Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಈ ನವರಾತ್ರಿಯ ವಾರದಲ್ಲಿ 5 ರಾಶಿಯವರಿಗೆ ಬದಲಾಗಲಿದೆ ಅದೃಷ್ಟ..!
ನವರಾತ್ರಿಯಲ್ಲಿ ಮಹಾತಾಯಿಯ ಆರಾಧನೆ ಮಾಡಲಾಗುತ್ತದೆ. ಈ ವಾರದಲ್ಲಿ ನವದುರ್ಗೆಯರಿಗೆ ಪೂಜೆ ನೆರವೇರುತ್ತದೆ. ಹಾಗೆ ಇಡೀ ವಾರದಲ್ಲಿ ನಿಮ್ಮ ರಾಶಿ ಚಕ್ರದ ಮೇಲೆ ದುರ್ಗೆಯ ಆಶೀರ್ವಾದವಿರುತ್ತದೆ. ದುರ್ಗೆಯನ್ನು ಆರಾಧಿಸಿದರೆ ಅದರಲ್ಲಿಯೂ ನಮ್ಮ ರಾಶಿ ಪ್ರಕಾರ ಕಷ್ಟಗಳು ದೂರಾಗುತ್ತವೆ. ಈ ವಿಶೇಷ ಸಂದರ್ಭದಲ್ಲಿ ಮಾತೆ ದುರ್ಗೆಯ ಅನುಗ್ರಹ ಯಾವ ರಾಶಿಯ ಮೇಲಾಗುತ್ತದೆ ಎಂಬುದನ್ನು ನಾವಿಂದು ತಿಳಿಯುವ ಪ್ರಯತ್ನ ಮಾಡೋಣ.
ಶಾರದೀಯ ನವರಾತ್ರಿ, ದುರ್ಗೆಗೆ ಸಮರ್ಪಿತವಾದ ರಾತ್ರಿಗಳು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದುರ್ಗಾ ಮಾತೆ ಎಲ್ಲಾ 12 ರಾಶಿಗಳಿಗೂ ಒಳಿತು ಉಂಟು ಮಾಡುತ್ತಾಳೆ. ಆದರೆ ಕೆಲವು ರಾಶಿಯ ಜನರಿಗೆ ಈ ವಿಜಯದಶಮಿ ನಿಜಕ್ಕೂ ಇಡೀ ಜೀವನ ಬದಲಾಯಿಸುವಂತಹ ಸಮಯವಾಗಿ ಬದಲಾಗುತ್ತದೆ. ಹಾಗಾದ್ರೆ ಯಾವೆಲ್ಲಾ ರಾಶಿಯ ಮೇಲೆ ದುರ್ಗೆಯ ಅನುಗ್ರಹ ಇರಲಿದೆ.

ಈ ನವರಾತ್ರಿಯ ಸಮಯದಲ್ಲಿ ಕೆಲವು ರಾಶಿ ಚಕ್ರದ ಮಂದಿ ಬಯಸಿದ್ದನ್ನು ಪಡೆಯುತ್ತಾರಂತೆ. ಅವರ ಜೀವನದಲ್ಲಿ ಐಶ್ವರ್ಯ, ಸಂಪತ್ತು, ಸುಖ, ನೆಮ್ಮದಿ ಹುಡುಕಿ ಬರಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಗೆ ಒಳಿತಾಗಲಿದೆ ಎಂಬುದನ್ನು ನಾವಿಂದು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯ ಜನರು ಜನಿಸಿದಾಗಿನಿಂದಲೇ ಅವರು ಬಹಳ ಅದೃಷ್ಟವಂತರಂತೆ. ಅವರಿಗೆ ಯಶಸ್ಸು ಗಳಿಸುವುದು ಬಹಳ ಸುಲಭದ ವಿಚಾರ. ಎಲ್ಲಾ ಕೆಲಸಗಳು ಅವರಿಗೆ ಯಶಸ್ಸಿನ ಕಡೆಗೆ ಹೋಗುವುದು. ಕಷ್ಟಕರವಾದ ಕೆಲಸಗಳು ಕೂಡ ಅವರಲ್ಲಿ ಸುಲಭವಾಗುತ್ತದೆ. ಇನ್ನು ಈ ನವರಾತ್ರಿಯಲ್ಲಿ ಅವರ ಅದೃಷ್ಟ ಬದಲಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದಾರೆ. ಇವರು ಈ ನವರಾತ್ರಿಯಲ್ಲಿ ಶುಭ ಸುದ್ದಿ ಕೇಳಲಿದ್ದಾರೆ. ದುರ್ಗೆಗೆ ತುಪ್ಪದ ದೀಪ ಹಚ್ಚಿದರೆ ನಿಮ್ಮ ಆರ್ಥಿಕ ಸಮಸ್ಯೆಗಳು ದೂರಾಗಲಿದೆಯಂತೆ.
ಸಿಂಹ
ನವರಾತ್ರಿಯ ಸಮಯದಲ್ಲಿ ಸಿಂಹ ರಾಶಿಯ ಜನರಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದಾರೆ. ನವರಾತ್ರಿಯಲ್ಲಿ ದುರ್ಗೆಯ ಪೂಜೆಯಿಂದಾಗಿ ನಿಮ್ಮ ಬಹುಕಾಲದ ಧನ ಸಮಸ್ಯೆ ಬಗೆಹರಿಯಲಿದೆ. ಅಲ್ಲದೆ ದುರ್ಗೆಯ ಆಶಿರ್ವಾದದಿಂದಾಗಿ ನಿಮ್ಮಲ್ಲಿ ಶಾಂತಿ ನೆಲೆಸದೆ. ಹಲವು ವರ್ಷದಿಂದ ಬಾಕಿ ಉಳಿದಿದ್ದ ಹಲವು ಕೆಲಸಗಳು ಬಗೆಹರಿಯಲಿದೆ.
ತುಲಾ ರಾಶಿ
ನವರಾತ್ರಿಯಲ್ಲಿ ದುರ್ಗಾ ಮಾತೆ ನಿಮಗೆ ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ. ಈ ಅವಧಿಯಲ್ಲಿ ನೀವು ಹಣಕಾಸಿನ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ನೀವು ಮದುವೆಯಾಗದೆ ಇದ್ದರೆ ಈ ವಿವಾಹ ಬಂಧನದ ಸುದ್ದಿ ಕೇಳಬಹುದು. ವಾಹನ ಲಾಭದಂತಹ ಉನ್ನತ ಲಾಭದ ಕೆಲಸ ಯಾವುದೇ ಅಡ್ಡಿಯಿಲ್ಲದೆ ನಡೆಯುವ ಸಂಭವವಿದೆ.
ಧನು ರಾಶಿ
ಧನು ರಾಶಿಯವರು ತಮ್ಮ ರಾಶಿಗೆ ಅನುಸಾರ ಚಂದ್ರಘಂಟಾ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದು ಒಳ್ಳೆಯದು. ಅಲ್ಲದೆ ದುರ್ಗೆ ಮಾತೆಯ ಪೂಜೆಯಿಂದ ನಿಮ್ಮ ನಿವಾಸಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆ ಬಗೆಹರಿಯಲಿದೆ. ಈ ರಾಶಿಯವರು ದುರ್ಗೆಯ ಆರ್ಶೀವಾದದಿಂದಾಗಿ ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ನವರಾತ್ರಿಯ ಈ ವಾರದಲ್ಲಿ ವೃಶ್ಚಿಕ ರಾಶಿಯವರಿಗೆ ಅತ್ಯಂತ ಉತ್ತಮ ದಿನಗಳಾಗಿವೆ. ನಿಮ್ಮ ಹಣಕಾಸು ಸಮಸ್ಯೆಗಳ ನಿವಾರಣೆಗಾಗಿ ದುರ್ಗೆಯ ಮಂತ್ರ ಪಠಿಸಿ. ಹಾಗೆ ತುಪ್ಪದ ದೀಪ ಬೆಳಗಬೇಕು. ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ. ಅಲ್ಲದೆ ವರ್ಷವೆಲ್ಲಾ ನಿಮಗೆ ಸಮಸ್ಯೆಗಳಿಂದ ದೂರಾಗಿರುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











