Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಯುಗಾದಿಯಂದು ಈ 6 ರುಚಿ ಸವಿಯಬೇಕು ಎನ್ನುವುದರ ಹಿಂದಿರುವ ಧಾರ್ಮಿಕ ಅರ್ಥವೇನು?
ಯುಗಾದಿಯಂದು ಬೇವು-ಬೆಲ್ಲ ಇರಲೇಬೇಕು. ಬೇವು ಬೆಲ್ಲದ ಜೊತೆಗೆ ಇನ್ನೂ 4 ಬಗೆಯ ರುಚಿ ಸವಿಯಬೇಕೆಂದು ಹೇಳಲಾಗುವುದು. ಪ್ರತಿಯೊಂದು ರುಚಿ ಅದರದ್ದೇ ಆದ ಭಾವನೆ ನೀಡುವುದು ಎಂದು ಹೇಳಲಾಗುವುದು. ಈ ಯಗಾದಿಯನ್ನು ಯಾವ 6 ರುಚಿ ಸವಿಯಬೇಕು, ಆ ರುಚಿಗಳು ಜೀವನದ ಯಾವ ಅಂಶಗಳನ್ನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಬೇವು-ಕಹಿ
ಬೇವು-ಬೆಲ್ಲ ಸವಿಯುವ ಮೂಲಕ ಯುಗಾದಿ ಹಬ್ಬವನ್ನು ಆಚರಿಸುತ್ತೇವೆ. ಬೇವು ಎಂದರೆ ಕಹಿ. ಬೇವು ಔಷಧೀಯ ಗುಣವಿರುವ ಎಲೆ, ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳಿವೆ. ಇನ್ನು ಬದುಕಿನಲ್ಲಿ ಬರಿ ಸಿಹಿಯಲ್ಲಿ ಕಹಿಯೂ ಇರುತ್ತದೆ, ಅದನ್ನು ಸಹಿಸಿಕೊಂಡು ಹೋಗಬೇಕು, ಕಷ್ಟ ಬಂದಾಗ ಕುಗ್ಗಬಾರದು, ಪ್ರತಿಯೊಂದು ಕಷ್ಟವನ್ನು ಎದುರಿಸಬೇಕು, ಆವಾಗ ಬದುಕು ಸಿಹಿಯಾಗುತ್ತದೆ, ಬದುಕು ಚೆನ್ನಾಗಿರುತ್ತದೆ ಎಂಬ ಭಾವನೆಯನ್ನು ಈ ರುಚಿ ಸೂಚಿಸುತ್ತದೆ.
ಬೆಲ್ಲ-ಸಿಹಿಯ
ಬದುಕಿನಲ್ಲಿ ಸಂತೋಷವಾಗಿರಬೇಕೆಂದು ಬಯಸುತ್ತೇವೆ, ಈ ಬೆಲ್ಲ ಸಿಹಿ, ಕಷ್ಟದ ನಂತರ ಸುಖ ಬಂದೇ ಬರುತ್ತದೆ, ನೋವು ದೂರಾಗಿ ಸಂತೋಷ ಹೆಚ್ಚಾಗುವುದು ಎಂಬ ಆಶಯವನ್ನು ತಿಳಿಸುತ್ತದೆ. ನಾವು ಹೊಸತನದ ಬದಲಾವಣೆಯನ್ನು ಸ್ವೀಕರಿಸಬೇಕು. ಬದುಕನ್ನು ನಗು ನಗುತ್ತಾ ಸ್ವೀಕರಿಸಬೇಕು ಎಂಬ ಭಾವನೆಯನ್ನು ಇದು ಮೂಡಿಸುತ್ತದೆ.
ಕಾಳು ಮೆಣಸು-ಖಾರ
ಕಾಳು ಮೆಣಸು ಕೋಪವನ್ನು ಸೂಚಿಸುವುದು. ಪ್ರತಿಯೊಬ್ಬ ಮನುಷ್ಯನಲ್ಲಿ ಕೋಪವಿರುತ್ತದೆ, ನಾವು ಸಾರಿಗೆ ಕಾಳು ಮೆಣಸು ಸ್ವಲ್ಪ ಬಳಸುತ್ತೇವೆ ಅದೇ ರೀತಿ ಕೋಪವಿರಬೇಕು, ಆದರೆ ಕಡಿಮೆ ಇರಬೇಕು ಎಂದು ಹೇಳಲಾಗುವುದು. ಕೋಪದ ಕೈಗೆ ಬುದ್ಧಿ ಕೊಡಬಾರದು ಅಂತಾರೆ. ಕೋಪದಿಂದ ಏನೇ ಮಾಡಿದರೂ ಅದರಿಂದ ತೊಂದರೆಯಾಗುತ್ತದೆ. ಕೋಪ ಕಡಿಮೆಯಾದರೆ ಬದುಕು ತುಂಬಾ ಚೆನ್ನಾಗಿರಲಿದೆ.
ಉಪ್ಪು
ಉಪ್ಪು ಇಲ್ಲದ ಅಡುಗೆ ರುಚಿಸುವುದೇ ಇಲ್ಲ, ಉಪ್ಪು ಭಯವನ್ನು ಸೂಚಿಸುತ್ತದೆ. ಯಾವುದೇ ಕಾರ್ಯ ಮಾಡುವಾಗ ಸ್ವಲ್ಪ ಭಯವಿರಬೇಕು, ಆದರೆ . ಎಲ್ಲಿ ಎಳ್ಳಷ್ಟು ಭಯವನ್ನು ಹೊಂದಿರುವುದಿಲ್ಲವೋ ಅಲ್ಲಿ ವ್ಯಕ್ತಿ ತಪ್ಪು ಮಾಡುತ್ತಾನೆ ಎಂದು ಹೇಳಲಾಗುವುದು. ಉಪ್ಪನ್ನು ರುಚಿಗೆ ತಕ್ಕಂತೆ ಬಲಸುತ್ತವೆ, ಆದರಂತೆ ವ್ಯಕ್ತಿ ತನ್ನ ಬದುಕಿನಲ್ಲಿ ಎಲ್ಲವೂ ಉಪ್ಪಿನಂತೆ ಪರಿಗಣಿಸಿದರೆ ಬದುಕು ಸುಂದರವಾಗಿರುತ್ತದೆ ಎಂದು ಹೇಳಲಾಗುವುದು.
ಹುಣಸೆ ಹಣ್ಣು
ಹುಳಿಯಾದ ಹುಣಸೆ ಹಣ್ಣು ಅತ್ಯುತ್ತಮ ಜೀರ್ಣಕಾರಿ ಆಹಾರ. ಇದು ನೀಡುವ ಧಾರ್ಮಿಕ ಸಂಗತಿ ಏನೆಂದರೆ ವ್ಯಕ್ತಿ ತನ್ನ ಜೀವನದಲ್ಲಿ ಬರುವ ಎಲ್ಲಾ ವಿಷಯ ಅಥವಾ ಸಂದರ್ಭಗಳನ್ನು ಸೂಕ್ತ ರೀತಿಯಲ್ಲಿ ಸ್ವೀಕರಿಸುವುದರ ಮೂಲಕ ಜೀರ್ಣಿಸಿಕೊಳ್ಳಬೇಕು. ಈ ರೀತಿಯ ಗುಣವಿದ್ದರೆ ಎಂಥ ಪರಿಸ್ಥಿತಿಯನ್ನೂ ನಿಭಾಯಿಸಲು ಸಾಧ್ಯವಾಗುವುದು.
ಮಾವು
ಇದು ಆಶ್ಚರ್ಯದ ಭಾವನೆಯ ಸಂಕೇತ. ಬೇವು ಬೆಲ್ಲದ ಜೊತೆಗೆ ಮಾವಿನ ಕಾಯಿಯ ರುಚಿಯು ಸೇರಿಕೊಂಡರೆ ಸೂಪರ್ ಆಗಿರುತ್ತದೆ. ಹಾಗೆಯೇ ಬದುಕಿನಲ್ಲಿ ಕೆಲ ಅಚ್ಚರಿಗಳು ಬದುಕನ್ನು ಮತ್ತಷ್ಟು ಸುಂದರಗೊಳಿಸುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
