Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಯುಗಾದಿಯಂದು ಯಾವ ಸಮಯದಲ್ಲಿ ಪೂಜೆ ಮಾಡಬೇಕು? ಯಾವ ಸ್ಥಳಗಳಲ್ಲಿ ದೀಪವನ್ನು ಹಚ್ಚಿಡಬೇಕು?
ಯುಗಾದಿ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೀಗೆ ಪ್ರತಿವರ್ಷ ಹೊಸತನ ಹೊತ್ತು ಯುಗಾದಿ ಬರುತ್ತದೆ, ಯುಗಾದಿ ಅಂದರೆ ಏನೋ ಸಂಭ್ರಮ, ಸಡಗರ. ಈ ವರ್ಷ ಯುಗಾದಿ ನಮ್ಮ ಬಾಳಲ್ಲಿ ಎಲ್ಲಾ ಸಂತೋಷ ನೀಡಲಿ, ಸಮಥದ್ಧಿ ಹೆಚ್ಚಲಿ, ಕಹಿ ಕಡಿಮೆಯಾಗಿ ಸಿಹಿ ಹೆಚ್ಚಾಗಲಿ ಎಂಬ ಆಶಯದೊಂದಿಗೆ ಯುಗಾದಿಯನ್ನು ಸಂಭ್ರಮದಿಂದ ಸ್ವಾಗತಿಸುತ್ತೇವೆ. ಯುಗಾದಿಯಿಂದ ಹೊಸ ವರ್ಷ ಶುರು.

ಯುಗಾದಿಯ ಸಂಪ್ರದಾಯವೇನು?
ಯುಗಾದಿಯಂದು ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಲಾಗುವುದು, ನಂತರ ಪೂಜೆ ಮಾಡಿ ಎಳ್ಳು ಬೆಲ್ಲ ಸವಿಯುತ್ತೇವೆ. ಈ ಎಳ್ಳು ಬೆಲ್ಲ ತಿನ್ನುವುದು ಜೀವನದ ಸಂಕೇತವಾಗಿ. ಬದುಕಿನಲ್ಲಿ ಸಿಹಿ ಕಹಿ ಎರಡೂ ಇರುತ್ತದೆ. ಅದನ್ನು ಒಂದೇ ರೀತಿಯಲ್ಲಿ ಸ್ವೀಕರಿಸಬೇಕು ಎಂಬುವುದ ಸಂಕೇತ ಎಳ್ಳು ಬೆಲ್ಲ. ಇನ್ನು ಆರೋಗ್ಯದ ದೃಷ್ಟಿಯಿಂದಲೂ ಈ ಎಳ್ಳು ಬೆಲ್ಲದ ಸೇವನೆ ತುಂಬಾನೇ ಒಳ್ಳೆಯದು.
ಮನೆಯನ್ನು ತಳಿರು ತೋರಣ, ರಂಗೋಲಿಯಿಂದ ಅಲಂಕರಿಸಲಾಗುವುದು
ಈ ದಿನ ಮನೆಯಲ್ಲಿ ಸಂಭ್ರಮ ತುಂಬಿ ತುಳುಕುತ್ತಿರುತ್ತದೆ, ಈ ದಿನ ಎಣ್ಣೆ ಸ್ನಾನ ಮಾಡಲಾಗುವುದು, ಮಕ್ಕಳಿಗೆ ಹೊಟ್ಟೆ ಬಟ್ಟೆ ತೊಡಿಸಲಾಗುವುದು, ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗುವುದು. ಮನೆ ಮುಂದೆ ರಂಗೋಲಿ ಹಾಕಲಾಗುವುದು, ಹೊಸ ವರ್ಷ ಸಂತೋಷವಾಗಿರಲಿ ಎಂದು ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುವುದು.
ಪೂಜೆಗೆ ಸಮಯ
ಏಪ್ರಿಲ್ 8 ಸಂಜೆಯಿಂದ ಪ್ರತಿಪಾದ ತಿಥಿ ಶುರುವಾಗಿದೆ, ಇದು ಏಪ್ರಿಲ್ 9 ಸಂಜೆಯವರೆಗೆ ಇರಲಿದೆ. ಪ್ರತಿಪಾದ ತಿಥಿ ಏಪ್ರಿಲ್ 9 ರಾತ್ರಿ 8:30ರವರೆಗೆ ಇರಲಿದೆ.
ಭಾರತದಲ್ಲಿ ವಿವಿಧ ಕಡೆಯ ವಿವಿಧ ಆಚರಣೆ
ಯುಗಾದಿಯನ್ನುದಕ್ಷಿಣ ಭಾರತದಲ್ಲಿ ಅಂದರೆ ಕರ್ನಾಟಕ, ತೆಲಂಗಾಣ, ಆಂಧ್ರದಲ್ಲಿ ಯುಗಾದಿಯೆಂದು ಆಚರಿಸಲಾಗುವುದು. ಉತ್ತರ ಭಾರತದ ಕಡೆ ಗುಡಿಪರ್ವ ಎಂದು ಆಚರಿಸಲಾಗುವುದು.
ಯುಗಾದಿಯಿಂದ ಹೊಸ ಸಂವತ್ಸರ ಶುರು
ಈ ಯುಗಾದಿಯಿಂದ ಕ್ರೋಧಿ ನಾಮ ಸಂವತ್ಸರ ಶುರುವಾಗಲಿದೆ.
ದೀಪಾವಳಿಯಂತೆ ಈ ದಿನವೂ ಕೆಲವು ಕಡೆ ದೀಪಗಳನ್ನು ಹಚ್ಚಿಡಬೇಕು ಎಂದು ಹೇಳಲಾಗುವುದು?
ಮನೆಯ ಮುಂದೆ
ಮನೆಯ ಮುಂಭಾಗಿಲಿನ ಬಳಿ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚಿಟ್ಟರೆ ಒಳ್ಳೆಯದು. ಈ ರೀತಿ ದೀಪ ಹಚ್ಚಿಡುವುದರಿಂದ ಮನೆಗೆ ತುಂಬಾನೇ ಶುಭ ಎಂದು ಹೇಳಲಾಗುವುದು.
ತುಳಸಿ ಕಟ್ಟೆಯ ಮೇಲೆ
ಈ ದಿನ ತುಳಸಿ ಗಿಡದ ಬಳಿ ದೀಪ ಹಚ್ಚಿಡಬೇಕು. ಹೀಗೆ ತುಳಸಿಗೆ ಪೂಜೆ ಸಲ್ಲಿಸುವುದರಿಂದ ಸಮಸ್ಯೆಗಳು ದೂರಾಗುವುದು ಎಂದು ಹೇಳಲಾಗುವುದು.
ಮನೆ ಬಳಿ ಬಾವಿಯಿದ್ದರೆ
ನಿಮ್ಮ ಮನೆಯಲ್ಲಿ ಬಾವಿಯಿದ್ದರೆ ಅದರ ಮೇಲೆ ಪೂರ್ವ ದಿಕ್ಕಿಗೆ ದೀಪವನ್ನು ಹಚ್ಚಿಡಿ, ಈ ರೀತಿ ಹಚ್ಚಿಡುವುದರಿಂದ ಆರ್ಥಿಕ ಸಂಪತ್ತು ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
