Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಪಿತೃಪಕ್ಷ ಅಮವಾಸ್ಯೆಯಂದೇ ಸೂರ್ಯಗ್ರಹಣ: ಪಿತೃತರ್ಪಣ ಕಾರ್ಯ ಮಾಡಬಹುದಾ? ಈ ದಿನದ ಮಹತ್ವವೇನು?
ವರ್ಷದ ಎರಡನೇ ಸೂರ್ಯಗ್ರಹಣ ಪಿತೃಪಕ್ಷದಲ್ಲಿ ಬಂದಿದೆ. ಈ ಬಾರಿ ಪಿತೃಪಕ್ಷವನ್ನು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಇದೆ. ಸೂರ್ಯಗ್ರಹಣವೂ ಅಕ್ಟೋಬರ್ 2ರಂದು ಸಂಭವಿಸಲಿದೆ. ಸೂರ್ಯಗ್ರಹಣ ಹಾಗೂ ಪಿತೃಪಕ್ಷ ಒಂದೇ ಸಮಯದಲ್ಲಿ ಬಂದಿರುವುದು ಜ್ಯೋತಿಷ್ಯದ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿದೆ.

ಸೂರ್ಯಗ್ರಹಣದ ಸೂತಕ ಭಾರತದಲ್ಲಿ ಇದೆಯೇ?
ಸೂರ್ಯಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುವುದು, ಪಿತೃಪಕ್ಷ ಅಮವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸಲಿದ್ದು, ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಹಾಗಾಗಿ ಸೂರ್ಯಗ್ರಹಣದ ಸೂತಕ ಭಾರತದಲ್ಲಿ ಇರಲ್ಲ. ಹಾಗಾಗಿ ಸರ್ಯಗ್ರಹಣದ ದಿನದಂದು ದೇವಾಲಯದ ಬಾಗಿಲುಗಳನ್ನು ಮುಚ್ಚುವುದಿಲ್ಲ, ದೇವಾಲಯಗಳಲ್ಲಿ ನಿತ್ಯ ಪೂಜೆ ನಡೆಯಲಿದೆ. ಹೀಗೆ ಶ್ರಾದ್ಧ ಕಾರ್ಯಗಳನ್ನು ಮಾಡಲು ಯಾವುದೇ ಅಡೆತಡೆ ಇರಲ್ಲ.
ವೈಜ್ಞಾನಿಕವಾಗಿ ಸೂರ್ಯಗ್ರಹಣ ಎಂದರೇನು?
ಚಂದ್ರನು ಭೂಮಿಯ ಸುತ್ತ ಸುತ್ತುತ್ತಿರುತ್ತದೆ, ಭೂಮಿ ಸುರ್ಯನ ಸುತ್ತ ಸುತ್ತುತ್ತಿರುತ್ತದೆ. ಸೂರ್ಯ ಮತ್ತು ಬೂಮಿ ನಡುವೆ ಚಂದ್ರ ಬಂದಾಗ ಸೂರ್ಯನ ಬೆಳಕು ಬೀಮಿ ಮೇಲೆ ಬೀಳುವುದಿಲ್ಲ, ಆವಾಗ ಸೂರ್ಯಗ್ರಹಣ ಸಂಭವಿಸುತ್ತದೆ.
ಜ್ಯೋತಿಷ್ಯದ ದೃಷ್ಟಿಯಿಂದ ನೋಡುವುದಾದರೆ ಸೂರ್ಯ ಮತ್ತು ರಾಹು ಒಟ್ಟಿಗೆ ಬಂದಾಗ ಗ್ರಹಣ ಸಂಭವಿಸುತ್ತದೆ ಎಂದು ಹೇಳಲಾಗುವುದು, ಇದನ್ನು ಅಶುಭ ಎಂದು ಹೇಳಲಾಗುವುದು, ಹಾಗಾಗಿ ಗ್ರಹಣದಂದು ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.
ಪಿತೃಪಕ್ಷ
ಪಿತೃಪಕ್ಷ ಹಿದೂಗಳಿಗೆ ಮಹತ್ವದ ದಿನಗಳಾಗಿದೆ, ಪಿತೃಪಕ್ಷದಲ್ಲಿ ತೀರಿ ಹೋದ ಹಿರಿಯರಿಗೆ ಪಿತೃ ತರ್ಪಣ ನೀಡಲಾಗುವುದು, ಪಿತೃತರ್ಪಣ ಸಮರ್ಪಣೆಗೆ ಈ ಸಮಯ ಶ್ರೇಷ್ಠವಾಗಿದೆ. ಈ ಸಮಯದಲ್ಲಿ ಪಿತೃತರ್ಪಣ ನೀಡಿದರೆ ಪಿತೃದೋಷ, ಗ್ರಹದೋಷದಿಂದ ಮುಕ್ತರಾಗುತ್ತಾರೆ, ಹಿರಿಯರಿಗೆ ಮೋಕ್ಷ ಸಿಗುತ್ತದೆ, ಅವರು ನಮ್ಮ ಕುಟುಂಬವನ್ನು ಹರಿಸುತ್ತಾರೆ, ಇದರಿಂದ ಕುಟುಂಬದಲ್ಲಿ ಒಳಿತಾಗಲಿದೆ ಎಂದು ನಂಬಲಾಗಿದೆ.
ಸರ್ವ ಪಿತೃ ಅಮವಾಸ್ಯೆ
ಪಿತೃ ಪಕ್ಷದಲ್ಲಿ ಬರುವ ಅಮವಾಸ್ಯೆಯನ್ನು ಸರ್ವ ಪಿತೃ ಅಮವಾಸ್ಯೆ ಎಂದು ಹೇಳಲಾಗುವುದು. ಈ ದಿನದ ವಿಶೇಷವೆಂದರೆ ಯಾರ ಮರಣದ ದಿನಾಂಕ, ತಿಥಿ ತಿಳಿದಿರುವುದಿಲ್ಲವೋ ಅವರಿಗೆ ತರ್ಪಣ ನೀಡಲಾಗುವುದು, ಈ ದಿನ ತರ್ಪಣ ನೀಡುವುದರಿಂದ ನಮ್ಮ ಹಿರಿಯರು ಮಾತ್ರವಲ್ಲ ಅವರ ಹಿರಿಯರಿಗೂ ಅಂದರೆ ನಮ್ಮ ಅಜ್ಜ-ಅಜ್ಜಿಯ ಹಿರಿಯರಿಗೂ ಮೋಕ್ಷ ಸಿಗುವುದು, ಹೀಗಾಗಿ ಕುಟುಂಬದಲ್ಲಿನ ಸಮಸ್ಯೆ ದೂರಾಗುವುದು, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗುವುದು ಎಂದು ಹೇಳಲಾಗಿದೆ.
ಪಿತೃತರ್ಪಣವನ್ನು ಹೇಗೆ ಮಾಡಬೇಕು?
ಈ ದಿನ ಉಪವಾಸವಿದ್ದು ಎಲ್ಲಾ ಕರ್ಮಗಳನ್ನು ಮಾಡಬೇಕು
ಬ್ರಾಹ್ಮಣರು ಪಿತೃತರ್ಪಣ ಹೇಗೆ ಮಾಡಬೇಕೆಂದು ತಿಳಿಸುತ್ತಾರೆ, ಅದರಂತೆ ಮಾಡಬೇಕು.
ನದಿ ತೀರದಲ್ಲಿ ತರ್ಪಣವನ್ನು ಅರ್ಪಿಸಲಾಗುವುದು.
ಪಿತೃಗಳಿಗೆ ತರ್ಪಣ ಹೇಗೆ ಅರ್ಪಿಸಬೇಕು?
ಕುಶ (ಹುಲ್ಲು), ಯಾವ (ಬಾರ್ಲಿ), ಕೆಲವು ದಾನ್ಯಗಳು, ಅಕ್ಷತೆ. ಕೆಂಪು, ಬಿಳಿ ಹೂವುಗಳು ಇವುಗಳನ್ನು ಹಿಡಿದು ಹಿರಿಯರಿಗೆ ಅರ್ಪಿಸಬೇಕು.
ಹೂಗಳು, ತುಳಸಿ ಎಲೆಯನ್ನು ಹಾಕಿಡಿ, ಅದನ್ನು ಕೈಯಲ್ಲಿ ಹಿಡಿದುಕೊಳ್ಳಬೇಕು, ನಂತರ ಮೂರು ಕುಶ ಪ್ಲೇಟ್‌ನಲ್ಲಿ ಇಡಬೇಕು. ನಂತರ ನೀರನ್ನು ಚಿಮುಕಿಸಿ ನಂತರ ನೀರನ್ನು ಮಂತ್ರ ಪಠಿಸುತ್ತಾ ಅರ್ಪಿಸಬೇಕು. ತರ್ಪಣ ಅರ್ಪಣೆ ಮಾಡುವಾಗ ಪವಿತ್ರ ದಾರ ಧರಿಸಬೇಕು, ಕುತ್ತಿಗೆಯಲ್ಲಿ ಬಿಳಿ ವಸ್ತ್ರ ಇರಬೇಕು, ಬ್ರಾಹ್ಮಣರು ಹೇಳಿಕೊಟ್ಟ ಮಂತ್ರಗಳನ್ನು ಪಠಿಸುತ್ತಾ ಉತ್ತರಕ್ಕೆ ಮುಖ ಮಾಡಿ ಪಿಂಡ, ಎಳ್ಳು, ನೀರನ್ನು ಮೂರು ಬಾರಿ ಅರ್ಪಿಸಬೇಕು. ದಕ್ಷಿಣಕ್ಕೆ ಮುಖ ನೀಡಿ ನಿಂತು ಯಮಧರ್ಮನಿಗೂ ತರ್ಪಣ ಅರ್ಪಿಸಬೇಕು. ನಂತರ ನೀರಿನಲ್ಲಿ ಮುಳುಗಿ ಎದ್ದು ತಿರುಗಿ ನೋಡದೆ ಬರಬೇಕು.
ಈ ಮಂತ್ರ ಪಠಿಸಿ
ಓಂ ದೇವತಾಭ್ಯ ಪಿತೃಭಕ್ಷ್ಯ ಮಹಾಯೋಗಿಭ್ಯೇವ ಚನಮಃ ಸ್ವಾಹಾಯಃ ।।
ಅಚನಂ ಮಾಡುವಾಗ ಈ ಮಂತ್ರ ಪಠಿಸಿ
ಓಂ ಕೇಶವಾಯ ನಮಃ, ಓಂ ಮಾಧವಾಯ ನಮಃ, ಓಂ ನಾರಾಯಣಾಯ ನಮಃ ಮಂತ್ರ ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications