Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಸಿರಿಯಾ ಬಗ್ಗೆ ನಿಜವಾಯ್ತು ಬಾಬಾ ವಂಗಾ ಭವಿಷ್ಯ: ಸಿರಿಯಾ ಬಿದ್ದಾಗ ಹೊತ್ತಿ ಉರಿಯಲಿದೆ ವಿಶ್ವ, 2025ರ ವಂಗಾ ಭವಿಷ್ಯ
ಹೊಸ ವರ್ಷದ ಆರಂಭದ ಮುನ್ನವೇ ಜಾಗತಿಕ ಮಟ್ಟದಲ್ಲಿ ಯುದ್ಧದ ಕರಿ ನೆರಳು ಆವರಿಸಿದೆ. 2025ರಲ್ಲಿ ಸಿರಿಯಾ ಪತನವಾಗಲಿದೆ ಎಂಬ ಭವಿಷ್ಯ ನಿಜವಾಗಿ ಬಿಟ್ಟಿದೆ, 2024ರ ಕೊನೆಯ ತಿಂಗಳಿನಲ್ಲಿಯೇ ಸಿರಿಯಾ ಕ್ರಾಂತಿ ಶುರುವಾಗಿದ್ದು ಬಂಡುಕೋರರು ಸಿರಿಯಾ ಆಡಳಿತ ವಿರುದ್ಧ ದಂಗೆ ಎದ್ದಿದ್ದಾರೆ. ಬಂಡುಕೋರರ ದಾಳಿಗೆ ಸೋತು ಹೋಗಿರುವ ಅಸ್ಸಾದ್ ತನ್ನ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಅಲ್ಲಯ ನಾಗರಿಕರ ಬದುಕು ಅತಂತ್ರದಲ್ಲಿದೆ.

2000 ಇಸವಿಯಿಂದ ಸುದೀರ್ಘ ಆಡಳಿತ ನಡೆಸುತ್ತಾ ಬಂದಿದ್ದ ಬಶರ್ ಅಲ್ ಅಸ್ಸಾದ್ ಸಿರಿಯಾ ಬಿಟ್ಟು ಓಡಿ ಹೋಗಿದ್ದಾರೆ
ಅಲ್ ಅಸಾಸ್ ಅಜ್ಞಾತ ಸ್ಥಳಕ್ಕೆ ಓಡಿ ಹೋಗಿದ್ದಾರೆ ಎಂದು ಕೆಲ ವರದಿಗಳು ಹೇಳಿದರೆ, ಇನ್ನು ಕೆಲ ವರದಿಗಳು ಅವರನ್ನು ಕೊಂದು ಹಾಕಲಾಗಿದೆ ಎಂದು ಹೇಳುತ್ತಿದೆ. ದಂಡುಕೋರರು ನಿರಂತರ ಶಸ್ತ್ರ ಹೋರಾಟ ಮಾಡಿದ್ದರ ಪರಿಣಾಮ ಅಸ್ಸಾದ್ ಅಧಿಕಾರದಿಂದ ಕೆಳಗಿಳಿಯುವ, ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವ ಪರಿಸ್ಥಿತಿ ಉಂಟಾಯ್ತು. ಅಸ್ಸಾದ್ ಶನಿವಾರ ಆತ್ರಿ 10 ಗಂಟೆಗೆ ಖಾಸಗಿ ವಿಮಾನದಲ್ಲಿಹೋದರು ಎಂದು ಸಿರಿಯನ್ ಮಾನವ ಕ್ಕುಗಳ ಯುದ್ಧ ವೀಕ್ಷಕ ಸಂಸ್ಥೆ ಹೇಳಿದೆ.
ಆದರೆ ಆ ವಿಮಾನ ಕಣ್ಮೆರೆಯಾಗುವ ಮೊದಲು ಅಸ್ಸಾದ್ ಇದ್ದ ವಿಮಾನ ಮಾರ್ಗ ಬದಲಾಯಿಸಿದೆ, ಅವರನ್ನುಕೊಲ್ಲಲಾಗಿದೆ ಎಂಬ ಊಹಾಪೋಹಾಗಳು ಕೇಳಿ ಬರುತ್ತಿದೆ. 2015ರಿಂದ ರಷ್ಯಾವೂ ತನ್ನ ಮಿಲಿಟರಿ ಕ್ಯಾಂಪ್ ಅನ್ನು ಸಿರಿಯಾದಲ್ಲಿ ಇರಿಸಿದೆ. ಇದೀಗ ಅಸ್ಸಾದ್ ಅಧಿಕಾರದಿಂದ ಇಳಿದಿರುವುದರಿಂದ ಸಿರಿಯಾ ಜನರು ಸಂಭ್ರಮಿಸುತ್ತಿರುವುದನ್ನು ಕಾಣಬಹುದು.
ಸಿರಿಯಾ ಪತನದಿಂದ ವಿಶ್ವ ಯುದ್ಧ ನಡೆಯಲಿದೆ ಎಂಬ ಭವಿಷ್ಯ
ಬಾಬಾ ವಂಗಾ ಭವಿಷ್ಯವು ಸಿರಿಯಾ ಪತನದ ಬಳಿಕ 3ನೇ ಮಹಾಯುದ್ಧ ನಡೆಯಲಿದೆ ಎಂದು ಹೇಳಿದೆ, ಇದೀಗ ಆ ಭವಿಷ್ಯ ವಾಣಿ ನಿಜವಾಗಿದೆ, ಸಿರಿಯಾ ಪತನವಾಗಿದೆ, ಸಿರಿಯಾದಲ್ಲಿ ಈಗ ಉಂಟಾಗಿರುವ ಗೊಂದಲ 3ನೇ ವಿಶ್ವ ಮಹಾ ಯುದ್ಧಕ್ಕೆ ನಾಂದಿ ಹಾಡಲಿದೆಯೇ, ಈ ಭವಿಷ್ಯ ನಿಜವಾಗಲಿದೆಯೇ ಎಂಬ ಆತಂಕ ಮೂಡಿಸಿದೆ.
ಬಾಬಾ ವಂಗಾ 2025ರ ಕುರಿತು ನುಡಿದ ಭವಿಷ್ಯಗಳು
ಯುರೋಪ್ ನಾಶವಾಗಲಿದೆ
ಯುರೋಪ್‌ನಲ್ಲಿ ಜನ ಸಂಖ್ಯೆ ಕಡಿಮೆಯಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ, ಅದು ಯುದ್ಧದಿಂದಲಾ ಅಥವಾ ಪ್ರಕೃತಿ ವಿಕೋಪಗಳಿಂದಲಾ ಗೊತ್ತಿಲ್ಲ, ಆದರೆ ಯುರೋಪ್‌ನಲ್ಲಿ ಹೀಗಾಗಲೇ ಹಲವು ಕಡೆ ಆತಂರಿಕ ದಂಗೆಗಳು ಕಾಣುತ್ತಿದ್ದು ಇದರಿಂದ ವಿಶ್ವ ಮಹಾಯುದ್ಧ ಸಂಭವಿಸಲಿದೆ ಎಂದು ಹೇಳಲಾಗುತ್ತಿದೆ.
ವಿಜ್ಞಾನದಲ್ಲಿ ಕ್ರಾಂತಿಯಾಗಲಿದೆ
ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿಯಾಗಲಿದೆ, ಆಧುನಿಕ ಚಿಕಿತ್ಸಾ ವಿಧಾನ, ಔಷಧಗಳು ಬರಲಿವೆ. ಆರೋಗ್ಯ ವಿಭಾಗದಲ್ಲಿ ತುಂಬಾನೇ ಬದಲಾವಣೆಯಾಗಲಿದ್ದು ಈ ಬದಲಾವಣೆಯಿಂದಾಗಿ ಜೀವನ ಮಟ್ಟ ಸುಧಾರಿಸಲಿದೆ.
ಯಂತ್ರಗಳಲ್ಲಿದೆ ಟೆಲಿಪತಿ ಸಂವಹನ
ಸಂವಹನದಲ್ಲಿ ಮತ್ತಷ್ಟು ಬೆಳವಣಿಗೆಯಾಗಲಿದೆ, ಟೆಲಿಪತಿ ಸಂವಹನ ಕೂಡ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.
ಏಲಿಯನ್‌ಗಳ ಜೊತೆ ಮನುಷ್ಯ ಅಂವಹನ ನಡೆಸಲಿದ್ದಾನೆ
ಅನ್ಗಗ್ರಹ ಜೀವಿಗಳಿವೆ, ಅವುಗಳು ಭೂಮಿಗೆ ಭೇಟಿ ನೀಡಿದ್ದೂ ಇದೆ, ಆದರೆ ಅವುಗಳ ಜೊತೆ ಸಂವಹನ ನಡೆಸಲು ಭೂಮಿಯಲ್ಲಿನ ಮಾನವನಿಗೆ ಸಾಧ್ಯವಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications