Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಾಳೆ ಸೂರ್ಯ-ಯಮ ಯತಿ: ಮೂರು ರಾಶಿಯವರಲ್ಲಿ ಅದೃಷ್ಟ, ಆರ್ಥಿಕ ಸ್ಥಿತಿ ಸುಧಾರಣೆ!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಚಲನೆಯನ್ನು ಮುಖ್ಯ ಎಂದು ಹೇಳಲಾಗಿದೆ. ಅದರಂತೆ ಸೂರ್ಯ ಜನವರಿಯಿಂದ ಹಲವು ಗ್ರಹಗಳೊಂದಿಗೆ ಸಂಯೋಗವಾಗಲಿದ್ದಾನೆ. ಅದ್ರಲ್ಲೂ ಯಮ ಗ್ರಹದೊಂದಿಗೂ ಸೂರ್ಯನ ಸಂಯೋಗ ನೋಡಬಹುದು. ಯಮ ಗ್ರಹವೆಂದರೆ ಅದು ಪ್ಲೂಟೋ ಗ್ರಹವಾಗಿದೆ. ಜನವರಿ 23 ರಂದು, ಸೂರ್ಯ ಮತ್ತು ಯಮ ಗ್ರಹವು ಪರಸ್ಪರ ಶೂನ್ಯ ಡಿಗ್ರಿಗಳಷ್ಟು ದೂರದಲ್ಲಿದ್ದು ವಿಶೇಷ ಸಂಯೋಗವನ್ನು ರೂಪಿಸುತ್ತದೆ.
ಹಿಂದೂ ಧರ್ಮದಲ್ಲಿ ಯನನ್ನು ಸೂರ್ಯನ ಮಗನೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಈ ಸಂಯೋಗವು ಶುಭ ಯೋಗಕ್ಕೆ ಕಾರಣವಾದರೆ ಮತ್ತೆ ಕೆಲ ಸಮಯದಲ್ಲಿ ಇದು ಅಶುಭವಾಗಬಹುದು. ಅದ್ರಲ್ಲೂ 3 ರಾಶಿ ಜನರ ಅದೃಷ್ಟ ಬದಲಾಗಲಿದೆ. ಇದು ಆರ್ಥಿಕ ಲಾಭಗಳು, ಖ್ಯಾತಿ, ಹೊಸ ಅವಕಾಶಗಳಿಗೆ ಕಾರಣವಾಗುತ್ತದೆ.

ಜನವರಿ 23 ರಂದು ಸೂರ್ಯ ಮತ್ತು ಯಮನ ಸಂಯೋಗವು ಬಹಳ ಶುಭ ಫಲಿತಾಂಶಗಳನ್ನು ತರಲಿದೆ. ಹಾಗಾದ್ರೆ ಯಾವ ಮೂರು ರಾಶಿಯವರಿಗೆ ಈ ಅಪರೂಪದ ಯೋಗವು ಲಾಭಕರವಾಗುತ್ತಿದೆ. ಯಾರಲ್ಲಿ ಶುಭವಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಜ್ಯೋತಿಷ್ಯದ ಪ್ರಕಾರ ಜನವರಿ 23 ರಿಂದ ಮೇಷ ರಾಶಿಯ ಅದೃಷ್ಟ ಬದಲಾಗುತ್ತದೆ. ಸೂರ್ಯ ಮತ್ತು ಯಮನ ಸಂಯೋಗದಿಂದಾಗಿ ನಿಮ್ಮ ಕೆಲಸಗಳಲ್ಲಿ ಅಚ್ಚರಿಯ ಫಳಿತಾಂಶಗಳು ಎದುರಾಗಲಿದೆ. ದೀರ್ಘಕಾಲದ ಸಮಸ್ಯೆಗಳು ಅದ್ರಲ್ಲೂ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುವ ಸಮಯ ಇದಾಗಲಿದೆ. ವ್ಯವಹಾರ ಸಂಬಂಧಿತ ವಿಚಾರವಾಗಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಸುಖಾಂತ್ಯವಾಗಲಿದೆ. ನಿಮ್ಮ ಕೈ ಸೇರಬೇಕಿದ್ದ ಹಣಕಾಸು ಈ ಸಮಯದಲ್ಲಿ ಒಲಿದು ಬರಲಿದೆ. ಸೂರ್ಯನ ಆಶೀರ್ವಾದದಿಂದ ನಿಮ್ಮ ವ್ಯಾಪಾರ ಸಂಬಂಧಿ ಕಷ್ಟಗಳು ನಿವಾರಣೆಯಾಗಲಿದೆ.
ಸಿಂಹ ರಾಶಿ
ಜ್ಯೋತಿಷ್ಯದ ಪ್ರಕಾರ ಜನವರಿ 23ರಿಂದ ಸಿಂಹ ರಾಶಿಯರಿಗೆ ಅನುಕೂಲಕರ ದಿನವಿದೆ. ಸಿಂಹನ ಅಧಿಪತಿ ಸೂರ್ಯ ಆಗಿದ್ದಾನೆ. ಹೀಗಾಗಿ ನಿಮಗೆ ಲಾಭಕರ ಸಮಯ. ನಿಮ್ಮ ಹಣಕಾಸು ಸ್ಥಿತಿಯಲ್ಲಿ ಸಮತೋಲನ ತರಲಿದೆ. ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಉತ್ತಮ ಅವಕಾಶಗಳು ಬರಲಿವೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಮತ್ತು ಅಸ್ತಿತ್ವದಲ್ಲಿರುವ ಸಾಲಗಳು ಮತ್ತು ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ. ಆರೋಗ್ಯ ಸುಧಾರಿಸುತ್ತದೆ, ಕುಟುಂಬದಲ್ಲಿದ್ದ ದೀರ್ಘ ಸಮಯದ ಒತ್ತಡಗಳು ಕಡಿಮೆಯಾಗಲಿವೆ. ಮನೆಯಲ್ಲಿ ಹಣ ಒಲಿದುಬರಲಿದೆ. ಅವಿವಾಹಿತರಲ್ಲಿನ ಹಣಕಾಸು ಒತ್ತಡವು ದೊಡ್ಡ ಮಟ್ಟದ ನಿವಾರಣೆಗೆ ಕಾಣಲಿದೆ. ದಾಂಪತ್ಯದಲ್ಲಿ ಸಂತಸ ಇರಲಿದೆ.
ಮಕರ ರಾಶಿ
ಜ್ಯೋತಿಷ್ಯದ ಪ್ರಕಾರ ಮಕರ ರಾಶಿ ಜನರಿಗೆ ಸೂರ್ಯ ಯಮನ ಸಂಯೋಗವು ಹಲವು ರೀತಿಯ ಶುಭವನ್ನು ತರಲಿದೆ. ಪ್ರಗತಿ ವೇಗಗೊಳ್ಳುತ್ತದೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ವ್ಯಾಪಾರ ಮತ್ತು ವ್ಯವಹಾರವು ನೀವು ಬಯಸಿದ ಫಲಿತಾಂಶ ತರಲಿದೆ. ದೂರ ಸಂಬಂಧಿಕರಿಂದ ನಿಮಗೆ ಶುಭ ಸುದ್ದಿಗಳು ಬರುವ ಸಾಧ್ಯತೆ ಇದೆ. ಮಕ್ಕಳ ಭವಿಷ್ಯದ ವಿಚಾರವಾಗಿ ನೀವು ಉಳಿತಾಯಕ್ಕೆ ಮುಂದಾಗಬಹುದು. ನಿಮ್ಮ ಹೂಡಿಕೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗ ಬದಲಾಯಿಸುವ ಮಂದಿಗೂ ಇದು ಶುಭಕಾಲ. ಕೌಟುಂಬಿಕ ಸಂತೋಷ ಹೆಚ್ಚಾಗುತ್ತದೆ ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಬಹು ಸಮಯದಿಂದ ನೀವು ಮಾಡಬೇಕಿದ್ದ ಕೆಲಸ ಬಾಕಿ ಉಳಿಸಿಕೊಂಡಿದ್ದರೆ, ಅದು ಹಣಕಾಸು ಪರಿಸ್ಥಿತಿಯ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದರೆ ಈ ಸಮಯದಲ್ಲಿ ಪೂರ್ಣ ಮಾಡುವಿರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
