Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾರ್ಚ್ 29ಕ್ಕೆ ಸೂರ್ಯ ಗ್ರಹಣ: ಸೂತಕ ಸಮಯ ಯಾವಾಗ? ಈ ರಾಶಿಯವರು ಈ ದಿನ ಜಾಗ್ರತೆ ಮಾಡಿ
ಸೂರ್ಯಗ್ರಹಣ ಖಗೋಳದಲ್ಲಿ ನಡೆಯುವ ಈ ವಿಸ್ಮಯಕ್ಕೆ ವಿಜ್ಞಾನ ಒಂದು ರೀತಿಯ ವ್ಯಾಖ್ಯಾನ ನೀಡಿದರೆ ಜ್ಯೋತಿಷ್ಯಶಾಸ್ತ್ರ ಈ ದಿನದ ಬಗ್ಗೆ ಬೇರೆನೇ ಹೇಳುತ್ತದೆ. ಸೂರ್ಯಗ್ರಹಣವೆಂದರೆ ಅದು ಅಶುಭ ಎಂದೇ ಪರಿಗಣಿಸಲಾಗುವುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣದ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬ ನಿಯಮಗಳಿವೆ, ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಈ ರೀತಿ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಈ ವರ್ಷದ ಮೊದಲ ಸೂರ್ಯ ಗ್ರಹಣ ಮಾರ್ಚ್ 29ರಂದು ಸಂಭವಿಸಲಿದೆ. ಈ ದಿನ ಸೂತಕ ಸಮಯ ಯಾವಾಗ ಪ್ರಾರಂಭವಾಗುತ್ತದೆ? ಸೂರ್ಯ ಗ್ರಹಣ ಸಮಯದಲ್ಲಿ ಯಾವ ಮಂತ್ರ ಪಠಣೆ ಒಳ್ಳೆಯದು ಇದರ ಬಗ್ಗೆ ನೋಡೋಣ ಬನ್ನಿ:

ಸೂರ್ಯಗ್ರಹಣದ ಸೂತಕ ಸಮಯ
ಭಾರತದ ಕಾಲಮಾನ ಪ್ರಕಾರ ಸೂರ್ಯಗ್ರಹಣ ಮಧ್ಯಾಹ್ನ2:20ರಿಂದ ಸಂಜೆ 06:16ರವರೆಗೆ ಇರಲಿದೆ, ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ, ಇಲ್ಲದಿದ್ದರೆ ಸೂರ್ಯಗ್ರಹಣವಾಗುವ 12 ಗಂಟೆಯ ಮೊದಲೇ ಗ್ರಹಣ ಪ್ರಾರಂಭವಾಗುವುದು. ಹಾಗಾಗಿ ಸೂತಕದ ಸಮಯ ಮಾನ್ಯವಾಗುವುದಿಲ್ಲ.
ಮಾರ್ಚ್ 29ರಂದು ಸೂರ್ಯಗ್ರಹಣವು ಯುರೋಪ್, ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕಾ ಮತ್ತು ಅಂಟ್ಲಾಟಿಕ ಸಾಗರ ಈ ಭಾಗಗಳಲ್ಲಿ ಗೋಚರಿಸಲಿದೆ.
ನಂಬಿಕೆ ಪ್ರಕಾರ ಸೂರ್ಯಗ್ರಹಣ ಸಮಯದಲ್ಲಿ - ಓಂ ಹ್ರೀಂ ಘೃಣಿ ಸೂರ್ಯ ಆದಿತ್ಯ: ಶ್ರೀಂ. ಈ ಮಂತ್ರದ ಪಠಣೆ ಮಾಡಿದರೆ ತುಂಬಾನೇ ಒಳ್ಳೆಯದು. ಈ ಮಂತ್ರ ಪಠಣೆ ಮಾಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುವುದು ಎಂದು ಹೇಳಲಾಗುವುದು.
ಸೂರ್ಯಗ್ರಹಣದ ದಿನ ಈ ರಾಶಿಯವರು ಸ್ವಲ್ಪ ಜಾಗ್ರತೆವಹಿಸಿದರೆ ಒಳ್ಳೆಯದು:
ಮೇಷ ರಾಶಿ: ಈ ದಿನ ನೀವು ಹಣದ ವ್ಯವಹಾರ ಮಾಡುವಾಗ ತುಂಬಾನೇ ಜಾಗ್ರತೆವಹಿಸಿ, ಯಾರನ್ನೂ ಕುರುಡಾಗಿ ನಂಬಲು ಹೋಗಬೇಡಿ, ಆರೋಗ್ಯದ ಕಡಗೆ ಕೂಡ ನೀವು ಗಮನಹರಿಸಬೇಕಾಗುತ್ತದೆ.
ಕರ್ಕ ರಾಶಿ: ಈ ದಿನ ವಾಹನ ಚಲಾಯಿಸುವಾಗ ಜಾಗ್ರತೆಯಿಂದ ಓಡಿಸಿ, ಆರ್ಥಿಕವಾಗಿಯೂ ಈ ದಿನ ಅಷ್ಟೊಂದು ಅನುಕೂಲಕರವಲ್ಲ.
ಆದಾಯಕ್ಕಿಂತ ಹೆಚ್ಚು ಖರ್ಚು ಬರಬಹುದು, ಈ ಜಾಗ್ರತೆವಹಿಸಿ.
ತುಲಾ ರಾಶಿ: ಕುಟುಂಬ ಜೀವನದ ಕಡೆಗೆ ಹೆಚ್ಚಿನ ಗಮನಹರಿಸಿ, ನಕರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ, ವಿವಾಹಿತರು ಸಂಗಾತಿ ಜೊತೆ ವಿವಾದ ಮಾಡಿಕೊಳ್ಳಬೇಡಿ. ನೀವು ಮಾತುಗಳ ಕಡೆಗೆ ಗಮನಹರಿಸಿ.
ವೃಶ್ಚಿಕ ರಾಶಿ
ಸೂರ್ಯಗ್ರಹಣದ ಸಮಯದಲ್ಲಿ ನೀವು ಸಂಬಂಧದ ಕಡೆಗೆ ಗಮನಹರಿಸಿ. ಗಾಡಿ ಓಡಿಸುವಾಗ ಜಾಗ್ರತೆಯಿಂದ ಓಡಿಸಿ. ಸಂಗಾತಿ ಜೊತೆ ಅನಗ್ಯತ ವಾದ ತಪ್ಪಿಸಿ.
ಧನು ರಾಶಿ
ಈ ದಿನ ಧನು ರಾಶಿಯವರು ತುಂಬಾನೇ ಜಾಗ್ರತೆವಹಿಸಿ, ಹಣದ ವಿಷಯದಲ್ಲಿ ಮೋಸ ಹೋಗಬಹುದು, ಜಾಗ್ರತೆ ಮಾಡಿ, ಕೆಲಸದಲ್ಲಿ ಹೆಚ್ಚು ಮಾನಸಿಕ ಒತ್ತಡವನ್ನು ಅನುಭವಿಸಬಹುದು. ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications