Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕೆನೆ ಬಣ್ಣದ ಸೀರೆಯಲ್ಲಿ ಹಣಕಾಸು ಸಚಿವೆ: ಇದು ಸಾಧಾರಣ ಸೀರೆಯಲ್ಲ, ಈ ಸೀರೆಯ ಮಹತ್ವ ತುಂಬಾ ದೊಡ್ಡದಿದೆ
ನಿರ್ಮಲಾ ಸೀತಾರಾಮನ್ ವಿತ್ತೆ ಸಚಿವೆ ಆದಾಗಿನಿಂದ ಪ್ರತಿಬಾರಿ ಬಜೆಟ್ ಮಂಡನೆ ಮಾಡುವಾಗ ಅವರು ಮಂಡಿಸುವ ಬಜೆಟ್‌ನಷ್ಟೇ ಗಮನ ಅವರು ಯಾವ ಸೀರೆ ಉಡುತ್ತಾರೆ ಎಂಬುವುದರ ಮೇಲಿರುತ್ತದೆ. ಏಕೆಂದರೆ ಪ್ರತಿಬಾರಿಯೂ ಅವರು ಬಜೆಟ್ ಮಂಡನೆ ಮಾಡುವಾಗ ಧರಿಸುವ ಸೀರೆಯಲ್ಲಿ ಒಂದು ವಿಶೇಷತೆ ಇರುತ್ತದೆ, ಅವರು ಕರಕುಶಲತೆಯನ್ನು ಪ್ರೋತ್ಸಾಹಿಸಲು, ಪ್ರಾದೇಶಿಕತೆಗೆ ಹೆಚ್ಚು ಒತ್ತು ನೀಡಲು ಹಾಗೂ ನಮ್ಮ ನಮ್ಮ ದೇಶದ ವೈವಿಧ್ಯತೆಯನ್ನು ಬಿಂಬಿಸುವ ಕೆಲವೊಂದು ಸಾಂಪ್ರದಾಯಕ ಸೀರೆಯುಟ್ಟು ಬರುತ್ತಾರೆ.

2025ರಲ್ಲಿ ಮಧುಬನಿ ಸೀರೆ ಧರಿಸಿ ಬಂದಿದ್ದಾರೆ
ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧುಬನಿ ಸೀರೆ ಧರಿಸಿ ಗಮನ ಸೆಳೆದಿದ್ದಾರೆ.ಕೆನೆ ಬಣ್ಣದ ಸೀರೆಗೆ ಮೆರೂನ್ ಬಣ್ಣದ ರವಿಕೆ ತೊಟ್ಟಿದ್ದರೆ.ಈ ಬಾರಿ ಈ ಸೀರೆಯ ವಿಶೇಷತೆಯೆಂದರೆ ಪದ್ಮಪ್ರಶಸ್ತಿ ವಿಜೇತೆ ಬಿಹಾರದ ದುಲಾರಿ ದೇವಿ ಗೌರವಾರ್ಥವಾಗಿ ನಿರ್ಮಲಾ ಸೀತಾರಾಮನ್ ಅವರು ಈ ಸೀರೆ ಧರಿಸಿದ್ದಾರೆ.
ದುಲಾರಿ ದೇವಿ ಉಡುಗೊರೆ ಕೊಟ್ಟ ಸೀರೆ
ದುಲಾರಿ ದೇವಿಗೆ ಪದ್ಮ ಪ್ರಶಸ್ತಿ 2021ರಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.ಮಿಥಿಲಾ ಕಲಾ ಸಂಸ್ಥಾನದಲ್ಲಿ ಕ್ರೆಡಿಟ್ ಔಟ್ರೀಚ್ ಕಾರ್ಯಕ್ರಮಕ್ಕಾಗಿ ಹಣಕಾಸು ಸಚಿವರು ಮಧುಬನಿಗೆ ಭೇಟಿ ನೀಡಿದ್ದಾಗ ದುಲಾರಿ ದೇವಿ ಅವರನ್ನು ಭೇಟಿ ಮಾಡಿದಾಗ ಅವರು ನಿರ್ಮಲಾ ಸೀತಾರಾಮನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ ಅಲ್ಲದೆ ಬಜೆಟ್ ದಿನ ಇದನ್ನು ಧರಿಸುವಂತೆ ಕೋರಿದ್ದರಂತೆ, ಅದರಂತೆ ನಿರ್ಮಲಾ ಸೀತಾರಾಮನ್ ಈ ಸೀರೆ ಉಟ್ಟು ಬಜೆಟ್ ಮಂಡನೆಗೆ ಬಂದಿದ್ದಾರೆ.
2024-24ರಲ್ಲಿ ಆಂಧ್ರದ ಪರಂಪರೆ ಬಿಂಬಿಸುವ ಮಂಗಳಸಿರಿ ಸೀರೆ ಧರಿಸಿದ್ದರು. ಇದು ಕೈಮಗ್ಗದಿಂದ ಮಾಡಿದ ಸೀರೆಯಾಗಿತ್ತಯ. ಕಸೂತಿ ಕಲೆಯ ಸುಂದರ ಸೀರೆ ಆವಾಗ ಗಮನ ಸೆಳೆದಿತ್ತು.
2024ರ ಮಧ್ಯಂತರ ಬಜೆಟ್ ಮಂಡನೆ ಮಾಡುವಾಗ ಪಶ್ಚಿಮ ಬಂಗಾಳದ ಸಾಂಪ್ರದಾಯಕ ಸೀರೆ ಧರಿಸಿ ಗಮನ ಸೆಳೆದಿದ್ದರು. ಈ ಸೀರೆ ಪಶ್ಚಿಮ ಬಂಗಳದ ಸಾಂಸ್ಕತಿಕ ಪರಂಪರೆ ಬಿಂಬಿಸಿತ್ತು.
2023ರ ಬಜೆಟ್‌ಗೆ ಕರ್ನಾಟಕದ ಸಾಂಪ್ರದಾಯಕ ಕಸೂತಿ ಇರುವ ಮೆರೂನ್ ರೇಷ್ಮೆ ಸೀರೆ ಧರಿಸಿದ್ದರು. ಈ ಸೀರೆ ಧಾರವಾಡದ ನವಲಗುಂಧ ಸೀರೆಯಾಗಿತ್ತು. ಇದನ್ನು ಧಾರವಾಡದ ಸೀರೆ ಉದ್ಯಮ ಹಣಕಾಸು ಸಚಿವೆಗೆ ಉಡುಗೊರೆಯಾಗಿ ನೀಡಿದ್ದರು. ಕೆಂಪು ಬಣ್ಣದ ಕಸೂತಿಯ ಸೀರೆ ಆವಾಗ ತುಂಬಾನೇ ಗಮನ ಸೆಳೆದಿತ್ತು. ಈ ಸೀರೆಯನ್ನು 210 ಮಹಿಳೆಯರು ಕೈಯಿಂದಲೇ ತಯಾರಿಸಿದ್ದಾಗಿತ್ತು.
2019ರಿಂದಲೂ ಗಮನ ಸೆಳೆಯುತ್ತಿರುವ ಸೀರೆಗಳು
ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆಯಾದಾಗಿನಿಂದ ಪ್ರತಿಬಾರಿ ಬಜೆಟ್ ಮಂಡನೆ ಮಾಡಿದಾಗಲೂ ಅವರ ಸೀರೆ ತುಂಬಾನೇ ಗಮನ ಸೆಳೆಯುತ್ತಿದೆ. ಅಲ್ಲದೆ ಇವರು ಬಜೆಟ್ ಮಂಡನೆ ಬ್ರೀಫ್‌ಕೇಸ್ ಜೊತೆ ಬರುತ್ತಿದ್ದ ಪದ್ಧತಿ ಕೂಡ ಬದಲಾಯಿಸಿದರು. ಇವರು ಕೆಂಪು ಬಣ್ಣ ರೇಷ್ಮೆ ಬಟ್ಟೆಯಲ್ಲಿಸುತ್ತಿ ಲ್ಯಾಪ್ ಟಾಪ್ ತಂದಿದ್ದರು, ಆ ಬಟ್ಟೆಯ ಮೇಲೆ ರಾಷ್ಟ್ರದ ಲಾಂಛನವಿತ್ತು.
ಕಸೂತಿ ಕಲೆಗೆ ಉತ್ತೇಜನ ನೀಡುವುದು ಕೂಡ ನಿರ್ಮಲಾ ಸೀತಾರಾಮನ್ ಅವರ ಡ್ರೆಸ್ಸಿಂಗ್‌ನ ಪ್ರಮುಖ ಉದ್ದೇಶವಾಗಿದೆ
ಪ್ರತಿಬಾರಿಯೂ ಅವರು ಉಡುವ ಸೀರೆಗೆ ಹೇಳಲು ಅದರದ್ದೇ ಆದ ವಿಶೇಷವಿರುತ್ತೆ, ದೇಶದ ಸಂಸ್ಕೃತಿಯ ವೈವಿಧ್ಯತೆಯ ವಿಶೇತೆ ಇರುತ್ತೆ, ಅಲ್ಲದೆ ಕೈ ಮಗ್ಗ ವಸ್ತುಗಳ ಕಡೆ ಗ್ರಾಹಕರನ್ನು ಸೆಳೆಯುವ ಉದ್ದೇಶವೂ ಇದೆ. ಇದರಿಂದ ಸ್ಥಳೀಯ ಉತ್ಪಾದಕರಿಗೆ ಅನುಕೂಲಕರವಾಗಿದೆ.



Click it and Unblock the Notifications
