For Quick Alerts
ALLOW NOTIFICATIONS  
For Daily Alerts

ಮೊಡವೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು 8 ಮನೆಮದ್ದು

By Manjula Balaraj
|

ಮುಖದ ಅಂದ ಚೆಂದವನ್ನೇ ಹಾಳುಗೆಡುವ ಮೊಡವೆ, ಹೆಚ್ಚಾಗಿ ಎಲ್ಲಾ ವಯಸ್ಕರಲ್ಲೂ ಕಾಣಿಸುತ್ತದೆ. ಗಂಡು, ಹೆಣ್ಣು ಎನ್ನುವ ತಾರತಮ್ಯವಿಲ್ಲದೇ ಎರಡೂ ಲಿಂಗದವರನ್ನು ಕಾಡುವ ಈ ಸಮಸ್ಯೆ ಕೆಲವೊಮ್ಮೆ ಮನೋಸ್ಥೈರ್ಯವನ್ನೇ ಕಮ್ಮಿ ಮಾಡುವಂತದ್ದು. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಮನೆಯಲ್ಲೇ ಸುಲಭವಾಗಿ ಈ ಸಮಸ್ಯೆಯಿಂದ ಹೊರಬರಲು ಇರುವ ಎಂಟು ಮನೆಮದ್ದುಗಳನ್ನು ಪಟ್ಟಿಮಾಡಿ ನಿಮಗೆ ಪ್ರಸ್ತುತ ಪಡಿಸುತ್ತಿದೆ.

ಮೊಡವೆಯ ಸಮಸ್ಯೆ ಹದಿಹರೆಯದವರಿಂದ ಹಿಡಿದು ವಯಸ್ಕರಲ್ಲೂ ಕಂಡುಬರುವಂತಹದ್ದು. ಈ ತೊಂದರೆಯು ತಾತ್ಕಾಲಿಕವಾದುದಾದರೂ ಅದರ ಕಲೆಗಳು ಮುಖದ ಮೇಲೆ ಹಾಗೇ ಉಳಿದು ಹೋಗುತ್ತದೆ. ಇದು ಮುಖದ ಸುಂದರತೆಯನ್ನು ಕಡಿಮೆ ಮಾಡುತ್ತದೆ. ಈ ಮೊಡವೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಮನೆಯಲ್ಲಿಯೇ ಮಾಡಬಹುದಾದಂತಹ ಅನೇಕ ವಿಧಾನಗಳಿವೆ, ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ...

8 Home Remedies To Remove Pimples Completely

ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ಒಂದು ಉತ್ತಮ ಮೊಡವೆ ನಿವಾರಕ ವಸ್ತು ಎಂದರೆ ಎರಡು ಮಾತಿಲ್ಲ. ಇದರಲ್ಲಿರುವ ರೋಗ ನಿರೋಧಕ ಅಂಶಗಳು ಮೊಡವೆ ಮತ್ತು ಅದರಿಂದಾಗುವ ಕಲೆಗಳನ್ನು ಹೋಗಲಾಡಿಸುತ್ತದೆ ಎಂಬುದು ಎಷ್ಟೋ ಬಾರಿ ಸಾಬೀತಾಗಿದೆ.

ದಾಲ್ಚಿನ್ನಿ ಪುಡಿ ಮತ್ತು ಜೇನು
ದಾಲ್ಚಿನ್ನಿ ಪುಡಿ ಮತ್ತು ಜೇನು ಮಿಶ್ರಣ ಮೊಡವೆ ನಿವಾರಿಸುವ ಇನ್ನೊಂದು ಉತ್ತಮವಾದ ಮನೆ ಮದ್ದು. ಸ್ವಲ್ಪ ದಾಲ್ಚಿನ್ನಿ ಪುಡಿಗೆ ಸ್ವಲ್ಪ ಜೇನು ಬೆರೆಸಿ ಪೇಸ್ಟ್ ಮಾಡಿಕೊಂಡು ಇದನ್ನು ಮಲಗುವ ಮೊದಲು ಹಚ್ಚಿ, ಮರುದಿನ ಬೆಳಿಗ್ಗೆ ಮುಖ ತೊಳೆಯಬೇಕು ಇದನ್ನು ಎರಡು ವಾರಗಳ ಪ್ರತೀದಿನ ಮಾಡುವುದರಿಂದ ಮೊಡವೆಯ ಭಯದಿಂದ ದೂರವಾಗಬಹುದು.

ನೆಲದ ಜಾಯಿಕಾಯಿ ಮತ್ತು ಹಾಲು
ನೆಲದ ಜಾಯಿಕಾಯಿಯ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕಲಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಯ ಸಮಸ್ಯೆಯಿಂದ ಹೊರಬರಬಹುದು. ಇದಕ್ಕೆ ಮಾಡಬೇಕಾದುದು ಇಷ್ಟೇ, ಈ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ದಪ್ಪಗೆ ಪೇಸ್ಟ್ ಮಾಡಿಕೊಂಡು ಮೊಡವೆ ಇರುವ ಜಾಗಕ್ಕೆ ಹಚ್ಚಿ ಅದು ಒಣಗುವ ತನಕ ಬಿಡಬೇಕು ನಂತರ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು.

ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿ, ನಿಂಬೆ ರಸ ಮತ್ತು ಶೇಂಗಾ ಎಣ್ಣೆ
ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಪೇಸ್ಟ್ ಮಾಡಿಕೊಂಡು ಮುಖದ ಮೇಲೆ ಹಚ್ಚುವುದು ಮೊಡವೆ ಸಮಸ್ಯೆಯಿಂದ ಹೊರಬರಲು ಇರುವ ಇನ್ನೊಂದು ಉತ್ತಮ ಪರಿಹಾರ. ಕಿತ್ತಳೆಯ ಸಿಪ್ಪೆಯನ್ನು ನೀರು ಉಪಯೋಗಿಸಿ ಪೇಸ್ಟ್ ಮಾಡಿಕೊಳ್ಳಬೇಕು. ಕಪ್ಪು ಕಲೆಯನ್ನು ಹೋಗಲಾಡಿಸ ಬೇಕಾದಲ್ಲಿ ಇದಕ್ಕೆ ಒಂದು ಅಳತೆಯಷ್ಟು ನಿಂಬೆ ರಸ ಮತ್ತು ಶೇಂಗಾದ ಎಣ್ಣೆಯನ್ನು ಬೆರೆಸಿಕೊಳ್ಳಬಹುದು.

ಹಾಲು ಮತ್ತು ತಾಜಾ ನಿಂಬೆ ರಸ
ಕಾಯಿಸಿದ ಹಾಲಿಗೆ ತಾಜಾ ನಿಂಬೆ ರಸ ಬೆರೆಸಿ ಒಣಗಿದ ಚರ್ಮಕ್ಕೆ ಫೇಷಿಯಲ್ ರೀತಿಯಲ್ಲಿ ಬಳಸಬಹುದು. ಇದರಿಂದ ಕಪ್ಪು ಕಲೆಗಳು ಮತ್ತು ಮೊಡವೆಗಳು ಹೋಗುತ್ತವೆ. ತಾಜಾ ನಿಂಬೆ ರಸಕ್ಕೆ 2-3 ಹನಿ ಹಾಲು ಹಾಕಿ ಬೆರೆಸಿಕೊಳ್ಳಬೇಕು. ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಈ ಮಿಶ್ರಣದಲ್ಲಿ ಅದನ್ನು ಅದ್ದಿ ಮೊಡವೆ ಇರುವ ಜಾಗಕ್ಕೆ ಅದನ್ನು ಹಚ್ಚಬೇಕು. ಸ್ವಲ್ಪ ಸಮಯದ ನಂತರ ತುಸು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು.

ರೋಸ್ ವಾಟರ್ ಮತ್ತು ನಿಂಬೆರಸ
ಒಂದು ಅಳತೆಯಷ್ಟು ರೋಸ್ ವಾಟರ್‌ಗೆ ಒಂದು ಅಳತೆಯಷ್ಟು ನಿಂಬೆರಸವನ್ನು ಸೇರಿಸಿ ಮೊಡವೆಗೆ ಹಚ್ಚುವುದರಿಂದ ಮೊಡವೆಯನ್ನು ಹೋಗಲಾಡಿಸಬಹುದು. ಈ ಮಿಶ್ರಣವನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿ ಒಂದು ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಮಾಗಿದ ಟೊಮಾಟೊ ಹಣ್ಣನ್ನು ಸಿಪ್ಪೆ ತೆಗೆದು ತಿರುಳನ್ನು ಹಚ್ಚಬೇಕು. ಹೀಗೆ ಮಾಡಿದ ನಂತರ ಒಣಗಲು ಬಿಟ್ಟು ಬೆರಳಿನಿಂದ ನಿಧಾನಕ್ಕೆ ಉಜ್ಜಬೇಕು. ನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು.

ಆಲೂಗಡ್ಡೆ
ಒಂದು ಆಲೂಗಡ್ಡೆಯನ್ನು ತುರಿದು ಅದನ್ನು ಮೊಡವೆ ಇರುವ ಜಾಗದಲ್ಲಿ ಉಜ್ಜಬೇಕು. ಇದನ್ನು ಪ್ರತೀ ನಿತ್ಯ ಮಾಡುವುದರಿಂದ ಮೊಡವೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಇದು ಬಿಸಿತಾಗಿದ ಗಾಯಗಳಿಗೂ ಒಳ್ಳೆಯದು. ಬಿಳಿ ಕಲೆಗಳು, ಕಪ್ಪುಕಲೆಗಳು ಕೂಡ ಇದನ್ನು ಹಚ್ಚುವುದರಿಂದ ಹೋಗುತ್ತದೆ.

ಮೂಲಂಗಿ ಬೀಜಗಳು
ಮೂಲಂಗಿ ಬೀಜಗಳನ್ನು ಪುಡಿ ಮಾಡಿಕೊಂಡು ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿಕೊಂಡು ತೊಂದರೆಗೊಳಗಾದ ಜಾಗಕ್ಕೆ ಹಚ್ಚುವುದರಿಂದ ಮೊಡವೆ, ಕಪ್ಪುಕಲೆ ಮುಂತಾದುವುಗಳನ್ನು ಹೋಗಲಾಡಿಸುತ್ತದೆ. ಇದು ಮಾತ್ರವಲ್ಲದೆ ತುರಿಗಜ್ಜಿ , ಕೀಟಗಳ ಕಡಿತ, ಚರ್ಮರೋಗಗಳು, ಎನ್ಜಿಮಾ, ಮುಂತಾದುವುಗಳಿಗೆ ಉತ್ತಮವಾಗಿ ಚಿಕಿತ್ಸೆ ಕೊಡುತ್ತದೆ. ಇದು ಚರ್ಮ ರೋಗಗಳಿಗೆ ಮತ್ತು ಅಲರ್ಜಿ ತೊಂದರೆ ಇರುವವರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಆದುದರಿಂದ ಈ ಮೇಲೆ ಹೇಳಿರುವಂತಹ ಉಪಾಯಗಳನ್ನು ಉಪಯೋಗಿಸಿ ಮೊಡವೆ ಹೋಗುವಂತೆ ಮಾಡಿಕೊಳ್ಳಿ

English summary

8 Home Remedies To Remove Pimples Completely

Pimples happen to be the all-time issue of youth, teenagers, as well as adults. Though pimples are only temporary, the mere sight of them scattered around your face is extremely disagreeable.There are various easy-to-follow steps, processes and ways to get rid of pimples, courtesy the natural ingredients available at our home.
Story first published: Saturday, April 2, 2016, 19:39 [IST]
X
Desktop Bottom Promotion