Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಪಿತೃದೋಷವಿದ್ದರೆ ಈ ಅಕ್ಟೋಬರ್ 2 ಅಮವಾಸ್ಯೆ ತುಂಬಾ ವಿಶೇಷವಾದ ದಿನವೇಕೆ?
ಪಿತೃದೋಷವಿದ್ದರೆ ತುಂಬಾನೇ ಕಷ್ಟ ಅನುಭವಿಸುತ್ತಾರೆ, ಈ ಪಿತೃದೋಷ ಯಾರಿಗೆ ಉಂಟಾಗುತ್ತದೆ? ಇದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಹಾರವೇನು, ಈ ಬರುವ ಅಕ್ಟೋಬರ್ 2 ತುಂಬಾ ವಿಶೇಷವಾದ ದಿನವೇಕೆ?
ಯಾರಿಗೆ ಪಿತೃದೋಷ ಉಂಟಾಗುವುದು?
ಪಿತೃಗಳಿಗೆ ಮೋಕ್ಷ ಸಿಗದೆ ಅಲೆಯುತ್ತಿದ್ದರೆ ಪಿತೃದೋಷ ಉಂಟಾಗುವುದು
ಮನೆಯಲ್ಲಿ ಹಿರಿಯರನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದರೆ ಪಿತೃದೋಷ ಉಂಟಾಗುವುದು
ಪಿತೃಗಳಿಗೆ ತರ್ಪಣ ನೀಡದಿದ್ದರೆ ಪಿತೃದೋಷವಿರುತ್ತದೆ.

ಇನ್ನು ಕುಂಡಲಿಯಲ್ಲಿ ಈ ಗ್ರಹಗಳ ಸ್ಥಾನ ಕೂಡ ಪಿತೃದೋಷ ಉಂಟು ಮಾಡುತ್ತದೆ:
ಶುಕ್ರ, ಶನಿ, ರಾಹು ನಿಮ್ಮ ರಾಶಿಯ 5ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು
ಕೇತು 4ನೇ ಮನೆಯಲ್ಲಿದ್ದರೆ ಚಂದ್ರನಿಂದಾಗಿ ಪಿತೃದೋಷ ಉಂಟಾಗುತ್ತದೆ
ಬುಧ ಮತ್ತು ಕೇತು 1 ಮತ್ತು 8ನೇ ಸ್ಥಾನದಲ್ಲಿದ್ದರೆ ಪಿತೃದೋಷ ಉಂಟಾಗುವುದು
ಚಂದ್ರ 3 ಅಥವಾ 6ನೇ ಮನೆಯಲ್ಲಿದ್ದರೆ ಬುಧನ ಕೆಟ್ಟ ಪ್ರಭಾವ ಬೀರಲಿದೆ
ಶುಕ್ರ, ಬುಧ ಅಥವಾ ರಾಹು ಈ ಗ್ರಹಗಳಲ್ಲಿ ಯಾವುದಾದರು ಎರಡು ಅಥವಾ ಮೂರು ಗ್ರಹಗಳು ರಾಶಿಯ 7ನೇ ಮನೆಯಲ್ಲಿದ್ದರೆ ಶುಕ್ರನ ಕೆಟ್ಟ ಪ್ರಭಾವ ಬೀರುತ್ತದೆ.
ಸೂರ್ಯ ಅಥವಾ ಶುಕ್ರ ಅಥವಾ ಈ ಎರಡೂ ಗ್ರಹಗಳು 12ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು.
ಪಿತೃದೋಷವಿದ್ದರೆ ಏನಾಗುತ್ತದೆ?
- ಪಿತೃದೋಷವಿದ್ದರೆ ಬದುಕಿನಲ್ಲಿ ಬರುವ ಸವಾಲುಗಳನ್ನು ನೋಡಿ ತಿಳಿಯಬಹುದು
- ವೃತ್ತಿ ಬದುಕಿನಲ್ಲಿ ಒಂದರ ಹಿಂದೆ ಮತ್ತೊಂದು ಎಂಬಂತೆ ತುಂಬಾ ಸವಾಲುಗಳು ಬರುವುದು, ವೃತ್ತಿ ಬದುಕಿನಲ್ಲಿ ಬೆಳವಣಿಗೆ ಹೊಂದಲು ಸಾಧ್ಯನೇ ಆಗಲ್ಲ,ಎಷ್ಟೇ ಪ್ರಯತ್ನಿಸಿದರೂ ಸೋಲು.. ಸೋಲು
- ಮದುವೆ ವಿಳಂಬವಾಗುವುದು
- ಮದುವೆಯಾದರೂ ವೈವಾಹಿಕ ಬದುಕಿನಲ್ಲಿ ಕಲಹ ಅಥವಾ ಮದುವೆ ವಿಳಂಬವಾಗುವುದು
- ಆರೋಗ್ಯ ಸಮಸ್ಯೆ ಕಾಡುವುದು, ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆ ಅಲೆದು ಅಲೆದು ಸಾಕಾಗುವುದು
- ಸಾಕಷ್ಟು ಮಾನಸಿಕ ಒತ್ತಡವಿರುತ್ತದೆ
- ಅಸ್ವಾಭಾವಿಕ ಸಾವು ಉಂಟಾಗಬಹುದು
- ಮನೆಯಲ್ಲಿ ಅಸ್ವಾಭಾವಿಕ ಘಟನೆಗಳು, ಅಪಘಾತ, ಬೆಂಕಿ ಬೀಳುವುದು ಈ ಬಗೆಯ ಘಟನೆ ಸಂಭವಿಸುವುದು.
- ಆರ್ಥಿಕವಾಗಿ ತುಂಬಾನೇ ಸಮಸ್ಯೆ ಎದುರಿಸುತ್ತಾರೆ
- ಬದುಕಿನಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಸಾಕಷ್ಟು ಸವಾಲುಗಳು ಎದುರಾಗುವುದು, ಇದರಿಂದಾಗಿ ಸಾಕಾಗಿ ಹೋಗಿರುತ್ತದೆ.
ಈ ಪಿತೃದೋಷಕ್ಕೆ ಜ್ಯೋತಿಷ್ಯ ಪರಿಹಾರವೇನು?
ಪಿತೃದೋಷಕ್ಕೆ ಪಿತೃ ತರ್ಪಣ ನೀಡುವುದು ಅತ್ಯುತ್ತಮವಾದ ಪರಿಹಾರವಾಗಿದೆ.
ಪಿತೃತರ್ಪಣಕ್ಕೆ ಪಿತೃಪಕ್ಷ ತುಂಬಾ ಒಳ್ಳೆಯದು:
ಈ ಪಿತೃಪಕ್ಷ ಅಕ್ಟೋಬರ್ 2ಕ್ಕೆ ಮುಕ್ತಾಯವಾಗುತ್ತಿದೆ, ನಮಗೆ ಪಿತೃದೋಷವಿರಬಹುದು ಎಂದನಿಸಿದ್ದರೆ ಅಥವಾ ಪಿತೃದೋಷವಿದ್ದರೆ ಪಿತೃತರ್ಪಣ ಮಾಡಬಹುದು.
ಅಕ್ಟೋಬರ್ 2ಕ್ಕೆ ಸರ್ವಪಿತೃಪಕ್ಷವಿದೆ
ಅಕ್ಟೋಬರ್ 2ಕ್ಕೆ ಅಮವಾಸ್ಯೆಯಂದು ಸರ್ವಪಿತೃಪಕ್ಷವಿದೆ, ಈ ದಿನ ತರ್ಪಣ ಮಾಡಿದರೆ ನಿಮ್ಮ ಕುಟುಂಬದಲ್ಲಿ ತೀರಿ ಹೋದವರಲ್ಲಿ ಮೋಕ್ಷ ಸಿಗದೆ ಇದ್ದರೆ ಅವರಿಗೂ ಮೋಕ್ಷ ಸಿಗುವುದು. ಹೀಗಾಗಿ ಪಿತೃದೋಷದಿಂದ ಮುಕ್ತರಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
