Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹುಷಾರ್.. ರಾಹು-ಸೂರ್ಯ ಸಮ್ಮಿಲನ! ಕುಂಭ ರಾಶಿಯಲ್ಲಿ ಗ್ರಹಣ ಯೋಗ.. ಈ ರಾಶಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ!
ಸೂರ್ಯ-ರಾಹು ಯುತಿ 2026! ಸೂರ್ಯನ ಮೇಲೆ ರಾಹುವಿನ ಕಪಿಮುಷ್ಟಿ.. ಫೆಬ್ರವರಿಯಲ್ಲಿ ಗ್ರಹಣ ಯೋಗ! ಈ ರಾಶಿಯವರು ಎಚ್ಚರ ತಪ್ಪಿದರೆ ಸಂಕಷ್ಟ ತಪ್ಪಿದ್ದಲ್ಲ! ನಿಮ್ಮ ರಾಶಿಯ ಮೇಲೆ ಗ್ರಹಣ ಯೋಗದ (Grahan Yoga in Aquarius) ಪ್ರಭಾವ ಹೇಗಿರಲಿದೆ? ಇಲ್ಲಿದೆ ಸಂಪೂರ್ಣ ವಿವರ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಚಾರ ಮನುಕುಲದ ಮೇಲೆ ಪ್ರಭಾವ ಬೀರುತ್ತದೆ. ಸೂರ್ಯ ಮತ್ತು ಛಾಯಾಗ್ರಹ ರಾಹು ಒಂದೇ ರಾಶಿಯಲ್ಲಿ ಸೇರುವುದು 'ಗ್ರಹಣ ಯೋಗ' ಎಂದು ಪರಿಗಣಿಸಲಾಗುತ್ತದೆ. ಈ ಗ್ರಹಗಳ ನಡುವಿನ ನೈಸರ್ಗಿಕ ವೈರತ್ವದಿಂದಾಗಿ ಅವುಗಳ ಯುತಿಯು (Surya Rahu Yuti 2026) ಸಂಕೀರ್ಣ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ.

ಫೆಬ್ರವರಿ 13, 2026 ರಂದು ಸೂರ್ಯನು ಕುಂಭ ರಾಶಿಗೆ (Surya Rahu Yuti February 2026) ಪ್ರವೇಶಿಸುವುದರೊಂದಿಗೆ ಸೂರ್ಯ-ರಾಹು ಯುತಿ ಉಂಟಾಗಿ 'ಗ್ರಹಣ ಯೋಗ' ನಿರ್ಮಾಣವಾಗಲಿದೆ ಎಂದು ಜ್ಯೋತಿಷ್ಯ ತಜ್ಞರು ಹೇಳಿದ್ದಾರೆ. "ಈ ಅಶುಭ ಯೋಗದಿಂದ ಕರ್ಕಾಟಕ, ಕನ್ಯಾ, ವೃಶ್ಚಿಕ ಮತ್ತು ಮೀನ ರಾಶಿಯವರು ಎದುರಿಸಲಿರುವ ಸವಾಲುಗಳೇನು? ಸಂಕಷ್ಟದಿಂದ ಪಾರಾಗಲು ಮಾಡಬೇಕಾದ ಜ್ಯೋತಿಷ್ಯ ಪರಿಹಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ಕುಂಭ ರಾಶಿಯಲ್ಲಿ ಈಗಾಗಲೇ ರಾಹು ನೆಲೆಸಿದ್ದು, ಫೆಬ್ರವರಿ 13, 2026 ರಂದು ಸೂರ್ಯನು ಅಲ್ಲಿಗೆ ಪ್ರವೇಶಿಸುವುದರಿಂದ 'ಗ್ರಹಣ ಯೋಗ' ಸೃಷ್ಟಿಯಾಗಲಿದೆ. ಈ ಯೋಗದ ಪ್ರಭಾವ (Sun Rahu Conjunction Effects) ಫೆಬ್ರವರಿ ಮಧ್ಯದಿಂದ ಮಾರ್ಚ್ ಮಧ್ಯದವರೆಗೆ ಇರಲಿದ್ದು, ಈ ಅವಧಿಯಲ್ಲಿ ಹೆಚ್ಚು ಜಾಗರೂಕತೆಯಿಂದ ಇರಬೇಕಾದ ನಾಲ್ಕು ಪ್ರಮುಖ ರಾಶಿಗಳು ಇಲ್ಲಿವೆ.
ಕರ್ಕಾಟಕ
ಕಟಕ ರಾಶಿಗೆ (Cancer) ಗ್ರಹಣ ಯೋಗ ಅಷ್ಟಮ ಭಾವದಲ್ಲಿ ಅಡೆತಡೆ ತರಲಿದೆ. ಈ ಅವಧಿಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಅನಗತ್ಯ ಖರ್ಚು ಹೆಚ್ಚಿ, ಶೇಖರಿಸಿದ ಹಣ ವ್ಯಯವಾಗಬಹುದು. ಪರಿಹಾರವಾಗಿ ಶಿವನ ಆರಾಧನೆ ಮಾಡಿ ಮನಶ್ಶಾಂತಿ ಕಾಪಾಡಿ.
ಕನ್ಯಾ
ಕನ್ಯಾ ರಾಶಿಯವರು (Virgo) ಮಾನಸಿಕ ಒತ್ತಡ ಎದುರಿಸಬಹುದು. ಆಪ್ತರೊಂದಿಗೆ ವಾಗ್ವಾದ ಬೇಡ, ಮಾತಿನ ಮೇಲೆ ಹತೋಟಿ ಇರಲಿ. ಉದ್ಯೋಗದಲ್ಲಿ ರಾಜಕೀಯ, ವಿವಾದಗಳಿಂದ ದೂರವಿರಿ; ಶತ್ರುಗಳು ಸಕ್ರಿಯರಾಗಬಹುದು. ಗೋಧಿ ಅಥವಾ ಬೆಲ್ಲ ದಾನ ಮಾಡುವುದು ಶುಭ ತರಲಿದೆ.
ವೃಶ್ಚಿಕ
ವೃಶ್ಚಿಕ ರಾಶಿಯವರಿಗೆ (Scorpio) ಯುತಿಯು ಕೌಟುಂಬಿಕ ಸಮಸ್ಯೆ ತರಬಹುದು. ತಾಯಿಯ ಆರೋಗ್ಯಕ್ಕೆ ವಿಶೇಷ ಕಾಳಜಿ ವಹಿಸಿ. ಹಣ ಹೂಡುವ ಮುನ್ನ ನೂರು ಬಾರಿ ಯೋಚಿಸಿ. ಕಾನೂನು, ಕೋರ್ಟ್ ಕಾರ್ಯಗಳಲ್ಲಿ ಅಡೆತಡೆ ಎದುರಾಗಬಹುದು. ವಾಹನ ಚಾಲನೆಯಲ್ಲಿ ಅತೀವ ಜಾಗರೂಕತೆ ಇರಲಿ. ಸೂರ್ಯ ದೇವನ ಮಂತ್ರಗಳನ್ನು ನಿತ್ಯ ಪಠಿಸಿ.
ಮೀನ
ಮೀನ ರಾಶಿಯವರಲ್ಲಿ (Pisces) ಆತ್ಮವಿಶ್ವಾಸದ ಕೊರತೆ ಕಂಡುಬರಬಹುದು. ವೃತ್ತಿಜೀವನದಲ್ಲಿ ಸವಾಲುಗಳು ಸೃಷ್ಟಿಯಾಗಿ, ವಿದ್ಯಾರ್ಥಿಗಳ ಏಕಾಗ್ರತೆ ಹದಗೆಡಬಹುದು. ಕುಟುಂಬದ ಹಿರಿಯ ಸದಸ್ಯರೊಂದಿಗೆ ಸಂಯಮದಿಂದ ವರ್ತಿಸಿ. ಕೆಂಪು ಬಣ್ಣದ ವಸ್ತ್ರಗಳನ್ನು ದಾನ ಮಾಡುವುದು ಲಾಭದಾಯಕ.
ಪರಿಹಾರಗಳು
ಗ್ರಹಣ ಯೋಗದಿಂದಾಗುವ ಮಾನಸಿಕ ಅಸ್ಥಿರತೆ ಮತ್ತು ಕಾರ್ಯ ವಿಳಂಬವನ್ನು ಎದುರಿಸಲು ಕೆಲವು ಸಾಮಾನ್ಯ ಪರಿಹಾರಗಳಿವೆ. ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು, ಮಹಾ ಮೃತ್ಯುಂಜಯ ಮಂತ್ರ ಜಪಿಸುವುದು ಮಾನಸಿಕ ಧೈರ್ಯವನ್ನು ನೀಡುತ್ತದೆ.
ಬಡವರಿಗೆ ಅಥವಾ ಅಗತ್ಯವಿರುವವರಿಗೆ ನಿಮ್ಮ ಕೈಲಾದ ಸಹಾಯ ಮಾಡುವುದು ಗ್ರಹ ದೋಷಗಳನ್ನು ಕಡಿಮೆ ಮಾಡುತ್ತದೆ. ಜ್ಯೋತಿಷ್ಯದ ಪ್ರಕಾರ, ಸೂರ್ಯ-ರಾಹು ಯುತಿಯು ಪರೀಕ್ಷೆಯ ಕಾಲವಿದ್ದಂತೆ. ಸರಿಯಾದ ಎಚ್ಚರಿಕೆ ಮತ್ತು ಆಧ್ಯಾತ್ಮಿಕ ಪರಿಹಾರಗಳ ಮೂಲಕ ಈ ಕಠಿಣ ಅವಧಿಯನ್ನು ಯಶಸ್ವಿಯಾಗಿ ದಾಟಬಹುದು. ಫೆಬ್ರವರಿ 13 ರಿಂದ ಮಾರ್ಚ್ ಮಧ್ಯದವರೆಗೆ ತಾಳ್ಮೆಯೇ ನಿಮ್ಮ ಯಶಸ್ಸಿನ ಮಂತ್ರವಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications