪಾದಗಳ ದುರ್ವಾಸನೆಗೆ ಬೆವರು ಮತ್ತು ಬೆವರಿನಲ್ಲಿ ಕೊಳೆಯುವ ಬ್ಯಾಕ್ಟೀರಿಯಾಗಳು ಕಾರಣ. ಇದನ್ನು ನಿವಾರಿಸಲು ಸುಲಭ ವಿಧಾನವೆಂದರೆ ಹಸಿಶುಂಠಿ ಮತ್ತು ನೀರು. ಶುಂಠಿಯ ರಸದಲ್ಲಿ ಚರ್ಮದ ಆಳಕ್ಕೆ ಇಳಿಯುವ ತೀಕ್ಷ್ಣ ಗುಣವಿದೆ. ಅಲ್ಲದೇ ಇದರಲ್ಲಿ ತೇವಾಂಶವನ್ನು ಹೀರಿಕೊಂಡು ಒಣಗಿಸುವ ರಕ್ಷಾ ಗುಣವೂ ಇದೆ. ಪಾದಗಳ ದುರ್ವಾಸನೆ ಬೀರುವುದನ್ನು ತಡೆಯಲು ಸರಳ ಟಿಪ್ಸ್
ಬೆವರು ಹರಿದ ಬಳಿಕ ಚರ್ಮದ ಹೊರಪದರದ ಸತ್ತ ಜೀವಕೋಶಗಳು ತೀರಾ ಸಡಿಲವಾಗುತ್ತವೆ. ಬ್ಯಾಕ್ಟೀರಿಯಾಗಳು ಈ ಜೀವಕೋಶಗಳನ್ನು ತಿಂದು ದುರ್ವಾಸನೆ ಮೂಡಿಸುತ್ತವೆ. ಶುಂಠಿಯ ಸೇವನೆಯಿಂದ ಚರ್ಮದಲ್ಲಿ ಡರ್ಮಿಸೈಡಿನ್ ಎಂಬ ಪ್ರೋಟೀನು ಉತ್ಪತ್ತಿಯಾಗುತ್ತದೆ. ಈ ಪ್ರೋಟೀನು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಪ್ರಮುಖವಾಗಿ ದುರ್ವಾಸನೆಯನ್ನು ನಿವಾರಿಸುತ್ತದೆ. ಬನ್ನಿ, ಈ ದುರ್ವಾಸನೆಯನ್ನು ನಿವಾರಿಸಲು ತಜ್ಞರು ಏನು ಹೇಳುತ್ತಾರೆ ಎಂಬುದನ್ನು ನೋಡೋಣ:

ಮೊದಲಿಗೆ ಶುಂಠಿಯ ರಸದಿಂದ ಪಾದಗಳನ್ನು ಮಸಾಜ್ ಮಾಡಿಕೊಳ್ಳಬೇಕು
ಇದಕ್ಕಾಗಿ ಒಂದು ದೊಡ್ಡ ಗಾತ್ರದ ಶುಂಠಿಯನ್ನು ಸಿಪ್ಪೆ ನಿವಾರಿಸಿ ನಯವಾಗಿ ಅರೆದುಕೊಳ್ಳಬೇಕು. ಒಂದು ಕಪ್ ನೀರನ್ನು ಕುದಿಸಿ ಇದರಲ್ಲಿ ಅರೆದ ಶುಂಠಿಯನ್ನು ಸೇರಿಸಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳವರೆಗೆ ಚಿಕ್ಕ ಉರಿಯಲ್ಲಿ ಬೇಯಿಸಬೇಕು. ಬಳಿಕ ಈ ನೀರನ್ನು ತಣಿಸಿ ಹಿಂಡಿ ರಸವನ್ನು ಸಂಗ್ರಹಿಸಿ. ಶೂನಿಂದ ಕೆಟ್ಟ ವಾಸನೆ ಬರುತ್ತಿದೆಯೇ? ಇನ್ನು ಚಿಂತೆ ಬಿಡಿ...
ಈ ನೀರನ್ನು ಬಾಟಲಿಯಲ್ಲಿ ಭದ್ರವಾಗಿ ಮುಚ್ಚಿಡಿ. ಪ್ರತಿರಾತ್ರಿ ಮಲಗುವ ಮುನ್ನ ಈ ರಸದಿಂದ ಈಗ ತಾನೇ ತೊಳೆದುಕೊಂಡು ಒರೆಸಿಕೊಂಡ ಪಾದಗಳನ್ನು ತೆಳುವಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಿ. ಶುಂಠಿಯ ರಸ ಬಟ್ಟೆಗಳ ಮೇಲೆ ಕಲೆ ಉಳಿಸುವುದಿಲ್ಲವಾದುದರಿಂದ ನಿಶ್ಚಿಂತೆಯಿಂದ ಮಲಗಿ.
ಉತ್ತಮ ಪರಿಣಾಮಕ್ಕಾಗಿ ರಾತ್ರಿ ಮಲಗುವ ಮುನ್ನ ಕಾಲುಗಳಿಗೆ ಹತ್ತಿಯ ಕಾಲುಚೀಲಗಳನ್ನು ಧರಿಸಿ ಮಲಗಿ. ಆದರೆ ಚಳಿಗಾಲದಲ್ಲಿ ಸೂಕ್ತವಾದ ತೇವಕಾರಕ ಕ್ರೀಂ ಹಚ್ಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಈ ರಸವನ್ನು ನಿಯಮಿತವಾಗಿ ಹಚ್ಚಿಕೊಳ್ಳುತ್ತಾ ಬರುವ ಮೂಲಕ ಪಾದಗಳ ವಾಸನೆ ಇಲ್ಲವಾಗುವ ಜೊತೆಗೇ ಪಾದಗಳು ಮೃದುವಾಗಿ ಬಿರುಕುಗಳಿಲ್ಲದ ಸೌಂದರ್ಯ ಪಡೆಯುತ್ತದೆ.
ಚಳಿಗಾಲದಲ್ಲಿ ಪಾದಗಳಿಗೆ ಮತ್ತು ಉಗುರುಗಳಿಗೆ ವಿಶೇಷ ಕಾಳಜಿಯ ಅಗತ್ಯವಿದೆ. ಪ್ರದಿನವೂ ಈ ವಿಧಾನವನ್ನು ಅನುಸರಿಸುವ ಮೂಲಕ ಒಂದೇ ವಾರದಲ್ಲಿ ಪಾದಗಳ ದುರ್ವಾಸನೆ ಮಾಯವಾಗತೊಡಗುವುದನ್ನು ಗಮನಿಸಬಹುದು.



Click it and Unblock the Notifications


