ಅಪರೂಪದ ವಿಶ್ವಘಸ್ರ ಪಕ್ಷ ಶುರುವಾಗಿದೆ: ಇದು ಅತ್ಯಂತ ಅಶುಭ, ಪ್ರಕೃತಿ ವಿಕೋಪ, ರಾಜಕೀಯದಲ್ಲಿ ಏರಳಿತ ಕಂಡು ಬರುವುದು

ಜ್ಯೋತಿಷ್ಯ ಲೆಕ್ಕಚಾರದ ಪ್ರಕಾರದ ತಿಂಗಳಿನಲ್ಲಿ ಎರಡು ಪಕ್ಷ ಬರುತ್ತದೆ. ಅದನ್ನು ಶುಕ್ಷ ಪಕ್ಷ, ಕೃಷ್ಣ ಪಕ್ಷ ಎಂದು ಕರೆಯಲಾಗುವುದು. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬದಲಾಗಲು 15 ದಿನ ತೆಗೆದುಕೊಳ್ಳುತ್ತದೆ, ಆದರೆ ಕೆಲವೊಮ್ಮೆ ಇದರಲ್ಲಿ ವ್ಯತ್ಯಾಸ ಉಂಟಾಗುವುದು. ಶುಕ್ಷ ಪಕ್ಷ ಶುರುವಾಗ 13 ದಿನಕ್ಕೆ ಕೃಷ್ಣಪಕ್ಷ ಬರುತ್ತದೆ. ಅದನ್ನು ವಿಶ್ವಘಸ್ರ ಪಕ್ಷ ಎನ್ನುತ್ತಾರೆ. ಜ್ಯೋತಿಷ್ಯದಲ್ಲಿ ಇದನ್ನು ಶುಭ ಎಂದು ಹೇಳಲಾಗುವುದಿಲ್ಲ.

vishwaghasra Paksha Started

ಈ ವಿಶ್ವಘ್ರಸ ಪಕ್ಷ ಜೂನ್ 22ರಿಂದ ಆರಂಭವಾಗಿದೆ. ಈ ಸಮಯದಲ್ಲಿ ಪ್ರತಿಪದ ಮತ್ತು ಚತುರ್ದಶಿ ತಿಥಿ ಕಡಿಮೆಯಾಗಿದೆ. ಇದರಿಂದಾಗಿ ಈ ಪಕ್ಷದಲ್ಲಿ ಕೇವಲ 13 ದಿನಾಂಕಗಳು ಮಾತ್ರ ಇರುತ್ತದೆ. ಈ ಅವಧಿಯಲ್ಲಿ ಅನೇಕ ಕೆಟ್ಟ ಘಟನೆಗಳು ಸಂಭವಿಸುವುದು ಎಂದು ಹೇಳಲಾಗುವುದು.

ಈ ವಿಶ್ವಘ್ರಸ ಪಕ್ಷ ಹೇಗೆಲ್ಲಾ ಪ್ರಭಾವ ಬೀರುತ್ತದೆ ಎಂದು ನೋಡೋಣ ಬನ್ನಿ:

ಈ ಅವಧಿಯಲ್ಲಿ ಹಲವು ರಾಷ್ಟ್ರಗಳಲ್ಲಿ ಪರಿಸ್ಥಿತಿ ಅಷ್ಟು ಚೆನ್ನಾಗಿರಲ್ಲ, ರಾಜಕೀಯ ಕ್ಷೇತ್ರದಲ್ಲಿ ಹಲವು ಗೊಂದಲುಗಳು ಇರಲಿದೆ, ಈ ಅವಧಿಯಲ್ಲಿ ಪ್ರಕೃತಿ ವಿಕೋಪ, ಏರಿಳಿತಗಳು ಕಂಡು ಬರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಹಲವು ವಿನಾಶಗಳು ಸಂಭವಿಸುವುದು ಎಂದು ಹೇಳಲಾಗುವುದು. ಈ ಹಿಂದೆ ಕೂಡ ಈ ವಿಶ್ವಘ್ರಸ ಪಕ್ ಉಂಟದಾಗ ಹಲವು ತೊಂದರೆಗಳು ಕಂಡು ಬಂದಿತ್ತು.

ಯಾವಾಗ ಉಂಟಾಗಿತ್ತು?
2010 ರಲ್ಲಿ ಮೇ ತಿಂಗಳಲ್ಲಿ ವೈಶಾಖ ಶುಕ್ಲ ಪಕ್ಷವು 13 ತಿಥಿ ಪಕ್ಷಗಳನ್ನು ಹೊಂದಿತ್ತು. ಈ ಅವಧಿಯಲ್ಲಿ ವಿಶ್ವದಲ್ಲಿ ಹಲವು ಬದಲಾವಣೆಗಳು ಕಂಡು ಬಂದಿತ್ತು, ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ಅನೇಕ ಸರ್ಕಾರಗಳು ಬಿದ್ದವು , ಈಜಿಪ್ಟ್, ಲಿಬಿಯಾ ಮತ್ತು ಟುನೀಶಿಯಾದಂತಹ ದೇಶಗಳಲ್ಲಿ ಆಡಳಿತ ಬದಲಾಯ್ತು ಯೆಮೆನ್, ಭಾರತ ಮತ್ತು ಪಾಕಿಸ್ತಾನದಲ್ಲಿ ಜನರು ಭ್ರಷ್ಟಾಚಾರದ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದರು.

ಇದಲ್ಲದೆ, 2021 ರಲ್ಲಿ ವಿಶ್ವಘ್ರಸ ಪಕ್ಷ ಸೆಪ್ಟೆಂಬರ್‌ನಲ್ಲಿ ಉಂಟಾದಾಗ ವಿಶ್ವ ಬಿಕ್ಕಟ್ಟು ಸಂಭವಿಸಿತು, ಈ ಅವಧಿಯಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವಿನ ವಿವಾದವು ಯುದ್ಧಕ್ಕೆ ತಲುಪಿತು. ಇಲ್ಲಿಯವರೆಗೆ ಈ ಯುದ್ಧ ನಿಂತಿಲ್ಲ. ಇದರೊಂದಿಗೆ ಹಣದುಬ್ಬರ ದರವೂ ಈ ಸಮಯದಲ್ಲಿ ಸಾಕಷ್ಟು ಏರಿಕೆ ಕಂಡಿತ್ತು.

ಈ ವರ್ಷ ಜೂನ್‌- ಜುಲೈನಲ್ಲಿ ಬಂದಿದೆ ವಿಶ್ವಘಸ್ರ ಪಕ್ಷ

ಅಧಿಕ ಮಳೆ ಇದ್ದ ನಷ್ಟ ಉಂಟಾಗುವ ಸೂಚನೆಯಿದೆ
ಜ್ಯೋತಿಷ್ಯದ ಪ್ರಕಾರ ಈ ಅವಧಿಯಲ್ಲಿ ಜೂನ್‌-ಜುಲೈನಲ್ಲಿ ವಿಶ್ವಘ್ರಸ ಪಕ್ಷ ಉಂಟಾಗಿರುವುದರಿಂದ ಭಾರೀ ಮಳೆಯಿಂದ ಅನಾಹಿತ ಉಂಟಾಗು ಸಾಧ್ಯತೆ ಇದೆ.
ಭಾರೀ ಮಳೆಯಿಂದಾಗಿ ಬಂಗಾಳದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವೃಷಭ ರಾಶಿಯ ಪ್ರಭಾವದಿಂದ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಅತಿವೃಷ್ಟಿಯಿಂದ ಆರ್ಥಿಕ ನಷ್ಟ ಉಂಟಾಗಲಿದೆ.ಈ ಅವಧಿಯಲ್ಲಿ ಜನರ ಪ್ರಾಣಕ್ಕೆ ಹಾನಿ ಸಂಭವಿಸಬಹುದು, ಬೆಳೆಳು ನಷ್ಟವಾಗುವುದು. ಇನ್ನು ದೆಹಲಿ, ಪಂಜಾಬ್ ಮತ್ತು ಹರಿಯಾಣದಲ್ಲಿ ಅಧಿಕ ಮಳೆಯಿಂದಾಗಿ ಹೆಚ್ಚು ನಷ್ಟ ಸಂಭವಿಸುವ ಸೂಚನೆಯಿದೆ, ಮೇಷ ರಾಶಿಯಲ್ಲಿ ಮಂಗಳ ಗ್ರಹದ ಮೇಲೆ ಶನಿಯ ಅಂಶದಿಂದಾಗಿ, ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗಿ ಬೆಳೆಗಳಿಗೆ ಹಾನಿಯುಂಟು ಮಾಡಲಿದೆ.

ಶನಿಯು ಹಿಮ್ಮುಖ ಚಲನೆಯಂದು ಪ್ರಕೃತಿ ವಿಕೋಪ
ಜೂನ್ 29 ರಂದು ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ. ಈ ರೀತಿ ಶನಿಯು ಹಿಮ್ಮುಖ ಚಲನೆ ಪ್ರಾರಂಭಿಸಿದಾಗ ಅಸಹಜ ಮಳೆ, ಬರೆ ಕುಸಿತ, ಭೂಕಂಪ ಈ ರೀತಿ ಹಲವು ಪ್ರಕೃತಿ ವಿಕೋಪಗಳು ಸಂಭವಿಸಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇನ್ನು ಈ ಅವಧಿಯಲ್ಲಿ ರಾಜಕೀಯ ಕ್ಷೇತ್ರದಲ್ಲೂ ಏರಿಳಿತಗಳು ಉಂಟಾಗುವುದು, ಸರ್ಕಾರದಲ್ಲಿ ಅಸಮಧಾನ, ರಾಜಕೀಯ ಕಚ್ಚಾಟ ಇವೆಲ್ಲಾ ಹೆಚ್ಚಾಗುವುದು ಎಂದು ಹೇಳಲಾಗುವುದು. ರಾಜಕಾರಣಿಗಳಿಗೆ ಇದು ಸವಾಲಿನ ಸಮಯ ಎಂದು ಹೇಳಲಾಗುತ್ತಿದೆ.

ಜುಲೈ 28 ರಿಂದ ಆಗಸ್ಟ್ 17 ರವರೆಗೆ, ಮಂಗಳವು ರೋಹಿಣಿ ನಕ್ಷತ್ರದಿಂದ ಪ್ರಭಾವಿತವಾಗಿರುತ್ತದೆ, ಇದರಿಂದಾಗಿ ಅಧಿಕ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ, ಪಶ್ಚಿಮ ಭಾರತದಲ್ಲಿ ಪ್ರವಾಹದ ಸೂಚನೆಯಿದೆ ಎಂದು ಹೇಳಲಾಗುತ್ತಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

vishwaghasra Paksha Started: Natural Calamities, Political Problem Arise In This Time

vishwaghasra Paksha Started: This time world face challenges, Natural Calamities, Political Problem, read on....
Story first published: Tuesday, June 25, 2024, 11:28 [IST]
X
Desktop Bottom Promotion