ಸೌಂದರ್ಯ ಕೇವಲ ಮುಖಕ್ಕೆ ಮಾತ್ರವಲ್ಲ, ಕುತ್ತಿಗೆಗೂ ಬೇಕು!

By Arshad

ನಮ್ಮ ದೇಹದ ಚರ್ಮದಲ್ಲಿ ಅತಿ ಹೆಚ್ಚು ಮಡಿಕೆಗಳು ಬೀಳುವ ಭಾಗಗಳಲ್ಲಿ ಕುತ್ತಿಗೆಯ ಚರ್ಮ ಪ್ರಮುಖವಾದುದು. ಪ್ರತಿಬಾರಿ ಬಗ್ಗುವಾಗ ಚರ್ಮ ಮಡಚಿಕೊಳ್ಳಲೇಬೇಕು. ಪರಿಣಾಮವಾಗಿ ಕುತ್ತಿಗೆಯ ಚರ್ಮದಲ್ಲಿ ಹಲವು ಅಡ್ಡಗೆರೆಗಳಿರುತ್ತವೆ. ಮುಖದ ಚರ್ಮದಷ್ಟೇ ಕುತ್ತಿಗೆಯ ಚರ್ಮವೂ ವ್ಯಕ್ತಿಯ ಸೌಂದರ್ಯವನ್ನು ವ್ಯಕ್ತಪಡುಸುವುದರಿಂದ ಕುತ್ತಿಗೆಯ ಚರ್ಮದ ಯಾವುದೇ ತೊಂದರೆ ಮುಜುಗರಕ್ಕೀಡು ಮಾಡಬಹುದು.

These 3 Natural Ingredients Can Make Your Neck Fairer In A Week!

ನಿಮ್ಮ ಹೊಸ ನೆಕ್ಲೇಸ್ ಅನ್ನು ನಿಮ್ಮ ಗೆಳತಿಯರಿಗೆ ತೋರಿಸಲು ಉತ್ಸುಕರಾಗಿರುವಾಗ ಕುತ್ತಿಗೆಯ ಚರ್ಮದ ಬಣ್ಣ ಗಾಢವಾಗಿರುವುದು ಕಂಡು ಬಂದರೆ ಹೇಗಾಗಬೇಡ! ಅಲ್ಲದೇ ಕುತ್ತಿಗೆಯ ಚರ್ಮವನ್ನು ಮರೆಮಾಚುವಂತೆಯೂ ಇಲ್ಲದಿರುವಾಗ ಕಟುಮಾತುಗಳನ್ನು ಎದುರಿಸಬೇಕಾದ ಸಂಭವವೂ ಇಲ್ಲದಿಲ್ಲ.

ಮೇಕಪ್ ಮೂಲಕ ಮರೆಮಾಚಬಹುದಾದರೂ ನೆನಪಿಲ್ಲದೇ ಕೆಳಕ್ಕೆ ಬಗ್ಗಿ ಬಳಿಕ ಮೇಲೆ ನೋಡಿದಾಗ ನೆರಿಗೆಗಳ ನಡುವೆ ಮೇಕಪ್ ಸಹಾ ಗೆರೆಗಳ ರೂಪ ಪಡೆಯುವುದು ಮುಜುಗರವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಈ ಮುಜುಗರಕ್ಕೆ ಒಳಗಾಗುವ ಬದಲು ಚರ್ಮದ ಬಣ್ಣವನ್ನೇ ಸಹಜವರ್ಣಕ್ಕೆ ಬರುವಂತೆ ಮಾಡುವುದು ಜಾಣತನ. ಅದರಲ್ಲೂ ಈ ಕೆಲಸಕ್ಕಾಗಿ ನೈಸರ್ಗಿಕ ವಿಧಾನವನ್ನು ಅನುಸರಿಸುವುದು ಇನ್ನಷ್ಟು ಜಾಣತನದ ಕ್ರಮವಾಗಿದೆ. ಕಪ್ಪು ಬಣ್ಣಕ್ಕೆ ತಿರುಗಿದ ಕುತ್ತಿಗೆಯ ಸಮಸ್ಯೆಗೆ-ಲಿಂಬೆಯ ಚಿಕಿತ್ಸೆ!

ಕುತ್ತಿಗೆ ಬಣ್ಣ ಗಾಢಗೊಳ್ಳಲು ಕೆಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾದುದು ಮುಖದ ಚರ್ಮಗೆ ನೀಡುವ ಸ್ವಚ್ಛತೆ ಮತ್ತು ಆರೈಕೆಯನ್ನು ಕುತ್ತಿಗೆಯ ಚರ್ಮಕ್ಕೆ ನೀಡದೇ ಇರುವುದು. ಕುತ್ತಿಗೆಯ ಮೇಲೆ ಒತ್ತಡ ಹಾಕಲು ಸಾಧ್ಯವಿಲ್ಲದ ಕಾರಣ ಉಜ್ಜದೇ ಆ ಭಾಗದಲ್ಲಿ ಸತ್ತ ಜೀವಕೋಶಗಳು ದಪ್ಪನಾಗಿ ಅಂಟಿಕೊಂಡಿರುವುದು, ಆದ್ರತೆಯ ಪ್ರಸಾಧನಗಳನ್ನು ಕುತ್ತಿಗೆಗೂ ಸವರುವುದನ್ನು ಮರೆಯುವುದು ಇತ್ಯಾದಿ ಕಾರಣಗಳಿವೆ.
ಆದರೆ ಈಗ ಈ ತೊಂದರೆಯನ್ನು ನಿವಾರಿಸಲು ಸಮರ್ಥವಾದ ಮನೆಮದ್ದು ಲಭ್ಯವಿದ್ದು ಒಂದೇ ವಾರದಲ್ಲಿ ಕುತ್ತಿಗೆಯ ಚರ್ಮದ ಬಣ್ಣವನ್ನು ಸಹಜವರ್ಣಕ್ಕೆ ತರಲು ಸಾಧ್ಯವಿದೆ. ಬನ್ನಿ, ಈ ವಿಧಾನವನ್ನು ಹೇಗೆ ಅನುಸರಿಸುವುದು ಎಂಬುದನ್ನು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು
*ಆಲಿವ್ ಎಣ್ಣೆ - 1 ದೊಡ್ಡಚಮಚ
*ಉಪ್ಪು - 2 ಚಿಕ್ಕ ಚಮಚ
*ಅಡುಗೆ ಸೋಡಾ - 1 ದೊಡ್ಡಚಮಚ

ಕುತ್ತಿಗೆಯ ಚರ್ಮದಲ್ಲಿ ಸಂಗ್ರಹವಾಗಿರುವ ಸತ್ತ ಜೀವಕೋಶಗಳ ಪದರವನ್ನು ನಿವಾರಿವುದು ಈ ಆರೈಕೆಯ ಕ್ರಮದ ಪ್ರಮುಖ ಭಾಗ. ಆಲಿವ್ ಎಣ್ಣೆ, ಉಪ್ಪು ಮತ್ತು ಅಡುಗೆ ಸೋಡಾದ ಮಿಶ್ರಣ ಈ ನಿಟ್ಟಿನಲ್ಲಿ ಸಮರ್ಥವಾದ ಆರೈಕೆ ನೀಡುತ್ತದೆ.

ಆಲಿವ್ ಎಣ್ಣೆಯಲ್ಲಿರುವ ವಿಟಮಿನ್ ಇ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಒಳಗೆ ಇಳಿದು ಅಡಿಯಿಂದ ಪೋಷಣೆ ನೀಡುತ್ತದೆ. ಉಪ್ಪು ಸತ್ತ ಜೀವಕೋಶಗಳನ್ನು ಸಡಿಲಿಸಿದರೆ ಅಡುಗೆ ಸೋಡಾ ಉತ್ತಮ ಬಿಳಿಚುಕಾರಕವಾಗಿದ್ದು ಗಾಢವಾಗಿದ್ದ ಚರ್ಮದ ವರ್ಣದ್ರವ್ಯಗಳನ್ನು ತಿಳಿಗೊಳಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ. ನಿತ್ಯವೂ ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ಒಂದೇ ವಾರದಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದು. ಕಪ್ಪಗಿನ ಕುತ್ತಿಗೆಯ ಸಮಸ್ಯೆಗೆ ಇಲ್ಲಿದೆ ಪವರ್‌ಫುಲ್ ಮನೆಮದ್ದು

ಈ ಮುಖಲೇಪವನ್ನು ತಯಾರಿಸುವ ವಿಧಾನ

*ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಯವಾದ ಲೇಪನ ತಯಾರಿಸಿ.
*ಈ ಲೇಪನವನ್ನು ಕುತ್ತಿಗೆಯ ಮೇಲೆ ತೆಳುವಾಗಿ ಹಚ್ಚಿ ಕುತ್ತಿಗೆಯ ಕೆಳಗಿನಿಂದ ಮೇಲೆ ಬರುವಂತೆ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿ.
ಬಳಿಕ ಈ ಲೇಪನವನ್ನು ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ.
*ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಬಳಿಕ ದಪ್ಪ ಟವೆಲ್‌ನಿಂದ ಒತ್ತಿಕೊಂಡು ಒರೆಸಿಕೊಳ್ಳಿ.
*ಪ್ರತಿದಿನ ಒಂದೇ ಅವಧಿಯಲ್ಲಿ ಕನಿಷ್ಠ ಒಂದು ವಾರ ಈ ಕ್ರಮವನ್ನು ಅನುಸರಿಸಿ.

English summary

These 3 Natural Ingredients Can Make Your Neck Fairer In A Week!

You buy a beautiful necklace and are ready to go out and flaunt it to your friends, then you notice the discolouration on your neck, which can totally ruin the moment for you! It can be rather embarrassing for a person, when he/she experiences skin discolouration in any part of the body, and the neck is one of the most easily visible parts!
X
Desktop Bottom Promotion