Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಡಿಸೆಂಬರ್ 5ಕ್ಕೆ ವಿನಾಯಕ ಚತುರ್ಥಿ: ಈ ದಿನ ಬಂದಿದೆ ವಿಶೇಷ ಯೋಗ, ಗಣೇಶ ಪೂಜೆಯಿಂದ ಇಷ್ಟಾರ್ಥ ಸಿದ್ಧಿ
ಯಾವುದೇ ಪೂಜೆ ಮಾಡುವ ಮುನ್ನ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಬೇಕು. ನಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು ನಮಗೆ ಶ್ರೀ ಗಣೇಶನ ಸಹಾಯ ಬೇಕು, ಗಣೇಶನ ಆರಾಧನೆಗೆ ಕೆಲವೊಂದು ದಿನಗಳು ತುಂಬಾನೇ ವಿಶೇಷವಾಗಿದೆ, ಅದರಲ್ಲೊಂದು ವಿನಾಯಕ ಚತುರ್ಥಿ. ಈ ದಿನ ವಿನಾಯಕನನ್ನು ಭಕ್ತಿಯಿಂದ ಆರಾಧಿಸಿದರೆ ನಾವು ಬಯಸಿದ್ದು ನೆರವೇರಲಿದೆ, ಅಲ್ಲದೆ ಶ್ರೀ ಗಣೇಶನ ನಮ್ಮ ಬದುಕಿನಲ್ಲಿ ಸಂತೋಷ, ಸಮೃದ್ಧಿ ತರುತ್ತಾನೆ.
ಡಿಸೆಂಬರ್ ಮಾಸದಲ್ಲಿ ವಿನಾಯಕ ಚತುರ್ಥಿಯನ್ನು ಡಿಸೆಂಬರ್ 5ರಂದು ಆಚರಣೆ ಮಾಡಲಾಗುವುದು. ಮಾರ್ಗಶಿರ ಮಾಸದಲ್ಲಿ ಬರುವ ವಿನಾಯಕ ಚತುರ್ಥಿಯ ಪೂಜಾ ಸಮಯ, ಈ ದಿನ ಉಂಟಾಗಿದೆ 3 ವಿಶೇಷ ಯೋಗ, ಆ ಯೋಗಗಳಾವುವು ಇವೆಲ್ಲದರ ಮಾಹಿತಿ ನೋಡೋಣ:

ಮಾರ್ಗಶಿರ ಮಾಸದಲ್ಲಿ ಬಂದಿರುವ ವಿನಾಯ ಚತುರ್ಥಿ ಪೂಜಾ ಸಮಯ
ವಿನಾಯಕ ಚತುರ್ಥಿ ತಿಥಿ ಡಿಸೆಂಬರ್ 4 ಮಧ್ಯಾಹ್ನ 01:10ಕ್ಕೆ ಪ್ರಾರಂಭವಾಗಿದೆ
ಡಿಸೆಂಬರ್ 05 ಮಧ್ಯಾಹ್ನ 12:49ಕ್ಕೆ ಮುಕ್ತಾಯವಾಗಲಿದೆ
ಉದಯ ತಿಥಿಯ ಪ್ರಕಾರ ಡಿಸೆಂಬರ್ 5ರಂದು ವಿನಾಯಕ ಚತುರ್ಥಿ ಆಚರಣೆ ಮಾಡಲಾಗುವುದು..
ಈ ದಿನ ಜ್ಯೋತಿಷ್ಯ ದೃಷ್ಟಿಯಿಂದಲೂ ಏರ್ಪಟ್ಟಿದೆ 3 ಮಹಾಯೋಗ
ಮಧ್ಯಾಹ್ನ 12:28ಕ್ಕೆ ವೃದ್ಧಿ ಯೋಗವಿದೆ
ನಂತರ ಧ್ರುವ ಯೋಗ ಬಂದಿದೆ
ಸಂಜೆ 05:26ಕ್ಕೆ ರವಿಯೋಗವೂ ಇದೆ
ಹಾಗಾಗಿ ವಿನಾಯಕ ಚತುರ್ಥಿ ಪೂಜಾ ವಿಧಿ ಪಾಲಿಸಿದರೆ ಮತ್ತಷ್ಟು ಪ್ರಯೋಜನ ಸಿಗಲಿದೆ.
ಈ ಯೋಗ ಇರುವಾಗ ಗಣೇಶನ ಆರಾಧನೆ ಮಾಡಿದರೆ ಮತ್ತಷ್ಟು ಶುಭ ಫಲಿತಾಂಶ ದೊರೆಯಲಿದೆ ಎಂದು ಹೇಳಲಾಗುವುದು.
ಈ ದಿನ ಚಂದ್ರನ ದರ್ಶನ ಮಾಡಬಾರದು
ವಿನಾಯಕ ತುರ್ಥಿಯಂದು ಚಂದ್ರನ ನೋಡಬಾರದು,ತುಂಬಾನೇ ಕಷ್ಟ ಉಂಟಾಗುವುದು ಎಂಬ ನಂಬಿಕೆ ಇದೆ.
ವಿನಾಯಕ ಚತುರ್ಥಿ ಎಂದರೇನು?
ಶುಕ್ಲ ಪಕ್ಷದಲ್ಲಿ ಬರುವ ಚತುರ್ಥಿಯನ್ನು ವಿನಾಯಕ ಚತುರ್ಥಿಯೆಂದು ಆಚರಿಸಲಾಗುವುದು. ಕೃಷ್ಣ ಕ್ಷದಲ್ಲಿ ಬರುವ ಚತುರ್ಥಿಯನ್ನು ಸಂಕಷ್ಟಹರ ಚತುರ್ಥಿಯೆಂದು ಆಚರಿಸಲಾಗುವುದು. ವರ್ಷದಲ್ಲಿ 12 ವಿನಾಯಕ ಚತುರ್ಥಿ ಬರುತ್ತದೆ.
ವಿನಾಯಕ ಚತುರ್ಥಿ ಆಚರಣೆ ಮಾಡುವುದರಿಂದ ಇಷ್ಟಾರ್ಥ ನೆರವೇರುವುದು
ವಿನಾಯಕ ಚತುರ್ಥಿಯನ್ನು ಉಪವಾಸವಿದ್ದು ಆಚರಣೆ ಮಾಡಲಾಗುವುದು, ವಿನಾಯಕ ಚತುರ್ಥಿ ಆಚರಣೆ ಮಾಡುವುದರಿಂದ ಇಷ್ಟಾರ್ಥ ನೆರವೇರಲಿದೆ. ಮನಸ್ಸಿನಲ್ಲಿಯಾವುದಾದರು ಸಂಕಲ್ಪ ತೆಗೆದುಕೊಂಡು ಆಚರಣೆ ಮಾಡಿದರೆ ಸಂಕಲ್ಪ ನೆರವೇರಲಿದೆ.
ಗಣೇಶ ಬೀಜ ಮಂತ್ರ:
ಓಂ ಗಮ್ ಗಣಪತಯೇ ನಮಃ
ಓಂ ಶ್ರೀಮ್ ಸುಭಗಾಯ ಓಂ ಶ್ರೀಮ್ ಸುಭಗಾಯ ಗಣಪತೆಯೇ ವರಾವರ್ಧ್ ಸರ್ವಜ್ಞಾನಮ್ ಮೇನ್ ವಶ್‌ಮನಾಯ ನಮಃ
ಈ ಮಂತ್ರ ಪಠಣೆ ಮಾಡುವುದರಿಂದ ಭವಿಷ್ಯ ಮತ್ತಷ್ಟು ಉತ್ತಮವಾಗಲಿದೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
