ಈ ದಿನಾಂಕಗಳಲ್ಲಿ ಜನಿಸಿದವರಿಗೆ ಶಿವಾನುಗ್ರಹ..! ನಿಮ್ಮ ಜನ್ಮ ದಿನಾಂಕವೂ ಇದೆಯೇ..?

ಶಿವರಾತ್ರಿ ಹತ್ತಿರವಾಗಿದೆ, ಫೆಬ್ರವರಿ 26ರಂದು ಇಡೀ ದೇಶದಲ್ಲಿ ಶಿವರಾತ್ರಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಶಿವರಾತ್ರಿಯಂದು ಶಿವನ ಆರಾಧನೆ, ಶಿವನ ಮಂತ್ರ, ಸ್ತೋತ್ರ ಇಡೀ ರಾತ್ರಿ ಕೇಳಬಹುದು. ಈ ದಿನ ಶಿವನ ಒಲಿಸಿಕೊಳ್ಳುವ ದಿನ ಎಂದು ಪರಿಗಣಿಸಲಾಗಿದೆ. ಈ ದಿನ ಶಿವನ ಪ್ರಮುಖ ದೇವಾಲಯಗಳಲ್ಲಿ ಶಿವನಿಗೆ ವಿಶೇಷ ಪೂಜೆ, ಆರಾಧನೆ, ಅಭಿಷೇಕ ನೋಡಬಹುದು.

ಇನ್ನು ಈ ಶಿವರಾತ್ರಿ ಸಮಯವು ಜ್ಯೋತಿಷ್ಯ ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ ಬಹಳ ಪ್ರಮುಖ ದಿನವೆಂದು ಪರಿಗಣಿಸಲಾಗಿದೆ. ಹಾಗೆ ಯಾವ ದಿನದಂದು ಜನಿಸಿದವರು ಶಿವನ ವಿಶೇಷ ಆಶೀರ್ವಾದ ಪಡೆಯುತ್ತಾರೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

Those Born On This Date Will Receive Blessings Of Lord Shiva On Mahashivratri

ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ದಿನಕ್ಕೂ ಅದರ ಹಿಂದಿರುವ ಭವಿಷ್ಯಗಳ ಕುರಿತು ಹೇಳಲಾಗಿದೆ. ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ಹುಟ್ಟಿನಿಂದಲೇ ಶಿವನ ಆಶೀರ್ವಾದವನ್ನು ಪಡೆಯುತ್ತಾರೆ. ಈ ರೀತಿಯಾಗಿ ಶಿವನ ಆಶೀರ್ವಾದವನ್ನು ಪಡೆಯುವ ಮೂಲಕ, ಅವರು ಪ್ರತಿಯೊಂದು ಪ್ರಯತ್ನದಲ್ಲೂ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ಹಾಗಾದ್ರೆ ಈ ಶಿವರಾತ್ರಿಯ ಸಮಯದಲ್ಲಿ ನಾವು ಶಿವನ ಆಶೀರ್ವಾದ ಪಡೆಯುವಂತಹ ದಿನಾಂಕಗಳು ಯಾವುದು? ಯಾವ ದಿನ ಜನಿಸಿದವರು ಶಿವನ ಅನುಗ್ರಹಕ್ಕೆ ಕಾರಣರಾಗುತ್ತಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ನಿಮ್ಮ ದಿನಾಂಕದ ಪ್ರಕಾರ ಸಂಖ್ಯಾಶಾಸ್ತ್ರದ ಸಂಖ್ಯೆ ಯಾವುದು ಎಂದು ತಿಳಿಯಬಹುದು. ಉದಾಹರಣೆಗೆ ನಿಮ್ಮ ಜನ್ಮ 29 ಆದರೆ ನಿಮ್ಮ ಜನ್ಮ ಸಂಖ್ಯೆ 2 (2+9=11, 1+1=2) ಎಂದು ಪರಿಗಣಿಸಲಾಗುತ್ತದೆ.

ಸಂಖ್ಯೆ -1 ( 1, 10, 19 ಮತ್ತು 28)

ಈ ದಿನಾಂಗಳಲ್ಲಿ ಜನಿಸಿದವರ ಸಂಖ್ಯೆಗೆ ಸೂರ್ಯನ ಅಧಿಪತ್ಯ ಇರಲಿದೆ. ಈ ದಿನಾಂಕದಂದು ಜನಿಸಿದವರು ಶಿವನ ಆಶೀರ್ವಾದವನ್ನು ಪಡೆಯುತ್ತಾರೆ. ಶಿವನ ಆಶೀರ್ವಾದದಿಂದ ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸ ಪೂರ್ಣಗೊಳ್ಳುತ್ತದೆ. ಕೆಲಸ ಮತ್ತು ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಕುಟುಂಬ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಹಾಗೆ ಈ ದಿನದಂದು ಜನಿಸಿದವರು ಕಷ್ಟದ ಸಮಯದಲ್ಲೂ ಭಕ್ತಿಯ ಬಿಡದೆ ಶುಭ ಕಾರ್ಯಗಳಲ್ಲಿ, ದೇವಾಲಯ ಭೇಟಿಯಂತಹ ಕಾರ್ಯದಲ್ಲೂ ಭಾಗಿಯಾಗುತ್ತಾರೆ.

ಸಂಖ್ಯೆ 2 (2, 11, 20 ಮತ್ತು 29)

ಈ ಸಂಖ್ಯೆಯ ಅಧಿಪತಿ ಚಂದ್ರನಾಗಿದ್ದು, ಶಿವನ ಶಿರದ ಮೇಲೆ ಚಂದ್ರನಿಗೆ ಸ್ಥಾನ ನೀಡಲಾಗಿದೆ. ಈ ಶಿವರಾತ್ರಿಯ ಸಮುದಲ್ಲಿ ನಿಮ್ಮ ಬಾಕಿ ಕೆಲಸಗಳು ಪೂರ್ಣವಾಗುತ್ತವೆ. ಹಾಗೆ ಅವಿವಾಹಿತರಿಗೆ ಶಿವ-ಪಾರ್ವತಿ ಆಶೀರ್ವಾದದ ಕಾರಣ ಶುಭ ಸುದ್ದಿ ಕೇಳುವಿರಿ. ಜೀವನದ ಬಹಳಷ್ಟು ಸಮಸ್ಯೆಗಳನ್ನು ನೀವು ಸುಲಭವಾಗಿ ಎದುರಿಸುವ ಶಕ್ತಿ ಪಡೆಯುತ್ತೀರಿ. ವಿದೇಶ ಪ್ರಯಾಣ, ಸ್ನೇಹತರೊಂದಿಗೆ ಪ್ರವಾಸಗಳಂತಹ ಕಾರ್ಯದಲ್ಲಿ ತೊಡಗುತ್ತೀರಿ.

ಸಂಖ್ಯೆ 5 (5, 14 ಮತ್ತು 23)

ಈ ಸಂಖ್ಯೆಯಲ್ಲಿ ಜನಿಸಿದ ಮಂದಿಗೆ ಬುಧನು ಅಧಿಪತಿಯಾಗಿರುತ್ತಾನೆ. ಈ ದಿನಾಂಕಗಳಲ್ಲಿ ಜನಿಸಿದ ಜನರು ಶಿವನ ಆಶೀರ್ವಾದ ಪಡೆಯುವ ಮೂಲಕ ತಾವು ಮಾಡುವ ಪ್ರತಿಯೊಂದು ಕೆಲಸವು ಯಶಸ್ವಿಯಾಗುವಂತೆ ಮಾಡುತ್ತಾರೆ. ಹಾಗೆ ಸುಲಭವಾಗಿ ಕಷ್ಟಗಳನ್ನು ಎದುರಿಸುತ್ತಾರೆ. ನ್ಯಾಯಾಲಯ, ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ, ಈ ದಿನಾಂಕದಲ್ಲಿ ಜನಿಸಿದವರ ಗೌರವ ಘನತೆ ಹೆಚ್ಚಾಗುತ್ತದೆ.

ಸಂಖ್ಯೆ 6 (6, 15 ಮತ್ತು 24)

ಈ ಸಂಖ್ಯೆಯ ಅಧಿಪತಿ ಶುಕ್ರನಾಗಿದ್ದಾನೆ. ಮಹಾ ಶಿವರಾತ್ರಿಯ ನಂತರ ಈ ದಿನಾಂಕದಲ್ಲಿ ಜನಿಸಿದವರು ಶಿವನ ಪರಮ ಭಕ್ತರಾಗಿರುತ್ತಾರೆ. ನಿಮ್ಮ ಕನಸುಗಳ ಈಡೇರಿಸಿಕೊಳ್ಳಲು ಈ ಸಮಯ ಸೂಕ್ತವಾಗಿರಲಿದೆ. ಈ ದಿನಾಂಕದಂದು ಜನಿಸಿದವರು ಹೊಸ ವಸ್ತುಗಳ ಖರೀದಿಯಲ್ಲಿ ನಿಸ್ಸೀಮರು. ಅವರಿಗೆ ಯಾವುದೇ ಅಡೆತಡೆಯಾಗುವುದಿಲ್ಲ. ಹಾಗೆ ಉದ್ಯೋಗ, ವೃತ್ತಿ, ವ್ಯಾಪಾರ ವ್ಯವಹಾರದಲ್ಲಿ ಎಂದಿಗೂ ಮುಂದಿರುವವರು.

ಸಂಖ್ಯೆ 8 ( 8, 17 ಮತ್ತು 26)

ಈ ದಿನಾಂಕಗಳಲ್ಲಿ ಜನಿಸಿದವರ ಸಂಖ್ಯೆಯ ಅಧಿಪತಿ ಶನಿಯಾಗಿದೆ. ಈ ಶನಿಯು ಶಿವನ ಪರಮ ಭಕ್ತ. ಆದ್ದರಿಂದ ಈ ದಿನಾಂಕಗಳಲ್ಲಿ ಜನಿಸಿದವರು ಶಿವನ ಭಕ್ತರೂ ಆಗಿರುತ್ತಾರೆ. ಇವರು ಶಿವರಾತ್ರಿಯಂದು ಉಪವಾಸ ಮಾಡಿ, ಶಿವನ ಆರಾಧನೆಯಲ್ಲಿ ತೊಡಗಿದರೆ ಅವರ ಕಷ್ಟಗಳು ನೀರು ಕುಡಿದಂತೆ ಪರಿಹಾರವಾಗಲಿದೆ. ಹೂಡಿಕೆ ಲಾಭ, ವ್ಯಾಪಾರ ಲಾಭ, ವೃತ್ತಿಯಲ್ಲಿ ಬಡ್ತಿ ಹೀಗೆ ಹಲವು ರೀತಿಯ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Those Born On This Date Will Receive Blessings Of Lord Shiva On Mahashivratri

In numerology, there are predictions behind each day. People born on certain dates receive the blessings of Lord Shiva from birth. By receiving the blessings of Lord Shiva in this way, they achieve greater success in every endeavor.
Story first published: Tuesday, February 25, 2025, 14:29 [IST]
X
Desktop Bottom Promotion