Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬುಧ-ಗುರು ಸಂಯೋಗದಿಂದ ತ್ರಿ-ಏಕಾದಶಿ ಯೋಗ: 3 ರಾಶಿಗೆ ಧನಾತ್ಮಕ ಪರಿಣಾಮ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಒಂದೇ ರಾಶಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳು ಸಚಲಿಸುವುದು ಅಪರೂಪದ ವಿದ್ಯಮಾನಗಳು ಹಾಗೆ ಅಪರೂಪದ ಯೋಗಗಳಿಗೂ ಕಾರಣವಾಗುತ್ತದೆ. ಇಂತಹ ಹಲವು ಯೋಗವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ಕೂಡ ನೋಡಬಹುದು. ಈಗ ಮುಖ್ಯವಾಗಿ ಬುಧ ಹಾಗೂ ಗುರು ಗ್ರಹಗಳ ಸಂಯೋಗವು ಅಪರೂಪದ ಯೋಗಕ್ಕೆ ಕಾರಣವಾಗುತ್ತಿದೆ.
ಮೇ 5 ರಂದು ಬುಧ ಹಾಗೂ ಗುರು ಗ್ರಹಗಳು 60 ಡಿಗ್ರಿ ಸ್ಥಿತಿಯ ಸ್ಥಾನದಲ್ಲಿರುತ್ತಾರೆ. ಜ್ಯೋತಿಷ್ಯದಲ್ಲಿ ಈ ಕೋನೀಯ ಸ್ಥಾನವನ್ನು 'ತ್ರಿ-ಏಕಾದಶಿ ಯೋಗ ಮತ್ತು ಲಾಭ ದೃಷ್ಟಿ ಯೋಗ' ಎಂದು ಕರೆಯಲಾಗುತ್ತದೆ. ಹೀಗಾಗಿ ಈ ಅದ್ಭುತ ಕ್ಷಣವು ಹಲವು ರಾಶಿಗಳಲ್ಲಿ ಲಾಭದಾಯಕವಾದರೆ ಮತ್ತೆ ಕೆಲವು ರಾಶಿಗಳಿಗೆ ಇದು ಸಂಕಷ್ಟ ತರಬಹುದು. ಹಾಗಾದ್ರೆ ಈ ಯೋಗದಿಂದ ಯಾವ ರಾಶಿಯವರಲ್ಲಿ ಲಾಭದಾಯಕ ದಿನ ನೋಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ವೃಷಭ ರಾಶಿ
ಈ ತ್ರಿ-ಏಕಾದಶ ಯೋಗವು ಕೆಲವು ರಾಶಿ ಜನರಿಗೆ ವಿಶೇಷ ಪ್ರಯೋಜನಗಳನ್ನು ನೀಡಲಿದೆ. ಏಕೆಂದರೆ ಇದು ವೈದಿಕ ಶಾಸ್ತ್ರದಲ್ಲಿ ಅತ್ಯಂತ ಶುಭ ಯೋಗಗಳಲ್ಲಿ ಒಂದಾಗಿದೆ. ಈ ಯೋಗವು ವೃಷಭ ರಾಶಿ ಮಂದಿಗೆ ಹಲವು ಹೊಸ ಅವಕಾಶಗಳ ನೀಡಲಿದೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶ ಪಡೆಯುವುದು ಖಚಿತ. ಹಾಗೆ ಹೊಸ ಉದ್ಯಮ, ಹೊಸ ಮನೆ, ಆಸ್ತಿ ಖರೀದಿಗೂ ಕೂಡ ಇದು ಶುಭ ಕಾಲವಾಗಿದೆ. ಆರ್ಥಿಕ ಬೆಳವಣಿಗೆಯ ಹಲವು ಅವಕಾಶವನ್ನು ನೀವು ಪಡೆಯುತ್ತೀರಿ. ನಿಮ್ಮ ಮನೆಗಾಗಿ ಹೊಸ ವಸ್ತುಗಳ ಖರೀದಿಗೆ ಹಣ ಹೊಂದಿಸಲು ಮುಂದಾಗಬಹುದು. ಇದರಲ್ಲಿ ಯಶಸ್ವಿಯೂ ಆಗುತ್ತೀರಿ. ನಿಮ್ಮ ಆಪ್ತರಿಂದ ಹಣ ಸಹಾಯ ಪಡೆಯುತ್ತೀರಿ.
ಕರ್ಕ ರಾಶಿ
ಬುಧ ಮತ್ತು ಗುರು ಗ್ರಹಗಳ ಸಂಯೋಗವು ಕರ್ಕ ರಾಶಿಯವರಿಗೆ ಲಾಭದಾಯಕವಾಗಲಿದೆ. ನೀವು ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆಯುತ್ತಾರೆ. ಈ ಅವಧಿಯಲ್ಲಿ ಹೂಡಿಕೆಗಳಿಂದ ಅನಿರೀಕ್ಷಿತ ಲಾಭ ದೊರೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಈ ಅವಧಿಯಲ್ಲಿ ಉತ್ತಮ ಯಶಸ್ಸನ್ನು ನಿರೀಕ್ಷಿಸಬಹುದು. ನೀವು ಪ್ರಯಾಣ ಅಥವಾ ಪ್ರವಾಸ ಮಾಡುವ ಮನಸ್ಸು ಮಾಡಬಹುದು. ನೀವು ಬಹಳ ದಿನದಿಂದ ಬಯಸಿದ್ದ ವಸ್ತುವೊಂದನ್ನು ಪಡೆಯಬಹುದು. ಮನೆ ಖರೀದಿ, ಆಸ್ತಿ ಖರೀದಿಯಂತಹ ಕೆಲಸಕ್ಕೆ ಮುಂದಾಗಬಹುದು. ನಿಮಗೆ ಅಗತ್ಯವಿರುವ ಹಲವು ವಸ್ತುಗಳಿಗೆ ಹಣ ಖರ್ಚು ಮಾಡುತ್ತೀರಿ. ಮನೆಯಲ್ಲಿ ನಿಮ್ಮಿಂದಾಗಿ ಶಾಂತಿಗೆ ಕಾರಣವಾಗುವ ನಿರ್ಧಾರ ತೆಗೆದುಕೊಳ್ಳುವಿರಿ.
ಮಕರ ರಾಶಿ
ಮಕರ ರಾಶಿಯವರಿಗೆ ಈ ಬುಧ ಮತ್ತು ಗುರುವಿನ ಸಂಚಾರವು ಹಲವು ರೀತಿಯಲ್ಲಿ ಲಾಭದಾಯಕವಾಗಲಿದೆ. ನಿಮ್ಮ ಅಪಾರ ಯೋಜನೆಗಳಿಗೆ ಈ ಸಮಯ ಧನಾತ್ಮಕ ಪರಿಣಾಮಗಳ ಉಂಟು ಮಾಡಲಿದೆ. ಇತರರೊಂದಿಗೆ ಕೆಲಸ ಮಾಡುವುದರಿಂದ ಉತ್ತಮ ಪ್ರಯೋಜನಗಳು ದೊರೆಯಬಹುದು. ಈ ಸಮಯದಲ್ಲಿ ವ್ಯಾಪಾರಿಗಳು ಹಾಗೆ ಪಾಲುದಾರಿಕೆ ಉದ್ಯಮಿಗಳು ಬಹಳ ಲಾಭ ಮಾಡಲಿದ್ದಾರೆ. ವಿವಾಹಿತರು ತಮ್ಮ ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳ ಅನುಭವಿಸುತ್ತಾರೆ. ವಾಹನ ಖರೀದಿಗೆ ಇದು ಅತ್ಯಂತ ಶುಭ ಸಮಯ. ಉದ್ಯೋಗ ಹುಡುಕುತ್ತಿದ್ದವರಿಗೆ ನಿರೀಕ್ಷೆಗೂ ಮೀರಿದ ಫಲಿತಾಂಶ ಪಡೆಯಲಿದ್ದಾರೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications