Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಒಣ ಕಣ್ನಿನ ರಕ್ಷಣೆಗೆ ತಜ್ಞರ ಟಿಪ್ಸ್‌ಗಳು
ಕಣ್ಣುಗಳು ದೇಹದ ಅತೀ ಪ್ರಾಮುಖ್ಯ ಅಂಗಗಳಲ್ಲಿ ಒಂದಾಗಿದೆ. ಆದರೆ ಕೆಲವು ಮಂದಿಗೆ ಕಣ್ಣುಗಳು ಪ್ರಯಾಸ, ಉರಿಯುವ ಅನುಭವವಾಗುತ್ತದೆ. ಹೀಗೆ ನಿಮಗೆ ಮಾತ್ರ ಆಗುವುದಲ್ಲ. ಕಣ್ಣಿನ ಶುಷ್ಕತೆಯೆಂದರೆ ಕಣ್ಣೀರನ್ನು ಉತ್ಪಾದಿಸುವ ಕಣ್ಣಿನ ರೆಪ್ಪೆಯೊಳಗಿನ ನಾಳಗಳು ಒಣಗಿ ಹೋಗುವುದು.
ಚಳಿಗಾಲದಲ್ಲಿ ಈ ಸಮಸ್ಯೆ ಅತಿಯಾಗಿ ಕಾಡುತ್ತದೆ. ಚಳಿಗಾಲದಲ್ಲಿನ ತಂಪಾದ ಶುಷ್ಕ ಗಾಳಿ ಮತ್ತು ಒಳಗಿನ ಶುಷ್ಕ ಉಷ್ಣತೆ ಇದಕ್ಕೆ ಕಾರಣ. ಕಣ್ಣಿನ ಚಟುವಟಿಕೆಯಲ್ಲಿ ಕಣ್ಣೀರು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ಕಣ್ಣಿನ ರೆಪ್ಪೆಗಳಿಗೆ ಕಣ್ಣಗುಡ್ಡೆಯ ಮೇಲೆ ಜಾರಲು ತೈಲಲೇಪನ ನೀಡುತ್ತದೆ. ಕಣ್ಣೀರು ಕಣ್ಣಗುಡ್ಡೆಗಳು ತೇವಾಂಶದಿಂದ ಇರುವಂತೆ ಮಾಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೊಡವೆ ಮುಕ್ತ ತ್ವಚೆಗಾಗಿ ಸರಳ ಪರಿಹಾರಗಳು
ಒಣ ಕಣ್ಣುಗಳಿಂದ ದೃಷ್ಟಿಯ ರೆಸಲ್ಯೂಶನ್ ಕಡಿಮೆಯಾಗಬಹುದು ಮತ್ತು ಕೆಲವೊಂದು ಸಂದರ್ಭಗಳಲ್ಲಿ ಇದು ಕಣ್ಣಗುಡ್ಡೆಗೆ ಹಾನಿಯನ್ನುಂಟು ಮಾಡಬಹುದು. ಮಂದ ದೃಷ್ಟಿಯಿಂದ ದೈನಂದಿನ ಕೆಲಸಗಳನ್ನು ಮಾಡಿದರೆ ಆಗ ಅಪಾಯ ಹೆಚ್ಚಾಗುವ ಸಾಧ್ಯತೆಗಳಿವೆ.

ಇತ್ತೀಚಿನ ವರದಿಗಳ ಪ್ರಕಾರ 50ರ ಹರೆಯದ ಮೇಲ್ಪಟ್ಟ ಜನರಲ್ಲಿ ಹೆಚ್ಚಾಗಿ ಒಣ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಈ ವೇಳೆಗೆ ಮುಟ್ಟು ನಿಲ್ಲುವುದರಿಂದ ಒಣ ಕಣ್ಣಿನ ಸಮಸ್ಯೆ ಅವರನ್ನು ಅತಿಯಾಗಿ ಬಾಧಿಸುತ್ತದೆ.
ಒಣ ಕಣ್ಣಿನ ಗುಣಲಕ್ಷಣಗಳನ್ನು ಗುರುತಿಸಿ:
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಟೊಮೇಟೊ ರಸದಿಂದ ಚರ್ಮ ರಕ್ಷಣೆ
1. ಕಣ್ಣು ಒಣಗಿದಂತಾಗುವುದು ಅಥವಾ ತುರಿಕೆ ಕಾಣಿಸುವುದು.
2. ಇಡೀ ದಿನ ಕಣ್ಣಿನಲ್ಲಿ ಕಿರಿಕಿರಿಯಾಗುವುದು.
3. ದಿನದ ಅಂತ್ಯದಲ್ಲಿ ಕಣ್ಣುಗಳಲ್ಲಿ ಆಯಾಸ ಮತ್ತು ಕೆಂಪಾಗುವುದು.
4. ದಿನದ ಅಂತ್ಯದ ವೇಳೆಗೆ ದೃಷ್ಟಿ ಸರಿಯಾಗಿ ಕಾಣದಿರುವುದು.
ಚಿಕಿತ್ಸೆಗಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ಒರಟಾದ ಚಳಿಗಾಲದಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಇಲ್ಲಿ ಕೆಲವೊಂದು ಸಲಹೆಗಳಿವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎಣ್ಣೆ ಮತ್ತು ಸೂಕ್ಷ್ಮ ತ್ವಚೆಗಾಗಿ ಫೇಶಿಯಲ್ ಆಯಿಲ್
1. ಶೀತಗಾಳಿ ಮತ್ತು ಅತಿಯಾದ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಲು ಸನ್ ಗ್ಲಾಸ್ ಹಾಕಿ.
2. ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದರೆ ಆಗ ವೈದ್ಯರನ್ನು ಭೇಟಿಯಾದರೆ ಅವರು ನಿಮಗೆ ತೈಲಲೇಪಿತ ಮುಲಾಮ್ ಶಿಫಾರಸು ಮಾಡಬಹುದು. ಇದನ್ನು ಮಲಗುವ ಮೊದಲು ಹಚ್ಚಬೇಕು.
3. ನಿಮ್ಮ ಹೀಟರ್ ಜೊತೆಗೆ ಆರ್ದ್ರಕ ಬಳಸಿ, ಇದರಿಂದ ಒಳಗಿನ ಗಾಳಿಯು ತೇವಾಂಶ ಪಡೆಯುತ್ತದೆ. ನಿಮ್ಮ ಕಣ್ಣುಗಳಿಗೆ ಹೆಚ್ಚಿನ ತೇವಾಂಶ ನೀಡಲು ವಿಶೇಷವಾಗಿ ಸಿಗುವಂತಹ ಗ್ಲಾಸ್ ಗಳನ್ನು ಬಳಸಿ. ಇದು ನಿಮ್ಮ ಕಣ್ಣಿನ ಸುತ್ತ ತೇವಾಂಶದ ಕೋಣೆ ರಚಿಸುತ್ತದೆ.
4. ದಿನವಿಡಿ ಕೆಲಸದ ಬಳಿ ಅಥವಾ ನಿಮ್ಮ ಕಣ್ಣುಗಳಿಗಳಿಗೆ ಆಯಾಸವಾಗಿದೆಯೆಂದು ನಿಮಗನಿಸಿದರೆ ಆಗ ನೀವು ಕಣ್ಣಿನ ರೆಪ್ಪೆಯ ಮೇಲೆ ಕೆಲವು ನಿಮಿಷಗಳ ಕಾಲ ಒದ್ದೆ ಬಟ್ಟೆ ಹಾಕಿ. ಇದರಿಂದ ದಣಿವು ಕಡಿಮೆಯಾಗುತ್ತದೆ.
5. ನಿಮ್ಮ ಆಹಾರ ಕ್ರಮಕ್ಕೆ ಒಮೆಗಾ-3 ಕೊಬ್ಬಿನಾಮ್ಲ ಅಥವಾ ಮೀನಿನ ಎಣ್ಣೆಯ ಪೂರಕಗಳನ್ನು ಬಳಸಿ.
6. ಮನೆಯ ವಾತಾವರಣವನ್ನು ಶೇ. 30ರಿಂದ 50ರಷ್ಟು ತೇವಭರಿತವಾಗಿ ಇಡಿ.
7. ಹೆಚ್ಚು ದ್ರವ ಆಹಾರ ಸೇವಿಸಿ ಮತ್ತು ದೇಹವನ್ನು ತೇವಾಂಶದಿಂದ ಇಡಿ.
8. ಸಾಮಾನ್ಯವಾಗಿ ಕುಡಿಯುವ ಟೀ ಬದಲು ಗ್ರೀನ್ ಟೀ ಅಥವಾ ಸೇವಂತಿಗೆ ಟೀ ಕುಡಿಯಿರಿ. ಇದು ಕಣ್ಣುಗಳಿಗೆ ಲಾಭಕಾರಿ ಮತ್ತು ಕಣ್ಣಿನ ದಣಿವು ಕಡಿಮೆ ಮಾಡುತ್ತದೆ.



Click it and Unblock the Notifications
