Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೀಪಾವಳಿಗೆ ಒಂದು ದಿನ ಮುನ್ನ ಹನುಮಂತನ ಪೂಜೆಯಿಂದ ದೊರೆಯುವ ಪ್ರಯೋಜನಗಳೇನು?
ಹನುಮಂತನ ಆರಾಧನೆ ಮಾಡಿದರೆ ಎಂಥದ್ದೇ ಕಷ್ಟವಿರಲಿ ಕಷ್ಟಗಳಿಂದ ಪಾರಾಗಲು ಹನುಮಂತ ನಮಗೆ ಶಕ್ತಿಯನ್ನು ನೀಡುತ್ತಾನೆ ಎಂಬುವುದು ಹನುಮಂತನ ಭಕ್ತರ ಬಲವಾದ ನಂಬಿಕೆ. ಕೆಲವು ಕಡೆಗಳಲ್ಲಿ ದೀಪಾವಳಿಗೆ ಮುನ್ನ ಹನುಮಂತನನಿಗೆ ವಿಶೇಷ ಪೂಜೆ ಸಲ್ಲಿಸುವ ವಾಡಿಕೆಯಿದೆ. ಈ ದಿನ ಹನುಮಂತನ ಆರಾಧನೆ ಮಾಡಿದರೆ ಕೆಟ್ಟ ಶಕ್ತಿಗಳಿಂದ ನಮಗೆ ಶಕ್ತಿ ಸಿಗುವುದು ಎಂಬ ನಂಬಿಕೆ.

ದೀಪಾವಳಿಯಂದು ಶ್ರೀರಾಮ 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ಎಂದು ಹೇಳಲಾಗುವುದು. ಹನುಮಂತ ಶ್ರೀ ರಾಮ ಭಕ್ತ, ದೀಪಾವಳಿ ಹಬ್ಬಂದು ದೀಪಾವಳಿಗಿಂತ ಒಂದು ದಿನ ಮುಂಚೆ ಹನುಮಂತನ ಆರಾಧನೆ ಮಾಡಲಾಗುವುದು.
ಅದರಲ್ಲೂ ಈ ಬಾರಿ ಭಾನುವಾರದಂದು ದೀಪಾವಳಿ ಬಂದಿದೆ, ಆದ್ದರಿಂದ ಶನಿವಾರ ಹನುಮಂತನ ಪೂಜೆ ಮಾಡಬೇಕು. ಶನಿವಾರ ಹನುಮಂತನ ಪೂಜೆಗೆ ಶ್ರೇಷ್ಠವಾದ ದಿನವಾಗಿದ್ದು ಈ ದಿನ ಈ ಶುಭ ಸಮಯದಲ್ಲಿ ಹನುಮಂತನ ಆರಾಧಿಸಿ
ಹನುಮಂತನ ಆರಾಧನೆಗೆ ಶುಭ ಸಮಯ
ಹನುಮಂತನನ್ನು ಪ್ರೀತಿ ಯೋಗದಲ್ಲಿ ಆರಾಧಿಸಿ. ಚತುರ್ದಶಿ ನವೆಂಬರ್ 11 ಮಧ್ಯಾಹ್ನ 01:59ರಿಂದ ಭಾನುವಾರ ಮಧ್ಯಾಹ್ನ 02:46ರವರೆಗೆ ಇರಲಿದೆ.
ಪ್ರೀತಿ ಯೋಗ
ಪ್ರೀತಿಯೋಗ ನವೆಂಬರ್ 10, ಸಂಜೆ 05:04ರಿಂದ ಪ್ರಾರಂಭವಾಗಿದೆ, ನವೆಂಬರ್ 11 ಸಂಜೆ 04:59ರವರೆಗೆ ಇರಲಿದೆ.
ಜ್ಯೋತಿಷ್ಯ ಪ್ರಕಾರ ಹನುಮಂತನ ಆರಾಧನೆಯಿಂದ ದೊರೆಯುವ ಪ್ರಯೋಜನಗಳೇನು?
* ನಿಮ್ಮ ಯಾವುದಾದರೂ ಕೆಲಸ ಪೂರ್ಣವಾಗಲು ಅಡೆತಡೆಗಳಿದ್ದರೆ ಶನಿವಾರ ಹನುಮಂತನನ್ನು ಆರಾಧಿಸುವುದರಿಂದ ಅ ಕೆಲಸ ಪೂರ್ನವಾಗುವುದು.
* ಏನಾದರೂ ನಕರಾತ್ಮಕ ಆಲೋಚನೆಗಳು ಕಾಡುತ್ತಿದ್ದರೆ ಹನುಮಂತನನ್ನು ಆರಾಧಿಸುವುದರಿಂದ , ಹನುಮನ್ ಚಾಲೀಸ ಪಠಿಸುವುದರಿಂದ ಅಂಥ ಆಲೋಚನೆಗಳು ದೂರಾಗಿ ಧನಾತ್ಮಕ ಭಾವನೆ ಹೆಚ್ಚಾಗುವುದು.
* ಆರ್ಥಿಕ ಸಂಕಷ್ಟದಿಂದ ದೂರಾಗಲು ಶನಿವಾರದಂದು ಹನುಮಂತನಿಗೆ ಪ್ರಸಾದ ಅರ್ಪಿಸಿ ನಂತರ ಬಡವರಿಗೆ ಆಹಾರ ದಾನ ಮಾಡಿ.
* ಪಿತೃದೋಷ ಇದ್ದರೆ ನಿರಂತರ ಹನುಮಾನ್ ಚಾಲೀಸ ಪಠಿಸುವುದರಿಂದ ಸಮಸ್ಯೆ ದೂರಾಗುವುದು
* ಆರೋಗ್ಯ ಸಮಸ್ಯೆಯಿಂದ ಹೊರಬರಲು 108 ಬಾರಿ ಹನುಮಾನ್ ಚಾಲೀಸ ಪಠಿಸಿ.
* ಕಾನೂನು ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದರೆ ಹನುಮಂತನ ದೇವಾಲಯಕ್ಕೆ ಕೆಂಪು ಧ್ವಜ ಅರ್ಪಿಸಿ.
ವಿದ್ಯಾಭ್ಯಾಸದಲ್ಲಿನ ಅಡೆತಡೆಗಳನ್ನು ಹೋಗಲಾಡಿಸಲು
ಪೂಜ್ಯಾಯ ವಾಯುಪುತ್ರಾಯ ವಾಗ್ದೋಷ ವಿನಾಶನ |
ಸಕಲ ವಿದ್ಯಾಂಕುರಮೇ ದೇವ ರಾಮದೂತ ನಮೋಸ್ತುತೆ ||
ಒಳ್ಳೆಯ ಉದ್ಯೋಗ ದೊರೆಯಲು
ಹನುಮಾನ್ ಸರ್ವಧರ್ಮಜ್ಞ ಸರ್ವಾ ಪೀಡಾ ವಿನಾಶಿನೇ |
ಉದ್ಯೋಗ ಪ್ರಾಪ್ತ ಸಿದ್ಧ್ಯರ್ಥಂ ಶಿವರೂಪಾ ನಮೋಸ್ತುತೇ |
ಕಾರ್ಯ ಸಾಧನೆಗೆ
ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ |
ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ ||
ಗ್ರಹದೋಷ ನಿವಾರಣೆಗೆ
ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ |
ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ದೇಹಿಮೇ ಪ್ರಭೋ ||
ಆರೋಗ್ಯ ಸಮಸ್ಯೆ ಹೋಗಲಾಡಿಸಲು
ಆಯುಃ ಪ್ರಜ್ಞ ಯಶೋ ಲಕ್ಷ್ಮೀ ಶ್ರದ್ಧಾ ಪುತ್ರಾಸ್ಸುಶೀಲತಾ |
ಆರೋಗ್ಯಂ ದೇಹ ಸೌಖ್ಯಾಂಚ ಕಪಿನಾಥ ನಮೋಸ್ತುತೇ ||
ಮಕ್ಕಳ ಭಾಗ್ಯಕ್ಕಾಗಿ
ಪೂಜ್ಯಾಯ ಅಂಜನೇಯ ಗರ್ಭದೋಷಾಪಹಾರಿತೋ |
ಸಂತಾನಂ ಕುರುಮೇ ದೇವ ರಾಮದೂತ ನಮೋಸ್ತುತೇ ||
ವ್ಯವಹಾರದಲ್ಲಿ ಪ್ರಗತಿಗೆ
ಸರ್ವ ಕಲ್ಯಾಣ ದಾತಾರಮ್ ಸರ್ವಾಪತ್ ನಿವಾರಕಮಂ|
ಅಪಾರ ಕರುಣಾಮೂರ್ತಿಂ ಆಂಜನೇಯಂ ಸಮಾಮ್ಯಹಂ ||
ಕಂಕಣ ಬಲ ಕೂಡಿ ಬರಲು
ಯೋಗಿ ಧ್ಯೇ ಯಾಂ ಘ್ರೀ ಪದ್ಮಾಯ ಜಗತಾಂ ಪತಯೇ ನಮಃ |
ವಿವಾಹಂ ಕುರುಮೇದೇವ ರಾಮದೂತ ನಮೋಸ್ತುತೇ ||
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
