Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಆಷಾಢ ಅಮವಾಸ್ಯೆ ಯಾವಾಗ: ನೀವು ಎದುರಿಸುತ್ತಿರುವ ಕಷ್ಟಗಳಿಂದ ಪಾರಾಗಲು ಈ ದಿನ ಮಾಡಬೇಕಾದ 3 ಪರಿಹಾರ
ಆಷಾಢ ಅಮವಾಸ್ಯೆ ಯಾವಾಗ ಎಂಬ ಗೊಂದಲ ಕೆಲವರಲ್ಲಿದೆ, ಸಾಮಾಜಿಕ ತಾಣದಲ್ಲಿ ಆಷಾಢ ಅಮವಾಸ್ಯೆ ಜುಲೈ 5ಕ್ಕೆ ಎಂದು ನೋಡಿ ಕೆಲವರಿಗೆ ಹೌದಾ ಅನಿಸಿರಲೂಬಹುದು, ಆದರೆ ಕರ್ನಾಟಕದಲ್ಲಿ ಆಷಾಢ ಅಮವಾಸ್ಯೆ ಜುಲೈ 5ಕ್ಕಲ್ಲ. ಉತ್ತರ ಭಾರತದ ಕಡೆ ಆಷಾಢ ಅಮವಾಸ್ಯೆಯನ್ನು ಜುಲೈ 5ಕ್ಕೆ ಆಚರಿಸಲಾಗುತ್ತಿದೆ.
ಆಷಾಢ ಅಮವಾಸ್ಯೆಗೆ ತುಂಬಾನೇ ಮಹತ್ವವಿದೆ, ಈ ದಿನದಂದು ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡಲಾಗುವುದು. ಅದರಲ್ಲಿ ಪಿತೃಗಳಿಗೆ ತರ್ಪಣ ಅರ್ಪಿಸುವುದು ತುಂಬಾನೇ ಮುಖ್ಯವಾಗಿದೆ.

ಕರ್ನಾಟಕದಲ್ಲಿ ಆಷಾಢ ಅಮವಾಸ್ಯೆ ಯಾವಾಗ? ಈ ದಿನ ಮಾಡುವ ಪ್ರಮುಖ ಧಾರ್ಮಿಕ ಕಾರ್ಯಗಳೇನು? ಏಕೆ ಈ ಅಮವಾಸ್ಯೆ ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವವಾದ ದಿನ ಎಂದು ನೋಡೋಣ ಬನ್ನಿ:
ಕರ್ನಾಟಕದಲ್ಲಿ ಆಷಾಢ ಅಮವಾಸ್ಯೆ ಯಾವಾಗ?
ಕರ್ನಾಟಕದಲ್ಲಿ ಆಷಾಢ ಅಮವಾಸ್ಯೆಯನ್ನು ಆಗಸ್ಟ್ 4ರಂದು ಆಚರಿಸಲಾಗುವುದು. ಅಮವಾಸ್ಯೆ ತಿಥಿ ಆಗಸ್ಟ್ 3ಕ್ಕೆ ಪ್ರಾರಂಭವಾಗಿ ಆಗಸ್ಟ್ 4 ಮಧ್ಯಾಹ್ನ 03:51ಕ್ಕೆ ಮುಕ್ತಾಯವಾಗಲಿದೆ.
ಆಷಾಢ ಅಮವಾಸ್ಯೆಯಂದು ಈ ಧಾರ್ಮಿಕ ಕಾರ್ಯಗಳಿಗೆ ತುಂಬಾನೇ ಮಹತ್ವವಿದೆ
ತರ್ಪಣ ನೀಡಲಾಗುವುದು
ಆಷಾಢ ಅಮವಾಸ್ಯೆಯಂದು ತರ್ಪಣ ನೀಡುವುದರಿಂದ ಪಿತೃದೋಷದಿಂದ ಮುಕ್ತರಾಗಬಹುದು. ಈ ದಿನ ತೀರಿ ಹೋದ ಪಿತೃಗಳಿಗೆ ತರ್ಪಣ ನೀಡುವುದರಿಂದ ಅವರಿಗೆ ಮೋಕ್ಷ ಸಿಗುತ್ತದೆ, ಮೋಕ್ಷ ಸಿಗುವುದರಿಂದ ಅವರು ಸಂತುಷ್ಟರಾಗಿ ನಮ್ಮನ್ನು ಹರಿಸುತ್ತಾರೆ, ಇದರಿಂದ ನಮಗೆ ಒಳಿತಾಗುವುದು ಎಂಬುವುದು ಬಲವಾದ ನಂಬಿಕೆ.
ಪಿತೃದೋಷವಿದ್ದರೆ ಸಂತಾನ ಭಾಗ್ಯ ಇಲ್ಲದಿರುವುದು, ಆರ್ಥಿಕ ಸಮಸ್ಯೆ, ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಈ ದಿನ ಪಿತೃ ತರ್ಪಣ ಮಾಡಿದರೆ ಇಂಥ ಎಲ್ಲಾ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುವುದು . ಮನೆಯಲ್ಲಿ ನೆಮ್ಮದಿ ಇರಲಿದೆ, ವೃತ್ತಿ ಬದುಕಿನಲ್ಲಿ ಪ್ರಗತಿ ಕಂಡು ಬರಲಿದೆ.
ಶನಿ ದೋಷ ನಿವಾರಣೆಗೂ ಈ ದಿನ ತುಂಬಾ ಮುಖ್ಯವಾಗಿದೆ
ಶನಿ ದೈಯ್ಯ, ಶನಿ ದೋಷ ಇರುವವರು ಈ ದಿನ ಕೆಲವೊಂದು ಪರಿಹಾರ ಮಾಡಿದರೆ ಕೆಟ್ಟ ಪರಿಣಾಮ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ದಿನ ಆಲದ ಮರದ ಕೆಳಗಡೆ ಸಾಸಿವೆಯೆಣ್ಣೆಯ ದೀಪ ಹಚ್ಚಬೇಕು, ಹಾಗೂ ಹನುಮಾನ್ ಚಾಲೀಸ ಪಠಿಸಬೇಕು. ಹೀಗೆ ಮಾಡುವುದರಿಂದ ಶನಿಯ ಕೋಪ ಕಡಿಮೆಯಾಗುವುದು, ಕಷ್ಟಗಳು ತುಂಬಾನೇ ಕಡಿಮೆಯಾಗುವುದು ಎಂದು ಹೇಳಲಾಗುವುದು.
ಕಾಳಸರ್ಪ ದೋಷಕ್ಕೆ ಪರಿಹಾರ
ಕುಂಡಲಿಯಲ್ಲಿ ಕಾಳ ಸರ್ಪ ದೋಷವಿದ್ದರೆ ವಿವಾಹ ಸಂಬಂಧ ಕೂಡಿ ಬರದಿರುವುದು, ಮದುವೆಯಾದರೆ ಸಂತಾನ ಭಾಗ್ಯ ಇಲ್ಲದಿರುವುದು, ವ್ಯವಹಾರದಲ್ಲಿ, ವೃತ್ತಿ ಬದುಕಿನಲ್ಲಿ ತೊಂದರೆ ಅನುಭವಿಸುವುದು ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಇದರ ನಿವಾರಣೆಗೆ ಈ ದಿನ ಪರಿಹಾರ ಮಾಡಿಸಿದರೆ ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications