Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿ ದೋಷ ಕಡಿಮೆಯಾಗಲು ಮನೆಯಲ್ಲಿಯೇ ಈ ಪರಿಹಾರ ಮಾಡಿದರೆ ಒಳ್ಳೆಯದು
ಶನಿ ದೋಷವಿದ್ದರೆ ಜೀವನದಲ್ಲಿ ತುಂಬಾನೇ ಸವಾಲುಗಳು ಎದುರಾಗುವುದು. ಯಾವುದೇ ಕೆಲಸ ಕಾರ್ಯಗಳು ಕೈಗೂಡುವುದಿಲ್ಲ, ಯಶಸ್ಸು ದೊರೆಯುವುದು ಕಷ್ಟವಾಗುವುದು, ಎಷ್ಟೇ ಪ್ರಯತ್ನ ಪಟ್ಟರೂ ಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ, ಕುಟುಂಬದಲ್ಲಿ ಹಲವು ಸಮಸ್ಯೆಗಳಿಂದಾಗಿ ನೆಮ್ಮದಿ ದೂರಾಗುವುದು ಹೀಗೆ ಶನಿದೋಷವಿದ್ದರೆ ಸಾಲು-ಸಾಲು ಸಮಸ್ಯೆಗಳು ಎದುರಾಗುವುದು.
ಈ ರೀತಿ ಶನಿದೋಷವಿದ್ದರೆ ಶನಿಯ ಕೆಟ್ಟ ಪ್ರಭಾವದಿಂದ ಪಾರಾಗಲು ಮನೆಯಲ್ಲಿ ಈ ಪರಿಹಾರ ಮಾಡಿದರೆ ಒಳ್ಳೆಯದು

ಮನೆಯಲ್ಲಿಯೇ ಶನಿಗೆ ಪೂಜೆ ಸಲ್ಲಿಸಿ
ಹೌದು ಶನಿಯ ಕೆಟ್ಟ ಪರಿಣಾಮ ಕಡಿಮೆ ಮಾಡಲು ಮನೆಯಲ್ಲಿಯೇ ಶನಿ ಯಂತ್ರ ಸ್ಥಾಪಿಸಿ ಎಳ್ಳೆಣ್ಣೆ ದೀಪ ಹಚ್ಚಿ ಶನಿ ಮಂತ್ರ ಹೇಳುತ್ತಾ ಪೂಜಿಸಬೇಕು, ಈ ರೀತಿ ಪ್ರತಿದಿನ ಶನಿಗೆ ಪೂಜೆಯನ್ನು ಸಲ್ಲಿಸಬೇಕು.
ಶನಿವಾರ ದಾನ ಮಾಡಿ
ಪ್ರತಿಶನಿವಾರ ಬಡವರಿಗೆ ನಿಮ್ಮ ಕೈಯಲ್ಲಾದ ದಾನ ಮಾಡಿ, ಎಳ್ಳೆಣ್ಣೆ, ಎಳ್ಳು, ಕಪ್ಪು ಕಂಬಳಿ ಈ ಬಗೆಯ ವಸ್ತುಗಳನ್ನು ದಾನ ಮಾಡಿ, ಈ ರೀತಿ ದಾನ ಮಾಡುವುದರಿಂದ ಶನಿಯ ಕೆಟ್ಟ ಪರಿಣಾಮ ಕಡಿಮೆಯಾಗುವುದು.
ಕಪ್ಪು ಬಟ್ಟೆ ಹೆಚ್ಚಾಗಿ ಧರಿಸಿ
ಕಪ್ಪು ಬಟ್ಟೆ ಧರಿಸಿ, ಅದರಲ್ಲಿಯೂ ಶನಿವಾರ ಕಪ್ಪು ಬಟ್ಟೆ ಧರಿಸಿ, ಇದರಿಂದ ಶನಿ ದೋಷ ಕಡಿಮೆಯಾಗುವುದು. ಕಪ್ಪು ಹರಳಿನ ಆಭರಣ ಧರಿಸಬಹುದು.
ಶನಿವಾರ ಉಪವಾಸ ಮಾಡಿ
ಹೌದು ಪ್ರತಿಶನಿವಾರ ಉಪವಾಸವಿದ್ದು ಶನಿಯನ್ನು ಪೂಜಿಸಬೇಕು. ಸಮೀಪದ ಶನಿ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಎಣ್ಣೆಯಲ್ಲಿ ನಿಮ್ಮ ನೆರಳು ನೋಡಿ ಆ ಎಣ್ಣೆಯನ್ನು ದಾನ ಮಾಡಬೇಕು. ಶನಿವಾರ ಉಪವಾಸ ಮಾಡುವಾಗ ಹಣ್ಣು, ಹಾಲು ಸೇವಿಸಬಹುದು, ಮಾಂಸ, ಮದ್ಯ ಮುಟ್ಟಲೇಬಾರದು.
ನವಗ್ರಹಗಳಿಗೆ ಪೂಜೆಯನ್ನು ಸಲ್ಲಿಸಿ
ಪ್ರತಿದಿನ ನವಗ್ರಹಗಳಿಗೆ ಪೂಜೆ ಸಲ್ಲಿಸುವುದರಿಂದ ಎಲ್ಲಾ ಗ್ರಹಗಳ ಒಳ್ಳೆಯ ಪ್ರಭಾವ ನಿಮ್ಮ ಮೇಲೆ ಬೀರುವುದರಿಂದ ನಿಮ್ಮ ಕೆಟ್ಟ ಪ್ರಭಾವ ಕಡಿಮೆಯಾಗುವುದು.
ಹನುಮಂತನನ್ನು ಪೂಜಿಸಿ, ಹನುಮಾನ್ ಚಾಲೀಸ ಪಠಿಸಿ ಇದರಿಂದಾಗಿ ಶನಿ ನೀಡುವ ಹಲವಾರು ಕಷ್ಟಗಳಿಂದ ಮುಕ್ತಿ ಪಡೆಯಬಹುದು.
ಶನಿ ಸ್ತೋತ್ರ ಪಠಿಸಿ
ಹೌದು ಪ್ರತಿದಿನ ಶನಿ ಸ್ತೋತ್ರ ಪಠಿಸಿ, ಇದರಿಂದ ಶನಿಯ ಕೆಟ್ಟ ಪ್ರಭಾವ ತುಂಬಾನೇ ಕಡಿಮೆಯಾಗುವುದು.
ಧ್ಯಾತ್ವ ಸರಸ್ವತೀಂ ದೇವೀಂ ಗಣನಾಥ ವಿನಾಯಕಮ್
ರಾಜಾ ದಶರಥಃ ಸ್ತೋತ್ರಂ ಸೌರೇರಿದಮಥಾಕರೋತ್
ದಶರಥ ಉವಾಚ|
ನಮಃ ಕೃಷ್ಣಾಯ ನೀಲಾಯ ಶಿತಿಕಂಠನಿಭಾಯ ಚ|
ನಮೋ ನೀಲಮಯೂಖಾಯ ನೀಲೋತ್ಪಲನಿಭಾಯ ಚ
ನಮೋ ನೀಲಮಯೂಖಾಯ ನೀಲೋತ್ಪಲನಿಭಾಯ ಚ
ನಮೋ ನಿರ್ಮಾಂಸದೇಹಾಯ ದೀರ್ಘಶ್ಮಶ್ರುಜಟಾಯು ಚ
ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾನಕ|
ನಮಃ ಪರುಷಗಾತ್ರಾಯ ಸ್ಥೂಲರೋಮಾಯ ವೈ ಮಃ
ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತಪ್ತಾಯ ವೈ ನಮಃ
ನಮಃ ಕಾಲಾಗ್ನಿದೂಪಾಯ ಕೃತಾಂತಕ ನಮೋಸ್ತು ತೇ
ನಮಸ್ತೇ ಕೋಟರಾಕ್ಷಾಯ ದುರ್ನಿರೀಕ್ಷ್ಯಾಯ ವೈ ನಮಃ|
ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಳಿನೇ
ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಸ್ತು ತೇ|
ಸೂರ್ಯಪುತ್ರ ನಮಸ್ತೇಸ್ತು ಭಾಸ್ಕರೇ ಭಯದಾಯಕ
ಅಧೋದೃಷ್ಟೇ ನಮಸ್ತುಭ್ಯಂ ವಪುಃಶ್ಯಾಮ ನಮೋಸ್ತು ತೇ|
ನಮೋ ಮಂದಗತೇ ತುಭ್ಯಂ ನಿಸ್ತ್ರಿಂಶಾಯ ನಮೋ ನಮಃ
ತಪಸಾ ದಗ್ಧದೇಹಾಯ ನಿತ್ಯಯೋಗರತಾಯ ಚ|
ನಮಸ್ತೇ ಜ್ಞಾನನೇತ್ರಾಯ ಕಾಶ್ಯಾಪಾತ್ಮಜಸೂನವೇ
ತುಷ್ಣೋ ದದಾಸಿ ವೈ ರಶಜ್ಯಂ ರುಷ್ಟೋ ಹರಸಿ ತತ್ ಕ್ಷಣಾತ್|
ದೇವಾಸುರಮನುಷ್ಯಾಶ್ಚ ಪಶುಪಕ್ಷಿಸರೀಸೃಪಾಃ
ತ್ವಯಾ ವಿಲೋಚಿತಾಃ ಸೌರೇ ದೈನ್ಯಮಾಶು ವ್ರಜಂತಿ ಚ
ಬ್ರಹ್ಮಾ ಶಕ್ರೋ ಯಮಶ್ಚೈವ ಋಷಯ ಸಪ್ತತಾರಕಾಃ
ರಾಜ್ಯಭ್ರಷ್ಟಾಶ್ಚ ತೇ ಸರ್ವೇ ತವ ದೃಷ್ಟ್ಯಾ ವಿಲೋಚಿತಾಃ
ದೇಶಾ ನಗರಗ್ರಾಮಾಶ್ಚ ದ್ವೀಪಾಶ್ಚೈವಾದ್ರಯಸ್ತಥಾ
ರೌದ್ರಾದೃಷ್ಟ್ಯಾ ತು ಯೇ ದೃಷ್ಟಾಃ ಕ್ಷಯಂ ಗಚ್ಛಂತಿ ತ್‌ತ್ ಕ್ಷಣಾತ್|
ಪ್ರಸಾದಂ ಕುರು ಮೇ ಸೌರೇ ವರಾರ್ಥೇಹಂ ತವಾಸ್ರತಃ
ಸೌರೇ ಕ್ಷಮಸ್ವಾಪರಾಧಂ ಸರ್ವಭೂತಹಿತಾಯ ಚ|
ಇತಿ ದಶರಥ ಕೃತ ಶ್ರೀ ಶಬೈಶ್ಚರ ಸ್ತೋತ್ರಮ್||
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications