Latest Updates
-
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ
ತುಳಸಿ ವಿವಾಹ : ಪೂಜಾ ವಿಧಿಗಳೇನು? ತುಳಸಿ ವಿವಾಹ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು?
ಶ್ರಾವಣ ಮಾಸದಂತೆಯೇ ಕಾರ್ತಿಕ ಮಾಸವನ್ನು ಪೂಜಾ ಕಾರ್ಯಗಳಿಗೆ ಶ್ರೇಷ್ಠವಾದ ಮಾಸ ಎಂದು ಪರಿಗಣಿಸಲಾಗುವುದು. ಕಾರ್ತಿಕ ಮಾಸವನ್ನು ಸಾಧನೆಯ ಮಾಸವೆಂದು ಕರೆಯಲಾಗುವುದು. ಕಾರ್ತಿಕ ಮಾಸದ ಶುಕ್ಲ ಪಕ್ಷದ ದಿನ ವಿಷ್ಣು ಚಾರ್ತುಮಾಸ ನಿದ್ದೆಯಿಂದ ಎಚ್ಚೆರವಾಗುತ್ತಾನೆ, ನಂತರದ ಸಮಯ ಶುಭ ಕಾರ್ಯಗಳು ಪ್ರಾರಂಭವಾಗುವುದು ಎಂದು ಹೇಳಲಾಗುವುದು ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ತುಳಸಿ ಹಾಗೂ ಸಾಲಿಗ್ರಾಮ ವಿವಾಹವನ್ನು ಮಾಡಲಾಗುವುದು.
ಯಾರು ತುಳಸಿ ವಿವಾಹವನ್ನು ಮಾಡುತ್ತಾರೋ ಅವರು ಕನ್ಯಾದಾನದ ಫಲವನ್ನು ಪಡೆಯುತ್ತಾರೆ ಎಂದು ಹೇಳಲಾಗುವುದು. ತುಳಸಿ ವಿವಾಹ ಮಾಡುವುದರಿಂದ ಪುಣ್ಯ ಫಲ ಸಿಗುವುದು, ಮೋಕ್ಷದ ಬಾಗಿಲು ತೆರೆಯುತ್ತದೆ ಎಂದು ನಂಬಲಾಗಿದೆ. ಕೆಲವರು ಬೇಗನೆ ಮದುವೆಯಾಗಲು ತುಳಸಿ ವಿವಾಹವನ್ನು ಮಾಡುತ್ತಾರೆ. ತುಳಸಿ ವಿವಾಹ ಮಾಡುವುದರಿಂದ ಮದುವೆಗೆ ಏನಾದರೂ ಅಡೆತಡೆಗಳು ಇದ್ದರೆ ಅದು ನಿವಾರಣೆಯಾಗುವುದು, ಬೇಗನೆ ಕಂಕಣ ಭಾಗ್ಯ ಕೂಡಿ ಬರುವುದು ಎಂದು ಹೇಳಲಾಗುವುದು. ಇನ್ನು ತುಳಸಿ ವಿವಾಹ ಮಾಡುವುದರಿಂದ ದಾಂಪತ್ಯ ಜೀವನದಲ್ಲಿ ಸಮಸ್ಯೆ ಬಗೆ ಹರಿದು, ವೈವಾಹಿಕ ಜೀವನ ಸುಧಾರಿಸಲಿದೆ.
ಈ ವರ್ಷ ತುಳಸಿ ವಿವಾಹವನ್ನು ಯಾವಾಗ ಮಾಡಲಾಗುವುದು, 23ಕ್ಕಾ 24ಕ್ಕೆ ಮಾಡಲಾಗುವುದು? ಪೂಜಾಗೆ ಶುಭ ಸಮಯ ಯಾವಾಗ ಪೂಜಾ ವಿಧಿಗಳೇನು? ಎಂದು ನೋಡೋಣ ಬನ್ನಿ:

ತುಳಸಿ ವಿವಾಹ ಯಾವಾಗ?
ಕಾರ್ತಿಕ ಮಾಸದ ಪ್ರಬೋದಿನಿ ಏಕಾದಶಿಯಂದು ತುಳಸಿ ವಿವಾಹವನ್ನು ಮಾಡಲಾಗುವುದು. ಈ ವರ್ಷ ದೇವುತನಿ ಏಕಾದಶಿ ನವೆಂಬರ್ 23 ರಂದು ಬರುತ್ತದೆ, ಈ ದಿನ ತುಳಸಿ ವಿವಾಹವನ್ನು ನವೆಂಬರ್ 23 ರಂದು ಮಾತ್ರ ಆಚರಿಸಲಾಗುವುದು. ಈ ದಿನ ಶಾಲಿಗ್ರಾಮ, ತಾಯಿ ತುಳಸಿ ವಿವಾಹವನ್ನು ನಡೆಯಲಾಗುವುದು.
ತುಳಸಿ ವಿವಾಹ ನ ಪೂಜೆಗೆ ಶುಭ ಮುಹೂರ್ತ
ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ತಿಥಿ ನವೆಂಬರ್ 22 ರಂದು ರಾತ್ರಿ 11.03 ರಿಂದ ಪ್ರಾರಂಭವಾಗುವುದು
ಏಕಾದಶಿ ತಿಥಿ ಮುಕ್ತಾಯ: ನವೆಂಬರ್ 23 ರಂದು ರಾತ್ರಿ 09.01 ಕ್ಕೆ ಕೊನೆಗೊಳ್ಳುತ್ತದೆ.
ಏಕಾದಶಿ ದಿನಾಂಕದಂದು ರಾತ್ರಿ ಪೂಜೆಯ ಸಮಯವು ಸಂಜೆ 05.25 ರಿಂದ 08.46 ರವರೆಗೆ ಇರುತ್ತದೆ. ನೀವು ಶುಭ ಮುಹೂರ್ತದಲ್ಲಿ ಈ ಮಂಗಳಕರ ಸಮಯದಲ್ಲಿ ತುಳಸಿ ವಿವಾಹವನ್ನು ಮಾಡಬಹುದು.
ತುಳಸಿ ವಿವಾಹದ ಪೂಜಾ ವಿಧಾನ
* ತುಳಸಿ ವಿವಾಹಕ್ಕಾಗಿ ಮೊದಲು ತುಳಸಿ ಕಟ್ಟೆಯನ್ನು ಸ್ವಚ್ಛ ಮಾಡಿ, ನಂತರ ಆಸನವನ್ನು ಹಾಕಿ ಅಲಂಕರಿಸಿ ಅದರಲ್ಲಿ ತುಳಸಿಯನ್ನು ಸ್ಥಾಪಿಸಿ
* ಮತ್ತೊಂದು ಆಸನದಲ್ಲಿ ಶಾಲಿಗ್ರಾಮ್ ಅನ್ನು ಸ್ಥಾಪಿಸಿ.
* ಎರಡೂ ಆಸನಗಳಿಗೆ ಕಬ್ಬುಗಳನ್ನು ಕಟ್ಟಿ ಅಲಂಕರಿಸಿ
* ಈಗ ಒಂದು ಕಲಶದಲ್ಲಿ ನೀರು ತುಂಬಿಸಿ ಅದರಲ್ಲಿ ಐದು , ಏಳು ಮಾವಿನ ಎಲೆಗಳನ್ನು ಹಾಕಿ ಪೂಜೆ ಮಾಡುವ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು.
* ನಂತರ ಶಾಲಿಗ್ರಾಮ್, ತುಳಸಿಯ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ರೋಲಿ ಅಥವಾ ಕುಂಕುಮದೊಂದಿಗೆ ತಿಲಕವನ್ನು ಹಚ್ಚಿ.
* ತುಳಸಿಯ ಮೇಲೆ ಕೆಂಪು ಬಣ್ಣದ ಚುನರಿಯನ್ನು (ಕೆಂಪು ಬಟ್ಟೆ) ಅರ್ಪಿಸಿ, ತುಳಸಿಗೆ ಬಳೆ, ಬಿಂದಿ ಇವುಗಳಿಂದ ಅಲಂಕರಿಸಿ.
ನಂತರ ತುಳಸಿಯನ್ನು ಕೈಯಲ್ಲಿ ಹಿಡಿದು ತುಳಸಿಯ ಏಳು ಬಾರಿ ಪ್ರದಕ್ಷಿಣೆ ಹಾಕಿ.
* ಪೂಜೆ ಮುಗಿದ ನಂತರ, ತುಳಸಿ, ಶಾಲಿಗ್ರಾಮಕ್ಕೆ ಆರತಿಯನ್ನು ಮಾಡಿ, ಸಂತೋಷ, ಅದೃಷ್ಟಕ್ಕಾಗಿ ಪ್ರಾರ್ಥಿಸಿ.
ತುಳಸಿ ವಿವಾಹದ ಪ್ರಯೋಜನ
* ತುಳಸಿ ವಿವಾಹವನ್ನು ಮಾಡುವುದರಿಂದ ವ್ಯಕ್ತಿ ಕನ್ಯಾದಾನದ ಫಲವನ್ನು ಪಡೆಯುತ್ತಾನೆ.
* ಮಕ್ಕಳು ಇಲ್ಲದಿರುವವರು ಅಥವಾ ಮಗಳು ಇಲ್ಲದಿರುವವರು ತುಳಸಿ ವಿವಾಹ ಮಾಡುವುದರಿಂದ ಮಗಳಿಗೆ ಕನ್ಯಾ ದಾನದ ಫಲ ಸಿಗುವುದು
* ತುಳಸಿ ವಿವಾಹ ಮಾಡುವುದರಿಂದ ಮೋಕ್ಷ ಸಿಗುವುದು.
* ತುಳಸಿ ಮತ್ತು ಶಾಲಿಗ್ರಾಮವನ್ನು ಸರಿಯಾಗಿ ಪೂಜಿಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ.
ಪೌರಾಣಿಕ ಕತೆ
ಜಲಂಧರ್ ಎಂಬ ರಾಕ್ಷಸನಿದ್ದ ವಿಷ್ಣುವಿನ ಅತ್ಯಂತ ಕಟ್ಟಾ ಭಕ್ತರಲ್ಲಿ ಒಬ್ಬರಾದ ವೃಂದಾ ಅವರನ್ನು ವಿವಾಹವಾಗುತ್ತಾನೆ. ವೃಂದಾಳ ಸದ್ಗುಣದ ಧರ್ಮದಿಂದಾಗಿ, ಜಲಂಧರನು ದೇವತೆಗಳ ಜೊತೆಗಿನ ಯುದ್ಧದಲ್ಲಿ ಅಜೇಯನಾದನು. ಜಲಂಧರನು ಯುದ್ಧದಲ್ಲಿ ಶಿವನನ್ನೇ ಸೋಲಿಸುತ್ತಾನೆ. ಶಿವನನ್ನು ಸೋಲಿಸಿರುವುದರಿಂದ ತಾನು ತುಂಬಾ ಶಕ್ತಿಶಾಲಿ ಎಂಬ ಗರ್ವ ಮಾಡುತ್ತಾನೆ, ಸ್ವರ್ಗದಲ್ಲಿ ಇರುವ ಹೆಣ್ಮಕ್ಕಳಿಗೆ ಜಲಂಧರ ಕಿರುಕುಳ ನೀಡಲು ಆರಂಭಿಸುತ್ತಾನೆ, ಇದರಿಂದ ದೇವತೆಗಳು ಭಯ ಬೀಳುತ್ತಾರೆ. ಜಲಂಧರ ಈ ವರ್ತನೆಯಿಂದ ದೇವತೆಗಳು ಭಯ ಬೀಳುತ್ತಾರೆ. ದೇವತೆಗಳು ವಿಷ್ಣುವನ್ನು ನಮ್ಮನ್ನು ರಕ್ಷಿಸು ಎಂದು ಮೊರೆ ಹೋಗುತ್ತಾರೆ. ದೇವತೆಗಳ ಕೋರಿಕೆಯ ಮೇರೆಗೆ, ಭಗವಾನ್ ವಿಷ್ಣುವು ಜಲಂಧರನ ರೂಪವನ್ನು ಧರಿಸಿ, ವೃಂದಾಳ ಪತಿ ಪಾಲನಾ ಧರ್ಮವನ್ನು ನಾಶಪಡಿಸಿದನು.
ವೃಂದಾಳ ಸದ್ಗುಣವು ನಾಶವಾದ ಕಾರಣ ತಕ್ಷಣ ಜಲಂಧರನ ಶಕ್ತಿಯು ಕ್ಷೀಣಿಸುತ್ತದೆ, ಇದರಿಂದ ಜಲಂಧನನ್ನುಕೊಲ್ಲಲು ಸಾಧ್ಯವಾಗುವುದು. ಭಗವಾನ್ ವಿಷ್ಣುವು ತನ್ನ ಗಂಡನ ಧರ್ಮವನ್ನು ಮೋಸದಿಂದ ಭ್ರಷ್ಟಗೊಳಿಸಿದ್ದಾನೆಂದು ವೃಂದಾಗೆ ಗೊತ್ತಾಗುತ್ತೆ, ಆಗ ಅವಳು ವಿಷ್ಣುವನ್ನು ಕಲ್ಲಾಗುವಂತೆ ಶಪಿಸಿದಳು. ಭಗವಾನ್ ವಿಷ್ಣುವು ಶಿಲೆಯಾಗಿ ರೂಪಾಂತರಗೊಂಡಾಗ ದೇವತೆಗಳೆಲ್ಲಾ ಬಂದು ವೃಂದಾರನ್ನು ವಿಷ್ಣುವನ್ನು ಶಾಪಮುಕ್ತ ಮಾಡಲು ಸೂಚಿಸುತ್ತಾರೆ. ನಂತರ ವೃಂದಾ ವಿಷ್ಣುವನ್ನು ಶಾಪ ಮುಕ್ತವಾಗಿಸುತ್ತಾನೆ. ಭಗವಾನ್ ವಿಷ್ಣುವು ತನ್ನ ಕಾರ್ಯಗಳ ಬಗ್ಗೆ ಪಶ್ಚಾತಾಪದಿಂದ ವೃಂದಾಳ ಶಾಪವನ್ನು ಜೀವಂತವಾಗಿಡಲು ಶಾಲಿಗ್ರಾಮದ ರೂಪದಲ್ಲಿ ವೃಂದಾಳ (ತುಳಸಿ) ಜೊತೆ ಇರುವುದಾಗಿ ಹೇಳುತ್ತಾನೆ. ತುಳಸಿಯನ್ನು ವೃಂದಾಳ ಪ್ರತಿರೂಪ ಎಂಬ ನಂಬಿಕೆ ಇದೆ. ಅಂದಿನಿಂದ ಕಾರ್ತಿಕ ಶುಕ್ಲ ಪಕ್ಷದ ದ್ವಾದಶಿ ದಿನ ತುಳಸಿ ಹಾಗೂ ಶಾಲಿಗ್ರಾಮ ವಿವಾಹ ಮಾಡುವ ಪದ್ಧತಿ ಇದೆ.
ತುಳಸಿ ವಿವಾಹದಂದು ಮಾಡಬಾರದ ಕೆಲಸಗಳು:
* ಈ ದಿನ ತುಳಸಿ ಗಿಡಕ್ಕೆ ನೋವುಂಟು ಮಾಡಬಾರದು, ಎಲೆಗಳನ್ನು ಕೀಳಬಾರದು
* ತುಳಸಿ ವಿವಾಹದ ದಿನದಂದು ತುಳಸಿಗೆ ಬಳೆ,ಬೊಟ್ಟು, ಕನ್ನಡಿ, ಮೇಕಪ್ ವಸ್ತುಗಳನ್ನು ಅರ್ಪಿಸಿ
* ತುಳಸಿ ವಿವಾಹದ ದಿನ ಸಾತ್ವಿಕ ಆಹಾರ ಮಾತ್ರ ಸೇವಿಸಿ
* ತುಳಸಿ ವಿವಾಹದ ದಿನದಂದು ನೀವು ಉಪವಾಸ ಮಾಡಿದರೆ ಒಳ್ಳೆಯದು
* ಈ ದಿನ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬೇಡಿ
* ಈ ದಿನ ಬೆಳ್ಳುಳ್ಳಿ, ಈರುಳ್ಳಿ ಬಳಸಬೇಡಿ, ಅಕ್ಕಿಯಿಂದ ಮಾಡಿದ ಪದಾರ್ಥ ಸೇವಿಸಬೇಡಿ.
* ಹಿರಿಯರನ್ನು ಗೌರವಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications