Latest Updates
-
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್!
ಹೈ ಹೀಲ್ಸ್ ನಿಮ್ಮ ಪಾದಗಳಿಗೆ ಮುಳ್ಳಾಗದಿರಲಿ

ಹೈ ಹೀಲ್ ಅಥವಾ ಪೆನ್ಸಿಲ್ ಹೀಲ್ ಧರಿಸುವುದರಿಂದ ಆಗುವ ತೊಂದರೆ:
1. ನಡೆಯುವುದು ಕಷ್ಟ: ಹೈ ಹೀಲ್ಸ್ ಧರಿಸುವುದರಿಂದ ನಡೆಯುವುದು ಕಷ್ಟ. ಹೈ ಹೀಲ್ಸ್ ನೊಂದಿಗೆ ದೇಹವನ್ನು ಬ್ಯಾಲೆನ್ಸ್ ಮಾಡಿ ನಡೆಯುವುದು ಸುಲಭವಲ್ಲ. ಸಮತೋಲನ ತಪ್ಪಿದರೆ ಬೀಳುವುದು ಗ್ಯಾರಂಟಿ. ಇದು ನಿರಂತರವಾದರೆ ವಯಸ್ಸಾಗುವ ಮುನ್ನವೇ ಕೀಲು ನೋವಿನಿಂದ ಬಳಲಬೇಕಾದ ಪರಿಸ್ಥಿತಿ ಬರುತ್ತದೆ.
2. ಉಳುಕಿನ ತೊಂದರೆ: ನೀವು ಹೈ ಹೀಲ್ಸ್ ತೊಡಲು ಆರಂಭಿಸಿದ್ದೀರ ಎಂದರೆ ಖಂಡಿತ ಒಂದಲ್ಲಾ ಒಂದು ಬಾರಿ ಉಳುಕು ಸಂಭವಿಸಿಯೇ ಇರುತ್ತೆ. ಆದ್ದರಿಂದ ಹೈ ಹೀಲ್ಸ್ ತೊಡಲೇ ಬೇಕೆಂದಿದ್ದರೆ ಚೆನ್ನಾಗಿ ಅಭ್ಯಾಸ ಮಾಡಿದ ನಂತರವಷ್ಟೇ ತೊಟ್ಟುಕೊಳ್ಳಿ ಮತ್ತು ಗುಂಡಿ ಹಳ್ಳವಿರುವ ರಸ್ತೆಯಲ್ಲಿ ನಡೆಯಬೇಕಾದ ಪರಿಸ್ಥಿತಿ ಬಂದರೆ ಹೈ ಹೀಲ್ಸ್ ಬದಲಾಗಿ ಬೇರೆ ರೀತಿಯ ಪಾದರಕ್ಷೆಗಳನ್ನು ಧರಿಸಬಹುದು.
3. ಹಿಮ್ಮಡಿ ನೋವು: ಹೈ ಹೀಲ್ಸ್ ಧರಿಸಿದರೆ ಇಡೀ ದೇಹದ ಭಾರ ಹಿಮ್ಮಡಿ ಮೇಲಷ್ಟೆ ಬೀಳುತ್ತದೆ. ಹೆಚ್ಚು ಕಾಲ ಧರಿಸಿದರೆ ಹಿಮ್ಮಡಿ ನೋವು ಬರುವುದು ಖಚಿತ. ಇದು ತಕ್ಷಣವೇ ಕಾಣಿಸಿಕೊಳ್ಳದಿದ್ದರೂ ನಂತರ ನೋವಾಗಿ ಕಾಡಲು ಶುರುವಾಗುತ್ತದೆ.
4. ಬೆನ್ನು ನೋವು: ಹೈ ಹೀಲ್ಸ್ ತೊಟ್ಟರೆ ನಿಮ್ಮ ದೇಹ ಮುಂದಕ್ಕೆ ಬಾಗುವಂತಾಗಿ, ದೇಹದ ಹಿಂಭಾಗಕ್ಕೆ ಹೆಚ್ಚು ಒತ್ತಡ ಹೇರುವಂತಾಗುತ್ತದೆ. ಇದರಿಂದ ಬೆನ್ನು ನೋವು ಆರಂಭವಾಗುತ್ತದೆ. ನೀವು ನಡೆಯುವ ಶೈಲಿ, ವ್ಯಾಯಾಮ ಮತ್ತು ಯೋಗಾಭ್ಯಾಸದಿಂದ ಬೆನ್ನು ನೋವನ್ನು ಕಡಿಮೆಗೊಳಿಸಬಹುದು.
5. ಹಿಮ್ಮಡಿ ಒಡೆಯುವುದು: ಪೆನ್ಸಿಲ್ ಹೀಲ್ಸ್ ಧರಿಸುವುದರಿಂದ ದೇಹದ ಭಾರ ಪಾದಗಳ ಮೇಲೆ ಬಿದ್ದು ಒಡೆಯುತ್ತದೆ. ಮತ್ತು ಹಿಮ್ಮಡಿಯ ಬಣ್ಣ ಹಳದಿಯಾಗಿ ತಿರುಗುತ್ತದೆ. ಆದ್ದರಿಂದ ರಾತ್ರಿ ಹೊತ್ತು ಕಾಲುಗಳಿಗೆ ಲೋಶನ್ ಹಚ್ಚಿದರೆ ಹಿಮ್ಮಡಿಯನ್ನು ಮೃದುವಾಗುವಂತೆ ನೋಡಿಕೊಳ್ಳುತ್ತದೆ.
ಹೈ ಹೀಲ್ಸ್ ನಿಂದ ಉಪಯೋಗ ಮತ್ತು ಅನುಪಯೋಗ ಎರಡೂ ಇದೆ. ಹೈ ಹೀಲ್ಸ್ ಸುಂದರವಾಗಿ ಕಾಣಲು ಧರಿಸಬಹುದು. ಆದರೆ ನಿರಂತರವಾಗಿ ಬಳಸುವುದರಿಂದ ತೊಂದರೆಗೆ ಈಡಾಗುವುದರಲ್ಲಿ ಎರಡು ಮಾತಿಲ್ಲ. ಇದರ ಪರಿಣಾಮ ವಯಸ್ಸಾದ ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ.



Click it and Unblock the Notifications
