Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಡಿಸೆಂಬರ್‌ನಲ್ಲಿ ಮೋಕ್ಷದ ಏಕಾದಶಿ ಯಾವಾಗ? ಪೂಜಾ ಮುಹೂರ್ತ ಸಮಯ ಹಾಗೂ ಪೂಜಾವಿಧಿ
ವರ್ಷದ ಕೊನೆಯ ಏಕಾದಶಿಯೇ ಮೋಕ್ಷದ ಏಕಾದಶಿ. ಮಾರ್ಗಶಿರ ಮಾಸ ಅಥವಾ ಧನುರ್ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಮೋಕ್ಷದ ಏಕಾದಶಿಯೆಂದು ಕರೆಯಲಾಗುವುದು. ಮೋಕ್ಷದ ಏಕಾದಶಿಯ ಮಹತ್ವವೆಂದರೆ ಈ ದಿನ ಸ್ವರ್ಗದ ಅಥವಾ ವೈಕುಂಠದ ಬಾಗಿಲು ತೆರೆಯುತ್ತದೆ ಎಂಬ ಪ್ರತೀತಿ ಇರಲಿದೆ. ಈ ಮೋಕ್ಷದ ಏಕಾದಶಿ ವರ್ಷಕೊಮ್ಮೆ ಅಥವಾ ಎರಡು ಬಾರಿ ಬರುತ್ತದೆ.
ಈ ತಿಂಗಳಿನಲ್ಲಿ ಮೋಕ್ಷದ ಏಕಾದಶಿ ಯಾವಾಗ ಆಚರಿಸಲಾಗುವುದು? ಪೂಜೆಗೆ ಸಮಯ ಹಾಗೂ ಪಾರಣ ಸಮಯ ಯಾವಾಗ, ವ್ರತ ಕತೆಯೇನು ಎಂದು ನೋಡೋಣ ಬನ್ನಿ:

ಮೋಕ್ಷದ ಏಕಾದಶಿ ಯಾವಾಗ?
ಮೋಕ್ಷದ ಏಕಾದಶಿಯನ್ನು ಡಿಸೆಂಬರ್ 22 ರಂದು ಆಚರಿಸಲಾಗುವುದು. ವೈಷ್ಣವರು ಡಿಸೆಂಬರ್ 23 ರಂದು ಉಪವಾಸವಿದ್ದು ಮೋಕ್ಷದ ಏಕಾದಶಿ ಆಚರಿಸುತ್ತಾರೆ.
ಏಕಾದಶಿ ತಿಥಿ ಆರಂಭ - ಡಿಸೆಂಬರ್ 22, 2023 ರಂದು ಬೆಳಗ್ಗೆ 07:35 ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಡಿಸೆಂಬರ್ 23, 2023 ರಂದು ಬೆಳಗ್ಗೆ 07:56ಕ್ಕೆ ಮುಕ್ತಾಯವಾಗಲಿದೆ.
ಪಾರಣ ಸಮಯ: ಡಿಸೆಂಬರ್ 24 ಬೆಳಗ್ಗೆ 06:18 ರಿಂದ 06:24ರವರೆಗೆ
ಮೋಕ್ಷದ ಏಕಾದಶಿಯ ಪೂಜೆ ವಿಧಾನವೇನು?
* ಮೋಕ್ಷದ ಏಕಾದಶಿ ಉಪವಾಸ ಮಾಡುವವರು ದಶಮಿ ತಿಥಿಯಂದು ಮಧ್ಯಾಹ್ನದ ಸಮಯದಲ್ಲಿ ಒಮ್ಮೆ ಮಾತ್ರ ಸೇವಿಸಬೇಕು.
* ದಶಮಿಯ ದಿನ ರಾತ್ರಿಯಿಂದಲೇ ಆಹಾರ ಸೇವಿಸಬಾರದು.
* ಏಕಾದಶಿಯ ಮುಹೂರ್ತದ ದಿನ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಉಪವಾಸ ಸಂಕಲ್ಪ ಮಾಡಬೇಕು.
* ನಂತರ ಶ್ರೀವಿಷ್ಣುವಿನ ಫೋಟೋ ಅಥವಾ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿ. ದೀಪ, ಧೂಪ, ನೈವೇದ್ಯ ಇತ್ಯಾದಿಗಳನ್ನು ಕ್ರಮಬದ್ಧವಾಗಿ ಅರ್ಪಿಸಬೇಕು.
* ಈ ದಿನ ವ್ರತ ಕತೆ ಓದುವುದು ಅಥವಾ ಕೇಳುವುದು ಒಳ್ಳೆಯದು, ಇಡೀ ರಾತ್ರಿ ನಿದ್ದೆ ಮಾಡದೆ ಶ್ರೀವಿಷ್ಣುವಿನ ಸ್ಮರಣೆ ಮಾಡಬೇಕು.
ಮೋಕ್ಷದ ಏಕಾದಶಿ ವ್ರತ ಕಥೆ:
ಒಂದು ಕಾಲದಲ್ಲಿ ವೈಖಾನಸ ಎಂಬ ರಾಜನು ಗೋಕುಲದಲ್ಲಿ ಆಡಳಿತ ನಡೆಸುತ್ತಿದ್ದ. ತನ್ನ ಆಡಳಿತ ತುಂಬಾ ಚೆನ್ನಾಗಿದ್ದ ಎಂದು ಭಾವಿಸಿದ್ದ, ಆದರೆ ಒಂದು ರಾತ್ರಿ, ಅವನು ತನ್ನ ತಂದೆ ನರಕದಲ್ಲಿ ನರಳುತ್ತಿರುವ ಕನಸು ಕಂಡನು, ಆ ತಂದೆ ಮಗನ ಬಳಿ ಮೋಕ್ಷ ಕೊಡಿಸುವಂತೆ ಬೇಡುತ್ತಿದ್ದನು. ತಂದೆಯ ಸ್ಥಿತಿಯನ್ನು ಕಂಡು ರಾಜ ಚಿಂತಿತನಾಗುತ್ತಾನೆ. ಮರುದಿನ, ಅವನು ಬ್ರಾಹ್ಮಣರನ್ನು ಕರೆದು ತನ್ನ ಕನಸಿನ ಹಿಂದಿನ ಕಾರಣವನ್ನು ಕೇಳಿದನು. ಅವರು ಹೇಳಿದರು, "ಹೇ ರಾಜ, ಪರ್ವತ ಎಂಬ ಸನ್ಯಾಸಿಯ ಆಶ್ರಮಕ್ಕೆ ಹೋಗಿ ನಿಮ್ಮ ತಂದೆಯ ಮೋಕ್ಷಕ್ಕೆ ಪರಿಹಾರವನ್ನು ಕೇಳು ಎಂದು ಸೂಚಿಸುತ್ತಾರೆ. ಅದರಂತೆ ಋಷಿ ಬಳಿ ಕೇಳಿದಾಗ "ಹೇ ರಾಜ, ನಿಮ್ಮ ತಂದೆಯು ತನ್ನ ಹಿಂದಿನ ಜನ್ಮದ ಕರ್ಮಗಳಿಂದ ನರಕದಲ್ಲಿದ್ದಾರೆ. ಅವರಿಗೆ ಮೋಕ್ಷ ದೊರೆಯಲು ವೈಕುಂಠ ಏಕಾದಶಿಯ ಉಪವಾಸವನ್ನು ಆಚರಿಸು ಎಂದು ಸೂಚಿಸುತ್ತಾರೆ. ಅದರಂತೆ ಮೋಕ್ಷದ ಏಕಾದಶಿ ಮಾಡುತ್ತಾನೆ, ಇದರಿಂದ ಆ ರಾಜನ ತಂದೆಗೆ ಮೋಕ್ಷ ದೊರೆಯಿತು, ಆದ್ದರಿಂದ ಯಾರು ಈ ವ್ರತ ಮಾಡುತ್ತಾರೋ ಪಿತೃದೋಷದಿಮದ ಮುಕ್ತರಾಗುತ್ತಾರೆ.
ಮೋಕ್ಷದ ಏಕಾದಶಿಯ ಮಹತ್ವ:
* ಈ ದಿನ ವ್ರತ ಮಾಡಿದರೆ ಹಿರಿಯರಿಗೆ ಮೋಕ್ಷ ದೊರೆಯುತ್ತದೆ.
* ಈ ಬದುಕಿನ ನಂತರ ನಮಗೆ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಭಕ್ತಿಯಿಂದ ಉಪವಾಸ ಮಾಡಿ ಪೂಜೆ ಮಾಡುವ ಭಕ್ತರಿಗೆ ಮರಣದ ನಂತರ ವೈಕುಂಠದಲ್ಲಿ ಸ್ಥಾನ ಸಿಗುತ್ತದೆ
* ಈ ಏಕಾದಶಿ ಆಚರಣೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು.
* ಈ ದಿನದ ಉಪವಾಸವು ಉಳಿದ 23 ಏಕಾದಶಿ ತಿಥಿಗಳಲ್ಲಿ ವ್ರತವನ್ನು ಆಚರಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಲಾಗುತ್ತದೆ.
ಮೋಕ್ಷದ ಏಕಾದಶಿ ದಿನ ಏನು ಮಾಡಬೇಕು, ಏನು ಮಾಡಬಾರದು?
* ಭಕ್ತರು ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಬೇಕು, ನಂತರ ಮಡಿ ಬಟ್ಟೆಯನ್ನು ಧರಿಸಬೇಕು.
* ಈ ದಿನ ತಾಮಸಿಕ ಆಹಾರ ಸೇವಿಸಬಾರದು, ಈ ದಿನ ಈರುಳ್ಳಿ, ಮೊಟ್ಟೆ, ಮಾಂಸಾಹಾರ, ಮದ್ಯಪಾನ ಇವುಗಳನ್ನು ಸೇವಿಸಬಾರದು.
* ಈ ದಿನ ಕಾಳುಗಳನ್ನು ಸೇವಿಸಬಾರದು.
* ಈ ದಿನ ಹಾಲು, ಹಣ್ಣುಗಳನ್ನು ಸೇವಿಸಬಹುದು.
* ಏಕಾದಶಿ ದಿನ ತಲೆಸ್ನಾನ ಮಾಡಬಾರದು, ಆದ್ದರಿಂದ ಭಕ್ತರು ದಶಮಿಯಂದೇ ತಲೆಸ್ನಾನ ಮಾಡಬೇಕು.
* ಉತ್ಪನ್ನ ಏಕಾದಶಿಯಂದು ತಯಾರಿಸುವ ಪ್ರಸಾದಕ್ಕೆ ಎಣ್ಣೆ ಬಳಸಬಾರದು.
* ಶುದ್ಧ ತುಪ್ಪವನ್ನು ಬಳಸಬೇಕು.
* ವಿಷ್ಣು ಸಹಸ್ರನಾಮ ಪಠಿಸಿ.
* ಉಪವಾಸ ವ್ರತದಲ್ಲಿ ಇರುವಾಗ ನಿದ್ದೆ ಮಾಡಬಾರದು
* ಯಾರಿಗೂ ಕೆಟ್ಟಪದಗಳನ್ನು ಬಳಸಬಾರದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











