Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹಬ್ಬಕ್ಕೆ ಎಣ್ಣೆ ಸ್ನಾನ ಮಾಡೋದು ಯಾಕೆ ಗೊತ್ತಾ?

ಎಣ್ಣೆ ಸ್ನಾನ ಮತ್ತು ಬಿಸಿ ನೀರಿನ ಸ್ನಾನದಿಂದ ಇರುವ ಉಪಯೋಗವನ್ನು ತಿಳಿದುಕೊಳ್ಳಿ:
1. ಬಿಸಿ ನೀರಿನ ಸ್ನಾನ ತ್ವಚೆಯನ್ನು ಸಾಂದ್ರಗೊಳಿಸಿ ಕ್ರಿಮಿಗಳ ವಿರುದ್ಧ ಹೋರಾಡಲು ಅನುಕೂಲ ಮಾಡಿಕೊಡುತ್ತದೆ. ಎಣ್ಣೆಯನ್ನು ದೇಹಕ್ಕೆ ಲೇಪಿಸಿಕೊಂಡು ಮಸಾಜ್ ಮಾಡುವುದರಿಂದ ರಕ್ತ ಸಂಚಲನ ಹೆಚ್ಚಾಗಿ ಆರೋಗ್ಯವೂ ಚೆನ್ನಾಗಿರುತ್ತದೆ ಮತ್ತು ತ್ವಚೆಯೂ ಶುದ್ಧವಿರುತ್ತದೆ.
2. ಬಿಸಿ ನೀರಿನ ಸ್ನಾನ ಮಾಡುವಾಗ ದೊರೆಯುವ ಆವಿಯು ದೇಹದ ದುರ್ಗಂಧವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಚರ್ಮದ ಜೀವಕಣಗಳು ಶುದ್ಧಗೊಂಡು ತ್ವಚೆಯು ಆರಾಮವಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ.
3. ದೇಹದ ಹಿಂಭಾಗ, ಬೆನ್ನು, ಭುಜ ಮುಂತಾದ ಜಾಗಗಳು ಅಷ್ಟೇನೂ ಸೂಕ್ಷ್ಮವಲ್ಲದ ಕಾರಣ ಬಿಸಿ ನೀರನ್ನು ಹಾಕಿಕೊಂಡರೆ ತೊಂದರೆಯಿಲ್ಲ. ಇದು ಮೂಳೆಗಳಲ್ಲಿ ಮತ್ತು ಕೀಲುಗಳಲ್ಲಿನ ನೋವು ಮತ್ತು ಉರಿಯನ್ನು ಉಪಶಮನಗೊಳಿಸುತ್ತದೆ. ಆದರೆ ಮುಖಕ್ಕೆ ಮತ್ತು ತಲೆಯ ಬುಡಕ್ಕೆ ಬಿಸಿ ನೀರನ್ನು ಹಾಕಿಕೊಳ್ಳುವುದು ಬೇಡ. ಹೆಚ್ಚು ಬಿಸಿ ನೀರನ್ನು ತಲೆಗೆ ಹಾಕಿಕೊಂಡರೆ ಕೂದಲು ಉದುರಬಹುದು.
4. ಬಿಸಿ ನೀರಿನ ಸ್ನಾನ ಚರ್ಮವನ್ನು ಮೃದುಗೊಳ್ಳುವಂತೆ ಮಾಡುತ್ತದೆ. ಎಣ್ಣೆ ಸ್ನಾನ ಮಾಡುವವರು ಎಣ್ಣೆಗೆ ಸ್ವಲ್ಪ ಅರಿಶಿನ ಬೆರೆಸಿ ಹಚ್ಚಿಕೊಂಡು ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ನೈಸರ್ಗಿಕವಾಗಿ ತ್ವಚೆಯನ್ನು ಕಾಂತಿಯುತಗೊಳಿಸಿ ದೇಹದ ದುರ್ಗಂಧವನ್ನೂ ತೊಲಗುವಂತೆ ಮಾಡುತ್ತದೆ. ಹಾಗೆಯೇಚರ್ಮಕ್ಕೆ ಸಂಬಂಧಿಸಿದಂತೆ ಅನೇಕ ರೋಗಗಳು ಬರುವುದನ್ನೂ ತಡೆಯುತ್ತದೆ.
ಎರಡು ವಾರಕ್ಕೊಮ್ಮೆಯಾದರೂ ಬಿಸಿ ನೀರಿನ ಸ್ನಾನ ದೇಹಕ್ಕೆ ಒದಗಿದರೆ ಒಳ್ಳೆಯದು. ಇದು ದೇಹವನ್ನು ಪ್ರಶಾಂತಗೊಳಿಸುವುದಷ್ಟೇ ಅಲ್ಲ ಮನಸ್ಸನ್ನೂಉಲ್ಲಸಿತಗೊಳಿಸುತ್ತದೆ. ಜೊತೆಗೆ ಆರೋಗ್ಯವನ್ನೂ ಕಾಪಾಡುತ್ತದೆ. ಹೇಗೂ ನಾಳೆ ಗಣೇಶ ಹಬ್ಬ. ಎಣ್ಣೆ ಸ್ನಾನದ ಗಮ್ಮತ್ತನ್ನು ನೀವೂ ಒಂದು ಕೈ ನೋಡಿ ಬಿಡಿ.



Click it and Unblock the Notifications
