Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಯಾವ ಜಪಮಾಲೆ ಹಿಡಿದು ಜಪಿಸಿದರೆ ಏನು ಫಲ? ಜಪ ಮಾಲೆಯ ಈ ರಹಸ್ಯಗಳು ಗೊತ್ತೇ?
ಮೆಟ್ರೋ, ಟ್ರೈನ್‌ನಲ್ಲಿಹೋಗುವಾಗ ಕೆಲವರು ಜಪಮಾಲೆ ಕೈಯಲ್ಲಿ ಹಿಡಿದು ಮಂತ್ರ ಹೇಳುವುದನ್ನು ಗಮನಿಸಬಹುದು, ಜಪಮಾಲೆಯೊಂದಿಗೆ ಮಂತ್ರಗಳನ್ನು ಪಠಣೆ ಮಾಡಿದಾಗ ಅವರಿಗೆ ಒಂದು ರೀತಿ ಪಾಸಿಟಿವಿಟಿ ಫೀಲ್ ನೀಡುತ್ತೆ, ಇನ್ನು ಮನೆಯಲ್ಲಿ ಪೂಜೆ ಮಾಡುವಾಗ ಅಥವಾ ಸ್ವಲ್ಪ ಹೊತ್ತು ಸುಮ್ಮನೆ ಕೂತು ಜಪಮಾಲೆ ಹಿಡಿದು ಧ್ಯಾನ ಮಾಡುತ್ತಾರೆ, ಆದರೆ ಈ ಜಪಮಾಲೆಯಲ್ಲಿ ಹಲವು ವಿಧಗಳಿವೆ, ಪ್ರತಿಯೊಂದು ಜಪಮಾಲೆ ಹಿಡಿದು ಪಠಣೆ ಮಾಡುವುದರಿಂದ ಅದರ ಪ್ರಭಾವ ಭಿನ್ನವಾಗಿರುತ್ತದೆ ಎಂಬುವುದು ಗೊತ್ತಿದೆಯೇ? ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

1.ರುದ್ರಾಕ್ಷಿ ಹಿಡಿದು ಜಪ ಮಾಡುವುದು
ರುದ್ರಾಕ್ಷಿ ಮಾಲೆಯನ್ನು ನಾವು ತುಂಬಾ ಜನರ ಕೈಯಲ್ಲಿ ನೋಡುತ್ತೇವೆ. ಇನ್ನು ಕೆಲವರು ಫ್ಯಾಷನ್ ರೀತಿಯಲ್ಲಿ ಕೈಗೆ ಧರಿಸುತ್ತಾರೆ, ಆ ತಪ್ಪು ಮಾಡಬಾರದು, ಏಕೆಂದರೆ ಅದು ರುದ್ರಾಕ್ಷಿ ಮಾಲೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ಅದರ ಪ್ರಯೋಜನ ಪಡೆಯಬಹುದು. ರುದ್ರಾಕ್ಷಿ ಮಾಲೆ ಹಿಡಿದು ಜಪ ಮಾಡುವುದರಿಂದ ಮೋಕ್ಷ ಸಿಗುತ್ತೆ, ಪಾಪ ನಾಶವಾಗುತ್ತೆ, ದೈವಿಕ ಅನುಭವ ಉಂಟಾಗುತ್ತದೆ.
2.ಸ್ಪಟಿಕ ಮಾಲೆ ಯಾರಿಗೆ ಒಳ್ಳೆಯದು
ಸ್ಪಟಿಕ ಮಾಲೆಯನ್ನು ಕುತ್ತಿಗೆಗೆ ಧರಿಸಿದರೆ ಒಳ್ಳೆಯದು. ಇದು ಬಿಪಿಯನ್ನು ನಿಯಂತ್ರಿಸುತ್ತದೆ, ಕೋಪವನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗುವುದು. ಸ್ಪಟಿಕ ಮಾಲೆ ಹಿಡಿದು ಜಪ ಮಾಡುವುದರಿಂದ ಅತ್ಯಧಿಕ ಮಾನಸಿಕ ಒತ್ತಡ ಹೊರಹಾಕಬಹುದು.
3.ತುಳಸಿ ಮಾಲೆಯಿಂದ ಜಪ
ತುಳಸಿ ಮಾಲೆ ಹಿಡಿದು ಜಪ ಮಾಡುವುದರಿಂದ ಆರ್ಥಿಕ ತೊಂದರೆಯಿದ್ದರೆ ದೂರಾಗುವುದು, ಲಕ್ಷ್ಮಿ ಕೃಪೆ ಇರಲಿದೆ, ಇನ್ನು ಆರೋಗ್ಯವನ್ನು ನೀಡುತ್ತದೆ. ತುಳಸಿ ಮಾಲೆ ಹಿಡಿದು ಜಪ ಮಾಡುವುದರಿಂದ ಆಧ್ಯಾತ್ಮಕ ಜ್ಞಾನ ಹೆಚ್ಚಾಗುವುದು.
4. ಕಮಲಾಕ್ಷಿ ಮಾಲೆ ಹಿಡಿದು ಜಪ
ಕಮಲಾಕ್ಷಿ ಮಾಲೆ ಹಿಡಿದು ಜಪ ಮಾಡುವುದರಿಂದ ಆರ್ಥಿಕ ತೊಂದರೆ ದೂರಾಗುವುದು, ದಾರಿದ್ರ್ಯ ದೂರಾಗಿ ಮನೆಯ ಪರಿಸ್ಥಿತಿ ಸುಧಾರಿಸುತ್ತದೆ.
ವ್ಯಾಪಾರಗಳಲ್ಲಿ ನಿರಂತ ಸೋಲು ಅನುಭವಿಸುತ್ತಿದ್ದರೆ ಈ ಕಮಲಾಕ್ಷಿ ಮಾಲೆ ಹಿಡಿದು ಲಕ್ಷ್ಮಿ ಮಂತ್ರ ಪಠಿಸುತ್ತಾ ಜಪ ಮಾಡಿದರೆ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಬಹುದು.
5. ವೈಜಯಂತಿ ಮಾಲೆ
ಮನೆಯಲ್ಲಿ ಏನಾದರು ಶುಭಕಾರ್ಯ ನಡೆಯಬೇಕು ಅಥವಾ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಪಡೆಯಬೇಕು ಎಂದು ಬಯಸಿದಾಗ ವೈಜಯಂತಿ ಮಾಲೆ ಹಿಡಿದು ಪಠಣೆ ಮಾಡುವುದು ಒಳ್ಳೆಯದು. ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು.
6. ಅರಿಶಿಣ ಮಾಲೆ
ಅರಿಶಿಣ ಮಾಲೆ ಹಿಡಿದು ಜಪ ಮಾಡುವುದರಿಂದ ರೋಗದಿಂದ ಗುಣಮುಖರಾಗುತ್ತೇವೆ, ದೇವರ ಅನುಗ್ರಹದಿಂದ ಇಷ್ಟಾರ್ಥ ಸಿದ್ಧಿಯಾಗಲಿದೆ.
ಜಪಮಾಲೆಯನ್ನು ರಾತ್ರಿ ಮಲಗುವಾಗ ಧರಿಸಬಾರದು, ಪಾರ್ಟಿ ಮುಂತಾದ ಸ್ಥಳಗಳಿಗೆ ಹೋಗುವಗ, ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಧರಿಸಬೇಡಿ.
ಜಪ ಮಾಲೆಯಲ್ಲಿ ಎಷ್ಟು ಮಣಿಗಳಿರುತ್ತದೆ?
ಜಪ ಮಾಲೆಯಲ್ಲಿ 108 ಮಲೆಗಳಿರುತ್ತದೆ.
ಜಪ ಮಾಲೆಯನ್ನು ಯಾವ ಬೆರಳಿನಲ್ಲಿ ಹಿಡಿಯಬೇಕು?
ಜಪ ಮಾಲೆಯನ್ನು ತೋರು ಬೆರಳಿನಲ್ಲಿ ಹಿಡಿಯಬೇಕು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
