Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ದೀಪಾವಳಿಯಲ್ಲಿ ನಿಮ್ಮ ರಾಶಿಗೆ ಅನುಗುಣವಾಗಿ ಯಾವ ವಸ್ತು ದಾನ ಮಾಡಬೇಕು? ಯಾವುದರಿಂದ ಲಾಭ?
ಬೆಳಕಿನ ಹಬ್ಬ ದೀಪಾವಳಿಗೆ ನಿಮ್ಮ ರಾಶಿಯಲ್ಲಿ ಹಲವು ರೀತಿಯ ಬದಲಾವಣೆಗಳ ನಾವು ನೋಡಬಹುದು. ಸಾಂಪ್ರದಾಯಿಕ ಹಬ್ಬದಲ್ಲಿ ಹಲವರು ಪೂಜಾ ಕಾರ್ಯಕ್ರಮ, ದೇವಾಲಯ ಭೇಟಿ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳ ನೆರವೇರಿಸುವುದು ನೋಡಬಹುದು. ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಜನರು ಮನೆಯ ಅಂಗಳವನ್ನು ಅಲಂಕರಿಸುತ್ತಾರೆ. ದೀಪಾವಳಿಯಿಂದ ಕಾರ್ತಿಕ ಮಾಸ ಮುಗಿಯುವವರೆಗೂ ಪ್ರತಿದಿನ ಮನೆಯ ಮುಂದೆ ಸಂಜೆ ದೀಪಗಳನ್ನು ಹಚ್ಚಲಾಗುತ್ತದೆ.
ಇನ್ನು ಈ ದೀಪಾವಳಿಯಲ್ಲಿ ನಿಮ್ಮ ಮನೆಯ ಅದೃಷ್ಟ ಬದಲಾಗಬೇಕಾದರೆ ನೀವು ಈ ಹಬ್ಬದಲ್ಲಿ ನಿಮ್ಮ ಮನೆಯಲ್ಲಿ ಅದೃಷ್ಟ ಲಕ್ಷ್ಮಿ ಹಣದ ಸುರಿಮಳೆ ಮಾಡಬೇಕಾದರೆ ನೀವು ಹಬ್ಬದಲ್ಲಿ ನಿಮ್ಮ ರಾಶಿಯ ಅನುಗುಣವಾಗಿ ನೀವು ಈ ವಸ್ತುಗಳ ದಾನ ಮಾಡಿದರೆ ನಿಮಗೆ ಧನಲಾಭವಾಗಲಿದೆಯಂತೆ. ಹಾಗಾದ್ರೆ ನಿಮ್ಮ ರಾಶಿಗೆ ಅನುಗುಣವಾಗಿ ನೀವು ಏನು ದಾನ ಮಾಡಬೇಕು ಎಂಬುದನ್ನು ನೋಡಿ.

ಮೇಷ ರಾಶಿ
ಮೇಷ ರಾಶಿಯವರು ಈ ದೀಪಾವಳಿಯಲ್ಲಿ ಒಳ್ಳೆಯ ಸುದ್ದಿಗಳ ಕೇಳುತ್ತಾರೆ. ಮೇಷ ರಾಶಿಯವರು ಹಬ್ಬದಲ್ಲಿ ಬಟ್ಟೆ ದಾನ ಮಾಡಬೇಕಂತೆ. ಅದರಲ್ಲೂ ಬಿಳಿ ಬ್ಣದಿಂದ ಕೂಡಿದ ಬಟ್ಟೆಯನ್ನು ದಾನ ಮಾಡಬೇಕು. ಇದರಿಂದ ನಿಮ್ಮಲ್ಲಿ ಆರ್ಥಿಕ ಲಾಭವಾಗುತ್ತದೆ. ಈ ಬಟ್ಟೆ ಹೊಸದಾಗಿರಬೇಕು. ನೀವು ಬಳಸಿರುವ ಬಟ್ಟೆ ಆಗಿರಬಾರದು.
ವೃಷಭ ರಾಶಿ
ವೃಷಭ ರಾಶಿಯ ಮಂದಿ ಹಬ್ಬದಲ್ಲಿ ಸಿಹಿ ತಿಂಡಿಯನ್ನು ಹಂಚಬೇಕಂತೆ. ಮನೆಯಲ್ಲಿ ಅಥವಾ ಅಕ್ಕ ಪಕ್ಕದ ಮನೆಯವರು ಇಲ್ಲವೆ ಯಾರಿಗಾದರು ಸಿಹಿ ತಿಂಡಿಯನ್ನು ಹಂಚಿದರೆ ಒಳಿತಾಗಲಿದೆ.
ಮಿಥುನ ರಾಶಿ
ಈ ರಾಶಿಯವರಲ್ಲಿ ಧನಲಾಭದ ಪರಿಣಾಮಕ್ಕಾಗಿ ನೀವು ಪ್ರಾಣಿ ಅಥವಾ ಪಕ್ಷಿಗಳಿಗೆ ಆಹಾರ ನೀಡಬೇಕಂತೆ. ಅಂದರೆ ಹಸುಗಳು, ಕಾಗೆಗೆ ಆಹಾತ ನೀಡಬೇಕು ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆಯಂತೆ.
ಕರ್ಕ ರಾಶಿ
ಈ ರಾಶಿಯ ಜನರು ದೀಪಾವಳಿಯಲ್ಲಿ ಯಾವುದಾದರು ಧಾನ್ಯವನ್ನು ದಾನ ಮಾಡಬೇಕು. ಅದರಲ್ಲೂ ಉದ್ದಿನ ಬೇಳೆಯನ್ನ ದಾನ ಮಾಡಬೇಕಂತೆ. ಇದರ ಜೊತೆಗೆ ಯವುದಾರು ಹೂವನ್ನು ಕೂಡ ನೀಡಬೇಕು ಎಂದು ಹೇಳಲಾಗಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ದೀಪಾವಳಿ ಸಮು ಒಳ್ಳೆಯ ಕಾಲವಾಗಿರಲಿದೆ. ಅವರ ಆರ್ಥಿಕ ಸ್ಥಿತಿ ಮತ್ತಷ್ಟು ಪ್ರಗತಿ ಸಾಧಿಸಬೇಕು ಎಂದಾದರೆ ಏಳು ರೀತಿಯ ಧಾನ್ಯಗಳನ್ನು ದಾನ ಮಾಡಬೇಕಂತೆ. ಇಲ್ಲವೆ ಯಾವುದಾದರು ಪವಿತ್ರ ನದಿ ನೀರಿನ ಪ್ರೋಕ್ಷಣೆ ಹಾಗೂ ತೀರ್ಥ ಸ್ನಾನಕ್ಕೆ ಮುಂದಾಗಬೇಕಂತೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ತಮ್ಮ ಅರ್ಥಿಕ ಪ್ರಗತಿಗಾಗಿ ಶನಿ ದೇವಾಲಯದಲ್ಲಿ ಸಾಸಿವೆ ಎಣ್ಣೆ ಮೂಲಕ ದೀಪ ಬೆಳಗಬೇಕಂತೆ. ಇಲ್ಲವೆ ಮನೆಯಲ್ಲೇ ಶನಿ ದೇವರ ಮೂರ್ತಿಯ ಮುಂದೆ ದೀಪ ಬೆಳಗಬೇಕು ಎಂದು ಹೇಳಲಾಗಿದೆ.
ತುಲಾ ರಾಶಿ
ಈ ರಾಸಿಯ ಜನರು ದೀಪಾವಳಿಯಲ್ಲಿ ಲಕ್ಷ್ಮಿ ದೇವರಿಗೆ ಬಟ್ಟೆ ದಾನ ಮಾಡಿ ಪೂಜೆ ನೆರವೇರಿಸಬೇಕು. ಹಾಗೆ ಸಿಹಿ ದಾನ ಮಾಡಬೇಕು ಅದು ಸಕ್ಕರೆಯಾಗಿದ್ದರೂ ನಡೆಯಲಿದೆ.
ವೃಶ್ಚಿಕ ರಾಶಿ
ಈ ರಾಶಿಯವರಲ್ಲಿ ಆರ್ಥಿಕ ಅಭಿವೃದ್ಧಿಗಾಗಿ ಅವರು ಎಣ್ಣೆಯನ್ನು ದಾನ ಮಾಡಬೇಕಂತೆ. ದೇವಾಲಯಕ್ಕಾಗಲಿ ಅಥವಾ ದೀಪಾವಳಿಯಲ್ಲಿ ದೀಪ ಬೆಳಗಲು ಯಾರಿಗಾದರು ಎಣ್ಣೆಯನ್ನು ದಾನ ಮಾಡಿದರೆ ಲಾಭವಾಗಲಿದೆ.
ಧನು ರಾಶಿ
ಈ ರಾಶಿಯ ಮಂದಿ ಬೆಲ್ಲ ಅಥವಾ ಸಕ್ಕರೆಯನ್ನು ದಾನ ಮಾಡುವಂತೆ ಹೇಳಲಾಗಿದೆ. ಹಸುಗಳಿಗೆ ಅನ್ನ ಅಥವಾ ಸಿಹಿ ಕುಂಬಳವನ್ನು ನೀಡಿದರೆ ನೀವು ಊಹಿಸದ ರೀತಿ ಫಲ ಅನುಭವಿಸಬಹುದಂತೆ.
ಮಕರ ರಾಶಿ
ಈ ರಾಶಿಯ ಜನರು ದೇವಾಲಯಕ್ಕೆ ತೆಂಗಿನಕಾಯಿ ನೀಡಿ ಪ್ರಸಾದ ಪಡೆಯುವುದು ಅಥವಾ ಅಗತ್ಯವಿರುವವರಿಗೆ ತೆಂಗಿನಕಾಯಿ ದಾನ ಮಾಡಬೇಕಂತೆ. ಇದರಿಂದ ನಿಮ್ಮಲ್ಲಿ ಧನಲಾಭದ ನಿರೀಕ್ಷೆ ಮಾಡಬಹುದು.
ಕುಂಭ ರಾಶಿ
ಕುಂಭ ರಾಶಿ ಜನರು ದೀಪಾವಳಿಯಲ್ಲಿ ಮಕ್ಕಳಿಗೆ ಸಿಹಿ ದಾನ ಮಾಡುವುದು ಹಾಗೆ ನಿರ್ಗತಿಕರಿಗೆ ಚಪ್ಪಲಿ ದಾನ ಮಾಡಿದರೆ ಬಹಳ ಒಳ್ಳೆಯದಂತೆ.
ಮೀನ ರಾಶಿ
ಈ ರಾಶಿಯ ಮಂದಿ ದೀಪಾವಳಿಯಲ್ಲಿ ಹೆಚ್ಚಾಗಿ ಹಣವನ್ನ ದಾನ ಮಾಡಬೇಕಂತೆ, ಭಕ್ಷುಕರಿಗೆ ಇಲ್ಲವೆ ಬಡವರಿಗೆ ನಿಮ್ಮ ಕೈಲಾದಷ್ಟು ಹಣವನ್ನು ದಾನ ಮಾಡಿದರೆ ಆರ್ಥಿಕವಾಗಿ ನೀವು ಅಭಿವೃದ್ಧಿಯಾಗುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
