Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಜನವರಿ 22ರಂದೇ ಮಾಡಲು ಪ್ರಮುಖ ಕಾರಣಗಳಿವು
ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ಜನವರಿ 22ರಂದು ಮಾಡಲಾಗುವುದು, ಏಕೆ ಇದೇ ದಿನವನ್ನು ಆಯ್ಕೆ ಮಾಡಿದ್ದು, ಈ ದಿನ ಯಾವ ಕಾರಣಗಳಿಗೆ ಅತ್ಯಂತ ಶುಭ ಎಂದು ನೋಡೋಣ ಬನ್ನಿ:
ಎಲ್ಲಾ ಶ್ರೀರಾಮ ಭಕ್ತರು ಜನವರಿ 22 ಬೇಗನೆ ಬರಲಿ ಎಂದು ಬಯಸುತ್ತಿದ್ದಾರೆ, ಈ ದಿನದ ಸಂಭ್ರಮ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಬರೋಬ್ಬರಿ 500ಕ್ಕೂ ಹೆಚ್ಚು ವರ್ಷಗಳ ಸಂಘರ್ಷ ಅಂತ್ಯಗೊಂಡು ಇದೀಗ ಆಯೋಧ್ಯೆಯಲ್ಲಿ ಮತ್ತೆ ಭವ್ಯ ರಾಮ ಮಂದಿರ ನಿರ್ಮಾಣಗೊಂಡಿದೆ.
ರಾಮ ಮಂದಿರ ಉದ್ಘಾಟನೆಗೆ ಕೌಂಟ್‌ಡೌನ್ ಶುರುವಾಗಿದೆ. ಜನವರಿ 22ರ ಮಧ್ಯಾಹ್ನ 12.30ರ ವೇಳೆಗೆ ಪ್ರಾಣಪ್ರತಿಷ್ಠಾಪನೆ ಮೂಲಕ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ರಾಮ ಮಂದಿರದ ಪ್ರಾಣಪ್ರತಿಷ್ಠೆ ಹಾಗೂ ಉದ್ಘಾಟನೆಯನ್ನು ಜನವರಿ 22ರಂದೇ ನಿಗದಿಪಡಿಸಲು ಬಲವಾದ ಕಾರಣವಿದೆ.

ಶ್ರೀರಾಮ ಹುಟ್ಟಿದ ಸಮಯದಲ್ಲಿಯೇ ಪ್ರಾಣ ಪ್ರತಿಷ್ಠಾಪನೆ
ಹಿಂದೂ ಪೌರಾಣಿಕ ಕತೆಯ ಪ್ರಕಾರ ಶ್ರೀರಾಮನು ಅಭಿಜಿತ್ ಮುಹೂರ್ತದಲ್ಲಿ ಜನಿಸಿದ. ಜನವರಿ 22ರ 12.30ರ ಸಮಯ ಅಭಿಜಿತ್ ಮುಹೂರ್ತವಾಗಿದೆ. ಅಭಿಜಿತ್ ಮುಹೂರ್ತವು ಬೆಳಗ್ಗೆ 11:51 ರಿಂದ ಮಧ್ಯಾಹ್ನ 12:33 ರವರೆಗೆ ಇರಲಿದೆ. ಇದು ಕೂಡ ಜನವರಿ 22ರಂದೇ ಪ್ರಾಣ ಪ್ರತಿಷ್ಠಾಪನೆ ಮಾಡಲು ಪ್ರಮುಖ ಕಾರಣವಾಗಿದೆ, ಇದಲ್ಲದೆ ಇನ್ನು ಹಲವು ಕಾರಣಗಳಿವೆ.
ಜನವರಿ 22ರ ಸೋಮವಾರ ಮಂಗಳಕರವಾದ ಮೃಗಶಿರಾ ನಕ್ಷತ್ರ ಬೆಳಗ್ಗೆ 3.52ಕ್ಕೆ ಶುರುವಾಗುವುದು. ಮೃಗಶಿರಾ ನಕ್ಷತ್ರ ಸಮಯ ಜನವರಿ 23ರ ಮಂಗಳವಾರ ಬೆಳಗ್ಗೆ 4:58ರ ವರೆಗೆ ಇರಲಿದೆ, ಇದು ಕೂಡ ಅತ್ಯಂತ ಶುಭ ಸಮಯವಾಗಿದೆ.
ಏಕೆಂದರೆ ಹಿಂದೂ ಪಂಚಾಗದ ಪ್ರಕಾರ ಮೃಗಶಿರಾ ನಕ್ಷತ್ರ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಈ ನಕ್ಷತ್ರ ಸೋಮ ದೇವತೆಗೆ ಸಂಬಂಧಿಸಿದೆ. ಸೋಮದೇವತೆಯನ್ನು ಅಮರತ್ವ ದೇವರು ಎಂದು ಕರೆಯಲಾಗುತ್ತದೆ. ಈ ನಕ್ಷತ್ರ ಜ್ಞಾನ, ಅನುಭದ ಅನ್ವೇಷಣೆಯನ್ನು ಸೂಚಿಸುತ್ತದೆ. ಆದ್ದರಿಂದ ಮೃಗಶಿರಾ ಅತ್ಯಂತ ಮಂಗಳಕರ ನಕ್ಷತ್ರ ಎಂದೇ ಪರಿಗಣಿಸಲಾಗಿದೆ. ನೀವು ಯಾವುದೇ ಕಾರ್ಯವನ್ನು ಈ ಶುಭ ಘಳಿಗೆಯಲ್ಲಿ ಮಾಡಿದರೆ ಅದರಲ್ಲಿ ಶುಭ ಕಾಣುತ್ತೀರಿ ಎಂಬುವುದು ನಂಬಿಕೆ.
ದುಷ್ಟರ ಸಂಹಾರ
ಹಿಂದೂ ಪುರಾಣದಲ್ಲಿ ಇದೇ ಅಭಿಜಿತ್ ಮುಹೂರ್ತದಲ್ಲಿ ಶಿವನು ರಾಕ್ಷಸನಾದ ತ್ರಿಪುರಾಸುರನನ್ನು ಕೊಂದ ಎಂದು ಹೇಳಲಾಗುವುದು. ಹೀಗೆ ಶತ್ರುಗಳ ಅವನತಿಗೆ ಈ ಮುಹೂರ್ತ ಶುಭವಾಗಿದೆ, ಈ ಸಮಯ ಸದಾ ಜಯವನ್ನು ನೀಡಲಿದೆ. ಹೀಗಾಗಿ ಹೊಸ ಉದ್ಯಮ, ವ್ಯವಹಾರ, ಕೆಲಸ, ಹಣಕಾಸು ಹೂಡಿಕೆ, ಗೃಹಪ್ರವೇಶ, ಸಮಾರಂಭ ಮುಂತಾದ ಶುಭ ಕಾರ್ಯಗಳಿಗೆ ಈ ಮುಹೂರ್ತ ಉತ್ತಮವೆಂದು ಪರಿಗಣಿಸಲಾಗುವುದು.
ಈ ಎರಡು ಯೋಗಗಳೂ ಈ ದಿನ ರೂಪುಗೊಂಡಿದೆ
ಈ ದಿನ ಅಮೃತ ಸಿದ್ದಿ ಯೋಗ, ಸವಾರ್ಥ ಸಿದ್ದಿ ಯೋಗವೂ ಇದೇ ಮೃಗಶಿರಾ ನಕ್ಷತ್ರದಲ್ಲಿ ಉಂಟಾಗಿದೆ. ಹೀಗಾಗಿ ಈ ದಿನವನ್ನು ಅತ್ಯಂತ ಶುಭ ದಿನವನ್ನಾಗಿ ಪರಿಗಣಿಸಲಾಗಿದೆ.
ಪ್ರಾಣ ಪ್ರತಿಷ್ಠಾಪನೆ ಸಮಯ
ಜನವರಿ 22ರಂದು ಈ ಪ್ರಾಣಪ್ರತಿಷ್ಠಾಪನೆ 84 ಸೆಕೆಂಡ್‌ಗಳಲ್ಲಿ ನಡೆಯಲಿದ್ದು, ಈ 84 ಸೆಕೆಂಡ್‌ಗಳು ತುಂಬಾನೇ ವಿಶೇಷವಾಗಿದೆ.
ಜನವರಿ 22 ಮಧ್ಯಾಹ್ನ 12:29:08 ಸೆಕೆಂಡ್‌ನಿಂದ 12:30:32 ಸೆಕೆಂಡ್ ಒಳಗಡೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು.
ಈ 84 ಸೆಕೆಂಡ್ ಅತ್ಯಂತ ಶುಭದಿನ ಎಂದು ಹೇಳಲಾಗುವುದು, ಈ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವುದರಿಂದ ಭಾರತಕ್ಕೆ ಒಳಿತಾಗಲಿದೆ, ಅಗ್ನಿ, ಅಕಾಲಿಕ ಸಾವು, ಕಳ್ಳತನ, ಕಾಯಿಲೆ, ಸಾವಿನ ಸಂಕೋಲೆ ಈ ಬಗೆಯ ಆಪತ್ತುಗಳಿಂದ ರಕ್ಷಣೆ ನೀಡುತ್ತದೆ ಎಂಬುವುದು ಧಾರ್ಮಿಕ ಪಂಡಿತರ ಅಭಿಪ್ರಾಯವಾಗಿದೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications