Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ವಾಸ್ತು ಪ್ರಕಾರ ಹೋಳಿಯ ಈ ದಿನ ಈ ರೀತಿ ಮಾಡಿದರೆ ಮನೆಯಲ್ಲಿನ ಸಮಸ್ಯೆ ದೂರಾಗುವುದು, ಸಮೃದ್ಧಿ ಹೆಚ್ಚುವುದು
ಮಾರ್ಚ್ 25ಕ್ಕೆ ಹೋಳಿಯನ್ನು ಆಚರಿಸಲಾಗುವುದು. ಹೋಳಿ ಹಬ್ಬವೆಂದರೆ ಬರೀ ಬಣ್ಣ ಎರಚುವುದಲ್ಲ, ಈ ಹಬ್ಬವನ್ನು ವಿಧಿ ವಿಧಾನಗಳ ಪ್ರಕಾರ ಪೂಜೆ ಮಾಡಬೇಕೆಂಬ ನಿಯಮವಿದೆ. ಈ ದಿನದಂದು ತಮ್ಮ ಕುಟುಂಬ ಚೆನ್ನಾಗಿರಬೇಕು, ಕುಟುಂಬದಲ್ಲಿನ ಸಮಸ್ಯೆ ದೂರಾಗಬೇಕು ಎಂದು ಕೆಲವು ಪರಿಹಾರ ಮಾಡುತ್ತಾರೆ.
ಈ ದಿನ ಕೆಲ ವಾಸ್ತು ಪರಿಹಾರ ಮಾಡಿದರೆ ಒಳ್ಲೆಯದು ಎಂದು ಹೇಳಲಾಗುವುದು. ಈ ದಿನ ಕೆಲವೊಂದು ವಸ್ತುಗಳನ್ನು ಮನೆಗೆ ತಂದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು, ಈ ದಿನ ಯಾವ ವಸ್ತುಗಳನ್ನು ತಂದರೆ ಒಳ್ಳೆಯದು, ಮನೆಗೆ ಶುಭವಾಗುತ್ತದೆ ಎಂದು ನೋಡೋಣ ಬನ್ನಿ:

ಈ ದಿನ ಬೆಳ್ಳಿ ನಾಣ್ಯ ಖರೀದಿಸಿದರೆ ಒಳ್ಳೆಯದು
ವಾಸ್ತು ಪ್ರಕಾರ ಹೋಳಿ ದಿನ ಬೆಳ್ಳಿ ನಾಣ್ಯವನ್ನು ಖರೀದಿಸುವುದು ಮಂಗಳಕರವಾಗಿದೆ. ಹೋಳಿ ದಿನದಂದು ಈ ನಾಣ್ಯವನ್ನು ಪೂಜಿಸಿ ಅದನ್ನು ಲಕ್ಷ್ಮಿ ಫೋಟೋ ಬಳಿ ಇಡಿ, ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆ ದೂರಾಗುವುದು ಎಂದು ಹೇಳಲಾಗುವುದು.
ತಳಿರು-ತೋರಣ
ಹೋಳಿ ಹಬ್ಬದಂದು ತಳಿರು ತೋರಣ ಮನೆಯ ಮುಂಭಾಗ ಕಟ್ಟಿದರೆ ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು ಯಾವುದೇ ನರಾತ್ಮಕ ಶಕ್ತಿ ಒಳಗೆ ಬರುವುದು ಒಳ್ಳೆಯದಲ್ಲ ಎಂದು ಹೇಳಲಾಗುವುದು.
ಬಿದಿರಿನ ಗಿಡ
ಈ ದಿನ ಚಿಕ್ಕ ಬಿದಿರಿನ ಕಡ್ಡಿಗಳನ್ನು ನೆಡುವುದು ಶುಭ ಎಂದು ಹೇಳಲಾಗುವುದು. ಈ ಬಿದಿರು ಗಿಡವನ್ನು ಚಿಕ್ಕ ಹೂಕುಂಡದಲ್ಲಿ ನೆಟ್ಟು ಅದನ್ನು ಮನೆಯೊಳಗಡೆ ಇಡುವುದು ಒಳ್ಳೆಯದು.
ಆಮೆ
ವಾಸ್ತು ಶಾಸ್ತ್ರದಲ್ಲಿ ಈ ದಿನ ಲೋಹದ ಆಮೆಯನ್ನು ಮನೆಗೆ ತರುವುದು ಒಳ್ಳೆಯದು, ಇದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುವುದು ಎಂದು ಹೇಳಲಾಗುವುದು.
ಅಲ್ಲದೆ ಈ ದಿನ ರಾಶಿಪ್ರಕಾರ ಈ ಪರಿಹಾರ ಮಾಡಿದರೆ ಒಳ್ಖೆಯದು
ಮೇಷ ರಾಶಿ: ಮೇಷ ರಾಶಿಯವರ ಅಧಿಪತಿ ಮಂಗಳ. ಈ ದಿನ ನೀವು ಕೆಂಪು ಧಾನ್ಯಗಳನ್ನು ದಾನ ಮಾಡಿ.
ವೃಷಭ ರಾಶಿ: ವೃಷಭ ರಾಶಿಯವರು ಅಧಿಪತಿ ಗುರು, ಈ ದಿನ ಅರಿಶಿಣ, ಜೇನು ಅಥವಾ ಓದುವ ಬಡ ಮಕ್ಕಳಿಗೆ ಪುಸ್ತಕ ದಾನ ಮಾಡಿ.
ಮಿಥುನ ರಾಶಿ: ಮಿಥುನ ರಾಶಿಯವರ ಅಧಿಪತಿ ಶನಿ. ನೀವು ಕಪ್ಪು ಎಳ್ಳು, ಸಾಸಿವೆಯೆಣ್ಣೆ ದಾನ ಮಾಡುವುದು ಒಳ್ಳೆಯದು.
ಕರ್ಕ ರಾಶಿ: ಕರ್ಕ ರಾಶಿಯವರು, ಈ ದಿನ ಕಬ್ಬಿಣದ ವಸ್ತುಗಳನ್ನು ದಾನ ಮಾಡಿ.
ಸಿಂಹ ರಾಶಿ: ಈ ದಿನ ತುಪ್ಪ, ಕೇಸರಿ ಈ ಬಗೆಯ ವಸ್ತುಗಳನ್ನು ದಾನ ಮಾಡಿ.
ಕನ್ಯಾ ರಾಶಿ: ಕನ್ಯಾ ರಾಶಿಯವರು ಈ ದಿನ ಸಿಹಿ ತಿಂಡಿಗಳನ್ನು ದಾನ ಮಾಡಬೇಕು.
ತುಲಾ ರಾಶಿ: ಅಕ್ಕಿ, ಧಾನ್ಯಗಳು, ಸುಗಂಧ ದ್ರವ್ಯಗಳನ್ನು ದಾನ ಮಾಡಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಈ ದಿನ ಹಸಿರು ಬಣ್ಣದ ಧಾನ್ಯಗಳನ್ನು ದಾನ ಮಾಡುವುದು ಒಳ್ಳೆಯದು.
ಧನು ರಾಶಿ: ಈ ದಿನ ಕಡ್ಲೆಬೇಳೆ ದಾನ ಮಾಡಿ.
ಮಕರ ರಾಶಿ: ಧಾನ್ಯಗಳು, ಬೆಲ್ಲ ಇವುಗಳನ್ನು ದಾನ ಮಾಡಿ.
ಕುಂಭ ರಾಶಿ: ಈ ದಿನ ಕಪ್ಪು ವಸ್ತ್ರಗಳನ್ನು ದಾನ ಮಾಡಿ.
ಮೀನ ರಾಶಿ: ಮೀನ ರಾಶಿಯವರು ಹಳದಿ ಬಣ್ಣದ ಧಾನ್ಯಗಳನ್ನು ದಾನ ಮಾಡಿ.
ಈ ಹೋಳಿ ಹಬ್ಬದಲ್ಲಿ ನಾವು ಹಲವು ಬಣ್ಣಗಳಿಂದ ಹೋಳಿಯಾಟ ಆಡುತ್ತೇವೆ, ಆ ಬಣ್ಣಗಳಂತೆ ನಿಮ್ಮೆಲ್ಲರ ಬದುಕು ಆಕರ್ಷಕವಾಗಿರಲಿ, ನಿಮ್ಮೆಲ್ಲಾ ಕಷ್ಟಗಳು ದೂರಾಗಿ ಸಂತೋಷ ಹೆಚ್ಚಲಿ, ಹೋಳಿ ಹಬ್ಬದ ಶುಭಾಶಯಗಳು... ರಾಸಾಯನಿಕ ಬಣ್ಣದ ಪುಡಿ ಬದಲಿಗೆ ನೈಸರ್ಗಿಕ ಬಣ್ಣದ ಪುಡಿ ಜೊತೆ ಹೋಳಿ ಹಬ್ಬವನ್ನು ಸಂಭ್ರಮಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
