Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒಡೆದ ಹಿಮ್ಮಡಿಗೆ ಸಾಂತ್ವನ ನೀಡುವ ಮನೆಮದ್ದು
ಬಿರುಕುಬಿಟ್ಟ ಹಿಮ್ಮಡಿಗಳು ನಡೆಯುವಾಗ ನೋವು ನೀಡುವುದರ ಜೊತೆಗೆ ಸಹಜ ಸೌಂದರ್ಯವನ್ನೂ ಕಳೆಗುಂದಿಸುತ್ತವೆ. ನಿಮ್ಮ ನೆಚ್ಚಿನ ಸ್ಯಾಂಡಲ್ ಪಾದರಕ್ಷೆಗಳನ್ನು ಧರಿಸಲು, ನಿಮ್ಮ ನೆಚ್ಚಿನ ಉಡುಗೆಯನ್ನು ತೊಡಲು ಮುಜುಗರವಾಗುತ್ತದೆ. ನೋವು ತಡೆಯಲು ನಡಿಗೆಯಲ್ಲಿ ಬದಲಾವಣೆ ಕಂಡುಬಂದು ಸುತ್ತಮುತ್ತಲಿನವರಲ್ಲಿ ಅನುಮಾನದಿಂದ ನೋಡಬಹುದೇ ಎಂಬ ದುಗುಡವೂ ಎದುರಾಗುತ್ತದೆ. ಇದರಿಂದ ಪಾರಾಗಲು ಈ ಬಿರುಕುಗಳನ್ನು ಮುಚ್ಚುವುದೇ ಆಗಿದೆ. ಆದರೆ ಅದಕ್ಕೂ ಮುನ್ನ ಈ ಬಿರುಕುಗಳು ಬಂದದ್ದಾದರೂ ಹೇಗೆ ಎಂಬುದನ್ನು ಕೊಂಚ ತಿಳಿದುಕೊಂಡರೆ ಉತ್ತಮ. ಮಳೆಗಾಲದಲ್ಲಿ ಕಾಡುವ ಪಾದಗಳ ದುರ್ವಾಸನೆಗೆ ಸರಳ ಟಿಪ್ಸ್
ನೈಸರ್ಗಿಕವಾಗಿ ನಮ್ಮ ಹಸ್ತ ಮತ್ತು ಪಾದಗಳ ಚರ್ಮ ಅತ್ಯಂತ ದಪ್ಪನಾಗಿರುತ್ತದೆ. (ಇದೇ ಕಾರಣಕ್ಕೆ ನೆನೆದಾಗ ಹಿಗ್ಗುವ ಚರ್ಮ ಮಡಿಕೆ ಮಡಿಕೆಯಾಗಿರುತ್ತದೆ). ಏಕೆಂದರೆ ನಡೆದಾಡಲು ಮತ್ತು ಒರಟು ಕೆಲಸಗಳನ್ನು ಮಾಡಲು ಈ ಚರ್ಮ ಅಗತ್ಯವಾಗಿದೆ. ನಡಿಗೆ ಮತ್ತು ಕೆಲಸದಿಂದ ಈ ಚರ್ಮ ಸವೆಯುತ್ತದೆ ಹಾಗೂ ಹೊಸ ಚರ್ಮ ಬೆಳೆಯುತ್ತದೆ. ಆದರೆ ಪಾದರಕ್ಷೆಗಳನ್ನು ಬಳಸುವ ನಮ್ಮ ಪಾದಗಳ ಚರ್ಮ ಸವೆಯದೇ ಒಳಗಿನಿಂದ ಹೊಸಚರ್ಮ ಬೆಳೆದ ನಂತರ ಹೊರಚರ್ಮ ಸೆಳೆತ ತಾಳದೇ ಬಿರಿಯುತ್ತದೆ. ಅಂದದ ಪಾದ ಪಡೆಯಲು ಆರೇ ಸ್ಟೆಪ್
ಅಷ್ಟೇ ಅಲ್ಲದೆ ಈ ಬಿರಿಕು ಚರ್ಮದ ಆಳಕ್ಕೆ ಇಳಿಯುವ ಕಾರಣ ಹೆಚ್ಚಾದರೆ ಒಳಗಣ ಹೊಸಚರ್ಮದಿಂದ ರಕ್ತ ಬರುವಂತೆ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ಗಾಳಿಯಲ್ಲಿನ ತೇವಾಂಶ ಇಲ್ಲದೇ ಒಣಹವೆಯಾಗುವ ಕಾರಣ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಇಲ್ಲದೇ ಹೊರಚರ್ಮ ಶೀಘ್ರವಾಗಿ ಒಣಗಿ ಬಿರುಕಿಗೆ ಕಾರಣವಾಗುತ್ತದೆ. ಈ ತೊಂದರೆಯಿಂದ ಹೊರಬರಲು ಕೆಲವು ಉಪಯುಕ್ತವಾದ ಮನೆಮದ್ದುಗಳನ್ನು ಇಲ್ಲಿ ವಿವರಿಸಲಾಗಿದೆ. ಮುಂದೆ ಓದಿ...

ಬೇವಿನ ಎಲೆಗಳು
ಆಯುರ್ವೇದದಲ್ಲಿ ಬಿರುಕುಬಿಟ್ಟ ಹಿಮ್ಮಡಿಗಳಿಗೆ ಬೇವಿನ ಎಲೆಗಳನ್ನು ಅರೆದು ಮಾಡಿದ ಲೇಪನವನ್ನು ಸವರಲು ತಿಳಿಸಲಾಗಿದೆ. ಕೆಲವು ಕಹಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅರೆಯಿರಿ. ಕೊಂಚ ನೀರು ಸೇರಿಸಿ ಮದರಂಗಿ ಹಚ್ಚುವಷ್ಟು ದಟ್ಟನೆಯ ಲೇಪನ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧಗಂಟೆಯವರೆಗೆ ಒಣಗಲು ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಬೇವು ಮತ್ತು ಅರಿಶಿನ ಎರಡೂ ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಶಕ್ತಿ ಪಡೆದಿರುವುದರಿಂದ ಶೀಘ್ರವೇ ಬಿರುಕುಬಿಟ್ಟ ಚರ್ಮ ಆರೋಗ್ಯಕರವಾಗಿ ಕಂಗೊಳಿಸುತ್ತದೆ. ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಮಾತ್ರ ಉಪಯೋಗಿಸಿದರೆ ಸಾಕು.

ಮೊಸರಿನ ರೆಸಿಪಿ
ತನ್ನ ತೇವಕಾರಕ ಹಾಗೂ ಸೂಕ್ಷ್ಮಾಣುಜೀವಿ ಪ್ರತಿಬ೦ಧಕ ಗುಣಧರ್ಮಗಳ ಕಾರಣದಿ೦ದಾಗಿ ಒಡೆದ ಹಿಮ್ಮಡಿಗಳಿಗೆ ಮನೆಮದ್ದಿನ ರೂಪದಲ್ಲಿ ಮೊಸರು ಚಿರಪರಿಚಿತವಾಗಿದೆ. ಬಿಳಿ ವಿನೆಗರ್ ನೊ೦ದಿಗೆ ಬೆರೆಸಿದಾಗ, ದ್ರಾವಣವು ಎಲ್ಲಾ ಮೃತ ಚರ್ಮವನ್ನೂ ನಿವಾರಿಸಿಬಿಡುತ್ತದೆ ಹಾಗೂ ಜೊತೆಗೆ ಬಿರುಕುಗಳ ಆಳದಲ್ಲಿ ಸ೦ಚಯಗೊ೦ಡಿರಬಹುದಾದ ಧೂಳುಕೊಳೆಗಳೆಲ್ಲವನ್ನೂ ತೊಡೆದುಹಾಕುತ್ತದೆ.

ಜೇನುತುಪ್ಪದ ಆರೈಕೆ
ಒಡೆದ ಹಿಮ್ಮಡಿಗಳಿಗಾಗಿ ಜೇನುತುಪ್ಪ ಹಾಗೂ ವಿನೆಗರ್‌ನ ಮಿಶ್ರಣವು ಚರ್ಚೆಯ ಮುಖ್ಯ ವಸ್ತುವಾಗಿದೆ. ಜೇನುತುಪ್ಪವು ಒಡೆದ ಹಿಮ್ಮಡಿಗಳಿಗೆ ತೇವಾ೦ಶವನ್ನು ಪೂರೈಸಿ, ಅವುಗಳ ಸೋ೦ಕುಗಳನ್ನು ನಿವಾರಿಸಿದರೆ, ಬಿಳಿ ವಿನೆಗರ್ ಮೃತ ಚರ್ಮವನ್ನು ತೊಡೆದುಹಾಕುತ್ತದೆ. ಈ ಮಿಶ್ರಣವನ್ನು ನಿಮ್ಮ ಪಾದಗಳಿಗೆ ಮಾಲೀಸು ಮಾಡಿಕೊಳ್ಳಿರಿ ಹಾಗೂ ಬಳಿಕ ಅದನ್ನು ಪಾದಗಳಲ್ಲಿಯೇ ಹಾಗೆಯೇ ಒಣಗಲು ಬಿಡಿರಿ. ಇದಾದ ಬಳಿಕ, ಹಿಮ್ಮಡಿಗಳ ಬಿರುಕುಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಿ೦ದ ತೊಳೆದುಬಿಡಿರಿ.

ಬಾಳೆಹಣ್ಣಿನ ಪೇಸ್ಟ್
ಒಂದು ದೊಡ್ಡ ಬಾಳೆಹಣ್ಣನ್ನು ಕಿವುಚಿ ಎರಡು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ಒಣಗಲು ಬಿಡಿ. ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ.

ಬಾಳೆಹಣ್ಣಿನ ಪೇಸ್ಟ್
ಬಾಳೆಹಣ್ಣು ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ನೀಡುವ ಕಾರಣ ಹೊರಚರ್ಮ ಶೀಘ್ರವಾಗಿ ಕಳಚಿಕೊಂಡು ಒಳಚರ್ಮಕ್ಕೆ ಆರೋಗ್ಯಕರವಾಗಿ ಬೆಳೆಯಲು ಅನುಕೂಲವಾಗುತ್ತದೆ. ಸಮಯದ ಆಭಾವವಿರುವವರು ಈ ವಿಧಾನವನ್ನು ಅನುಸರಿಸುವುದು ಒಳ್ಳೆಯದು.



Click it and Unblock the Notifications
