Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಲ್ಲುಗಳು ಬಿಳಿ ಇಲ್ಲವೆಂಬ ಚಿಂತೆಯೇ? ಇಲ್ಲಿದೆ ಸರಳ ಟಿಪ್ಸ್...
ನಗು ಹಾಗೂ ಹಲ್ಲುಗಳಿಗೆ ಬಿಡಿಸಲಾರದ ಬಂಧವಿದೆ. ಹಲ್ಲುಗಳಿಲ್ಲದೆ ನಗುವಿಲ್ಲ, ನಗುವಿಲ್ಲದೆ ಹಲ್ಲುಗಳಿಲ್ಲ ಎನ್ನಬಹುದು. ನಿಮ್ಮ ಹಲ್ಲುಗಳು ಫಲಫಲ ಹೊಳೆಯುತ್ತಿದ್ದರೆ ಆಗ ನೀವು ಪ್ರತಿಯೊಬ್ಬರೊಂದಿಗೆ ನಗುತ್ತಾ ಹಲ್ಲುಗಳನ್ನು ತೋರಿಸಲು ಪ್ರಯತ್ನಿಸುತ್ತೀರಿ. ಅದೇ ನಿಮ್ಮ ಹಲ್ಲುಗಳು ಹಳದಿಯಾಗಿದ್ದರೆ ಆಗ ಹಲ್ಲುಗಳನ್ನು ಆದಷ್ಟು ಮುಚ್ಚಲು ಪ್ರಯತ್ನ ಪಡುತ್ತೀರಿ. ಯಾವುದೇ ಫೋಟೋಗೆ ನಿಲ್ಲುವಾಗಲೂ ನೀವು ಹಲ್ಲುಗಳು ಕಾಣದಂತೆ ನಗೆ ಬೀರುತ್ತೀರಿ. ಹಲ್ಲುಗಳು ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗಲು ಕೆಲವು ಕಾರಣಗಳಿರಬಹುದು. ಮನೆಮದ್ದು ಬಳಸಿ ಹಳದಿ ಹಲ್ಲುಗಳಿಗೆ ವಿದಾಯ ಹೇಳಿ
ಬಾಯಿಯ ಸ್ಚಚ್ಛತೆ, ಧೂಮಪಾನ, ತಂಬಾಕು ಸೇವನೆ, ಅತಿಯಾಗಿ ಕಾಫಿ ಸೇವನೆ, ಅನುವಂಶೀಯತೆ, ದೇಹದಲ್ಲಿ ಪ್ರೋಟೀನ್ ಕೊರತೆ ಇತ್ಯಾದಿ. ಕಾರಣಗಳು ಏನೇ ಆಗಿದ್ದರು ಇಂತಹ ಹಲ್ಲುಗಳಿಂದ ಮುಜುಗರ ತಪ್ಪಿದಲ್ಲ ಮತ್ತು ನಗಲು ಯೋಚನೆ ಮಾಡಬೇಕಾಗುತ್ತದೆ. ಕೆಲವರು ಹಲ್ಲುಗಳನ್ನು ಬಿಳಿ ಮಾಡಲು ಹಣ ವೆಚ್ಚ ಮಾಡುತ್ತಾರೆ. ಆದರೆ ಹಣ ಉಳಿಸಿ ನಿಮ್ಮ ಹಲ್ಲುಗಳು ಬಿಳಿಯಾಗಬೇಕೆಂದರೆ ಬೋಲ್ಡ್ ಸ್ಕೈ ಹೇಳಿರುವಂತಹ ಸಲಹೆಗಳನ್ನು ಪಾಲಿಸಿ ಮನೆಯಲ್ಲಿಯೇ ಹಲ್ಲುಗಳನ್ನು ಬಿಳಿಯಾಗಿಸಿ. ಹಲ್ಲುಜ್ಜುವಾಗ ನೀವು ಏನೆಲ್ಲಾ ತಪ್ಪು ಮಾಡ್ತೀರ ಗೊತ್ತಾ?

ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟಾಶಿಯಂ ಮತ್ತು ಮೆಗ್ನಿಶಿಯಂ ಹೇರಳವಾಗಿರುವ ಕಾರಣದಿಂದ ನಿಯಮಿತವಾಗಿ ಹಲ್ಲುಗಳನ್ನು ಇದರಿಂದ ಉಜ್ಜಿದರೆ ಹಲ್ಲುಗಳು ಹೊಳೆಯುವುದು. ಬಾಳೆಹಣ್ಣಿನಲ್ಲಿರುವ ಪೊಟಾಶಿಯಂ ಮತ್ತು ಮೆಗ್ನಿಶಿಯಂ ಬ್ಲೀಚಿಂಗ್ ರೀತಿ ಕೆಲಸ ಮಾಡುತ್ತದೆ. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

ಆಪಲ್ ಸೀಡರ್ ವಿನೇಗರ್
ಆಪಲ್ ಸೀಡರ್ ವಿನೇಗರ್ ಹಲ್ಲುಗಳನ್ನು ಬಿಳಿಯಾಗಿಸುವುದು ಮಾತ್ರವಲ್ಲದೆ, ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಬ್ಯಾಕ್ಟೀರಿಯಾವು ಹಲ್ಲಿನಲ್ಲಿ ಕುಳಿಗಳು ಮತ್ತು ದದ್ದುಗಳನ್ನು ನಿರ್ಮಿಸುತ್ತದೆ.

ಅರಿಶಿನ
ಅರಿಶಿನದಿಂದ ಹಲ್ಲುಜ್ಜಿದರೆ ಹಲ್ಲುಗಳು ಬಿಳಿಯಾಗಿ ಹೊಳೆಯುತ್ತದೆ. ಅರಿಶಿನ ಹಲ್ಲುಗಳಿಗೆ ನೈಸರ್ಗಿಕ ಪಾಲಿಶ್ ನೀಡುವುದು.

ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯಲ್ಲಿ ಹಲ್ಲುಗಳನ್ನು ಉಜ್ಜಿದರೆ ಹಲ್ಲುಗಳು ಬಿಳಿಯಾಗಿ ಹೊಳೆಯುವುದು. ತೆಂಗಿನ ಎಣ್ಣೆಯು ಹಲ್ಲುಗಳಲ್ಲಿ ಇರುವ ದದ್ದುಗಳು ಮತ್ತು ಕೊಳೆಯನ್ನು ತೆಗೆದುಹಾಕಿ ಹಲ್ಲುಗಳು ಹೊಳಪನ್ನು ಪಡೆಯಲು ನೆರವಾಗುವುದು.

ಉಪ್ಪು
ಹಲ್ಲುಗಳಿಂದ ಕೊಳೆ ಮತ್ತು ದದ್ದುಗಳನ್ನು ತೆಗೆಯಲು ಉಪ್ಪು ಮತ್ತೊಂದು ಉತ್ತಮ ಸಾಮಗ್ರಿ. ಇದರಿಂದ ಹಲ್ಲನ್ನು ಉಜ್ಜಿದರೆ ಹಲ್ಲುಗಳಿಗೆ ಸ್ಕ್ರಬ್ ಮಾಡಿದಂತಾಗುತ್ತದೆ.

ಇದ್ದಿಲು
ಇದ್ದಿಲಿನಿಂದ ನಿಮ್ಮ ಹಲ್ಲುಗಳನ್ನು ಉಜ್ಜಿದರೆ ಕಲೆಗಳು ಮತ್ತು ಪದರಗಳು ಮಾಯವಾಗುವುದು. ಇದ್ದಿಲು ಆ್ಯಂಟಿಆಕ್ಸಿಡೆಂಟ್ ಆಗಿರುವ ಕಾರಣದಿಂದಾಗಿ ಅದು ಹಲ್ಲಿನಲ್ಲಿರುವ ಕಲೆಗಳನ್ನು ತೆಗೆದುಹಾಕುತ್ತದೆ.

ಲಿಂಬೆ ಹಣ್ಣು
ಒಂದು ಲಿಂಬೆ ಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿ. ನಂತರ ಈ ತುಂಡುಗಳನ್ನು ನೀರಿನಲ್ಲಿ ಮುಳುಗಿಸಿ. ಆ ನಂತರ ಈ ಮಿಶ್ರಣವನ್ನು ಹಲ್ಲುಗಳನ್ನು ಉಜ್ಜಲು ಬಳಸಿ. ಈ ಪರಿಹಾರವನ್ನು ವಾರಕ್ಕೊಮ್ಮೆ ಬಳಸುವುದರಿಂದ ನಿಮ್ಮ ಹಲ್ಲುಗಳು ಬೆಳ್ಳಗಾಗುತ್ತವೆ.

ಬೇವಿನ ಎಲೆ
ಒಂದು ಹಿಡಿ ಬೇವಿನ ಎಲೆಗಳನ್ನು ಜಜ್ಜಿ, ಅದನ್ನು ಹಾಲಿನೊಂದಿಗೆ ಬೆರೆಸಿ. ಇದನ್ನು ಒಂದು ದಪ್ಪವಾದ ಪೇಸ್ಟ್‌ನಂತೆ ಮಾಡಿಕೊಳ್ಳಿ ಮತ್ತು ಇದನ್ನು ನಿಮ್ಮ ಟೂಥ್‌ಪೇಸ್ಟಿನಿಂದ ಹಲ್ಲುಜ್ಜುವ ಮೊದಲು ಬಳಸಿ.

ಅಡುಗೆ ಸೋಡಾ
ಲಿಂಬೆರಸದೊಂದಿಗೆ ಬೇಕಿಂಗ್ ಸೋಡಾವನ್ನು (ಅಡುಗೆ ಸೋಡಾ) ಬೆರೆಸಿ ಒಂದು ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಹಲ್ಲುಗಳ ಮೇಲೆ ಲೇಪಿಸಿ. ಆದರೆ ಈ ಪರಿಹಾರವನ್ನು ಪ್ರತಿನಿತ್ಯ ಬಳಸಬೇಡಿ. ಏಕೆಂದರೆ ಇದರಿಂದ ನಿಮ್ಮ ಹಲ್ಲುಗಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗಬಹುದು ಮತ್ತು ಹಲ್ಲುಗಳು ಸೂಕ್ಷವಾಗುವ ಸಾಧ್ಯತೆಯಿರುತ್ತದೆ.

ಹಾಲು ಮತ್ತು ಮೊಸರಿನ ಮಿಶ್ರಣ
ಹಾಲು ಮತ್ತು ಮೊಸರಿನ ಮಿಶ್ರಣವನ್ನು ತಯಾರಿಸಿಕೊಳ್ಳಿ. ಕೆನೆಯಿಂದ ಕೂಡಿದ ಈ ಪದಾರ್ಥವನ್ನು ನಿಮ್ಮ ಹಲ್ಲಿನ ಮೇಲೆ ಲೇಪಿಸಿ, 15 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ಬಾಯಿಯನ್ನು ಮುಕ್ಕಳಿಸಿ. ಈ ಪರಿಹಾರವು ನಿಮ್ಮ ಹಲ್ಲುಗಳಿಗೆ ಬಿಳುಪನ್ನು ನೀಡುತ್ತವೆ. ಈ ಪರಿಹಾರವನ್ನು ವಾರದಲ್ಲಿ ಎರಡು ಬಾರಿ, ಹಗಲಿನ ಸಮಯದಲ್ಲಿ ಯಾವಾಗಲಾದರು ಪ್ರಯತ್ನಿಸಿ ನೋಡಬಹುದು.

ಬೇ ಎಲೆ ಅಥವಾ ಪಲಾವ್ ಎಲೆ
ಬೇ ಎಲೆ ಅಥವಾ ಪಲಾವ್ ಎಲೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಹಾಲನ್ನು ಬೆರೆಸಿಕೊಂಡು ಪೇಸ್ಟ್‌ನಂತೆ ಮಾಡಿಕೊಳ್ಳಿ. ಈ ಪೇಸ್ಟನ್ನು ಹಲ್ಲಿಗೆ ಹಚ್ಚಿ. 10 ನಿಮಿಷ ಬಿಟ್ಟು ಇದನ್ನು ಚೆನ್ನಾಗಿ ತೊಳೆಯಿರಿ. ವಾರದ ಮಟ್ಟಿಗೆ ಇದನ್ನು ಪುನರಾವರ್ತಿಸಿ.

ಆಲೀವ್ ಮತ್ತು ಬಾದಾಮಿ ಎಣ್ಣೆಯ ಮಿಶ್ರಣ
ಆಲೀವ್ ಮತ್ತು ಬಾದಾಮಿ ಎಣ್ಣೆಯ ಮಿಶ್ರಣವನ್ನು ಮಾಡಿಕೊಳ್ಳಿ. ಈ ಮಿಶ್ರಣವನ್ನು ಬೆಳಗ್ಗೆ ಎದ್ದ ಕೂಡಲೆ ನಿಮ್ಮ ಹಲ್ಲುಗಳಿಗೆ ಲೇಪಿಸಿ ಉಜ್ಜಿ. ಇದನ್ನು 5 ದಿನ ಸತತವಾಗಿ ಮಾಡುವುದರಿಂದ ನಿಮ್ಮ ಹಲ್ಲುಗಳು ಫಳಫಳ ಹೊಳೆಯುತ್ತವೆ.



Click it and Unblock the Notifications