Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
ತೊಡೆ ಸಂದಿಯಲ್ಲಿ ಕಂಡುಬರುವ ನೋವಿಗೆ ಪರಿಹಾರ
ಸಾಮಾನ್ಯವಾಗಿ ನಡೆಯುವಾಗ ತೊಡೆಗಳ ಒಳಭಾಗಗಳು ಒಂದಕ್ಕೊಂದು ಉಜ್ಜುವುದರಿಂದ ಆ ಭಾಗ ಉಳಿದೆಡೆಗಿಂತ ಹೆಚ್ಚು ಗಾಢವರ್ಣವನ್ನು ಪಡೆದಿರುತ್ತದೆ. ಇದನ್ನು ತಡೆಗಟ್ಟಲು ನಮ್ಮ ಮನೆಯಲ್ಲಿಯೇ ಹಲವು ನೈಸರ್ಗಿಕ ಔಷಧಿಗಳಿವೆ.
ಲಿಂಬೆ, ಅರಿಶಿನ, ಕಡಲೆಹಿಟ್ಟು, ಆಲೋವೆರಾ, ಆಲಿವ್ ಎಣ್ಣೆ ಮೊದಲಾದವು ಈ ಗಾಢ ವರ್ಣವನ್ನು ಕಡಿಮೆಯಾಗಿಸಲು ಸಹಕರಿಸುತ್ತವೆ. ಪರಿಣಾಮಕಾರಿಯಾಗಿರುವ ಕೆಲವು ವಿಧಾನಗಳನ್ನು ಕೆಳಗೆ ವಿವರಿಸಲಾಗಿದೆ. ಪುರುಷರು ಹಾಗೂ ಮಹಿಳೆಯರೂ ಈ ವಿಧಾನಗಳನ್ನು ಸುರಕ್ಷಿತವಾಗಿ ಅನುಸರಿಸಬಹುದು.
ಮಳೆಗಾಲದಲ್ಲಿ ನಿಮ್ಮ ಪಾದಗಳ ಆರೈಕೆಗೆ ಸೂಕ್ತ ಸಲಹೆಗಳು

ಲಿಂಬೆಹಣ್ಣು
ಸತ್ತ ಜೀವಕೋಶಗಳನ್ನು ಚರ್ಮದ ಮೇಲಿನಿಂದ ತೆಗೆಯಲು ಲಿಂಬೆಹಣ್ಣು ಸೂಕ್ತವಾಗಿದೆ. ಆದರೆ ಲಿಂಬೆರಸ ಆಮ್ಲೀಯವಾದುದರಿಂದ ನೇರವಾಗಿ ಚರ್ಮಕ್ಕೆ ಹಚ್ಚಬಾರದು. ನೇರವಾಗಿ ಹಚ್ಚಿದರೆ ಚರ್ಮ ಸುಟ್ಟು ಕೆಂಪುಬಣ್ಣಕ್ಕೆ ತಿರುಗುತ್ತದೆ. ಸುಮಾರು ಒಂದು ಹನಿಗೆ ಎರಡರಿಂದ ನಾಲ್ಕು ಹನಿಯಷ್ಟು ನೀರನ್ನು ಸೇರಿಸಿ ಸುಮಾರು ಐದು ನಿಮಿಷಗಳ ವರೆಗೆ ನಯವಾಗಿ ಮಸಾಜ್ ಮಾಡುವುದರಿಂದ ಗಾಢವರ್ಣ ಕಡಿಮೆಯಾಗುತ್ತಾ ಬರುತ್ತದೆ. ಬಳಿಕ ನೀರಿನಿಂದ ತೊಳೆದುಕೊಂಡು ಬಿಡಬೇಕು.

ಆಲೋವೆರಾ ರಸದ ಮಿಶ್ರಣದೊಂದಿಗೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ
ಚರ್ಮ ಕಳೆದುಕೊಂಡಿರುವ ನೈಸರ್ಗಿಕ ಹೊಳಪನ್ನು ನೀಡಲು ಆಲೋವೆರಾದಲ್ಲಿ ಹಲವು ಆಂಟಿ ಆಕ್ಸಿಡೆಂಟ್ ಗಳಿರುವ ಕಾರಣ ಶೀಘ್ರವೇ ಚರ್ಮ ಶ್ವೇತವರ್ಣ ಪಡೆಯುವುದು. ಪ್ರತಿದಿನ ಈ ಮಸಾಜ್ ಮುಂದುವರೆಸಿದರೆ ಕೆಲವೇ ದಿನಗಳಲ್ಲಿ ಉತ್ತಮ ಪರಿಣಾಮ ಕಾಣಬಹುದು.

ಟೊಮೇಟೊ ಹಣ್ಣಿನ ರಸ
ಇತ್ತೀಚಿನ ದಿನಗಳಲ್ಲಿ ಟೊಮೇಟೊ ಕೂಡಾ ಸೌಂದರ್ಯವರ್ಧಕವಾಗಿ ಹೆಸರು ಪಡೆಯುತ್ತಿದೆ. ಟೊಮೇಟೊದಲ್ಲಿಯೂ ಚರ್ಮದ ಗಾಢವರ್ಣ ನಿವಾರಿಸುವ ಆಂಟಿ ಆಕ್ಸಿಡೆಂಟ್ ಇರುವುದು ತಿಳಿದುಬಂದಿದೆ. ಟೊಮೇಟೊ ಹಣ್ಣಿನ ಸಿಪ್ಪೆ, ಬೀಜಗಳನ್ನು ಬೇರ್ಪಡಿಸಿ ಕೇವಲ ರಸವನ್ನು ಮಾತ್ರ ಬೇರ್ಪಡಿಸಿ. ಈ ದ್ರವ್ಯವನ್ನು ಚರ್ಮದ ಮೇಲೆ ಹಚ್ಚಿ ಸುಮಾರು ಐದು ನಿಮಿಷಗಳವರೆಗೆ ಮಸಾಜ್ ಮಾಡಿಕೊಂಡು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಬೇಕು. ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಬೇಕು. ನಿರ್ಜೀವ ಜೀವಕೋಶಗಳನ್ನು ನಿವಾರಿಸಿ ಹೊಸ ಚರ್ಮ ಬೆಳೆಸುವಲ್ಲಿ ಟೊಮೇಟೊ ಫಲಕಾರಿಯಾಗಿದೆ.

ಸೌತೆಕಾಯಿ
ಸೌತೆಕಾಯಿಯನ್ನು ತೆಳುವಾದ ಹೋಳುಗಳನ್ನಾಗಿ ಕತ್ತರಿಸಿ ಚರ್ಮದ ಮೇಲೆ ನಯವಾಗಿ ಸುಮಾರು ಹತ್ತು ನಿಮಿಷಗಳವರೆಗೆ ಉಜ್ಜುತ್ತಾ ಬರಬೇಕು. ಸೌತೆಯೊಂದಿಗೆ ಕೆಲವು ಹನಿ ಲಿಂಬೆರಸವನ್ನು ಸೇರಿಸಿದರೆ ಹೆಚ್ಚು ಪರಿಣಾಮಕಾರಿಯಾಗಿದೆ. ಸೌತೆಯಲ್ಲಿ ಹೆಚ್ಚಿನ ನೀರಿನ ಅಂಶವಿರುವುದರಿಂದ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ದೊರಕುತ್ತದೆ.

ಪಪ್ಪಾಯಿ ಹಣ್ಣು
ಪಪ್ಪಾಯಿ ಹಣ್ಣಿನಲ್ಲಿಯೂ ಚರ್ಮಕ್ಕೆ ಅಗತ್ಯವಾದ ಹಲವು ಅಂಶಗಳಿವೆ. ಪಪ್ಪಾಯಿ ಹಣ್ಣಿನ ತಿರುಳನ್ನು ಬೇರ್ಪಡಿಸಿ ಮತ್ತು ಪಪ್ಪಾಯಿ ಹಣ್ಣಿನ ರಸವನ್ನು ಚರ್ಮದ ಮೇಲೆ ಮಸಾಜ್ ಮಾಡಿಕೊಂಡು ಸುಮಾರು ಇಪ್ಪತ್ತು ನಿಮಿಷದ ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಂಡರೆ ಉತ್ತಮ ಪರಿಣಾಮವನ್ನು ಪಡೆಯಬಹುದು.

ಜೇನುತುಪ್ಪ
ಜೇನುತುಪ್ಪವನ್ನು ಗಾಢವರ್ಣದ ಮೇಲೆ ಹಚ್ಚಿ ಸುಮಾರು ಐದು ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಟ್ಟು ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಂಡರೆ ಪರಿಣಾಮ ಕಂಡುಬರುತ್ತದೆ. ಈ ವಿಧಾನದಲ್ಲಿ ಜೇನುತುಪ್ಪ ಎಲ್ಲೂ ಕೂದಲಿಗೆ ತಗುಲದಿರುವಂತೆ ಎಚ್ಚರಿಕೆ ವಹಿಸಬೇಕು. ತಗುಲಿದರೆ ಆ ಭಾಗದ ಕೂದಲು ಬೆಳ್ಳಗಾಗುವ ಸಂಭವವಿರುತ್ತದೆ.

ಆಲೂಗಡ್ಡೆ
ಆಲುಗಡ್ಡೆಯಲ್ಲಿರುವ ಕ್ಯಾಟೆಕೊಲೇಸ್ ಎಂಬ ಕಿಣ್ವ ಚರ್ಮದ ಗೌರವರ್ಣಕ್ಕೆ ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ. ಆಲುಗಡ್ಡೆಯ ಸಿಪ್ಪೆ ಸುಲಿದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ದ್ರವ್ಯದಿಂದ ರಸವನ್ನು ಹಿಂಡಿ ತೆಗೆಯಬೇಕು. ಈ ರಸವನ್ನು ಗಾಢವರ್ಣಕ್ಕೆ ಹಚ್ಚಿ ಒಣಗಲು ಬಿಡಬೇಕು. ರಾತ್ರಿ ಒಣಗಲು ಬಿಟ್ಟು ಬೆಳಿಗ್ಗೆ ಸ್ನಾನ ಮಾಡಿಕೊಂಡರೆ ಉತ್ತಮ ಪರಿಣಾಮ ಪಡೆಯಬಹುದು.

ಅರಿಶಿನ ಮತ್ತು ಕಿತ್ತಲೆಹಣ್ಣಿನ ರಸ
ಅರಿಶಿನ ಮತ್ತು ಕಿತ್ತಲೆಹಣ್ಣಿನ ರಸಗಳ ಮಿಶ್ರಣವೂ ಪರಿಣಾಮಕಾರಿಯಾಗಿದೆ. ಕಿತ್ತಲೆಯಲ್ಲಿನ ವಿಟಮಿನ್ ಸಿ ಹಾಗೂ ಅರಿಶಿನದ ನೈಸರ್ಗಿಕ ಗೌರವರ್ಣ ನೀಡುವ ಅಂಶಗಳು ಜೊತೆಯಾಗಿ ಕೆಲಸ ಮಾಡುವುದರಿಂದ ಉತ್ತಮ ಪರಿಣಾಮ ಪಡೆಯಬಹುದು. ಸಮಪ್ರಮಾಣದ ಅರಿಶಿನದ ಪುಡಿ ಹಾಗೂ ಕಿತ್ತಲೆರಸ ಸೇರಿಸಿ ದ್ರವ್ಯವನ್ನು ತಯಾರಿಸಿಟ್ಟುಕೊಳ್ಳಬೇಕು. ಈ ದ್ರವ್ಯವನ್ನು ಗಾಢವರ್ಣದ ಮೇಲೆ ಹಚ್ಚಿ ಕೆಲಕಾಲ ಒಣಗಲು ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು. ಕೆಲವೇ ದಿನಗಳಲ್ಲಿ ಉತ್ತಮ ಪರಿಣಾಮವನ್ನು ಪಡೆಯಬಹುದು.



Click it and Unblock the Notifications