Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಖರ್ಬೂಜ ಹಣ್ಣಿನ ಗುಣಗಳು ಒಂದಾ ಎರಡಾ...
ಬೇಸಿಗೆಯ ಸೆಖೆ ಅಸಹನೀಯವಾದರೂ ಈ ಕಾಲದಲ್ಲಿ ಲಭ್ಯವಾಗುವ ಹಣ್ಣುಗಳ ಕಾರಣದಿಂದ ಬೇಸಿಗೆಯ ಮಜ ಭಿನ್ನವಾಗಿರುತ್ತದೆ. ಮಾವು, ಕಲ್ಲಂಗಡಿ, ಖರ್ಬೂಜ, ಲಿಚ್ಚಿ, ಪ್ಲಂ ಹಣ್ಣುಗಳು, ಚೆರ್ರಿ ಮೊದಲಾದವು ಈ ಸಮಯದಲ್ಲಿ ಅಗ್ಗವಾಗಿ ಮತ್ತು ಯಥೇಚ್ಛವಾಗಿ ಸಿಗುತ್ತವೆ. ಇವುಗಳ ಸೇವನೆಯಿಂದ ಕೇವಲ ಬೇಸಿಗೆಯ ಬೇಗೆ ತಣಿಯುವುದು ಮಾತ್ರವಲ್ಲ, ಬಿಸಿಲಿಗೆ ದೇಹ ಕಳೆದುಕೊಂಡಿದ್ದ ಪೋಷಕಾಂಶಗಳನ್ನು ಪಡೆಯಲೂ ಸಾಧ್ಯವಾಗುತ್ತದೆ ಹಾಗೂ ತೂಕ ಏರದೇ ಉತ್ತಮ ಆರೋಗ್ಯ ಕಾಯ್ದುಕೊಳ್ಳಲೂ ಸಾಧ್ಯವಾಗುತ್ತದೆ. ಅಲ್ಲದೆ ಹಣ್ಣುಗಳಲ್ಲಿರುವ ಉತ್ತಮ ಪ್ರಮಾಣದ ನಾರು ಮಲಬದ್ಧತೆಯಿಂದ ರಕ್ಷಿಸುತ್ತದೆ.
ಅದರಲ್ಲೂ ಬೂದು ಖರ್ಬೂಜ (muskmelon) ಹಣ್ಣು ಹೊಟ್ಟೆಗೆ ತಂಪು ಮಾತ್ರವಲ್ಲ, ಇದರಲ್ಲಿರುವವ ವಿಟಮಿನ್ ಎ, ಡಿ ಮತ್ತು ಸಿ ಹೇರಳವಾಗಿದೆ. ಖನಿಜಗಳಾದ ಫಾಸ್ಪರಸ್, ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು ಚರ್ಮದ ಆರೈಕೆಗೆ ಹಾಗೂ ಕೂದಲಿಗೂ ನೆರವಾಗುತ್ತವೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಬೂದು ಖರ್ಬೂಜದ ಹಣ್ಣು ಮತ್ತು ಜೇಡಿಮಣ್ಣಿನ ಲೇಪನ
ಅಗತ್ಯ ಪ್ರಮಾಣದಲ್ಲಿ ಖರ್ಬೂಜ ದ ಹಣ್ಣಿನ ತಿರುಳನ್ನು ಕೊಂಚ ಜೇಡಿಮಣ್ಣು (fuller's earth) ಸೇರಿಸಿ ಲೇಪನ ತಯಾರಿಸಿ. ಜೇಡಿಮಣ್ಣು ಸಿಗದಿದ್ದರೆ ಉಪ್ಪನ್ನು ಸಹಾ ಉಪಯೋಗಿಸಬಹುದು. (ಹರಳುಪ್ಪು). ಈ ಲೇಪನವನ್ನು ಮುಖ, ಕುತ್ತಿಗೆ, ಕೈ ಕಾಲುಗಳಿಗೆ ಹಚ್ಚಿ ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸದಿರುವುದು ಮೇಲು. ಈ ಲೇಪನದಿಂದ ಚರ್ಮ ಆರ್ದ್ರತೆ ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಂಡು ಕಾಂತಿಯುಕ್ತವಾಗುತ್ತದೆ ಮತ್ತು ನೆರಿಗೆಗಳೂ ಮಾಯವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೂದು ಖರ್ಬೂಜದ ಹಣ್ಣು ಮತ್ತು ಜೇಡಿಮಣ್ಣಿನ ಲೇಪನ
ಒಂದು ವೇಳೆ ಚರ್ಮ ಚಳಿಯಿಂದಾಗಿ ಅಥವಾ ಬೇರೆ ಕಾರಣದಿಂದ ಹೆಚ್ಚಾಗಿ ಒಡೆದಿದ್ದರೆ ಜೇಡಿಮಣ್ಣಿನ ಬದಲು ಕಂದು ಸಕ್ಕರೆ (ಬೆಲ್ಲದ ಸಕ್ಕರೆ ರೂಪ) ಯನ್ನು ಸೇರಿಸಿ ಹಚ್ಚಿಕೊಳ್ಳಬಹುದು. ಈ ಲೇಪನದಿಂದ ಸತ್ತ ಜೀವಕೋಶಗಳು ನಿವಾರಣೆಯಾಗಿ ಹೊಸ ಜೀವಕೋಶಗಳು ಬೆಳೆಯಲು ಅನುಕೂಲವಾಗುತ್ತದೆ. ಒಡೆದ ಚರ್ಮ ಕಾಣೆಯಾಗುವವರೆಗೆ ಮಾತ್ರ ಈ ಲೇಪನವನ್ನು ಹಚ್ಚಬೇಕು.

ಬೂದು ಖರ್ಬೂಜ, ಜೇನು ಮತ್ತು ಲ್ಯಾವೆಂಡರ್ ಹೂವಿನ ಎಣ್ಣೆ
ಎಂಟು ಪ್ರಮಾಣದ ಖರ್ಬೂಜ ದ ತಿರುಳಿಗೆ ಒಂದು ಪ್ರಮಾಣದ ಲ್ಯಾವೆಂಡರ್ ಹೂವಿನ ಎಣ್ಣೆ ಮತ್ತು ಒಂದು ಪ್ರಮಾಣದ ಜೇನು ಸೇರಿಸಿ ಲೇಪನ ತಯಾರಿಸಿ. ಈ ಪ್ರಮಾಣ ತುಂಬಾ ನೀರಾಗುವುದರಿಂದ ಕೊಂಚ ದಟ್ಟವಾಗಿಸಲು ಮೆಕ್ಕೆಜೋಳದ ಹಿಟ್ಟು ಅಥವಾ ರವೆಯನ್ನು ಸೇರಿಸಿ (cornmeal) ಸೂಕ್ತ ಪ್ರಮಾಣದ ಹದ ಬರುವವರೆಗೆ ಮಿಕ್ಸಿಯಲ್ಲಿ ರುಬ್ಬಿ. ಈ ಲೇಪನವನ್ನು ಮುಖ, ಕೈ ಕಾಲುಗಳು, ಕುತ್ತಿಗೆಗಳಿಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ.

ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ
ಖರ್ಬೂಜ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದೊಂದು ಪ್ರಬಲ ಆಕ್ಸಿಡೆಂಟು ಆಗಿದ್ದು ಚರ್ಮಕ್ಕೆ ಘಾಸಿಗೊಳಿಸುವ ಮತ್ತು ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತದೆ. ಇದರಿಂದ ಚರ್ಮ ಕೋಮಲ ಮತ್ತು ಕಾಂತಿಯುಕ್ತವಾಗಲು ಸಾಧ್ಯವಾಗುತ್ತದೆ.

ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ
ಅದರಲ್ಲೂ ಬೇಸಿಗೆಯಲ್ಲಿ ಖರ್ಬೂಜ ಸೇವನೆಯಿಂದ ಚರ್ಮ ನೆರಿಗೆ ಬೀಳುವ ಸಂಭವ ಕಡಿಮೆಯಾಗುತ್ತದೆ ಹಾಗೂ ತನ್ಮೂಲಕ ವೃದ್ದಾಪ್ಯದ ಚಿಹ್ನೆಗಳು ದೂರಾಗುತ್ತವೆ. ಅಲ್ಲದೇ ಮಹಿಳೆಯರಿಗೆ ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸಲು ಸಹಾ ನೆರವಾಗುತ್ತದೆ.

ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದೆ
ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದ್ದು ಹೃದಯ ಬಡಿತವನ್ನು ಸಮಸ್ಥಿತಿಯಲ್ಲಿರಿಸಲು ನೆರವಾಗುತ್ತದೆ. ಅಲ್ಲದೇ ಮನಸ್ಸು ನಿರಾಳವಾಗಿರಲು ಮತ್ತು ಏಕಾಗ್ರತೆ ಸಾಧಿಸಲೂ ನೆರವಾಗುತ್ತದೆ. ನರಗಳ ಮತ್ತು ಜೀವಕೋಶಗಳ ನಾಶವನ್ನು ತಡೆದು ಆರೋಗ್ಯ ವೃದ್ಧಿಸುತ್ತದೆ.

ಉತ್ತಮ ಪ್ರಮಾಣದ ಬೀಟಾ ಕ್ಯಾರೋಟಿನ್ ಇದೆ
ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಶ ಕಣ್ಣುಗಳ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ತೂಕ ಇಳಿಸಲು ನೆರವಾಗುತ್ತದೆ
ಇದರಲ್ಲಿ ಕರಗುವ ಮತ್ತು ಕರಗದ ನಾರುಗಳು ಉತ್ತಮ ಪ್ರಮಾಣದಲ್ಲಿದ್ದು ಕ್ಯಾಲೋರಿಗಳು ಸಹಾ ಕಡಿಮೆ ಇರುವ ಕಾರಣ ತೂಕ ಇಳಿಸಲು ಉತ್ತಮವಾದ ಆಹಾರವಾಗಿದೆ. ನಾರಿನ ಪ್ರಮಾಣ ಹೆಚ್ಚಿರುವ ಕಾರಣ ಹೆಚ್ಚು ಹೊತ್ತು ಹೊಟ್ಟೆ ತುಂಬಿದಂತಿದ್ದು ಅನ್ಯ ಆಹಾರಗಳನ್ನು ತಿನ್ನದೇ ತೂಕ ಏರಿಕೆಗೆ ಕಡಿವಾಣ ಹಾಕಿದಂತಾಗುತ್ತದೆ.



Click it and Unblock the Notifications
