Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಪರೂಪದ ಪಂಚಗ್ರಹ ಯೋಗ: ಹನುಮ ಜಯಂತಿ ಬಳಿಕ ಇವರಿಗೆ ಯಶಸ್ಸು ಸುಲಭ..!!
ಹಬ್ಬಗಳು ಹಾಗೆ ಅವುಗಳ ಮಹತ್ವಗಳ ಕುರಿತಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮಹತ್ವ ನೀಡಲಾಗಿರುತ್ತದೆ. ಏಕೆಂದರೆ ಹಬ್ಬಗಳೆಂದರೆ ಆ ಸಮಯದಲ್ಲಿ ಗ್ರಹಗಳ ಬದಲಾವಣೆ ಬಹಳ ವಿಶೇಷವಾಗಿರುತ್ತದೆ. ಹಾಗೆ ಗ್ರಹಗಳ ಚಲನೆಯು ಕೂಡ ವಿಶೇಷ ರೀತಿಯಿಂದ ಕೂಡಿರುವುದು ಹಾಗೆ ಹಲವು ಗ್ರಹಗಳು ತಮ್ಮ ರಾಶಿ ಬದಲಾಯಿಸುವುದು ಹಾಗೆ ಯೋಗಗಳಿಗೆ ಕಾರಣವಾಗುವುದು ಇದೇ ಸಮಯದಲ್ಲಿ.
ಈಗ ಹನುಮಾನ್ ಜಯಂತಿಯಲ್ಲಿ ಕೂಡ ಹಲವು ರೀತಿಯ ಗ್ರಹಗತಿಗಳ ಬದಲಾವಣೆ ನೋಡುತ್ತಿದ್ದೇವೆ. ಚೈತ್ರ ಮಾಸದ ಹುಣ್ಣಿಮೆಯಂದು ಹನುಮಾನ್ ಜಯಂತಿ ಆಚರಿಸಲಾಗುತ್ತದೆ. ಚೈತ್ರ ಪೂರ್ಣಿಮಾ ತಿಥಿಯಲ್ಲಿ ಈ ಹಬ್ಬ ಬರುವುದು ಬಹಳ ಶುಭಕರ ಲಗ್ನವಾಗಿದೆ. ಹಾಗೆ ಈ ದಿನವೇ ಹಲವು ಯೋಗಗಳನ್ನು ನಾವು ನೋಡಬಹುದು.

ಪಂಚಗ್ರಹ ಯೋಗ, ರವಿ ಯೋಗ, ಜಯ ಯೋಗದಂತಹ ವಿಶೇಷ ಯೋಗಗಳಿಗೆ ಈ ಹಬ್ಬವು ಕಾರಣವಾಗುತ್ತಿದೆ. ಇದರಿಂದಾಗಿ ಹಲವು ರಾಶಿಯವರಿಗೆ ಹನುಮ ಜಯಂತಿಯಿಂದ ಹಲವು ರೀತಿಯ ಲಾಭಗಳ ನೋಡುತ್ತಾರೆ. ಹಾಗಾದ್ರೆ ನಾವಿಂದು ಈ ಹನುಮ ಜಯಂತಿ ಬಳಿಕ ಅದೃಷ್ಟ ಬದಲಾಗುವಂತಹ ರಾಶಿಗಳ ಕುರಿತಾಗಿ ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯ 11 ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಳ್ಳಲಿದೆ. ಈ ಸಮಯದಲ್ಲಿ ನಿಮ್ಮ ದೈನಂದಿನ ಕೆಲಸದಲ್ಲಿ ಲಾಭ ನೋಡಲಿದ್ದೀರಿ. ನೀವು ಯಾವುದೇ ಕೆಲಸ ಮಾಡಿದರೂ ಕೂಡ ಆ ಕೆಲಸದಲ್ಲಿ ಲಾಭ ನೋಡುತ್ತೀರಿ. ಹಾಗೆ ನಿಮ್ಮ ಪರವಾದ ಒಲವು ಕಂಡುಬರುತ್ತದೆ. ಹಲವು ವರ್ಷದಿಂದ ಮಾಡಲಾಗದೆ ಕಷ್ಟಕರವಾಗಿ ಪರಿಣಮಿಸಿದ್ದ ಕೆಲಸಗಳು ಈ ಸಮಯದಲ್ಲಿ ಸುಲಭವಾಗಿ ಪರಿಹಾರ ಪಡೆದು ಸಂಪೂರ್ಣ ಮಾಡುತ್ತೀರಿ. ಇನ್ನು ನೀವು ಆರಂಭಿಸಿದ್ದ ಹೊಸ ಉದ್ಯೋಗವೂ ನಿಮಗೆ ಲಾಭದಾಯಕವಾಗಲಿದೆ. ನೀವು ಅವಿವಾಹಿತರಾಗಿದ್ದು ಬಹಳ ವರ್ಷದಿಂದ ಮದುವೆಗಾಗಿ ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ವಿವಾಹ ದೋಷ ನಿವಾರಣೆ ಸಾಧ್ಯತೆ ಇದೆ. ಕೆಲಸಕ್ಕೆ ಸಂಬಂಧಿಸಿದ ಹಲವು ಸಮಸ್ಯೆ ನಿವಾರಣೆಯಾಗಲಿದೆ. ವೈವಾಹಿಕ ಜೀವನದಲ್ಲೂ ಸುಖ ನೋಡಬಹುದು.
ಮಿಥುನ ರಾಶಿ
ಮಿಥುನ ರಾಶಿಯ 10ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಂಡಿದೆ. ಇದು ಈ ರಾಶಿಚಕ್ರ ಜನರಿಗೆ ಔದ್ಯೋಗಿಕ ಲಾಭಕ್ಕೆ ಕಾರಣವಾಗುತ್ತದೆ. ಹಾಗೆ ನಿಮ್ಮ ವ್ಯವಹಾರದಲ್ಲಿ ಅತ್ಯಧಿಕ ಲಾಭಾಂಶದ ದಿನ ನೋಡಬಹುದು. ನೀವು ವೃತ್ತಿಗೆ ಸಂಬಂಧಿಸಿದ ಯಾವುದಾದರು ಸಮಸ್ಯೆಗೆ ಒಳಗಾಗಿದ್ದರೆ ಅದರಿಂದ ಮುಕ್ತಿ ಪಡೆಯಬಹುದು. ನೀವು ಜೀವನದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುವ ಕಡೆಗೆ ಪುಟ್ಟ ಹೆಜ್ಜೆ ಇಡಲು ಈ ಸಮಯದಲ್ಲಿ ಮುಂದಾಗಬಹುದು. ನಿಮ್ಮ ಆರೋಗ್ಯದ ವಿಚಾರವಾಗಿ ಇಷ್ಟು ದಿನಗಳ ಕಾಲ ಅಡ್ಡಿಯಾಗಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಹಾಗೆ ಮುಖ್ಯ ಕೆಲಸವೊಂದಕ್ಕೆ ನೀವು ಹಣ ಒಟ್ಟುಗೂಡಿಸುತ್ತಿದ್ದರೆ ಈ ವೇಳೆಯಲ್ಲಿ ಆ ಕುರಿತ ಯಶಸ್ಸು ನಿಮ್ಮದಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ 9ನೇ ಮನೆಯಲ್ಲಿ ಪಂಚಗ್ರಹ ಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಕರ್ಕ ರಾಶಿಯ ಮಂದಿಯಲ್ಲಿ ಮುಟ್ಟಿದೆಲ್ಲವೂ ಯಶಸ್ಸು ಪಡೆಯುವ ದಿನ. ನೀವು ಎಲ್ಲಿ ಶ್ರಮ ಹಾಗೂ ಪ್ರಮಾಣಿಕ ಕೆಲಸ ಮಾಡುತ್ತೀರೋ ಅಲ್ಲಿ ನೂರರಷ್ಟು ಫಲಿತಾಂಶ ಪಡೆಯಲಿದ್ದೀರಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವಿದೇಶ ಪ್ರಯಾಣ ಮಾಡುವ ಅವಕಾಶಗಳು ದೊರೆಯಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications