Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ನವೆಂಬರ್ 13ರಂದು ತುಳಸಿ ವಿವಾಹ: ಇಷ್ಟಾರ್ಥ ನೆರವೇರಲು ಪೂಜಾವಿಧಾನ ಹಾಗೂ ಮಂತ್ರಗಳು
ನವೆಂಬರ್ 12ರಂದು ದೇವೋತ್ಥಾನ ಏಕಾದಶಿ, ಅದರ ಮಾರನೇಯ ದಿನವೇ ತುಳಸಿ ವಿವಾಹ, ಅಂದರೆ ನವೆಂಬರ್ 13ರಂದು ತುಳಸಿ ವಿವಾಹವನ್ನು ಆಚರಿಸಲಾಗುವುದು. ತುಳಸಿ ವಿವಾಹದ ಧಾರ್ಮಿಕ ಮಹತ್ವವೇನು, ಈ ದಿನ ಮಾಡಬೇಕಾದ ಕಾರ್ಯಗಳೇನು ಎಂದು ನೋಡೋಣ ಬನ್ನಿ:

ತುಳಸಿ ವಿವಾಹದ ಧಾರ್ಮಿಕ ಮಹತ್ವೇನು?
ತುಳಸಿಯನ್ನು ಅತ್ಯಂತ ಪವಿತ್ರ ಗ್ರಹವೆಂದು ಪರಿಗಣಿಸಲಾಗಿದೆ, ತುಳಸಿಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಹಾಗಾಗಿ ಶ್ರೀ ವಿಷ್ಣು ಹಾಗೂ ಶ್ರೀ ಕೃಷ್ಣ ಆರಾಧನೆಯಲ್ಲಿ ತುಳಸಿ ಕಡ್ಡಾಯವಾಗಿರಲೇಬೇಕು, ತುಳಸಿ ವಿವಾಹದಂದು ತುಳಸಿ ಮತ್ತು ಸಾಲಿಗ್ರಾಮ ಕಲ್ಲಿಗೆ ವಿವಾಹ ಮಾಡಲಾಗುವುದು. ತುಳಸಿ ವಿವಾಹ ಮಾಡುವುದರಿಂದ ಕನ್ಯಾದಾನ ಫಲ ಸಿಗುವುದು, ಸಂತಾನ ಅಪೇಕ್ಷಿತ ದಂಪತಿ ಈ ತುಳಸಿ ವಿವಾಹ ಮಾಡುವುದರಿಂದ ಸಂತಾನ ಭಾಗ್ಯ ಸಿಗುತ್ತೆ, ವೈವಾಹಿಕ ಜೀವನದಲ್ಲಿನ ಸಮಸ್ಯೆ ಬಗೆಹರಿಯಲಿದೆ, ಅವಾಹಿತರು ಕಂಕಣ ಭಾಗ್ಯವನ್ನು ಪಡೆಯುತ್ತಾರೆ ಎಂದು ಹೇಳಲಾಗುವುದು.
ತುಳಸಿ ವಿವಾಹದ ಪೂಜಾ ವಿಧಿಗಳೇನು?
ಈ ದಿನ ಶ್ರೀವಿಷ್ಣು ಹಾಗೂ ಲಕ್ಷ್ಮಿಗೆ ಪೂಜೆಯನ್ನು ಸಲ್ಲಿಸಲಾಗುವುದು. ತುಳಸಿ ಕಟ್ಟೆಯನ್ನು ಅಲಂಕರಿಸಿ, ನೆಲ್ಲಿಕಾಯಿ ಗಿಡ ನೆಟ್ಟು ಪೂಜೆಯನ್ನು ಮಾಡಲಾಗುವುದು, ಈ ಪೂಜೆಗೆ ಮುತ್ತೈದೆಯರನ್ನು ಕರೆದು ಅವರಿಂದ ಆಶೀರ್ವಾದ ಪಡೆಯಬೇಕು.
ತುಳಸಿ ವಿವಾಹವನ್ನು ಪ್ರದೋಷ ಸಮಯದಲ್ಲಿ ಮಾಡಬೇಕು, ಪೂಜೆಗೆ ಮುನ್ನ ಸಿದ್ಧತೆ ಮಾಡಿಕೊಳ್ಳಬೇಕು
- ತುಳಸಿಕಟ್ಟೆಯನ್ನು ಸ್ವಚ್ಛಗೊಳಿಸಬೇಕು, ನಂತರ ಆಸನ ಸಿದ್ಧಪಡಿಸಿ ತುಳಸಿಯನ್ನು ಸ್ಥಾಪಿಸಬೇಕು, ಅದರ ಪಕ್ಕದಲ್ಲಿಯೇ ಸಾಲಿಗ್ರಾಮ ಸ್ಥಾಪಿಸಬೇಕು
- ಈಗ ಈ ಆಸನಗಳಿಗೆ ಕಬ್ಬಿನ ತೋರಣ ಕಟ್ಟಿ
- ಕಲಶ ಸಿದ್ಧ ಪಡಿಸಿ, ಕಲಶದಲ್ಲು ನೀರು ತುಂಬಿ ಕಲಶವನ್ನು 5 ಅಥವಾ ಏಳು ಮಾವಿನ ಎಲೆಗಳಿಂದ ಅಂಕರಿಸಬೇಕು
- ತುಳಸಿ ಕಟ್ಟೆಯ ಮುಂದೆ ರಂಗೋಲಿ ಹಾಕಬೇಕು
- ತುಳಸಿ ಪಕ್ಕದಲ್ಲಿ ನೆಲ್ಲಿಕಾಯಿ ಗಿಡ ಅಥವಾ ಅದರ ಕೊಂಬೆ ಇಟ್ಟು ಅದಕ್ಕೂ ಅಲಂಕಾರ ಮಾಡಬೇಕು.
- ತುಳಸಿಗೆ ಕೆಂಪು ಚುನರಿ,ಬಳೆ, ಬಿಂದಿ ಹೀಗೆ ಅಲಂಕಾರಿಕ ವಸ್ತುಗಳನ್ನುಅರ್ಪಿಸಬೇಕು
- ಬಳಿಕ ತುಪ್ಪದ ದೀಪ ಹಚ್ಚಿ
- ಬಳಕ ತುಳಸಿಯನ್ನು ಕೈಯಲ್ಲಿ ಹಿಡಿದು ಆ ಆಸನದ ಸುತ್ತ ಏಳು ಬಾರಿ ಪ್ರದಕ್ಷಣೆ ಬಂದು ನಮಸ್ಕರಿಸಬೇಕು.
- ನಂತರ ಆರತಿ ಬೆಳಗಿ ದೇವರ ಆಶೀರ್ವಾದ ಬೇಡಬೇಕು.
- ಆರತಿಯನ್ನು ನೆಲ್ಲಿಕಾಯಿಯಿಂದ ಎತ್ತಬೇಕು, ಈ ನೆಲ್ಲಿಕಾಯಿಯನ್ನು ಎರಡು ದಿನದ ಬಳಿಕ ಜಜ್ಜಿ ಎಣ್ಣೆಗೆ ಹಾಕಿ ಕಾಯಿ ಆ ಎಣ್ಣೆಯನ್ನು ತಲೆ ಮತ್ತು ಮೈಗೆ ಹಾಕಿ ತಿಕ್ಕಿದರೆ ತುಂಬಾ ಒಳ್ಳೆಯದು.
ತುಳಸಿ ವಿವಾಹದಿಂದ ದೊರೆಯುವ ಪ್ರಯೋಜನಗಳು
- ಯಾರು ತುಳಸಿ ವಿವಾಹ ಮಾಡುತ್ತಾರೋ ಅವರ ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ, ಮನೆಯ ಮಕ್ಕಳಿಗೆ ವಿವಾಹ ಸಂಬಂಧ ಕೂಡಿ ಬಂದಿಲ್ಲ ಎಂದಾದರೆ ಶೀಘ್ರವೇ ಅವರಿಗೆ ಮದುವೆ ಸಂಬಂಧ ಕೂಡಿ ಬರಲಿದೆ
- ತುಳಸಿ ವಿವಾಹ ಮಾಡುವುದರಿಂದ ಮೋಕ್ಷ ಪಡೆಯುತ್ತಾರೆ
- ಈ ಪೂಜೆ ಮಾಡುವಾಗ ಏನಾದರೂ ಸಂಕಲ್ಪ ತೆಗೆದುಕೊಂಡರೆ ಇಷ್ಟಾರ್ಥ ನೆರವೇರುವುದು.
ತುಳಸಿ ವಿವಾಹದಂದು ಏನು ಮಾಡಬೇಕು, ಏನು ಮಾಡಬಾರದು?
- ತುಳಸಿ ವಿವಾಹದಂದು ಉಪವಾಸವಿದ್ದು ಪೂಜಿಸಬೇಕು
- ಈ ದಿನ ತುಳಸಿಗೆ ಅಲಂಕಾರಿಕ ವಸ್ತು ಅರ್ಪಿಸಿ
- ಅವಲಕ್ಕಿ, ಉಸ್ಲಿ, ಪಂಚಕಜ್ಜಾಯ, ಕೋಸಂಬರಿ ಇವುಗಳನ್ನು ನೈವೇದ್ಯವಾಗಿ ಅರ್ಪಿಸಬಹುದು.
- ಏನು ಮಾಡಬಾರದು?
- ಮದ್ಯ, ಮಾಂಸಾಹಾರ ಸೇವನೆ ಮಾಡಬಾರದು
- ಹಿರಿಯರ ಮನಸ್ಸು ನೋಯಿಸಬೇಡಿ
ಈ ಮಂತ್ರ ಪಠಣೆ ಮಾಡುತ್ತಾ ತುಳಸಿ ಪೂಜೆ ಮಾಡಿ
ಕಾಯೇನ ವಾಚ ಮನಸೇಂದ್ರಿಯೈರ್ವಾ !
ಬುದ್ಧ್ಯಾತ್ಮನಾ ವಾ ಪ್ರಕೃತೇ: ಸ್ವಭಾವಾತ್ !
ಕರೋಮಿ ಯದ್ಯತ್ ಸಕಲಂ ಪರಸ್ಮೈ !
ನಾರಾಯಣ ಯೇತಿ ಸಮರ್ಪಯಾಮಿ !!
ಅಚ್ಚುತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ, ಅಚ್ಚುತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ ಅಚ್ಚುತಾನಂತ ಗೋವಿಂದೇಭ್ಯೋ ನಮಃ. ಎಂದು ಹೇಳಬೇಕು. ಇದು
ಯಾರು ಬೇಕಾದರೂ ಮಾಡಬಹುದಾದ ಸರಳವಾದ ಪೂಜಾ ವಿಧಾನ.
ಅರ್ಘ್ಯದ ಮಂತ್ರ:-
ತುಲಸಿ ಪ್ರಾರ್ಥನೆ ನಂತರ, ಪ್ರಸನ್ನಾರ್ಘ್ಯಂ !
ಪುಷ್ಪಾಂಜಲಿ ವಿಧಾನೇನ, ಪ್ರದಕ್ಷಿಣ ವಿಧಾನತ: !
ತುಲಸೀಂ ಸರ್ವಸಿದ್ಧ್ಯರ್ಥಂ ಸೇಚಯೇಚ್ಛುದ್ಧವಾರಿಣಾ!!
ಶ್ರೇಯ:ಪ್ರಿಯೇ ಶ್ರೀಯವಾಸೇ ! ನಿತ್ಯಂ ಶ್ರೀಧರವಲ್ಲಭೇ!
ಭಕ್ತ್ಯಾ ದತ್ತಂ ಮಯಾರ್ಘ್ಯಂ ಶ್ರೀ ತುಲಸೀ ಪ್ರತಿಗೃಹ್ಯತಾಂ !!
(ಉದ್ಧರಣೆಯಿಂದ ನೀರನ್ನು ಬಿಡುತ್ತಾ ) ತುಲಸ್ಯೈ ನಮಃ!
ಪ್ರಸನ್ನಾರ್ಘ್ಯಂ ಸಮರ್ಪಯಾಮಿ !!
ಆನೇನ ತುಲಸೀ ಕಲ್ಪೋಕ್ತಾ
ಪೂಜಾ ಕರ್ಮಣಾ ತುಲಸ್ಯಂತರ್ಗತ
ಕೇಶವಾದಿ ದ್ವಾದಶ ಮೂರ್ತ್ಯಾತ್ಮಕ
ಮಾಸ ನಿಯಾಮಕ ಕಾರ್ತಿಕ ದಾಮೋದರಾತ್ಮಕ
ಶ್ರೀ ಗೋಪಾಲಕೃಷ್ಣ ಪ್ರಿಯತಾಂ ತುಲಸೀ ಕಲ್ಪೋಕ್ತ ಪೂಜಾವಿಧಿ: !!
(ಮಂತ್ರ: ಸಂಗ್ರಹ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
